ಜಾಲಿ ರೈಡ್ ಹೋಗುತ್ತಿದ್ದ ದಂಪತಿಗಳ ಕಾರಿನ ಮೇಲೆ ಬಂದ ಅನಿರೀಕ್ಷಿತ ಅತಿಥಿ

ಹಾವುಗಳು ಸಾಮಾನ್ಯವಾಗಿ ಹೆಚ್ಚು ನೀರಿರುವ ಸ್ಥಳಗಳಲ್ಲಿ ವಾಸಿಸುತ್ತವೆ. ಅವುಗಳಿಗೆ ಅಲ್ಲಿ ಸಾಕಷ್ಟು ಆಹಾರ ದೊರೆಯುತ್ತದೆ. ಹಾವುಗಳು ನೀರಿನಲ್ಲಿ ಮಾತ್ರವಲ್ಲದೇ ಮರದ ಬುಡ, ಕಲ್ಲು ಬಂಡೆಗಳ ಸಂಧಿ ಹಾಗೂ ಹುತ್ತಗಳಲ್ಲಿ ವಾಸಿಸುತ್ತವೆ.

ಜಾಲಿ ರೈಡ್ ಹೋಗುತ್ತಿದ್ದ ದಂಪತಿಗಳ ಕಾರಿನ ಮೇಲೆ ಬಂದ ಅನಿರೀಕ್ಷಿತ ಅತಿಥಿ

ಇದರ ಜೊತೆಗೆ ಕೆಲವೊಮ್ಮೆ ಜನವಸತಿ ಪ್ರದೇಶಗಳಲ್ಲಿ ಕಂಡು ಬರುತ್ತವೆ. ಹೀಗೆ ಜನವಸತಿ ಪ್ರದೇಶಗಳಿಗೆ ಪ್ರವೇಶಿಸುವ ಹಾವುಗಳು ವಾಹನಗಳನ್ನು ತಮ್ಮ ಹೊಸ ಆವಾಸಸ್ಥಾನವಾಗಿ ಮಾಡಿಕೊಳ್ಳುತ್ತವೆ. ವಾಹನಗಳ ಪ್ರಮುಖ ಭಾಗವಾದ ಎಂಜಿನ್ ಹಾಗೂ ಹೆಡ್‌ಲೈಟ್‌ಗಳು ಬೆಚ್ಚಗಿರುತ್ತವೆ ಎಂಬ ಕಾರಣಕ್ಕೆ ಹಾವುಗಳು ಈ ಭಾಗಗಳಲ್ಲಿ ಆಶ್ರಯ ಪಡೆಯುತ್ತವೆ.

ಜಾಲಿ ರೈಡ್ ಹೋಗುತ್ತಿದ್ದ ದಂಪತಿಗಳ ಕಾರಿನ ಮೇಲೆ ಬಂದ ಅನಿರೀಕ್ಷಿತ ಅತಿಥಿ

ಹೀಗೆ ವಾಹನಗಳಲ್ಲಿ ಸೇರಿಕೊಳ್ಳುವ ಹಾವುಗಳು ಹಲವು ಬಾರಿ ವಾಹನ ಸವಾರರ ಕಣ್ಣಿಗೆ ಕಾಣಿಸಿಕೊಳ್ಳುವುದೇ ಇಲ್ಲ. ಇತ್ತೀಚಿಗೆ ಕಾರಿನ ಬಾನೆಟ್'ನೊಳಗೆ ಸೇರಿಕೊಂಡಿದ್ದ ಹಾವು ಕಾರಿನ ಮುಂಭಾಗದ ಗ್ಲಾಸಿನ ಮೇಲೆ ಹರಿದಾಡುತ್ತಿರುವ ವೀಡಿಯೊ ವೈರಲ್ ಆಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಜಾಲಿ ರೈಡ್ ಹೋಗುತ್ತಿದ್ದ ದಂಪತಿಗಳ ಕಾರಿನ ಮೇಲೆ ಬಂದ ಅನಿರೀಕ್ಷಿತ ಅತಿಥಿ

ವಾಹನಗಳನ್ನು ಪ್ರವೇಶಿಸುವ ಹಾವುಗಳು ಸಾಮಾನ್ಯವಾಗಿ ಎಂಜಿನ್ ಅಥವಾ ಇತರ ಬೆಚ್ಚಗಿನ ಸ್ಥಳಗಳಲ್ಲಿರುತ್ತವೆ. ಆದರೆ ಈ ವೀಡಿಯೊದಲ್ಲಿರುವ ಹಾವು ಬಾನೆಟ್'ನಿಂದ ಹೊರ ಬಂದು ಕಾರಿನ ಮುಂಭಾಗದ ಗ್ಲಾಸಿನ ಮೇಲೆ ಹರಿದಾಡುತ್ತಿದೆ.

ಜಾಲಿ ರೈಡ್ ಹೋಗುತ್ತಿದ್ದ ದಂಪತಿಗಳ ಕಾರಿನ ಮೇಲೆ ಬಂದ ಅನಿರೀಕ್ಷಿತ ಅತಿಥಿ

ಕಾರಿನೊಳಗಿನವರಿಗೆ ಆ ಹಾವನ್ನು ಹೇಗೆ ಹೊರತೆಗೆಯಬೇಕೆಂದು ತಿಳಿಯದೆ, ವೈಪರ್ ಹಾಕಿ ಹಾವನ್ನು ಅಲ್ಲಿಂದ ಓಡಿಸುವ ಪ್ರಯತ್ನ ಮಾಡಿದ್ದಾರೆ. ಇದರಿಂದಾಗಿ ಹಾವು ಮತ್ತಷ್ಟು ಕೆರಳಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಜಾಲಿ ರೈಡ್ ಹೋಗುತ್ತಿದ್ದ ದಂಪತಿಗಳ ಕಾರಿನ ಮೇಲೆ ಬಂದ ಅನಿರೀಕ್ಷಿತ ಅತಿಥಿ

ನಂತರ ಹಾವು ಕಾರಿನ ಇತರ ಭಾಗಗಳಿಗೆ ಹೋಗುವುದನ್ನು ಕಾಣಬಹುದು. 20 ಸೆಕೆಂಡುಗಳಷ್ಟಿರುವ ಈ ವೀಡಿಯೊ ನೋಡುಗರ ಮೈ ಜುಮ್ ಎನ್ನುವಂತೆ ಮಾಡುತ್ತದೆ. ಕಾರಿನೊಳಗಿದ್ದವರು ಕಾರು ಚಾಲನೆ ಮಾಡುವುದರ ಜೊತೆಗೆ ಹಾವನ್ನು ಓಡಿಸುವ ಕಾರ್ಯದಲ್ಲಿಯೂ ನಿರತರಾಗಿದ್ದರು.

ಜಾಲಿ ರೈಡ್ ಹೋಗುತ್ತಿದ್ದ ದಂಪತಿಗಳ ಕಾರಿನ ಮೇಲೆ ಬಂದ ಅನಿರೀಕ್ಷಿತ ಅತಿಥಿ

ಅಂದ ಹಾಗೆ ಈ ವಿಲಕ್ಷಣ ಘಟನೆ ನಡೆದಿರುವುದು ಆಸ್ಟ್ರೇಲಿಯಾದಲ್ಲಿ. ಮೆಲಿಸ್ಸಾ ಹಡ್ಸನ್ ಹಾಗೂ ರೊಡ್ನಿ ಗ್ರಿಗ್ಸ್ ಈ ಕಾರಿನ ಮಾಲೀಕರು. ಕೊರಿಯರ್-ಮೇಲ್'ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾವು ಕಾರನ್ನು ನಿಲ್ಲಿಸಿ ಹೊರಬರಲು ಬಯಸಿದ್ದೆವು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಆದರೆ ಹಾವು ಕಾರಿನೊಳಗೆ ಬರುತ್ತದೆ ಎಂಬ ಭಯವು ನಮ್ಮನ್ನು ಹೊರ ಬರದಂತೆ ತಡೆಯಿತು. ಈ ಕಾರಣಕ್ಕೆ ನಾವು ನಾವು ಹಾವನ್ನು ವೈಪರ್ ಮೂಲಕ ಓಡಿಸಲು ಪ್ರಯತ್ನ ಪಟ್ಟೆವು ಎಂದು ಹೇಳಿದ್ದಾರೆ.

ಜಾಲಿ ರೈಡ್ ಹೋಗುತ್ತಿದ್ದ ದಂಪತಿಗಳ ಕಾರಿನ ಮೇಲೆ ಬಂದ ಅನಿರೀಕ್ಷಿತ ಅತಿಥಿ

ಹಾವುಗಳು ವಾಹನಗಳ ಒಳಗೆ ಬರದಂತೆ ತಡೆಯಲು ವಾಹನಗಳನ್ನು ಗಿಡ, ಪೊದೆಗಳಿರುವ ಸ್ಥಳಗಳಲ್ಲಿ ನಿಲ್ಲಿಸದೇ ಇರುವುದು ಒಳಿತು. ಸಾಧ್ಯವಾದಷ್ಟು ಸುರಕ್ಷಿತ ಸ್ಥಳಗಳಲ್ಲಿ ಪಾರ್ಕಿಂಗ್‌ ಮಾಡಬೇಕು. ಇದರಿಂದಾಗಿ ಹಾವುಗಳು ವಾಹನದೊಳಕ್ಕೆ ಬರುವುದನ್ನು ತಡೆಯಬಹುದು.

Most Read Articles

Kannada
English summary
Snake moves on car windshield couple tries to remove with wiper. Read in Kannada.
Story first published: Thursday, February 18, 2021, 20:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X