ಮತ್ತೊಂದು ಐಷಾರಾಮಿ ಕಾರಿಗೆ ಒಡತಿಯಾದ ಸನ್ನಿ

Written By:

ಬಾಲಿವುಡ್ ನಟಿ ಹಾಗು ಮಾಜಿ ವಯಸ್ಕರ ಚಲನಚಿತ್ರ ತಾರೆ ಸನ್ನಿ ಲಿಯೋನ್ ಬಗ್ಗೆ ಎಷ್ಟೋ ಜನಕ್ಕೆ ಬೇಡದ ವಿಚಾರಗಳೇ ಹೆಚ್ಚು ಗೊತ್ತು. ಆದ್ರೆ, ವಾಹನಗಳ ಬಗ್ಗೆ ಈ ನಟಿ ಹೊಂದಿರುವ ಆಸಕ್ತಿ ಬಗ್ಗೆ ತುಂಬಾ ಜನಕ್ಕೆ ಗೊತ್ತಿರಲಿಕ್ಕಿಲ್ಲ !!

To Follow DriveSpark On Facebook, Click The Like Button
ಮತ್ತೊಂದು ಐಷಾರಾಮಿ ಕಾರಿಗೆ ಒಡತಿಯಾದ ಸನ್ನಿ

ನೀಲಿ ಚಿತ್ರಗಳೊಂದಿಗೆ ವೃತ್ತಿಯನ್ನು ಆರಂಭಿಸಿದ ಸನ್ನಿ ಲಿಯೋನ್ ಸದ್ಯ ವಿಶ್ವದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. ಸದ್ಯ ಬಾಲಿವುಡ್ ಚಲನಚಿತ್ರೋದ್ಯಮದಲ್ಲಿ ನೆಲೆ ಕಂಡುಕೊಂಡಿರುವ ಸನ್ನಿ ಲಿಯೋನ್, ಚಲನಚಿತ್ರಗಳಲ್ಲಿ ನಟನೆ, ಗಾಸಿಪ್ಸ್, ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದ್ದಾರೆ.

ಮತ್ತೊಂದು ಐಷಾರಾಮಿ ಕಾರಿಗೆ ಒಡತಿಯಾದ ಸನ್ನಿ

ಹೌದು, ಸನ್ನಿ ಲಿಯೋನ್ ಅವರ ಬಳಿ ಸಾಕಷ್ಟು ಐಷಾರಾಮಿ ಕಾರುಗಳು ಇದ್ದು, ಇತ್ತೀಚೆಗೆ ಈಕೆ ಮತ್ತೊಂದು ಜೆರಿ ಐಷಾರಾಮಿ 2017ರ ಮಸರಾಟಿ ಗಿಬ್ಲಿ ಸೆಡಾನ್ ಕಾರನ್ನು ತನ್ನದಾಗಿಸಿಕೊಂಡಿದ್ದು, ಬಹುಶಃ ವಿಶ್ವದಲ್ಲೇ ಅತಿ ಹೆಚ್ಚು ಪ್ರಖ್ಯಾತ ಬ್ರಾಂಡ್‌ಗಳಲ್ಲಿ ಇದೂ ಒಂದು ಎನ್ನಬಹುದು.

ಮತ್ತೊಂದು ಐಷಾರಾಮಿ ಕಾರಿಗೆ ಒಡತಿಯಾದ ಸನ್ನಿ

ಈ ಮಸರಾಟಿ ಗಿಬ್ಲಿ ನೆರಿಸ್ಸಿಮೊ ಕಾರು ಮತ್ತೊಂದು ವಿಶಿಷ್ಟತೆಯನ್ನು ಹೊಂದಿದ್ದು, ಯುಎಸ್ ಮತ್ತು ಕೆನಡಾ ಮಾರುಕಟ್ಟೆಗಳಲ್ಲಿ ಸೀಮಿತ ಆವೃತ್ತಿಯಂತೆ 450 ಕಾರುಗಳನ್ನು ಮಾತ್ರ ಕಂಪನಿ ಮಾರಾಟ ಮಾಡಲಿದೆ.

ಮತ್ತೊಂದು ಐಷಾರಾಮಿ ಕಾರಿಗೆ ಒಡತಿಯಾದ ಸನ್ನಿ

ಐಷಾರಾಮಿ ಗ್ರ್ಯಾಂಡ್ ಟೌರ್ ಮತ್ತು ಹೆಚ್ಚು ಶಕ್ತಿಯುತ ಮಸರಾಟಿ ನೆರಿಸ್ಸಿಮೊ ಕಾರು ನಾಲ್ಕು ಪ್ರಯಾಣಿಕರ ಕಾರಾಗಿದ್ದು, ಸನ್ನಿ ಲಿಯೋನ್ ಅವರು ಅಮೆರಿಕದಲ್ಲಿ ಖರೀದಿಸಿದ್ದಾರೆ. ಯುಎಸ್ಎ ನಲ್ಲಿ ಈ ಕಾರು $ 72,000(ರೂ 47 ಲಕ್ಷ) ಎಕ್ಸ್ ಶೋರೂಂ ಬೆಲೆ ಹೊಂದಿದೆ ಹಾಗು ರೂ. 53 ಲಕ್ಷ ಆನ್ ರೋಡ್ ಬೆಲೆ ಪಡೆದುಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ರೂ. 1.36 ಕೋಟಿ ಬೆಲೆ ನಿಗದಿಪಡಿಸಲಾಗಿದೆ.

ಮತ್ತೊಂದು ಐಷಾರಾಮಿ ಕಾರಿಗೆ ಒಡತಿಯಾದ ಸನ್ನಿ

ಭಾರತೀಯ ಆವೃತ್ತಿಯ ಮಸರಾಟಿ ಗಿಬ್ಲಿ ನೆರಿಸ್ಸಿಮೊ ಕಾರು ಡೀಸೆಲ್ ಆಯ್ಕೆಯಲ್ಲಿ ಇರಲಿದ್ದು, ಅಮೆರಿಕನ್ ರೂಪಾಂತರ ಮಾದರಿಯು ಟ್ವಿನ್ ಟರ್ಬೊ ಪೆಟ್ರೋಲ್ ವಿ6 ಎಂಜಿನ್ ಹೊಂದಿದೆ. ಈ ಶಕ್ತಿಶಾಲಿ ಎಂಜಿನ್ 8-ಸ್ಪೀಡ್ ಆಟೋಮ್ಯಾಟಿಕ್ ಜೆಡಿ ಟ್ರಾನ್ಸ್ಮಿಟರ್ ಗೇರ್ ಬಾಕ್ಸ್ ಸಂಪರ್ಕವನ್ನು ಹೊಂದಿದೆ.

ಮತ್ತೊಂದು ಐಷಾರಾಮಿ ಕಾರಿಗೆ ಒಡತಿಯಾದ ಸನ್ನಿ

ಪ್ರತಿ ಸೆಲೆಬ್ರಿಟಿಯು ಒಂದೊಂದು ಬ್ರಾಂಡ್ ಇಷ್ಟ ಪಡುತ್ತಾರೆ. ಅದರಂತೆ, ಸನ್ನಿ ಮಸೆರಾಟಿಗೆ ಮನಸೋತಿರುವುದು ನಾವು ಕಾಣಬಹುದಾಗಿದೆ. ಕೆಲವೇ ವರ್ಷಗಳ ಹಿಂದೆ, ಸನ್ನಿ ಅವರ ಪತಿ ಲಿನಿ ಅವರು ಮಾಸೆರಾಟಿ ಕ್ವಾಟ್ರೊಪೋರ್ಟ್ ಕಾರನ್ನು ಉಡುಗೊರೆ ನೀಡಿದ್ದರು. ಇದರ ಜೊತೆಗೆ, ಬಿಎಂಡಬ್ಲ್ಯು 7-ಸೀರಿಸ್ ಸಹ ಸನ್ನಿ ಗ್ಯಾರೇಜ್‌ನಲ್ಲಿ ಜಾಗ ಪಡೆದುಕೊಂಡಿದೆ.

ಮತ್ತೊಂದು ಐಷಾರಾಮಿ ಕಾರಿಗೆ ಒಡತಿಯಾದ ಸನ್ನಿ

ಮಸರಾಟಿ ಗಿಬ್ಲಿ ನೆರಿಸ್ಸಿಮೊ ಕಾರು ಹೊಸ ಕಪ್ಪು ಬಣ್ಣದ ಹೊರಭಾಗವನ್ನು ಹೊಂದಿದ್ದು, 20-ಇಂಚಿನ ಅಲಾಯ್ ಚಕ್ರ, ಸ್ಪೋರ್ಟಿ ಸ್ಟೀರಿಂಗ್ ವೀಲ್, ಪ್ಯಾಡಲ್ ಶಿಪ್ಟರ್ ಮತ್ತು 12 ಲೆಡರ್ ಫ್ರಂಟ್ ಸೀಟ್‌ಗಳನ್ನು ಹೊಂದಿದೆ.

ಮತ್ತೊಂದು ಐಷಾರಾಮಿ ಕಾರಿಗೆ ಒಡತಿಯಾದ ಸನ್ನಿ

ಹೊಸ ಕಪ್ಪು ಬಣ್ಣದ ಒಳಭಾಗವನ್ನು ತನ್ನದಾಗಿಸಿಕೊಂಡಿರುವ ಈ ಐಷಾರಾಮಿ ಕಾರು, ಬ್ಲೈಂಡ್ ಸ್ಪಾಟ್ ಮಾನಿಟರ್, ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ ಪಾರ್ಕಿಂಗ್ ಸೆನ್ಸರ್, ರಿಮೋಟ್ ಕಾರು ಸ್ಟಾರ್ಟ್ಅಪ್ ಸಿಸ್ಟಮ್ ಹಾಗು 3-ಲೀಟರ್ ಅವಳಿ ಟರ್ಬೊ ವಿ6 ಎಂಜಿನ್‌ನೊಂದಿಗೆ ಎರಡು ರೀತಿಯ(345 ಮತ್ತು 404 ಬಿಎಚ್‌ಪಿ) ಶಕ್ತಿ ಉತ್ಪಾದನೆ ಮಾಡುತ್ತದೆ.

ಮತ್ತೊಂದು ಐಷಾರಾಮಿ ಕಾರಿಗೆ ಒಡತಿಯಾದ ಸನ್ನಿ

345 ಬಿಎಚ್‌ಪಿ ಶಕ್ತಿ ಉತ್ಪಾದನೆಯ ಈ ಕಾರು 5.6 ಸೆಕೆಂಡುಗಳಲ್ಲಿ 100 ಕಿಮೀ ವೇಗವನ್ನು ಪಡೆಯಲಿದೆ ಮತ್ತು ಗಂಟೆಗೆ ಗರಿಷ್ಠ 265 ಕಿ.ಮೀ ವೇಗಮಿತಿಯನ್ನು ಹೊಂದಿದೆ. ಅಂತೆಯೇ, 404 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುವ ಸೌಕರ್ಯವನ್ನು ಸಹ ಈ ಕಾರು ಹೊಂದಿದ್ದು, 4.8 ಸೆಕೆಂಡುಗಳಲ್ಲಿ 0-100 ಕಿ.ಮೀ ತಲುಪುತ್ತದೆ ಮತ್ತು ಗರಿಷ್ಟ 282 ಕಿ.ಮೀ ವೇಗವನ್ನು ಹೊಂದಿದೆ.

English summary
Sunny Leone buys Maserati Ghibli Nerissimo luxury car worth over Rs 1 crore in India.
Story first published: Wednesday, October 11, 2017, 15:06 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark