ರಷ್ಯಾ ಪ್ರಬಲ ದಾಳಿಗೆ ಐಸಿಸ್ ನಾಮಾವಶೇಷ?

Posted By:

ಸಿರಿಯಾದಲ್ಲಿ ಐಸಿಸ್ ನಾಮಾವಶೇಷ ಮಾಡಲು ಪಣ ತೊಟ್ಟಿರುವ ವಿಶ್ವದ ಅಶ್ವ ಶಕ್ತಿಗಳಲ್ಲಿ ಒಂದಾಗಿರುವ ರಷ್ಯಾ ಪ್ರಬಲ ವೈಮಾನಿಕ ದಾಳಿಯನ್ನು ಮುಂದುವರಿಸಿದೆ. ಈ ಮೂಲಕ ಸಮರಗ್ರಸ್ತ ಸಿರಿಯಾದಲ್ಲಿ ಐಸಿಸ್ ಉಗ್ರರ ಪ್ರಾಬಲ್ಯಕ್ಕೆ ತಕ್ಕ ಉತ್ತರ ನೀಡುತ್ತಿದೆ.

Also Read: ಭಾರತ ಅಶ್ವಶಕ್ತಿಯಾಗಲು ಸಹಕಾರಿಯಾದ ಯುದ್ಧ ಟ್ಯಾಂಕರ್ ಗಳು ಮುಂದಕ್ಕೆ ಓದಿ

ರಷ್ಯಾ ವಾಯು ದಾಳಿಗೆ ಉಗ್ರರ ಭದ್ರಕೋಟೆಗಳು ಛಿದ್ರಗೊಂಡಿವೆ. ಇದಕ್ಕಾಗಿ ಶಕ್ತಿಶಾಲಿ ವೈಮಾನಿಕ ಶಸ್ತ್ತಾಸ್ತಗಳನ್ನು ಬಳಕೆ ಮಾಡಿವೆ. ಇವುಗಳಲ್ಲಿ ಟಿಒಎಸ್-1ಎ ರಾಕೆಟ್ ಲಾಂಚರ್ ಪ್ರಮುಖವೆನಿಸಿದೆ.

ರಷ್ಯಾ ಪ್ರಬಲ ದಾಳಿಗೆ ಐಸಿಸ್ ನಾಮಾವಶೇಷ?

ರಷ್ಯಾ ತನ್ನ ತೆಕ್ಕೆಯಲ್ಲಿರುವ ಅತ್ಯಂತ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನೇ ಸಿರಿಯಾ ವಿರುದ್ಧ ದಾಳಿಗೆ ಬಳಕೆ ಮಾಡುತ್ತಿದೆ. ಇದರಲ್ಲಿ ಮೊಬೈಲ್ ಮಲ್ಟಿಪಲ್ ರಾಕೆಟ್ ಲಾಂಚರ್ ಟಿಒಎಸ್-1ಎ ಪ್ರಮುಖವೆನಿಸಿದೆ.

ರಷ್ಯಾ ಪ್ರಬಲ ದಾಳಿಗೆ ಐಸಿಸ್ ನಾಮಾವಶೇಷ?

ಟಿಒಎಸ್-1ಎ ಎಷ್ಟು ಶಕ್ತಿಶಾಲಿ ಎಂದರೆ ಒಂದೇ ದಾಳಿಯಲ್ಲಿ ಎಂಟು ನಗರಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

ರಷ್ಯಾ ಪ್ರಬಲ ದಾಳಿಗೆ ಐಸಿಸ್ ನಾಮಾವಶೇಷ?

ಟಿಒಎಸ್-1ಎ ಎಂಬುದು 24ರಿಂದ 30 ಬ್ಯಾರೆಲ್ ಮಲ್ಟಿ ಬ್ಯಾರೆಲ್ ಲಾಂಚರ್ ಆಗಿದ್ದು, ಟಿ-72 ಟ್ಯಾಂಕ್ ಚಾಸೀಗಳಲ್ಲಿ ಥೆರ್ಮೊಬೇರಿಕ್ ಶಸ್ತ್ತಾಸ್ತ್ರಗಳನ್ನು ಜೋಡಣೆ ಮಾಡಬಹುದಾಗಿದೆ.

ರಷ್ಯಾ ಪ್ರಬಲ ದಾಳಿಗೆ ಐಸಿಸ್ ನಾಮಾವಶೇಷ?

ಈ ರಾಕೆಟ್ ಲಾಂಚರ್‌ಗೆ ಪ್ರಕಾಶಮಾನ ಸೂರ್ಯ (Solntsepyok) ಎಂಬ ಹೆಸರಿನ್ನಿಡಲಾಗಿದೆ. ಅಲ್ಲದೆ ಹೆಸರಿಗೆ ತಕ್ಕಂತೆ ಬೆಂಕಿ ಉಂಡೆಗಳನ್ನು ಉಗುಳಲಿದೆ.

ರಷ್ಯಾ ಪ್ರಬಲ ದಾಳಿಗೆ ಐಸಿಸ್ ನಾಮಾವಶೇಷ?

ರಷ್ಯಾದಲ್ಲಿ ಮಕ್ಕಳ ಕಾರ್ಟೂನ್ ಪುಸ್ತಕದಲ್ಲಿರುವ Buratino ಎಂಬ ಅಕ್ಕರೆಯ ಹೆಸರಿನಿಂದಲೂ ಇದನ್ನು ಕರೆಯಲಾಗುತ್ತದೆ.

ರಷ್ಯಾ ಪ್ರಬಲ ದಾಳಿಗೆ ಐಸಿಸ್ ನಾಮಾವಶೇಷ?

ಇಂಧನ ಅಥವಾ ವ್ಯಾಕ್ಯೂಮ್ ಸ್ಪೋಟಕ ದಾಳಿಗಳನ್ನು ಹೊಂದಿರುವ ಇದು ಅತಿ ಹೆಚ್ಚು ಅನಾಹುತಗಳನ್ನು ಸೃಷ್ಟಿ ಮಾಡುತ್ತದೆ.

ರಷ್ಯಾ ಪ್ರಬಲ ದಾಳಿಗೆ ಐಸಿಸ್ ನಾಮಾವಶೇಷ?

ಶತ್ರು ನೆಲೆಯನ್ನು ಧ್ವಂಸ ಮಾಡುವಲ್ಲಿ ರಷ್ಯಾ ಅತ್ಯಂತ ಶಕ್ತಿಶಾಲಿ ರಾಕೆಟ್ ಲಾಂಚರ್ ಆಯುಧವನ್ನೇ ಬಳಕೆ ಮಾಡುತ್ತಿದೆ.

ರಷ್ಯಾ ಪ್ರಬಲ ದಾಳಿಗೆ ಐಸಿಸ್ ನಾಮಾವಶೇಷ?

ಇದರ ಪ್ರಭಾವ ಎಷ್ಟರ ಮಟ್ಟಿಗಿದೆಯೆಂದರೆ ಹತ್ತಿರದ ಪ್ರದೇಶದ ಜನರಲ್ಲೂ ಅಂಗಾಂಗ ವೈಕಲ್ಯವನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಮೆರಿಕ ರಹಸ್ಯ ವಿಭಾಗ ವರದಿ ಮಾಡುತ್ತದೆ.

ರಷ್ಯಾ ಪ್ರಬಲ ದಾಳಿಗೆ ಐಸಿಸ್ ನಾಮಾವಶೇಷ?

2001ನೇ ಇಸವಿಯಿಂದಲೇ ಟಿಒಎಸ್-1ಎ ಶಕ್ತಿಶಾಲಿ ರಾಕೆಟ್ ಲಾಂಚ್ ರಷ್ಯಾ ಬಳಕೆ ಮಾಡುತ್ತಲೇ ಇದೆ.

ಇವ್ನನ್ನೂ ಓದಿ

ಶತ್ರು ಪಾಳಯದಲ್ಲಿ ನಡುಕ ಸೃಷ್ಟಿಸಬಲ್ಲ 10 ಅಪಾಯಕಾರಿ ಯುದ್ಧ ಟ್ಯಾಂಕರ್ ಮುಂದಕ್ಕೆ ಓದಿ

English summary
Russia deployed deadliest rocket launcher TOS-1A military action in Syria
Story first published: Tuesday, November 3, 2015, 11:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark