ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಕೆಣಕಿ ಟ್ರೋಲ್ ಆದ ಯುವಕ

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೈಟೆಕ್ ಟೆಕ್ನಾಲಜಿ ಬಳಸಿ ದಂಡ ಪ್ರಕ್ರಿಯೆಯನ್ನು ಮತ್ತಷ್ಟು ತ್ವರಿತಗೊಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನದ ಮಾಲೀಕರ ಮೊಬೈಲ್'ಗೆ ಉಲ್ಲಂಘನೆಯ ಮಾಹಿತಿ ಫೋಟೋ ಸಹಿತ ಮೆಸೇಜ್ ಬರಲಿದೆ.

ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಕೆಣಕಿ ಟ್ರೋಲ್ ಆದ ಯುವಕ

ಯೂವಕನೊಬ್ಬ ಟ್ರಾಫಿಕ್ ದಂಡದ ಮೆಸೇಜ್ ಬಂದಾಗ ಬೆಂಗಳೂರು ಟ್ರಾಫಿಕ್ ಪೊಲೀಸರ ಬಳಿ ಪುರಾವೆ ಕೇಳಿದ ಘಟನೆ ನಡೆದಿದೆ. ಯೂವಕನೊಬ್ಬ ಟ್ವೀಟ್ ಮಾಡಿ ಬೆಂಗಳೂರು ಪೊಲೀಸ್ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸ್ ಎಂದು ಟ್ಯಾಗ್ ಮಾಡಿದ್ದಾನೆ. ಟ್ವೀಟ್ ನಲ್ಲಿ ಯುವ ಹೆಲ್ಮೆಟ್ ಧರಿಸಿಲ್ಲ ಎಂಬುದಕ್ಕೆ ಸರಿಯಾದ ಪುರಾವೆ ಇಲ್ಲ ಎಂದು ಹೇಳಲಾಗಿದೆ. ಅವರು ಬೆಂಗಳೂರು ಪೊಲೀಸರಿಗೆ ಸಾಕ್ಷ್ಯವನ್ನು ಒದಗಿಸಿ ಅಥವಾ ಚಲನ್ ಅನ್ನು ತೆಗೆದುಹಾಕಬೇಕು. ಈ ಹಿಂದೆಯೂ ಇದೇ ರೀತಿಯ ಘಟನೆ ನಡೆದಿತ್ತು ಆದರೆ ಯಾವುದೇ ಪ್ರಶ್ನೆ ಕೇಳದೆ ಚಲನ್ ಪಾವತಿಸಿದ್ದೇನೆ. ಈ ಬಾರಿ ಪುರಾವೆ ಇಲ್ಲದೆ ಚಲನ್ ಪಾವತಿಸುವುದಿಲ್ಲವೆಂದು ಬರೆದುಕೊಂಡಿದ್ದಾನೆ,

ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಕೆಣಕಿ ಟ್ರೋಲ್ ಆದ ಯುವಕ

ಟ್ವೀಟ್‌ನಲ್ಲಿ, ಮಾಲೀಕನು ತಾನು ಸವಾರಿ ಮಾಡುತ್ತಿದ್ದ ಹೋಂಡಾ ಆಕ್ಟಿವಾ ನೋಂದಣಿ ಫಲಕದ ಚಿತ್ರವನ್ನು ಸೇರಿಸಿದ್ದಾರೆ. ಆದರೆ, ಸವಾರನ ಚಿತ್ರವಿರಲಿಲ್ಲ. ಈ ಟ್ವಿಟ್'ಗೆ ಬೆಂಗಳೂರು ಪೊಲೀಸರು ಸರಳವಾಗಿ ಸಂಪೂರ್ಣ ಚಿತ್ರವನ್ನು ಅಪ್ಲೋಡ್ ಮಾಡಿ ಉತ್ತರ ನೀಡಿದ್ದಾರೆ.

ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಕೆಣಕಿ ಟ್ರೋಲ್ ಆದ ಯುವಕ

ಸಂಪೂರ್ಣ ಚಿತ್ರದಲ್ಲಿ ಟ್ರಾಫಿಕ್‌ನಲ್ಲಿ ಹೆಲ್ಮೆಟ್ ಇಲ್ಲದೆ ಸವಾರನನ್ನು ಸ್ಪಷ್ಟವಾಗಿ ಕಾಣಿಸುತ್ತಾನೆ. ಹೋಂಡಾ ಆಕ್ಟಿವಾ ನೋಂದಣಿ ಸಂಖ್ಯೆಯನ್ನು ಮಾತ್ರ ಹಂಚಿಕೊಳ್ಳಲು ಬೆಂಗಳೂರು ಪೊಲೀಸರು ಚಿತ್ರವನ್ನು ಕ್ರಾಪ್ ಮಾಡಿದ್ದರು. ಮಾಲೀಕರ ಕೋರಿಕೆಯ ಮೇರೆಗೆ ಅವರು ಸಂಪೂರ್ಣ ಚಿತ್ರವನ್ನು ಅಪ್‌ಲೋಡ್ ಮಾಡಿದ್ದಾರೆ.

ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಕೆಣಕಿ ಟ್ರೋಲ್ ಆದ ಯುವಕ

ಬೆಂಗಳೂರು ಟ್ರಾಫಿಕ್ ಪೊಲೀಸರು ನೀಡಿದ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಬಳಿಕ ಸ್ಕೂಟರ್ ಮಾಲೀಕ ಯಾವುದಕ್ಕೂ ಉತ್ತರ ನೀಡಿಲ್ಲ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಸಾಕಷ್ಟು ಟ್ರೋಲ್ ಆಗುತ್ತಿದಂತೆ ಯುವಕ ಪೋಸ್ಟ್ ಅನ್ನು ಡೀಲಿಟ್ ಮಾಡಿದ್ಡಾನೆ.

ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಕೆಣಕಿ ಟ್ರೋಲ್ ಆದ ಯುವಕ

ಸೋಷಿಯಲ್ ಮೀಡಿಯಾ ನಮ್ಮ ಜೀವನದ ಭಾಗವಾಗಿರುವುದರಿಂದ, ಪೊಲೀಸ್ ಇಲಾಖೆಗಳು ಅವುಗಳಲ್ಲಿ ಸಕ್ರಿಯ ಪುಟಗಳನ್ನು ಹೊಂದಿವೆ. ಈ ಪ್ರಕರಣದಂತಹ ಯಾವುದೇ ಉಲ್ಲಂಘನೆಗಳು ಕಂಡುಬಂದಲ್ಲಿ ಜನರು ನೇರವಾಗಿ ಯಾವುದೇ ದೂರನ್ನು ಆನ್‌ಲೈನ್‌ನಲ್ಲಿ ವರದಿ ಮಾಡಬಹುದು.

ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಕೆಣಕಿ ಟ್ರೋಲ್ ಆದ ಯುವಕ

ಈ ವಿಧಾನದ ಉತ್ತಮ ವಿಷಯವೆಂದರೆ ಈ ಹೆಚ್ಚಿನ ಪುಟಗಳು ಸಕ್ರಿಯವಾಗಿವೆ ಮತ್ತು ಸಾರ್ವಜನಿಕವಾಗಿವೆ. ಜನರು ಈ ಪೋಸ್ಟ್‌ಗಳನ್ನು ನೋಡುತ್ತಾರೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳದೆ ಇಲಾಖೆಗೆ ಬೇರೆ ದಾರಿಯಿಲ್ಲ. ಇನ್ನು ದೇಶಾದ್ಯಂತ ಹೊಸ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕೂಡಾ ಹೆಚ್ಚುತ್ತಲೇ ಇವೆ.

ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಕೆಣಕಿ ಟ್ರೋಲ್ ಆದ ಯುವಕ

ಹೀಗಾಗಿ ಮೋಟಾರ್ ವೆಹಿಕಲ್ ಕಾಯ್ದೆಗೆ ಕೆಲವು ತಿದ್ದುಪಡಿ ತರಲಾಗಿದ್ದು, ಪ್ರಸ್ತುತ ಇರುವ ದಂಡಗಳ ಮೊತ್ತದಲ್ಲಿ ಭಾರೀ ಪ್ರಮಾಣದ ಹೆಚ್ಚಳ ಮಾಡಲಾಗಿದೆ. ಸಂಚಾರಿ ನಿಯಮಗಳ ಉಲ್ಲಂಘನೆಯಿಂದಾಗಿ ಅಪಘಾತಗಳು ಹೆಚ್ಚುತ್ತಿದ್ದು, ಬೇರೊಬ್ಬರು ಮಾಡುವ ತಪ್ಪಿನಿಂದಾಗಿ ಅಪಘಾತಗಳಲ್ಲಿ ಅಮಾಯಕರೇ ಹೆಚ್ಚು ಜೀವಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ದಂಡದ ಮೊತ್ತಗಳನ್ನು ದುಪ್ಪಟ್ಟು ಮಾಡಿದೆ.

ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಕೆಣಕಿ ಟ್ರೋಲ್ ಆದ ಯುವಕ

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಾಲನೆ ಮಾಡುವ ಪ್ರವೃತ್ತಿಯನ್ನು ತಡೆಯಲು ಈ ಹೊಸ ಅಸ್ತ್ರವು ಪರಿಣಾಮಕಾರಿಯಾಗಿರಲಿದೆ. ವಿವಿಧ ಮಾದರಿಯ ಸಂಚಾರಿ ನಿಯಮ ಉಲ್ಲಂಘನೆಗಳ ವಿರುದ್ಧ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿದ್ದು, ಯಾವುದೇ ಕಾರಣಕ್ಕೂ ನೀವು ಕೂಡಾ ಸಂಚಾರಿ ನಿಯಮಗಳನ್ನು ಮೀರಿ ದಂಡಕ್ಕೆ ಗುರಿಯಾಗದಿರಿ.

Most Read Articles

Kannada
English summary
Rider demanded proof for traffic offence bengaluru traffic polices reply viral details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X