ನೆಲದಿಂದಲೇ ಸಾಗರದಲ್ಲಿ ಸಾಗುವ ಹಡಗುಗಳನ್ನು ನಿಯಂತ್ರಿಸಲಿರುವ ರೋಲ್ಸ್ ರಾಯ್ಸ್

By Nagaraja

ಐಕಾನಿಕ್ ಕ್ಲಾಸಿಕ್ ಕಾರು ನಿರ್ಮಾಣ ಸಂಸ್ಥೆಯಾಗಿರುವ ರೋಲ್ಸ್ ರಾಯ್ಸ್, ಕೇವಲ ಕಾರು ತಂತ್ರಜ್ಞಾನದಲ್ಲಿ ಮಾತ್ರ ನೂತನ ತಂತ್ರಜ್ಞಾನಗಳನ್ನು ಅವಿಷ್ಕಾರ ಮಾಡುತ್ತಿದೆಯೆಂದರೆ ತಪ್ಪಾದಿತ್ತು. ಯಾಕೆಂದರೆ ಬ್ರಿಟನ್‌ನ ಈ ಪ್ರತಿಷ್ಠಿತ ಸಂಸ್ಥೆಯೀಗ ಮುಂದಿನ ಜನಾಂಗದ ಹಡಗು ತಂತ್ರಜ್ಞಾನಕ್ಕೂ ಪಾದಾರ್ಪಣೆ ಮಾಡಿದೆ.

ವಿಜ್ಞಾನಿಗಳಲ್ಲಿ ಬಹಳ ಕುತೂಹಲ ಕೆರಳಿಸಿರುವ ಸುದ್ದಿಯೊಂದರಲ್ಲಿ, ರೋಲ್ಸ್ ರಾಯ್ಸ್ ನಾವಿಕ ರಹಿತ ಸರಕು ಸಾಗಣೆಯ ಹಡಗು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಈ ಮೂಲಕ ಸಾಗರಕ್ಕಿಳಿಯದೇ ಹಡಗು ಸಂಚಾರವನ್ನು ನೆಲದಿಂದಲೇ ನಿಯಂತ್ರಿಸಬಹುದಾಗಿದೆ.

ನೆಲದಿಂದಲೇ ಸಾಗರದಲ್ಲಿ ಸಾಗುವ ಹಡಗುಗಳನ್ನು ನಿಯಂತ್ರಿಸಲಿರುವ ರೋಲ್ಸ್ ರಾಯ್ಸ್

ಹಾಗಿರುವಾಗ ಸಾಗರದಲ್ಲಿ ಸಂಚರಿಸುವ ಹಡಗುಗಳನ್ನು ಭೂಮಿಯಿಂದ ಹೇಗೆ ನಿಯಂತ್ರಿಸಲು ಸಾಧ್ಯ ಎಂಬ ಸಂಶಯ ನಿಮ್ಮಲ್ಲಿ ಮೂಡಬಹುದಾಗಿದೆ. ಇದಕ್ಕಾಗಿ ರೋಲ್ಸ್ ರಾಯ್ಸ್ ಸಂಸ್ಥೆಯು ಅತಿ ನೂತನ ನಿಯಂತ್ರಣ ಕೇಂದ್ರಕ್ಕೆ ರೂಪುರೇಷೆಯನ್ನು ನೀಡುತ್ತಿದೆ.

ನೆಲದಿಂದಲೇ ಸಾಗರದಲ್ಲಿ ಸಾಗುವ ಹಡಗುಗಳನ್ನು ನಿಯಂತ್ರಿಸಲಿರುವ ರೋಲ್ಸ್ ರಾಯ್ಸ್

ಏಳರಿಂದ 14 ಮಂದಿಯಷ್ಟು ಕಾರ್ಯ ನಿರ್ವಹಿಸಬಹುದಾದ ಈ ಸಣ್ಣದಾದ ಕೇಂದ್ರದಿಂದಲೇ ಹಡಗು ಸಂಚಲನವನ್ನು ಬಹಳ ದೂರದಲ್ಲಿದ್ದುಕೊಂಡೇ ನಿಯಂತ್ರಿಸಬಹುದಾಗಿದೆ.

ನೆಲದಿಂದಲೇ ಸಾಗರದಲ್ಲಿ ಸಾಗುವ ಹಡಗುಗಳನ್ನು ನಿಯಂತ್ರಿಸಲಿರುವ ರೋಲ್ಸ್ ರಾಯ್ಸ್

ಮಾನವ ರಹಿತ ಸ್ವಯಂಚಾಲಿತ ಹಡಗುಗಳ ನಿಯಂತ್ರಣಕ್ಕಾಗಿ ನಿಯಂತ್ರಣ ಕೇಂದ್ರದಲ್ಲಿ ವಿನಿಮಯ ಸ್ಮಾರ್ಟ್ ಸ್ಕ್ರೀನ್, ಧ್ವನಿ ಗುರುತಿಸುವಿಕೆ ಮತ್ತು ಹೊಲೊಗ್ರಾಂ ವ್ಯವಸ್ಥೆಗಳನ್ನು ಲಗತ್ತಿಸಲಾಗುವುದು.

ನೆಲದಿಂದಲೇ ಸಾಗರದಲ್ಲಿ ಸಾಗುವ ಹಡಗುಗಳನ್ನು ನಿಯಂತ್ರಿಸಲಿರುವ ರೋಲ್ಸ್ ರಾಯ್ಸ್

ಇವೆಲ್ಲದಕ್ಕೂ ಮಿಗಿಲಾಗಿ ಹಡಗುಗಳ ಚಲನವಲನಗಳನ್ನು ಸೂಕ್ಷ್ಮವಾಗಿ ವೀಕ್ಷಿಸಲು ಕಣ್ಗಾವಲು ಡ್ರೋನ್ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ.

ನೆಲದಿಂದಲೇ ಸಾಗರದಲ್ಲಿ ಸಾಗುವ ಹಡಗುಗಳನ್ನು ನಿಯಂತ್ರಿಸಲಿರುವ ರೋಲ್ಸ್ ರಾಯ್ಸ್

ರಿಮೋಟ್ ಮತ್ತು ಸ್ವಯಂಚಾಲಿತ ಹಡಗು ತಂತ್ರಜ್ಞಾನವು ಸಂಸ್ಥೆಯು ಅಭಿವೃದ್ಧಿಪಡಿಸುತ್ತಿರುವ ಮೂರು ನಾವೀನ್ಯ ಹಡಗು ಗುಪ್ತಚರ ತಂತ್ರಗಾರಿಕೆಯಲ್ಲಿ ಒಂದಾಗಿದೆ. ಈ ಮೂಲಕ ಗ್ರಾಹಕರಿಗೆ ಸಮುದ್ರ ವ್ಯವಹಾರಗಳನ್ನು ಮತ್ತಷ್ಟು ಸುಲಭವಾಗಿ ನಿರ್ವಹಿಸಬಹುದಾಗಿದೆ.

ನೆಲದಿಂದಲೇ ಸಾಗರದಲ್ಲಿ ಸಾಗುವ ಹಡಗುಗಳನ್ನು ನಿಯಂತ್ರಿಸಲಿರುವ ರೋಲ್ಸ್ ರಾಯ್ಸ್

ಈ ಸಂಬಂಧ ಆರು ನಿಮಿಷಗಳ ಉಪಯುಕ್ತ ವಿಡಿಯೋವನ್ನು ನಿರ್ಮಿಸಿರುವ ರೋಲ್ಸ್ ರಾಯ್ಸ್, ತನ್ನ ತಂತ್ರಜ್ಞಾನ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ವಿಡಿಯೋ ತುಣುಕುಗಳ ಮೂಲಕ ವಿವರಣೆಯನ್ನು ನೀಡಿದೆ.

ನೆಲದಿಂದಲೇ ಸಾಗರದಲ್ಲಿ ಸಾಗುವ ಹಡಗುಗಳನ್ನು ನಿಯಂತ್ರಿಸಲಿರುವ ರೋಲ್ಸ್ ರಾಯ್ಸ್

2014ರಲ್ಲಿ ರೋಲ್ಸ್ ರಾಯ್ಸ್ ಭವಿಷ್ಯದ ದೃಷ್ಟಿಕೋನದ ಭಾಗವಾಗಿ 'ಒಎಕ್ಸ್' ಕಾನ್ಸೆಪ್ಟ್ ರಚಿಸಿತ್ತು. ಈ ಸರಣಿಯ ಮುಂದಿನ ಭಾಗ ಇದಾಗಿದ್ದು, ಭವಿಷ್ಯದ ಸರಕು ನೌಕಾ ತಂತ್ರಜ್ಞಾನವನ್ನು ಹಂಚಿಕೊಂಡಿದೆ.

ನೆಲದಿಂದಲೇ ಸಾಗರದಲ್ಲಿ ಸಾಗುವ ಹಡಗುಗಳನ್ನು ನಿಯಂತ್ರಿಸಲಿರುವ ರೋಲ್ಸ್ ರಾಯ್ಸ್

ವಿಟಿಟಿ ಮತ್ತು ಯುನಿವರ್ಸಿಟಿ ಆಫ್ ಟ್ಯಾಂಪ್ ರಿಸರ್ಚ್ ಸೆಂಟರ್ ತಾವುಚಿ (University of Tampere research centre TAUCHI) ಜೊತೆ ಸೇರಿಕೊಂಡು ರೋಲ್ಸ್ ರಾಯ್ಸ್ ಗಾಢವಾದ ಅಧ್ಯಯನವನ್ನು ಕೈಗೊಂಡಿದೆ.

ನೆಲದಿಂದಲೇ ಸಾಗರದಲ್ಲಿ ಸಾಗುವ ಹಡಗುಗಳನ್ನು ನಿಯಂತ್ರಿಸಲಿರುವ ರೋಲ್ಸ್ ರಾಯ್ಸ್

ವ್ಯೋಮಯಾನ, ಶಕ್ತಿ ಸಂಪನ್ಮೂಲ, ಭದ್ರತೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಶೋಧನೆಗಳು ಹೇರಳವಾಗಿ ನಡೆಯುತ್ತಿರುವಾಗ ರೋಲ್ಸ್ ರಾಯ್ಸ್ ಸಂಸ್ಥೆಯ ಈ ವಿನೂತನ ಮರೈನ್ ತಂತ್ರಗಾರಿಕೆಯು ಅತಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗುತ್ತಿದೆ.

Most Read Articles

Kannada
English summary
Rolls-Royce reveals future shore control centre
Story first published: Tuesday, June 28, 2016, 15:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X