ವಾಹನ ಜಗತ್ತಿನ 7 ವಿಸ್ಮಯಗಳು

Written By:

ನೀವು ಜಗತ್ತಿನ ಏಳು ಅದ್ಭುತಗಳ ಬಗ್ಗೆ ಕೇಳಿರಬಹುದು. ಇದಕ್ಕೆ ಸಮಾನವಾದ ರೀತಿಯಲ್ಲಿ ವಾಹನ ಜಗತ್ತಿಗೆ ಸಂಬಂಧಪಟ್ಟ ಏಳು ವಿಸ್ಮಯಕಾರಿ ಸತ್ಯಗಳನ್ನು ನಾವಿಲ್ಲಿ ಬಹಿರಂಗಪಡಿಸಲಿದ್ದೇವೆ.

Also Read: ತರ್ಕಕ್ಕೆ ನಿಲುಕದ್ದು: ಹಳೆಯ ಕಾರುಗಳ 10 ಆಘಾತಕಾರಿ ಸತ್ಯಗಳು!

ಇಲ್ಲಿ ಪರಿಚಯಿಸಲಿರುವ ಎಲ್ಲ ವಾಹನಗಳು ಒಂದಲ್ಲ ಒಂದು ವಿಭಾಗದಲ್ಲಿ ವಾಹನ ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿದೆ. ಆದರೆ ದಾಖಲೆಗಳು ಎಂದಿಗೂ ಶಾಶ್ವತವಲ್ಲ ಎಂಬುದು ಮುಖ್ಯವೆನಿಸುತ್ತದೆ. ವಾಹನ ಕ್ಷೇತ್ರದಲ್ಲಿ ಆಗುತ್ತಿರುವ ಕ್ರಾಂತಿಕಾರಿ ಬದಲಾವಣೆಗಳೇ ಇದಕ್ಕೆ ಸಾಕ್ಷಿಯಾಗಿದೆ.

To Follow DriveSpark On Facebook, Click The Like Button
ಅತ್ಯಂತ ದುಬಾರಿ ಕಾರು

ಅತ್ಯಂತ ದುಬಾರಿ ಕಾರು

2.4 ಮಿಲಿಯನ್ ಅಮೆರಿಕನ್ ಡಾಲರ್ ಗಿಂತಲೂ ದುಬಾರಿಯೆನಿಸಿರುವ ಬುಗಾಟಿ ವೆರೊನ್ ಸೂಪರ್ ಸ್ಪೋರ್ಟ್ ಜಗತ್ತಿನ ಅತ್ಯಂತ ದುಬಾರಿ ಕಾರೆನಿಸಿಕೊಂಡಿದೆ. ನಿಸ್ಸಂಶವಾಗಿಯೂ ಜಗತ್ತಿನ ಅತಿ ಬೆಳೆ ಬಾಳುವ ಕಾರು ಕೇವಲ ಸೀಮಿತ 30ರಷ್ಟು ಸಂಖ್ಯೆಯಲ್ಲಿ ಮಾತ್ರ ನಿರ್ಮಾಣಗೊಂಡಿದೆ. ಬುಗಾಟಿ ವೆರೊನ್ ಸೂಪರ್ ಸ್ಪೋರ್ಟ್ ಕಾರು 8 ಲೀಟರ್ ಡಬ್ಲ್ಯು 16 ಕ್ವಾಡ್ ಟರ್ಬೊ ಚಾರ್ಜ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, ಬರೋಬ್ಬರಿ 1200 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಅಷ್ಟೇ ಯಾಕೆ ಗಂಟೆಗೆ 267.81 ಮೈಲು ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಜಗತ್ತಿನ ಅತಿ ವೇಗದ ಲ್ಯಾಂಡ್ ಸ್ಪೀಡ್ ಕಾರು

ಜಗತ್ತಿನ ಅತಿ ವೇಗದ ಲ್ಯಾಂಡ್ ಸ್ಪೀಡ್ ಕಾರು

ಪಿಸ್ತಾನ್ ನಿಯಂತ್ರಿತ ಸ್ಪೀಡ್ ಡೆಮೊನ್ ಸ್ಟ್ರೀಮ್ ಲೈನರ್ ಜಗತ್ತಿನ ಅತಿ ವೇಗದ ಲ್ಯಾಂಡ್ ಸ್ಪೀಡ್ ಕಾರೆಂಬ ಗೌರವಕ್ಕೆ ಪಾತ್ರವಾಗಿದೆ. ಜಾರ್ಜ್ ಪೊಟೀಟ್ ಮತ್ತು ರಾನ್ ಮೈನ್ ನಿರ್ಮಿಸಿರುವ ಈ ಗಾಡಿ ಗಂಟೆಗೆ 439.562 ಮೈಲು ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಜಗತ್ತಿನ ಅತಿ ದೊಡ್ಡ ಪಿಕಪ್ ಟ್ರಕ್

ಜಗತ್ತಿನ ಅತಿ ದೊಡ್ಡ ಪಿಕಪ್ ಟ್ರಕ್

ವಿಶ್ವದ ಅತಿ ದೊಡ್ಡ ಟ್ರಕ್ ಡಾಡ್ಜ್ ಪವರ್ ವಾಗನ್‌ನ (Dodge Power Wagon) ಅಬುದಾಬಿಯ ಶೇಖ್ ಹಮಾದ್ ಬಿನ್ ಅಲ್ ನಹ್ಯಾನ್ ಬಳಿಯಿದೆ. ಅವರ ಗ್ಯಾರೇಜ್ ನಲ್ಲಿ 200ಕ್ಕೂ ಹೆಚ್ಚು ಕಾರು ಸಂಗ್ರಹಗಳಿವೆ.

ಅತ್ಯಂತ ಹೆಚ್ಚು ಇಂಧನ ಕ್ಷಮತೆಯ ಕಾರು

ಅತ್ಯಂತ ಹೆಚ್ಚು ಇಂಧನ ಕ್ಷಮತೆಯ ಕಾರು

ಮಾಲಿನ್ಯ ಮೋಸ ಪ್ರಕರಣದಲ್ಲಿ ಫೋಕ್ಸ್ ವ್ಯಾಗನ್ ಭಾಗಿಯಾಗಿರಬಹುದು. ಆದರೆ ಜಗತ್ತಿನ ಅತ್ಯಂತ ಇಂಧನ ಕ್ಷಮತೆಯ ಕಾರನ್ನು ಹೊಂದಿರುವ ಕೀರ್ತಿಗೂ ಫೋಕ್ಸ್ ವ್ಯಾಗನ್ ಪಾತ್ರವಾಗಿದೆ. ಫೋಕ್ಸ್ ವ್ಯಾಗನ್ ಜರ್ಮನಿ ಘಟಕದಲ್ಲಿ ನಿರ್ಮಿತ ಎಕ್ಸ್ ಎಲ್1 ಪ್ಲಗ್ ಇನ್ ಹೈಬ್ರಿಡ್ ಕಾರು ಪ್ರತಿ ಗ್ಯಾಲನ್ ಗೆ 261 ಮೈಲು ಇಂಧನ ಕ್ಷಮತೆ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ವಿಶ್ವದ ಅತಿ ಕಿರಿದಾದ ಕಾರು

ವಿಶ್ವದ ಅತಿ ಕಿರಿದಾದ ಕಾರು

ಟ್ಯಾಂಗೊ ವಿಶ್ವದ ಅತಿ ಕಿರಿದಾದ ಪ್ರಯಾಣಿಕ ಕಾರಾಗಿದ್ದು, ನಿಮ್ಮೆಲ್ಲ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರದ ರೂಪದಲ್ಲಿ ನಿರ್ಮಾಣವಾಗಿದೆ. ಟ್ಯಾಂಗೊ ಒಂದು ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಾಗಿದ್ದು ಅಮೆರಿಕದ ಕಮ್ಯೂಟರ್ ಸಂಸ್ಥೆಯು ನಿರ್ಮಿಸಿದೆ.

ವಿಶ್ವದ ಗಟ್ಟಿಮುಟ್ಟಾದ ವಾಹನ

ವಿಶ್ವದ ಗಟ್ಟಿಮುಟ್ಟಾದ ವಾಹನ

Paramount Marauder ವಿಶ್ವದ ಅತ್ಯಂತ ಗಟ್ಟಿಮುಟ್ಟಾದ ವಾಹನವಾಗಿದೆ. ಈ ದೃಢಕಾಯದ ವಾಹನವನ್ನು ಪ್ರಮುಖವಾಗಿಯೂ ಮಿಲಿಟರಿ ಅಗತ್ಯಗಳಿಗಾಗಿ ಬಳಕೆ ಮಾಡಲಾಗುತ್ತದೆ. 15 ಟನ್ ತೂಕದ ಈ ವಾಹನವು ಗ್ರೆನೇಡ್ ದಾಳಿಯಿಂದ ಹಿಡಿದು ಶಕ್ತಿಶಾಲಿ ಸ್ಪೋಟಕ ಹಾಗೂ ಗುಂಡಿನ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿರುತ್ತದೆ.

ವಿಶ್ವದ ಅತಿ ಉದ್ದದ ಕಾರು

ವಿಶ್ವದ ಅತಿ ಉದ್ದದ ಕಾರು

26 ಚಕ್ರಗಳಿರುವ ಈ ಲಿಮೊಸಿನ್ ಕಾರು ವಿಶ್ವದ ಅತಿ ಉದ್ದದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು 30.48 ಮೀಟರ್ ಉದ್ದವಿದ್ದು, ಎರಡು ಚಾಲಕ ಕ್ಯಾಬಿನ್ ಗಳನ್ನು ಹೊಂದಿದೆ. ಇದನ್ನು ವಿಶೇಷ ಕಾರ್ಯಕ್ರಮಗಳಿಗಾಗಿ ಮಾತ್ರ ಬಳಕೆ ಮಾಡಲಾಗುತ್ತದೆ.

English summary
Seven wonders of the vehicular world
Story first published: Thursday, November 12, 2015, 10:41 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark