ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾದ Rolls Royce ಎಲೆಕ್ಟ್ರಿಕ್ ವಿಮಾನ

ಇಂಗ್ಲೆಂಡ್ ಮೂಲದ ರೋಲ್ಸ್ ರಾಯ್ಸ್ (Rolls Royce) ಐಷಾರಾಮಿ ಕಾರು ತಯಾರಕ ಕಂಪನಿಯನ್ನು 1904ರಲ್ಲಿ ಸ್ಥಾಪಿಸಲಾಯಿತು. ಕಂಪನಿಯು ವಿಶ್ವದ ಹಲವಾರು ದೇಶಗಳಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡುತ್ತದೆ. ರೋಲ್ಸ್ ರಾಯ್ಸ್ ಕಂಪನಿಯ ಕಾರುಗಳು ಐಷಾರಾಮಿತನಕ್ಕೆ ಹೆಸರುವಾಸಿಯಾಗಿವೆ. ಈ ಕಂಪನಿಯ ಕಾರುಗಳನ್ನು ಶ್ರೀಮಂತರು, ಉದ್ಯಮಿಗಳು ಮಾತ್ರ ಖರೀದಿಸುತ್ತಾರೆ.

ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾದ Rolls Royce ಎಲೆಕ್ಟ್ರಿಕ್ ವಿಮಾನ

ಈಗ ವಿಶ್ವದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಕಾರಣಕ್ಕೆ ರೋಲ್ಸ್ ರಾಯ್ಸ್ ಕಂಪನಿಯು ಸಹ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಮುಂದಾಗಿದೆ. ಇದರ ನಡುವೆ ರೋಲ್ಸ್ ರಾಯ್ಸ್‌ ಕಂಪನಿಯ ಪೂರ್ಣ ವಿದ್ಯುತ್ ವಿಮಾನವಾದ ಸ್ಪ್ರೈಟ್ ಆಫ್ ಇನ್ನೋವೇಶನ್ ಅನ್ನು ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನವೆಂದು ಅಧಿಕೃತವಾಗಿ ಘೋಷಿಸಲಾಗಿದೆ.

ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾದ Rolls Royce ಎಲೆಕ್ಟ್ರಿಕ್ ವಿಮಾನ

ರೋಲ್ಸ್ ರಾಯ್ಸ್ ಕಂಪನಿಯ Sprite of Innovation ವಿಮಾನವು ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನವಾಗಿ ಆಯ್ಕೆಯಾಗಿದೆ. ಈ ವಾಹನವು ಪ್ರತಿ ಗಂಟೆಗೆ 555.9 ಕಿ.ಮೀ ವೇಗದಲ್ಲಿ ಚಲಿಸಿ ಹೊಸ ದಾಖಲೆ ಬರೆದಿದೆ. ಈ ಹಿಂದೆ 2017 ರಲ್ಲಿ ಸೀಮೆನ್ಸ್ ಕಂಪನಿಯ ಎಲೆಕ್ಟ್ರಿಕ್ ವಿಮಾನವು ಪ್ರತಿ ಗಂಟೆಗೆ ಗರಿಷ್ಠ 213.04 ಕಿ.ಮೀ ವೇಗದಲ್ಲಿ ಚಲಿಸಿ ದಾಖಲೆ ನಿರ್ಮಿಸಿತ್ತು.

ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾದ Rolls Royce ಎಲೆಕ್ಟ್ರಿಕ್ ವಿಮಾನ

ಈಗ ಸ್ಪಿರಿಟ್ ಆಫ್ ಇನ್ನೋವೇಶನ್ ಆ ದಾಖಲೆಯನ್ನು ಮುರಿದಿದೆ. ಇಂಗ್ಲೆಂಡಿನ ರಕ್ಷಣಾ ಇಲಾಖೆಯ ಒಡೆತನದ ಏರ್‌ಫೀಲ್ಡ್‌ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಈ ವಿಮಾನವು ಸುಮಾರು 15 ಕಿ.ಮೀ ದೂರ ಗಂಟೆಗೆ 532 ಕಿ.ಮೀ ವೇಗದಲ್ಲಿ ಚಲಿಸಿದೆ. ಈ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಏರ್‌ಕ್ರಾಫ್ಟ್ ಸತತವಾಗಿ 15 ಕಿ.ಮೀ ಚಲಿಸಿ ಈ ಹಿಂದೆ ಇದ್ದ 292.8 ಕಿ.ಮೀ ವೇಗದ ದಾಖಲೆಯನ್ನು ಮುರಿದಿದೆ.

ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾದ Rolls Royce ಎಲೆಕ್ಟ್ರಿಕ್ ವಿಮಾನ

ಈ ಎಲೆಕ್ಟ್ರಿಕ್ ವಿಮಾನವು 60 ಸೆಕೆಂಡುಗಳಲ್ಲಿ 3000 ಮೀಟರ್‌ಗಳ ದಾಖಲೆಯನ್ನು ಮುರಿಯಲು 202 ಸೆಕೆಂಡುಗಳನ್ನು ತೆಗೆದುಕೊಂಡಿದೆ. ಈ ಪರೀಕ್ಷೆಯಲ್ಲಿ ಸ್ಪಿರಿಟ್ ಆಫ್ ಇನ್ನೋವೇಶನ್ ತಲುಪಿದ ಗರಿಷ್ಠ ವೇಗ ಪ್ರತಿ ಗಂಟೆಗೆ 623 ಕಿ.ಮೀಗಳಾಗಿದೆ. ಈ ಗರಿಷ್ಠ ವೇಗವನ್ನು ವರ್ಲ್ಡ್ ಏರ್ ಸ್ಪೋರ್ಟ್ಸ್ ಫೆಡರೇಶನ್ ಅಧಿಕೃತವಾಗಿ ದೃಢಪಡಿಸಿದೆ.

ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾದ Rolls Royce ಎಲೆಕ್ಟ್ರಿಕ್ ವಿಮಾನ

ಈ ರೀತಿಯ ಪರೀಕ್ಷಾ ರನ್‌ಗಳನ್ನು ನಡೆಸುವುದು, ದಾಖಲಿಸುವುದು ಹಾಗೂ ಅವುಗಳನ್ನು ಪ್ರಮಾಣೀಕರಿಸುವುದು ಈ ಫೆಡರೇಶನ್‌ನ ಕಾರ್ಯವಾಗಿದೆ. ಈ ಪರೀಕ್ಷೆಯ ಸಮಯದಲ್ಲಿ ಈ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ವಿಮಾನದಲ್ಲಿ 400 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್‌ ಅಳವಡಿಸಲಾಗಿತ್ತು. ಈ ಎಲೆಕ್ಟ್ರಿಕ್ ಮೋಟರ್ 500 ಬಿಹೆಚ್‌ಪಿಗಿಂತ ಹೆಚ್ಚು ಪವರ್ ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಮೋಟರ್ ಹೆಚ್ಚು ಪವರ್ ಉತ್ಪಾದಿಸುವ ಬ್ಯಾಟರಿ ಪ್ಯಾಕ್ ಹೊಂದಿದೆ.

ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾದ Rolls Royce ಎಲೆಕ್ಟ್ರಿಕ್ ವಿಮಾನ

ಈ ವಿಮಾನದಲ್ಲಿರುವ ಬ್ಯಾಟರಿ ಸುಮಾರು 250 ಮನೆಗಳಿಗೆ ವಿದ್ಯುತ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ರೋಲ್ಸ್ ರಾಯ್ಸ್ ನ ಕಾರ್ಯಾಚರಣೆಯ ನಾಯಕ ಹಾಗೂ ಪೈಲಟ್ ಬಿಲ್ ಒ'ಡೆಲ್ ಈ ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ ಸ್ಪ್ರೈಟ್ ಆಫ್ ಇನ್ನೋವೇಶನ್ ಚಾಲನೆ ಮಾಡಿದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಲ್ ಓ'ಡೆಲ್ ಪೂರ್ಣ ಪ್ರಮಾಣದ ವಿದ್ಯುತ್ ವಿಮಾನದ ಮೂಲಕ ವಿಶ್ವ ದಾಖಲೆ ನಿರ್ಮಿಸುವುದು ಒಂದು ಪ್ರಮುಖ ಸಂದರ್ಭವಾಗಿದೆ.

ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾದ Rolls Royce ಎಲೆಕ್ಟ್ರಿಕ್ ವಿಮಾನ

ಇದು ನನ್ನ ವೃತ್ತಿಜೀವನದಲ್ಲಿ ಒಂದು ಪ್ರಮುಖ ಕ್ಷಣವಾಗಿದ್ದು, ಒಟ್ಟಾರೆಯಾಗಿ ತಂಡಕ್ಕೆ ನಂಬಲಾಗದ ಸಾಧನೆಯಾಗಿದೆ ಎಂದು ಹೇಳಿದರು. ಈ ವಿಶ್ವ ದಾಖಲೆಗಾಗಿ ರೋಲ್ಸ್ ರಾಯ್ಸ್ ಕಂಪನಿಯು ವಿಮಾನಯಾನ ಶಕ್ತಿ ಶೇಖರಣಾ ಕಂಪನಿಯಾದ Electroflight ಹಾಗೂ ಆಟೋಮೊಬೈಲ್ ಮೋಟಾರ್ ವಿತರಕ ಕಂಪನಿಯಾದ YASA ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.

ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾದ Rolls Royce ಎಲೆಕ್ಟ್ರಿಕ್ ವಿಮಾನ

ಯೋಜನೆಗಾಗಿ ಅಭಿವೃದ್ಧಿಪಡಿಸಲಾದ ಸುಧಾರಿತ ಬ್ಯಾಟರಿ ಹಾಗೂ ಪ್ರೊಪಲ್ಷನ್ ತಂತ್ರಜ್ಞಾನವು ಮುಂದುವರಿದ ಏರೋನಾಟಿಕಲ್ ಮಾರುಕಟ್ಟೆಗಾಗಿ ಅಪ್ಲಿಕೇಶನ್‌ಗಳನ್ನು ಸಹ ಒಳಗೊಂಡಿದೆ ಎಂದು ರೋಲ್ಸ್ ರಾಯ್ಸ್ ಕಂಪನಿ ಹೇಳಿಕೊಂಡಿದೆ. ರೋಲ್ಸ್ ರಾಯ್ಸ್ ಸ್ಪಿರಿಟ್ ಆಫ್ ಇನ್ನೋವೇಶನ್ ಎಲೆಕ್ಟ್ರಿಕ್ ಏರ್‌ಕ್ರಾಫ್ಟ್ ಸ್ಟೀಲ್ ಬರ್ಡ್‌ಗೆ ಅಳವಡಿಸಲಾಗಿರುವ ಪ್ರಚೋದಕ ತಂತ್ರಜ್ಞಾನವನ್ನು ಹೊಂದಿದೆ.

ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾದ Rolls Royce ಎಲೆಕ್ಟ್ರಿಕ್ ವಿಮಾನ

ಈ ವಿಶ್ವ ದಾಖಲೆಯ ಕುರಿತು ಪ್ರತಿಕ್ರಿಯೆ ನೀಡಿರುವ ರೋಲ್ಸ್ ರಾಯ್ಸ್ ಸಿಇಒ ವಾರೆನ್ ಈಸ್ಟ್, ಇದು ನಮಗೆ ಮತ್ತೊಂದು ಮೈಲಿಗಲ್ಲು. ಇದು ಜೆಟ್ ಝೀರೋ ಅನ್ನು ನಿಜವಾಗಿಸಲು ನೆರವಾಗುತ್ತದೆ ಹಾಗೂ ಕಾರ್ಬನ್ ಡೈ ಆಕ್ಸೈಡ್ ಮಾಲಿನ್ಯವಿಲ್ಲದೆ ವಾಯು, ಭೂಮಿ ಹಾಗೂ ಸಮುದ್ರ ಸಾರಿಗೆಗೆ ಸುಧಾರಿತ ತಂತ್ರಜ್ಞಾನಗಳನ್ನು ಒದಗಿಸುವ ನಮ್ಮ ಮಹತ್ವಾಕಾಂಕ್ಷೆಯನ್ನು ಬೆಂಬಲಿಸುತ್ತದೆ ಎಂದು ಹೇಳಿದರು.

ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾದ Rolls Royce ಎಲೆಕ್ಟ್ರಿಕ್ ವಿಮಾನ

ವಿಮಾನ ವಿದ್ಯುದೀಕರಣವನ್ನು ಜಾರಿಗೊಳಿಸುವ ರೋಲ್ಸ್ ರಾಯ್ಸ್ ಯೋಜನೆಯ ಭಾಗವಾಗಿ ಸ್ಪ್ರೈಟ್ ಆಫ್ ಇನ್ನೋವೇಶನ್ ಎಲೆಕ್ಟ್ರಿಕ್ ವಿಮಾನವನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಗೆ ಅರ್ಧದಷ್ಟು ಹಣವನ್ನು ಇಂಗ್ಲೆಂಡ್ ಮೂಲದ ಏರೋಸ್ಪೇಸ್ ಕಂಪನಿ ನೀಡಿದೆ ಎಂದು ವರದಿಗಳಾಗಿವೆ. ಈ ಮೈತ್ರಿಯಲ್ಲಿಯೇ ಐರನ್ ಬರ್ಡ್ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಾಗಿದೆ.

ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾದ Rolls Royce ಎಲೆಕ್ಟ್ರಿಕ್ ವಿಮಾನ

ಈ ವಿಮಾನವು ಯಾವುದೇ ಇಂಗಾಲದ ಹೊರಸೂಸುವಿಕೆಯನ್ನು ಹೊರಸೂಸುವುದಿಲ್ಲ ಎಂದು ಖಚಿತಪಡಿಸಿಕೊಂಡ ನಂತರ, ತಂತ್ರಜ್ಞಾನಕ್ಕೆ ಐರನ್ ಬರ್ಡ್ ಎಂದು ಹೆಸರಿಡಲಾಗಿದೆ. ಜನಪ್ರಿಯ ಬ್ರಿಟಿಷ್ ವಾಚ್‌ಮೇಕರ್ ಕಂಪನಿಯಾದ ಬ್ರೆಮೆಂಟ್, ಈ ಪೂರ್ಣ ಎಲೆಕ್ಟ್ರಿಕ್ ವಿಮಾನದ ವೇಗವನ್ನು ದಾಖಲಿಸಲು ಅಧಿಕೃತ ಸಮಯದ ಪಾಲುದಾರನಾಗಿದೆ.

ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾದ Rolls Royce ಎಲೆಕ್ಟ್ರಿಕ್ ವಿಮಾನ

ಇದರ ಜೊತೆಗೆ, ವಿಮಾನದ ಆಂತರಿಕ ಕಾಕ್‌ಪಿಟ್‌ನ ವಿನ್ಯಾಸದಲ್ಲಿಯೂ ಬ್ರೆಮೆಂಟ್ ಪ್ರಮುಖ ಪಾತ್ರ ವಹಿಸಿದೆ. ರೋಲ್ಸ್ ರಾಯ್ಸ್ ಕಂಪನಿಯು ಹೆಚ್ಚು ವೇಗದ ಹಾಗೂ ದುಬಾರಿ ವಾಹನಗಳನ್ನು ವಿನ್ಯಾಸಗೊಳಿಸುತ್ತದೆ. ಕಂಪನಿಯ ಐಷಾರಾಮಿ ಕಾರುಗಳು ಪ್ರಪಂಚದಾದ್ಯಂತ ವಿವಿಧ ರೀತಿಯ ಅಭಿಮಾನಿಗಳನ್ನು ಹೊಂದಿವೆ. ರೋಲ್ಸ್ ರಾಯ್ಸ್ ಕಂಪನಿಯ ಕಾರುಗಳು ರೂ. 200 ಕೋಟಿ (ಬೋಟ್ ಟೈಲ್) ಬೆಲೆಯನ್ನು ಹೊಂದಿವೆ.

Most Read Articles

Kannada
English summary
Rolls royce electric aircraft creates new record as world s fastest electric vehicle details
Story first published: Tuesday, November 23, 2021, 12:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X