ನಟಿ ಜಾಹ್ನವಿ ಬಳಸುವ 'ಲೆಕ್ಸಸ್ LX 570' ಕಾರಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ?

ಬಾಲಿವುಡ್‌ ನಟಿ ಜಾಹ್ನವಿ ಕಪೂರ್ ತನ್ನ ಹಾಟ್ ಲುಕ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಜೊತೆಗೆ ಆಕೆಯ ಕಾರ್ ಕಲೆಕ್ಷನ್ ನೋಡಿ, ಅಟೋಮೊಬೈಲ್ ಪ್ರಿಯರು ಫಿದಾ ಆಗಿದ್ದಾರೆ.

ಇತ್ತೀಚಿಗೆ ಮುಂಬೈನಲ್ಲಿ ಜಾಹ್ನವಿ, ಜಿಮ್‌ನಿಂದ ಹೊರಹೋಗಬೇಕಾದರೆ ತಮ್ಮ 'ಲೆಕ್ಸಸ್ LX 570' ಹತ್ತಿದ್ದರು. ಈ ಕಾರು ಆಕೆ ಅಥವಾ ತಂದೆ ಬೋನಿ ಕಪೂರ್ ಅವರ ಒಡೆತನದಲ್ಲಿದೆ ಎನ್ನಲಾಗಿದ್ದು, ಆಕೆಯ ಕಾರ್ ಕಲೆಕ್ಷನ್‌ನಲ್ಲಿ ಅತ್ಯಂತ ವಿಶೇಷವಾದ ಸೇರ್ಪಡೆಯಾಗಿದೆ.

ನಟಿ ಜಾಹ್ನವಿ ಬಳಸುವ ಲೆಕ್ಸಸ್ LX 570 ಕಾರಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ?

ಸಾಂಟಾಕ್ರೂಜ್‌ ಎಂಬಲ್ಲಿ ಪಾಪರಾಜಿಗಳು ಜಾಹ್ನವಿ ಕಪೂರ್ ಕಾರು ಹತ್ತುವ ಫೋಟೋವನ್ನು ಕ್ಲಿಕಿಸಿದ್ದಾರೆ. ಆಕರ್ಷಕ ಕಪ್ಪು ಬಣ್ಣದ 'ಲೆಕ್ಸಸ್ LX 570' ಕಾರನ್ನು 2019ರಿಂದ ಫಸ್ಟ್ ಓನರ್ ವೆಹಿಕಲ್ ಎಂದು ಎಂದು ಜಾಹ್ನವಿ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಆದರೂ ವಿವಿಧ ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವರು, ಈ SUVಯಲ್ಲಿ ವಿರಳವಾಗಿ ಕಾಣಿಸಿಕೊಂಡಿದ್ದಾರೆ. ಐಷಾರಾಮಿಯಾಗಿರುವ 'ಲೆಕ್ಸಸ್ LX 570' ದುಬಾರಿ ಬೆಲೆಯ ಕಾರುಗಳಲ್ಲಿ ಒಂದಾಗಿದ್ದು, ಬರೋಬ್ಬರಿ 2.7 ಕೋಟಿ ರೂ.ಗೆ ಮಾರಾಟವಾಗುತ್ತಿದೆ.

ಇದಕ್ಕೂ ಮುನ್ನ ವರ್ಷಾರಂಭದಲ್ಲಿ ಜಾಹ್ನವಿ, ಹೊಚ್ಚ ಹೊಸ ಮರ್ಸಿಡಿಸ್-ಬೆನ್ಜ್ ಜಿ-ಕ್ಲಾಸ್ 350ಡಿ ಕಾರಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಕಾರು ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ AMG ರೂಪಾಂತರವಲ್ಲ ಎಂದು ಹೇಳಬಹುದು. ಮುಂಬೈನಲ್ಲಿ ಜಿ-ಕ್ಲಾಸ್ 350ಡಿ ಆನ್-ರೋಡ್ ಬೆಲೆ 2 ಕೋಟಿ ರೂ.ಗಿಂತ ಹೆಚ್ಚಿದೆ. ಮರ್ಸಿಡಿಸ್-ಬೆನ್ಜ್ ಜಿ-ಕ್ಲಾಸ್ ಒಂದು ಐಕಾನಿಕ್ ಕಾರ್ ಆಗಿದ್ದು, ಈ ಬ್ರ್ಯಾಂಡ್ ಹಲವು ದಶಕಗಳಿಂದ ತನ್ನ ಸಾಂಪ್ರದಾಯಿಕ ವಿನ್ಯಾಸವನ್ನು ಕೊಂಚ ಬದಲಾವಣೆ ಮಾಡಿಕೊಂಡು ಮಾರುಕಟ್ಟೆಗೆ ಬರುತ್ತಿದೆ.

'ಲೆಕ್ಸಸ್ LX' ಹೊರತಾಗಿ, ಜಾಹ್ನವಿ ಕಪೂರ್, ಇತರೆ ಐಷಾರಾಮಿ ಕಾರುಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ. ಅವುಗಳಲ್ಲಿ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್, ರೇಂಜ್ ರೋವರ್ ಇವೊಕ್, ಮರ್ಸಿಡಿಸ್-ಬೆನ್ಜ್ ಎಸ್-ಕ್ಲಾಸ್ ಹಾಗೂ ಮರ್ಸಿಡಿಸ್- ಬೆಂಜ್ GLSಯಂತಹ ದುಬಾರಿ SUVಗಳು ಸೇರಿವೆ. ಆಗಾಗ್ಗೆ ಮರ್ಸಿಡಿಸ್-ಬೆನ್ಜ್ ಜಿ-ಕ್ಲಾಸ್‌ನಲ್ಲಿ ಜಾಹ್ನವಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆ ಕಾರು ಜಾಹ್ನವಿ ಕಪೂರ್ ಮಾಲೀಕತ್ವದಲ್ಲಿ ಇದೆ ಎಂದು ಹೇಳಲಾಗಿದೆ. ಆದರೆ, ಕೆಲವರ ಪ್ರಕಾರ, ಆಕೆಯ ಸ್ನೇಹಿತರೊಬ್ಬರಿಗೆ ಸೇರಿದೆಯಂತೆ.

ಮತ್ತೊಂದು ವಿಶೇಷವೆಂದರೆ, ಜಾಹ್ನವಿ ಕಪೂರ್ ಕಾಣಿಸಿಕೊಂಡಿದ್ದ ಮರ್ಸಿಡಿಸ್-ಮೇಬ್ಯಾಕ್, ಅವರ ತಾಯಿ ದಿವಂಗತ ನಟಿ ಶ್ರೀದೇವಿ ಅವರ ಮರ್ಸಿಡಿಸ್-ಬೆನ್ಜ್ ಎಸ್-ಕ್ಲಾಸ್ ಕಾರಿನ ನಂಬರ್ ಪ್ಲೇಟ್ ಸಂಖ್ಯೆ ಎರಡು ಒಂದೇ. ಆ ಸಂಖ್ಯೆ '7666' ಆಗಿದೆ. ಶ್ರೀದೇವಿ ಅವರು ಮರ್ಸಿಡಿಸ್-ಬೆನ್ಜ್ ಎಸ್-ಕ್ಲಾಸ್ S350d ಕಾರನ್ನು ಅನ್ನು ಬಳಸಿದರೆ, ಜಾಹ್ನವಿ ಇದೇ ಮಾದರಿಯ ಹೈ ಎಂಡ್ ವರ್ಷನ್ ಅನ್ನು ಹೊಂದಿದ್ದಾರೆ. ಇದು ದೇಶದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಸೆಡಾನ್‌ಗಳಲ್ಲಿ ಒಂದಾಗಿದೆ.

ಮರ್ಸಿಡಿಸ್ ML-ಕ್ಲಾಸ್‌ನ ಮುಂದುವರೆದ ಆವೃತ್ತಿಯಾದ GLE ಕಾರನ್ನು ಸಹ ಜಾಹ್ನವಿ ಹೊಂದಿದ್ದಾರೆ. ಅಲ್ಲದೆ, ಮರ್ಸಿಡಿಸ್‌ನ ಪ್ರೀಮಿಯಂ SUVಯ 250d ರೂಪಾಂತರವು ಅವರ ಬಳಿ ಇದೆ. ಈ ಕಾರು 201 bhp ಮತ್ತು 500 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 2.2-ಲೀಟರ್ ಟರ್ಬೊ-ಡೀಸೆಲ್ ಎಂಜಿನ್‌ನಿಂದ ಚಾಲನೆಗೊಳ್ಳಲಿದೆ. ಇಷ್ಟೆಲ್ಲ ಕಾರುಗಳನ್ನು ಜಾಹ್ನವಿ ಕಪೂರ್ ಹೊಂದಿದ್ದರೂ GLE ಕಾರು ಆಕೆಗೆ ಹೆಚ್ಚು ಇಷ್ಟವಾಗುತ್ತದೆ ಎಂದು ಹೇಳಲಾಗಿದೆ.

ಜಪಾನಿನ ಐಷಾರಾಮಿ ಕಾರು ತಯಾರಕ ಕಂಪನಿ ಟೊಯೊಟಾದ ಮಾಲೀಕತ್ವ ಹೊಂದಿರುವ 'ಲೆಕ್ಸಸ್ LX' ಐಕಾನಿಕ್ ಟೊಯೋಟಾ ಲ್ಯಾಂಡ್ ಕ್ರೂಸರ್‌ನ ಐಷಾರಾಮಿ ಹಾಗೂ ರೀಸ್ಟೈಲ್ ಆವೃತ್ತಿಯಾಗಿದೆ. ಇದು ಭಾರತೀಯ ಕಾರು ಮಾರುಕಟ್ಟೆಯಲ್ಲಿಯೂ ಲಭ್ಯವಿತ್ತು. ಶೀಘ್ರದಲ್ಲೇ ಹೊಸ ವೈಶಿಷ್ಟಗಳೊಂದಿಗೆ ಮತ್ತೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. 2023ರ ಆರಂಭದಲ್ಲಿ ಭಾರತಕ್ಕೆ ಎಂಟ್ರಿ ಕೊಡಲು ಸಿದ್ಧವಾಗಿರುವ ಲೆಕ್ಸಸ್ LXನ ಎಲ್ಲಾ ಹೊಸ ಆವೃತ್ತಿಯನ್ನು ನೂತನ LX 500d ರೂಪಾಂತರದಲ್ಲಿ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ.

ಲೆಕ್ಸಸ್ LXನ ಈ ನಿರ್ದಿಷ್ಟ ರೂಪಾಂತರವು 3.3-ಲೀಟರ್ ಟ್ವಿನ್-ಟರ್ಬೋ ಚಾರ್ಜ್ಡ್ V6 ಡೀಸೆಲ್ ಎಂಜಿನ್‌ ಸಹಾಯದಿಂದ ಕಾರ್ಯನಿರ್ವಹಿಸಲಿದೆ. ಇದು 305 bhp ಶಕ್ತಿ ಮತ್ತು 700 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 10-ಸ್ಪೀಡ್
ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಹೊಸ ಟೊಯೋಟಾ ಲ್ಯಾಂಡ್ ಕ್ರೂಸರ್ ಕೂಡ V8 ಪೆಟ್ರೋಲ್ ಎಂಜಿನ್‌ನೊಂದಿಗೆ ಮುಂದಿನ ವರ್ಷಾರಂಭದಲ್ಲಿ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂಬ ನಿರೀಕ್ಷೆ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Shocked to hear price of lexus lx 570 used by Jahnavi
Story first published: Wednesday, November 23, 2022, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X