ದುಬೈ ಪೊಲೀಸ್‌ಗೆ ಟಕ್ಕರ್ ನೀಡಿದ ಅಬುದಾಬಿ ಪೊಲೀಸ್

By Nagaraja

ಜಗತ್ತಿನ ದುಬಾರಿಗಳಲ್ಲಿ ಅತಿ ದುಬಾರಿ ಕಾರುಗಳನ್ನು ಒಂದೊಂದಾಗಿ ತನ್ನ ತೆಕ್ಕೆಗೆ ಸೇರಿಸಿಕೊಂಡು ಬರುತ್ತಿರುವ ದುಬೈ ಪೊಲೀಸ್ ಬಗ್ಗೆ ನಾವು ಈಗಾಗಲೇ ಹಲವಾರು ಬಾರಿ ಲೇಖನ ಪ್ರಕಟಿಸಿರುತ್ತೇವೆ. ಹಾಗಿರುವಾಗ ದುಬೈ ಸಮೀಪವಿರುವ ಅಬುದಾಬಿ ಕೂಡಾ ತಾವೇನು ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ಜಗತ್ತಿನ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿರುವ ರೋಲ್ಸ್ ರಾಯ್ಸ್ ಫಾಟಂ ಕಾರನ್ನು ಖರೀದಿಸಿದೆ.

ಯುಎಇ ಆಡಳಿತ ಪರಿಧಿಯಲ್ಲಿ ದುಬೈ ಹಾಗೂ ಅಬುದಾಬಿ ಒಳಪಡುತ್ತದೆ. ಆದರೆ ಈಗ ಜಗತ್ತಿನ ಶ್ರೀಮಂತ ರಕ್ಷಣಾ ಇಲಾಖೆ ಎನಿಸಿಕೊಳ್ಳುವ ನಿಟ್ಟಿನಲ್ಲಿ ಈ ಎರಡು ಸೋದರರ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ. ಇದು ಮುಂಬರುವ ದಿನಗಳಲ್ಲಿ ಇನ್ನಷ್ಟು ಐಷಾರಾಮಿ ಕಾರುಗಳ ಖರೀದಿಗೆ ಕಾರಣವಾಗಲಿದೆ ಎಂಬುದು ಆಟೋ ವಿಮರ್ಶಕರ ಅಭಿಪ್ರಾಯವಾಗಿದೆ.

ಅಬುದಾಬಿ ಪೊಲೀಸ್ ತೆಕ್ಕೆಗೆ ರೋಲ್ಸ್ ರಾಯ್ಸ್ ಫಾಟಂ

ಇಲ್ಲಿ ಗಮನಾರ್ಹ ಸಂಗತಿಯೆಂದರೆ ರೋಲ್ಸ್ ರಾಯ್ಸ್ ಫಾಟಂ ಕಾರನ್ನು ತಮಗೆ ತಕ್ಕಂತೆ ಅಬುದಾಬಿ ಪೊಲೀಸ್ ಮಾರ್ಪಾಡುಗೊಳಿಸಿದೆ. ಮೊದಲ ನೋಟದಲ್ಲಿ ಇದು ದುಬೈ ಪೊಲೀಸ್ ವಾಹನವೇ ಎಂಬ ಕುತೂಹಲವನ್ನುಂಟು ಮಾಡಲಿದೆ.

ಅಬುದಾಬಿ ಪೊಲೀಸ್ ತೆಕ್ಕೆಗೆ ರೋಲ್ಸ್ ರಾಯ್ಸ್ ಫಾಟಂ

ಅಬುದಾಬಿ ಪೊಲೀಸ್‌ನ ರೋಲ್ಸ್ ರಾಯ್ಸ್ ಕಾರು ಹೊರಗಡೆ ಡ್ಯುಯಲ್ ಟೋನ್ ಬಣ್ಣವನ್ನು ಪಡೆದುಕೊಂಡಿದೆ. ಹಾಗೆಯೇ ಅತಿ ವಿಶೇಷ ಎಂಬ ರೀತಿಯಲ್ಲಿ 999 ಫ್ಯಾನ್ಸಿ ನಂಬರ್ ಕಾಣಬಹುದಾಗಿದೆ.

ಅಬುದಾಬಿ ಪೊಲೀಸ್ ತೆಕ್ಕೆಗೆ ರೋಲ್ಸ್ ರಾಯ್ಸ್ ಫಾಟಂ

ಸಾಮಾನ್ಯ ರೋಲ್ಸ್ ರಾಯ್ಸ್ ಫಾಟಂ ಕಾರಿಗಿಂತಲೂ ವಿಶಿಷ್ಟವಾಗಿ ಗೋಚರಿಸುತ್ತಿರುವ ಈ ಕೆಂಪು ಹಾಗೂ ಶ್ವೇತ ವರ್ಣ ಮಿಶ್ರಿತ ಕಾರು ಅಬುದಾಬಿ ಪೊಲೀಸ್ ಐಷಾರಾಮಿ ಕಾರುಗಳ ಪ್ರತಿಷ್ಠೆಯನ್ನು ಎತ್ತಿ ಹಿಡಿದಿದೆ.

ಅಬುದಾಬಿ ಪೊಲೀಸ್ ತೆಕ್ಕೆಗೆ ರೋಲ್ಸ್ ರಾಯ್ಸ್ ಫಾಟಂ

ನಿಮ್ಮ ಮಾಹಿತಿಗಾಗಿ, ದುಬೈ ಪೊಲೀಸ್ ಇತ್ತೀಚೆಗಷ್ಟೇ ಟೊಯೊಟಾ ಲ್ಯಾಂಡ್ ಕ್ರೂಸರ್ ಹಾಗೂ ಲೆಕ್ಸಸ್ ಸೂಪರ್ ಕಾರುಗಳನ್ನು ಖರೀದಿಸಿತ್ತು. ಅಲ್ಲದೆ ದುಬೈ ಪೊಲೀಸ್ ಹಸಿರು ಹಾಗೂ ಬಿಳಿ ಬಣ್ಣದ ಮಿಶ್ರಣವನ್ನು ಪಡೆದುಕೊಂಡಿದೆ. ಇದಕ್ಕೆ ವಿರುದ್ಧವಾಗಿ ಮುಂದೆ ಬಂದಿರುವ ಅಬುದಾಬಿ ಪೊಲೀಸ್ ಬಿಳಿ ಹಾಗೂ ಕಡು ಕೆಂಪು ಬಣ್ಣ ಮಿಶ್ರಣದ ರೋಲ್ಸ್ ರಾಯ್ಸ್ ಫಾಟಂ ಕಾರನ್ನು ಖರೀದಿಸಿದೆ.

ಅಬುದಾಬಿ ಪೊಲೀಸ್ ತೆಕ್ಕೆಗೆ ರೋಲ್ಸ್ ರಾಯ್ಸ್ ಫಾಟಂ

ಅಂದ ಹಾಗೆ ದುಬೈ ಪೊಲೀಸ್ ಬಳಿ ಫೆರಾರಿ ಎಫ್‌ಎಫ್, ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಎಸ್ ಎಎಂಜಿ, ಮೆಕ್ ಲ್ಯಾರೆನ್ 12ಸಿ, ಬಿಎಂಡಬ್ಲ್ಯು 6 ಸಿರೀಸ್, ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ಬ್ರಾಬಸ್ ಜಿ63, ಬುಗಾಟಿ ವೆರೋನ್, ಆಸ್ಟನ್ ಮಾರ್ಟಿನ್ ಒನ್ 77, ಬಿಎಂಡಬ್ಲ್ಯು 5 ಸಿರೀಸ್, ಮರ್ಸಿಡಿಸ್ ಇ ಕ್ಲಾಸ್, ಷೆವರ್ಲೆ ಕ್ಯಾಮರೊ, ಟೊಯೊಟೊ ಪ್ರಾಡೊ, ಟೊಯೊಟಾ ಫಾರ್ಚುನರ್, ಹಮ್ಮರ್ ಎಚ್1, ಲಂಬೊರ್ಗಿನಿ ಅವೆಂಟಡೊರ್ ಮತ್ತು ಫೆರಾರಿ ಎಫ್‌ಎಫ್‌ಗಳಂತಹ ದುಬಾರಿ ಕಾರುಗಳಿವೆ.

ಅಬುದಾಬಿ ಪೊಲೀಸ್ ತೆಕ್ಕೆಗೆ ರೋಲ್ಸ್ ರಾಯ್ಸ್ ಫಾಟಂ

ಈ ಎಲ್ಲದರ ಮೂಲಕ ಜಗತ್ತಿನ ಶ್ರೀಮಂತ ರಕ್ಷಣಾ ಇಲಾಖೆಯೆಂಬ ಖ್ಯಾತಿಗೆ ಪಾತ್ರವಾಗಿರುವ ದುಬೈ ಪೊಲೀಸ್ ಶಕ್ತಿಯನ್ನು ಅಬುದಾಬಿ ಪೊಲೀಸ್ ಹಿಮ್ಮೆಟ್ಟಿಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Rolls Royce Phantom joins Abu Dhabi Police.
Story first published: Tuesday, March 10, 2015, 12:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X