ಸಾಗರದ ದೈತ್ಯ ಅಲೆಗಳ ನಡುವೆ ಬೈಕಲ್ಲಿ ಜಲಕ್ರೀಡೆ

Written By:

ಜಲಕ್ರೀಡೆಗಳಲ್ಲಿ ಸರ್ಫಿಂಗ್ ಅತಿ ಹೆಚ್ಚು ಮೋಜನ್ನುಂಟು ಮಾಡುತ್ತದೆ. ಆದರೆ ಸಾಗರದ ದೈತ್ಯ ಅಲೆಗಳ ನಡುವೆ ಬೈಕಲ್ಲಿ ಜಲಕ್ರೀಡೆ ಮಾಡಿದರೆ ಹೇಗಿರಬಹುದು? ಇದಕ್ಕುತ್ತರ ಇಲ್ಲಿದೆ (ಕೊನೆಯಲ್ಲಿ ಕೊಟ್ಟಿರುವ ರೋಚಕ ವೀಡಿಯೋ ಯಾವುದೇ ಕಾರಣಕ್ಕೂ ಮಿಸ್ ಮಾಡದಿರಿ).

34ರ ಹರೆಯದ ಆಸ್ಟ್ರೇಲಿಯಾದ ಸ್ಟಂಟ್ ಚಾಲಕ ರೋಬಿ ಮ್ಯಾಡಿಸನ್ (Robbie 'Maddo' Maddison) ಎಂಬವರು ತಮ್ಮ ನೆಚ್ಚಿನ ಡರ್ಟ್ ಬೈಕ್‌ನಲ್ಲಿ ಸಮುದ್ರದಲ್ಲಿ ಅಪ್ಪಳಿಸುವ ದೈತ್ಯ ಅಲೆಗಳ ನಡುವೆ ಬೈಕ್ ನಲ್ಲಿ ಸಂಚರಿಸುವ ಮೂಲಕ ಇಡೀ ಜಗತ್ತನ್ನೇ ನಿಬ್ಬೆರಗಾಗಿಸಿದ್ದಾರೆ.

To Follow DriveSpark On Facebook, Click The Like Button
ಸಾಗರದ ದೈತ್ಯ ಅಲೆಗಳ ನಡುವೆ ಬೈಕಲ್ಲಿ ಜಲಕ್ರೀಡೆ

ಎರಡು ವರ್ಷಗಳ ಕಠಿಣ ಪ್ರಯತ್ನದ ಬಳಿಕ ಸಾಗರದಲ್ಲಿ ಇಂತಹದೊಂದು ಸಾಹಸ ದೃಶ್ಯದ ರೋಚಕ ಕ್ಷಣಗಳನ್ನು ವಾಹನ ಪ್ರೇಮಿಗಳ ಜೊತೆ ಹಂಚಿಕೊಳ್ಳುವಲ್ಲಿ ಮ್ಯಾಡಿಸನ್ ಅವರಿಗೆ ಸಾಧ್ಯವಾಗಿದೆ.

ಸಾಗರದ ದೈತ್ಯ ಅಲೆಗಳ ನಡುವೆ ಬೈಕಲ್ಲಿ ಜಲಕ್ರೀಡೆ

ಆಗ್ನೇಯ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ಕಿಯಾಮಾ ನಿವಾಸಿಯಾಗಿರುವ ಮ್ಯಾಡಿಸನ್ ಇದಕ್ಕಾಗಿ ಕೆಟಿಎಂ 250 ಎಸ್‌ಎಕ್ಸ್ ಡರ್ಟ್ ಬೈಕ್ ಅನ್ನು ಬಳಕೆ ಮಾಡಿದ್ದರು.

ಸಾಗರದ ದೈತ್ಯ ಅಲೆಗಳ ನಡುವೆ ಬೈಕಲ್ಲಿ ಜಲಕ್ರೀಡೆ

ನೀರಲ್ಲಿ ಬೈಕ್ ಸವಾರಿ ಮಾಡುವುದಕ್ಕಾಗಿ ತಮ್ಮ ಕೆಟಿಎಂ 250 ಎಸ್‌ಎಕ್ಸ್ ಬೈಕ್ ನಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿದ್ದರು. ಬೈಕ್ ಕೆಳಗಡೆ ರಬ್ಬರ್ ಹಾವುಗೆ ಮತ್ತು ಹಿಂದಿನ ಚಕ್ರದಲ್ಲಿ ಪೆಡೆಲ್ ಗಳನ್ನು ಆಳವಡಿಸಲಾಗಿತ್ತು.

ಸಾಗರದ ದೈತ್ಯ ಅಲೆಗಳ ನಡುವೆ ಬೈಕಲ್ಲಿ ಜಲಕ್ರೀಡೆ

ಅಂತೂ ಇಂತೂ ಎರಡು ವರ್ಷಗಳ ನಿರಂತರ ಪ್ರಯತ್ನದ ಬಳಿಕ ಮ್ಯಾಡಿಸನ್ ತಮ್ಮ ಕನಸಿನ ಸಾಹಸ ಯಾತ್ರೆ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಗರದ ದೈತ್ಯ ಅಲೆಗಳ ನಡುವೆ ಬೈಕಲ್ಲಿ ಜಲಕ್ರೀಡೆ

ಮ್ಯಾಡಿಸನ್ ಅವರ ಈ ಪ್ರಯತ್ನಕ್ಕೆ 'ಡಿಸಿ ಶೂ' ಪ್ರಾಯೋಜಕತ್ವ ವಹಿಸುವ ಮೂಲಕ ಬೆಂಗಲಾವಗಿ ನಿಂತಿತ್ತು.

ಸಾಗರದ ದೈತ್ಯ ಅಲೆಗಳ ನಡುವೆ ಬೈಕಲ್ಲಿ ಜಲಕ್ರೀಡೆ

ಅಂತಿಮವಾಗಿ ಫ್ರೆಂಚ್ ಪೋಲಿನೇಷಿಯಾದ ಅತಿ ದೊಡ್ಡ ದ್ವೀಪವಾಗಿರುವ ಟಹೀಟಿಯಲ್ಲಿ (Tahiti) ಕಡಲ ಕಿನಾರೆಯಲ್ಲಿ ಮ್ಯಾಡಿಸನ್ ಅವರು ಬೈಕ್ ರೈಡಿಂಗ್ ನಡೆಸಿದ್ದಾರೆ.

ಸಾಗರದ ದೈತ್ಯ ಅಲೆಗಳ ನಡುವೆ ಬೈಕಲ್ಲಿ ಜಲಕ್ರೀಡೆ

ಪ್ರಸ್ತುತ ವೀಡಿಯೋ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿರುವ ಮೂರು ದಿನಗಳಲ್ಲೇ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ.

ಸಮುದ್ರದ ದೈತ್ಯ ಅಲೆಗಳ ನಡುವೆ ಬೈಕ್ ನಲ್ಲಿ ಜಲಕ್ರೀಡೆ

 

Read more on ಬೈಕ್ bike
English summary
Robbie Maddison Takes His Dirt Bike Into A Surf Pipe
Story first published: Wednesday, August 5, 2015, 17:23 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark