ಬೆತ್ತಲೆ ಸ್ತನ ತಂದಿತ್ತ ಆಘಾತ; ದಿನವೊಂದರಲ್ಲೇ 517 ಅಪಘಾತ

Written By:

ಇಲ್ಲೊಂದು ವಿಚಿತ್ರ ಘಟನೆ ರಷ್ಯಾದಿಂದ ವರದಿಯಾಗಿದೆ. ರಷ್ಯಾದ ಮಾಸ್ಕೋದಲ್ಲಿ ದಿನವೊಂದರಲ್ಲಿ 517ರಷ್ಟು ಅಪಘಾತ ಪ್ರಕರಣಗಳು ದಾಖಲಾಗಿದೆಯಂತೆ! ಆದರೆ ಇವೆಲ್ಲದರ ಹಿಂದಿನ ಕಾರಣ ಒಂದೇ ಒಂದು ಅಂದರೇ ನಂಬಬಹುದೇ?

ಹೌದು, ರಷ್ಯಾದ ಮಾಸ್ಕೋದಲ್ಲಿ 30ರಷ್ಟು ಟ್ರಕ್‌ಗಳಲ್ಲಿ ಮಹಿಳೆಯ ಬೆತ್ತಲೆ ಸ್ತನಗಳ ಜಾಹಿರಾತು ಫಲಕಗಳನ್ನು ಚಿತ್ರಿಸಿರುವ ಹಿನ್ನಲೆಯಲ್ಲಿ ದಿನವೊಂದರಲ್ಲೇ 517ರಷ್ಟು ಅಪಘಾತಗಳು ದಾಖಲಾಗಿದೆಯಂತೆ! ಮುಂದಕ್ಕೆ ಓದಿ...

ಬೆತ್ತಲೆ ಸ್ತನ ತಂದಿತ್ತ ಆಘಾತ; ದಿನವೊಂದರಲ್ಲೇ 517 ಅಪಘಾತ

ಜಾಹೀರಾತು ಅಭಿಯಾನದ ಅಂಗವಾಗಿ 30ರಷ್ಟು ಟ್ರಕ್‌ಗಳಲ್ಲಿ ಬೃಹತ್ತಕಾರದ ಬೆತ್ತಲೆ ಸ್ತನಗಳ ಜಾಹೀರಾತು ಫಲಕಗಳನ್ನು ಹಾಕಲಾಗಿತ್ತು. ಇದರಲ್ಲಿ ರಷ್ಯಾ ಭಾಷೆಯಲ್ಲಿ 'ಅದು ಆಕರ್ಷಕ' ಎಂಬುದನ್ನು ನಮೂದಿಸಲಾಗಿತ್ತು.

ಬೆತ್ತಲೆ ಸ್ತನ ತಂದಿತ್ತ ಆಘಾತ; ದಿನವೊಂದರಲ್ಲೇ 517 ಅಪಘಾತ

ಇತ್ತ ಪುರುಷ ಚಾಲಕರ ನಿಯಂತ್ರಣ ತಪ್ಪುವಲ್ಲಿ ಇದು ಬೇಕಾದಷ್ಟಾಗಿದೆ ಎಂದು ವರದಿಗಳು ತಿಳಿಸಿವೆ. ಪರಿಣಾಮ ದಿನವೊಂದರಲ್ಲೇ 517 ಅಪಘಾತಗಳು ನಡೆದು ಹೋಗಿವೆ.

ಬೆತ್ತಲೆ ಸ್ತನ ತಂದಿತ್ತ ಆಘಾತ; ದಿನವೊಂದರಲ್ಲೇ 517 ಅಪಘಾತ

ಆದರೆ ಈ ಎಲ್ಲ ಅಪಘಾತಗಳಲ್ಲಿ ಯಾವುದೇ ಅಪಾಯ ಎದುರಾಗಿರುವ ಬಗ್ಗೆ ವರದಿಯಾಗಿಲ್ಲ. ಬಳಿಕ ಕಾರ್ಯಾಚರಣೆ ನಡೆಸಿರುವ ಪೊಲೀಸರು ಟ್ರಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಇಂತಹ 'ಅಪಾಯ' ಹುಟ್ಟಿಸುವ ಚಿತ್ರಗಳನ್ನು ತೆರವುಗೊಳಿಸಿದ್ದಾರೆ.

ಬೆತ್ತಲೆ ಸ್ತನ ತಂದಿತ್ತ ಆಘಾತ; ದಿನವೊಂದರಲ್ಲೇ 517 ಅಪಘಾತ

35ರ ಹರೆಯದ ಕಾರು ಸವಾರ ಯುರಿಯೆವ್ ಪ್ರಕಾರ, "ನಾನು ವ್ಯವಹಾರ ಸಭೆಯತ್ತ ತೆರಳುತ್ತಿದ್ದೆ. ಈ ವೇಳೆ ಮುಂಭಾಗದಲ್ಲಿ ತೆರಳುತ್ತಿದ್ದ ಬೃಹತ್ ಟ್ರಕ್‌ನ ಬದಿಯಲ್ಲಿ ಮಹಿಳೆಯ ಬೆತ್ತಲೆಯ ಸ್ತನ ಕಾಣಿಸಿಕೊಂಡಿತ್ತು. ತಕ್ಷಣ ಹಿಂಭಾಗದಿಂದ ಬಂದ ಕಾರು ನನ್ನ ವಾಹನಕ್ಕೆ ಢಿಕ್ಕಿ ಹೊಡೆದಿತ್ತು. ಕಾರಣವನ್ನು ವಿಚಾರಿಸಿದಾಗ ಟ್ರಕ್‌ನಿಂದಾಗಿ ವಿಚಲಿತನಾಗಿದ್ದೆ ಎಂಬ ಉತ್ತರ ಹಿಂಭಾಗದ ಸವಾರರಿಂದ ದೊರಕಿತ್ತು" ಎಂದು ವಿವರಿಸಿದ್ದಾರೆ.

ಬೆತ್ತಲೆ ಸ್ತನ ತಂದಿತ್ತ ಆಘಾತ; ದಿನವೊಂದರಲ್ಲೇ 517 ಅಪಘಾತ

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಡ್ ಟ್ರಕ್ ವಕ್ತಾರ (AdvTruck.ru), "ನಾವು ಹೊಸತಾದ ಜಾಹೀರಾತು ಸ್ವರೂಪವನ್ನು ಮಾರುಕಟ್ಟೆಗೆ ತರಲು ಪ್ರಯತ್ನಿಸುತ್ತಿದ್ದು, ಟ್ರಕ್‌ಗಳ ಬದಿಯಲ್ಲಿ ಜಾಹೀರಾತು ಫಲಕಗಳನ್ನು ಹಾಕುವಂತೆ ಕಂಪನಿಗಳಿಗೆ ಪ್ರೋತ್ಸಾಹಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಇಂತಹದೊಂದು ಆಹ್ವಾನ ನೀಡುವುದು ಉಚಿತವೆಂದು ಮನಗಂಡೆವು ಎಂದಿದ್ದಾರೆ. ಒಟ್ಟಿನಲ್ಲಿ ಗ್ರಾಹಕರ ಗಮನ ಸೆಳೆಯುವುದು ನಮ್ಮ ಗುರಿಯಾಗಿತ್ತು" ಎಂದಿದ್ದಾರೆ.

ಬೆತ್ತಲೆ ಸ್ತನ ತಂದಿತ್ತ ಆಘಾತ; ದಿನವೊಂದರಲ್ಲೇ 517 ಅಪಘಾತ

ಮಾತು ಮುಂದುವರಿಸಿರುವ ಅವರು, "ವಿಮೆ ಸೌಲಭ್ಯಗಳಿಲ್ಲದಿದ್ದರೂ ಈ ಎಲ್ಲ ಅಪಘಾತ ಪ್ರಕರಣಗಳಿಂದ ಆಗಿರುವ ನಷ್ಟವನ್ನು ಭರಿಸಲಿದ್ದೇವೆ"ಎಂಬ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಪ್ರಕರಣ ಸುಖಾಂತ್ಯ ಕಂಡಿದೆ ಎಂದು ಹೇಳಬಹುದು.

 

English summary
A sexy mobile advertisement showcasing a woman’s breasts is now being blamed for having caused over 500 car accidents in a single day.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more