ರಾಕೆಟ್‌ ವೇಗದಲ್ಲಿ ಚಲಿಸುವ ಕಾರು

Written By:

ಸಾಧನೆಗೆ ಮಿತಿಯಿಲ್ಲ ಎಂಬುದಕ್ಕೆ ಮಗದೊಂದು ನಿದರ್ಶನ ಇದಾಗಿದೆ. ಕಾರು ಎಂದಾಕ್ಷಣ ನಮಗೆ ಒಂದು ಸ್ಥಳದಿಂದ ಇನ್ನೊಂದು ಜಾಗಕ್ಕೆ ತೆರಳುವ ಸಂಪರ್ಕ ಮಾದರಿ ಎಂಬುದು ಮಾತ್ರ ನೆನಪಿಗೆ ಬರುತ್ತದೆ.

ಕಾರು ಬ್ಯಾಟರಿಗಳು ಶಾಕ್ ಹೊಡೆಯುತ್ತಾ?

ಆದರೆ ರಾಕೆಟ್‌ ವೇಗದಲ್ಲಿ ಚಲಿಸುವ ಕಾರುಗಳು ಈ ಭೂಮಿಯಲ್ಲಿವೆ ಎಂಬುದು ನಂಬಲು ಸಾಧ್ಯವೇ? ನೀವು ನಂಬಲೇಬೇಕು. ಯಾಕೆಂದರೆ ನಮ್ಮ ಇಂದಿನ ಲೇಖನದಲ್ಲಿ ಭೂಮಿಯಲ್ಲಿ ಅತ್ಯಂತ ವೇಗದಲ್ಲಿ ಸಾಗುವ ಕಾರಿನ ಬಗ್ಗೆ ಮಾಹಿತಿ ಕೊಡಲಿದ್ದೇವೆ.

ಥ್ರಸ್ಟ್2

ಥ್ರಸ್ಟ್2

ಬ್ರಿಟನ್ ವಿನ್ಯಾಸಿತ ಹಾಗೂ ಜೆಟ್ ನಿಯಂತ್ರಿತ ಥ್ರಸ್ಟ್2 ಕಾರು, 1983 ಅಕ್ಟೋಬರ್ 4ರಿಂದ 1997 ಸೆಪ್ಟೆಂಬರ್ 9ಕ ವರೆಗೆ ಲ್ಯಾಂಡ್ ಸ್ಪೀಡ್ ದಾಖಲೆ (ಚಕ್ರಗಳನ್ನು ಹೊಂದಿರುವ ವಾಹನದ ಗರಿಷ್ಠ ವೇಗ ದಾಖಲೆ) ಹೊಂದಿತ್ತು. ಜಾನ್ ಅಕ್ರೋಯ್ಡ್ ನಿರ್ಮಾಣದ ಈ ವಾಹನವನ್ನು ರಿಚಾರ್ಡ್ ನೋಬ್ಲ್ ಚಲಾನೆ ಮಾಡಿದ್ದರು. ಪ್ರಸ್ತುತ ಕಾರು ಗಂಟೆಗೆ ಗರಿಷ್ಠ 650.88 ಮೈಲ್ (1047 ಕೀ.ಮೀ.) ವೇಗದಲ್ಲಿ ಸಂಚರಿಸುವ ಮೂಲಕ ಹೊಸ ದಾಖಲೆ ಬರೆದಿತ್ತು.

ಫೋಟೊ ಕೃಪೆ: ವಿಕಿಪೀಡಿಯಾ

ಥ್ರಸ್ಟ್‌ ಎಸ್‌ಎಸ್‌ಸಿ

ಥ್ರಸ್ಟ್‌ ಎಸ್‌ಎಸ್‌ಸಿ

ಥ್ರಸ್ಟ್‌ ಎಸ್‌ಎಸ್‌ಸಿ ಬ್ರಿಟನ್ ನಿರ್ಮಿತ, ಜೆಟ್ ನಿಯಂತ್ರಿತ ಮಗದೊಂದು ಸೂಪರ್ ಸೋನಿಸ್ ಕಾರಾಗಿದ್ದು, ರಿಚರ್ಡ್ ನೋಬ್ಲ್, ಗ್ಲೇನ್ ಬೌಶೆರ್, ರಾನ್ ಅಯೆರ್ಸ್ ಮತ್ತು ಜೆರೆಮಿ ಬ್ಲಿಸ್ ಅಭಿವೃದ್ಧಿಪಡಿಸಿದ್ದರು. 1997ನೇ ಇಸವಿಯಲ್ಲಿ ಗಂಟೆಗೆ 1128 ಕೀ.ಮೀ. (763 ಮೇಲ್) ವೇಗದಲ್ಲಿ ಸಂಚರಿಸಿದ ಇದು ಹೊಸ ದಾಖಲೆ ಬರೆದಿತ್ತು.

ಫೋಟೊ ಕೃಪೆ: ವಿಕಿಪೀಡಿಯಾ

ರಾಕೆಟ್‌ ವೇಗದಲ್ಲಿ ಚಲಿಸುವ ಕಾರು

ಇದೀಗ ಈ ಎಲ್ಲ ದಾಖಲೆಗಳನ್ನು ಎಂಟು ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚದ ಬ್ಲಡ್‌ಹೌಂಡ್ ಎಸ್‌ಎಸ್‌ಸಿ ಯೋಜನೆಯೊಂದು ತಯಾರಾಗುತ್ತಿದೆ. ಇದು ಮೋಟಾರಿಂಗ್ ಇತಿಹಾಸದಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯ ಅದೇ ಅಷ್ಟೇ ಅಪಾಯಕಾರಿ ಸವಾಲು ಆಗಿರಲಿದೆ.

ರಾಕೆಟ್‌ ವೇಗದಲ್ಲಿ ಚಲಿಸುವ ಕಾರು

1997ನೇ ಇಸವಿಯಲ್ಲಿ ಥ್ರಸ್ಟ್ ಎಸ್‌ಎಸ್‌ಸಿ ಸಾಧಿಸಿರುವ ಲ್ಯಾಂಡ್ ಸ್ಪೀಡ್ ದಾಖಲೆಯನ್ನು ಅಳಿಸಿ ಹಾಕುವುದು ಇದರ ಪ್ರಮುಖ ಉದ್ದೇಶವಾಗಿರಲಿದೆ. ಅಲ್ಲದೆ ವರದಿಯ ಪ್ರಕಾರ ಇದು ಗಂಟೆಗೆ 1600 ಕೀ.ಮೀ. ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ರಾಕೆಟ್‌ ವೇಗದಲ್ಲಿ ಚಲಿಸುವ ಕಾರು

2008ರಿಂದಲೇ 70 ಸದಸ್ಯರನ್ನೊಳಗೊಂಡ ಬ್ಲಡ್‌ಹೌಂಡ್ ಎಸ್‌ಎಸ್‌ಸಿ ತಂಡ ನಿರಂತರ ಪ್ರಯತ್ನದಲ್ಲಿ ತೊಡಗಿದ್ದು, ಈಗಿರುವ ದಾಖಲೆಯನ್ನು ಅಳಿಸುವ ಪ್ರಯತ್ನದಲ್ಲಿದೆ.

ರಾಕೆಟ್‌ ವೇಗದಲ್ಲಿ ಚಲಿಸುವ ಕಾರು

ಈ ಬಗ್ಗೆ ವಿವರಣೆ ಕೊಟ್ಟಿರುವ ಬ್ಲಡ್‌ಹೌಂಡ್ ತಂಡವು, ಮುಂದಿನ ವರ್ಷ ಗಂಟೆಗೆ 1288 ಕೀ.ಮೀ. (800 ಮೈಲ್) ಸಾಧನೆ ಮಾಡಲಿದ್ದು, 2016ರಲ್ಲಿ ಗಂಟೆಗೆ 1600 ಕೀ.ಮೀ. (1000 ಮೈಲ್) ದಾಖಲೆ ಬರೆಯುವ ಪ್ರಯತ್ನ ಮಾಡಲಿದ್ದೇವೆ ಎಂದಿದೆ.

ರಾಕೆಟ್‌ ವೇಗದಲ್ಲಿ ಚಲಿಸುವ ಕಾರು

7.5 ಟನ್ ಭಾರದ ಬ್ಲಡ್‌ಹೌಂಡ್, ರಾಕೆಟ್ ಶೈಲಿಯಿಂದ ಸ್ಫೂರ್ತಿ ಪಡೆದು ಎಫ್1 ರೀತಿಯಲ್ಲಿ ರಚಿಸಲಾಗಿದೆ. ಇದು ಕೇವಲ ಏರೋಡೈನಾಮಿಕ್ ದಕ್ಷತೆಗೆ ಮಾತ್ರ ಕೇಂದ್ರಿಕರಿಸಿಲ್ಲ.

ರಾಕೆಟ್‌ ವೇಗದಲ್ಲಿ ಚಲಿಸುವ ಕಾರು

ಇಜೆ200 ಜೆಟ್ ಎಂಜಿನ್ ಸಹ ಬಳಕೆ ಮಾಡಲಾಗಿದೆ. ಹಾಗೆಯೇ ಇಷ್ಟೊಂದು ಶಕ್ತಿ ಪ್ರದಾನ ಮಾಡಲು ಹೈಬ್ರಿಡ್ ರಾಕೆಟ್ ಸಹ ಬಳಕೆ ಮಾಡಲಾಗಿದೆ.

Story first published: Saturday, May 3, 2014, 7:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark