ಅಲ್ಲಿಂದೀಚೆಗೆ, ಕೊನೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಾರುಗಳು..!

Written By:

ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯ ಅಯ್ಯಂಗಾರಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಮುಖ್ಯಮಂತ್ರಿ ಜಯಲಲಿತಾ ತಮಿಳುನಾಡಿನ ಜನತೆಯಿಂದ 'ಅಮ್ಮಾ' ಎಂದೇ ಕರೆಯಲ್ಪಡುತ್ತಿದ್ದರು. ಜ್ವರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದ ಜಯಾ ಚೆನ್ನೈ ಅಪೊಲೊ ಆಸ್ಪತ್ರೆಯಲ್ಲಿ ಕಳೆದ 74 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಜಯಾ ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ಮರಳಲಿದ್ದಾರೆ ಎಂದು ನಿರೀಕ್ಷಿಸುತ್ತಿದ್ದಂತೆಯೇ ಭಾನುವಾರ ಸಂಜೆ ತೀವ್ರ ಹೃದಯಾಘಾತವಾಗಿತ್ತು. 68 ವರ್ಷದ ಜಯಲಲಿತಾ ಸೋಮವಾರ ರಾತ್ರಿ 11.30ರ ವೇಳೆಗೆ ವಿಧಿವಶರಾಗಿದ್ದರು.

ಅಲ್ಲಿಂದೀಚೆಗೆ, ಕೊನೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಾರುಗಳು..!

ತಮಿಳುನಾಡು ರಾಜಕಾರಣದಲ್ಲಿ ಹಲವು ಏರು ಪೇರುಗಳನ್ನು ಕಂಡಿರುವ ಜಯಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲೂ ನ್ಯಾಯಾಲದಯಲ್ಲಿ ವಿಚಾರಣೆ ಎದುರಿಸಿ ದೋಷಯುಕ್ತಗೊಂಡಿದ್ದರು. ಈ ಸಂದರ್ಭದಲ್ಲಿ ತಮ್ಮ ಆಸ್ತಿ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದ್ದರು. ಇವುಗಳಲ್ಲಿ ಕಾರುಗಳ ಸಂಗ್ರಹವು ಸೇರಿವೆ.

ಅಂಬಾಸಿಡರ್

ಅಂಬಾಸಿಡರ್

1980ರ ದಶಕದಲ್ಲಿ ಜಯಲಲಿತಾ ಅಂಬಾಸಿಡರ್ ಕಾರನ್ನು ಖರೀದಿಸಿದ್ದರು. ಹಿಂದೂಸ್ತಾನ್ ಮೋಟಾರ್ಸ್ ನಿರ್ಮಿತ ಅಂಬಾಸಿಡರ್ ಅಂದಿನ ದಶಕದ ನೆಚ್ಚಿನ ಕಾರುಗಳಲ್ಲಿ ಒಂದೆನಿಸಿಕೊಂಡಿತ್ತು.

ಕಾಂಟೆಸ್ಸಾ

ಕಾಂಟೆಸ್ಸಾ

ಅಂಬಾಸಿಡರ್ ಬಳಿಕ ಅತಿ ಹೆಚ್ಚು ಐಷಾರಾಮಿ ಸೌಲಭ್ಯಗಳುಳ್ಳ ಕಾಂಟೆಸ್ಸಾ ಕಾರನ್ನು 1990ನೇ ಇಸವಿಯಲ್ಲಿ ಅಮ್ಮಾ ಖ್ಯಾತಿಯ ಜಯಲಲಿತಾ ತಮ್ಮದಾಗಿಸಿಕೊಂಡಿದ್ದರು. ಹಿಂದೂಸ್ತಾನ್ ಮೋಟಾರ್ಸ್ ನಿರ್ಮಿತ ಕಾಂಟೆಸ್ಸಾ ಕಾರು ದೇಶದ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

ಟೆಂಪೊ ಟ್ರಾಕ್ಸ್

ಟೆಂಪೊ ಟ್ರಾಕ್ಸ್

1989ನೇ ಇಸವಿಯಲ್ಲಿ ಟೆಂಪೊ ಟ್ರಾಕ್ಸ್ ವಾಹನವನ್ನು ಜಯಲಿತಾ ಖರೀದಿಸಿದ್ದರು. ಫೋರ್ಸ್ ಮೋಟಾರ್ಸ್ ಬಹು ಉಪಯುಕ್ತ ವಾಹನ ಇದಾಗಿದೆ.

ಸ್ವರಾಜ್ ಮಜ್ದಾ ಮ್ಯಾಕ್ಸಿ

ಸ್ವರಾಜ್ ಮಜ್ದಾ ಮ್ಯಾಕ್ಸಿ

1998ನೇ ಇಸವಿಯಲ್ಲಿ ಸ್ವರಾಜ್ ಮಜ್ದಾ ಮ್ಯಾಕ್ಸಿ ಕ್ಯಾಬ್ ವಾಹನವನ್ನು ಜಯಲಲಿತಾ ಸ್ವಾಧೀನಪಡಿಸಿದ್ದರು.

ಟೆಂಪೊ ಟ್ರಾವೆಲರ್

ಟೆಂಪೊ ಟ್ರಾವೆಲರ್

2000ನೇ ಇಸವಿಯಲ್ಲಿ ಟೆಂಪೊ ಟ್ರಾವೆಲರ್ ವಾಹನವನ್ನು ಜಯಲಲಿತಾ ಖರೀದಿಸಿದ್ದರು. ಟೆಂಪೊ ಟ್ರಾವೆಲರ್ ಈಗಲೂ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಕಾಪಾಡಿಕೊಂಡಿದೆ.

ಮಹೀಂದ್ರ ಬೊಲೆರೊ

ಮಹೀಂದ್ರ ಬೊಲೆರೊ

ಜಯಲಲಿತಾ ಆಸ್ತಿ ವಿವರಗಳ ಪ್ರಕಾರ 21ನೇ ಶತಮಾನದ ಆರಂಭದಲ್ಲೇ ಮಹೀಂದ್ರ ಬೊಲೆರೊ ಕ್ರೀಡಾ ಬಳಕೆಯ ವಾಹನವನ್ನು ಗಿಟ್ಟಿಸಿಕೊಂಡಿದ್ದರು.

ಮಹೀಂದ್ರ ಜೀಪ್

ಮಹೀಂದ್ರ ಜೀಪ್

2007ನೇ ಇಸವಿಯಲ್ಲಿ ಮಗದೊಂದು ಮಹೀಂದ್ರ ಜೀಪ್ ವಾಹನವನ್ನು ಜಯಲಲಿತಾ ಖರೀದಿಸಿದ್ದರು.

ಟೊಯೊಟಾ ಹೈ ಟೆಕ್ ಗಾಡಿಗಳು

ಟೊಯೊಟಾ ಹೈ ಟೆಕ್ ಗಾಡಿಗಳು

ಜಪಾನ್ ವಾಹನ ಸಂಸ್ಥೆ ಟೊಯೊಟಾ ನಿರ್ಮಿತ ಲ್ಯಾಂಡ್ ಕ್ರೂಸರ್ ಪ್ರಾಡೊ ಮತ್ತು ಲ್ಯಾಂಡ್ ಕ್ರೂಸರ್ ಎಲ್ ಸಿ 200 ಹೈಟೆಕ್ ಕ್ರೀಡಾ ಬಳಕೆಯ ವಾಹನಗಳನ್ನು ಜಯಲಲಿತಾ ಹೊಂದಿದ್ದಾರೆ.

ಅಲ್ಲಿಂದೀಚೆಗೆ, ಕೊನೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಾರುಗಳು..!

ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಗರಿಷ್ಠ ತಂತ್ರಜ್ಞಾನಗಳನ್ನು ಆಳವಡಿಸಲಾಗಿದೆ. ಸ್ಯಾಟಲೈಟ್ ನ್ಯಾವಿಗೇಷನ್, ಕೀಲೆಸ್ ಎಂಟ್ರಿ, ಎಂಜಿನ್ ಇಂಮೊಬಿಲೈಝರ್, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಕ್ರೂಸ್ ಕಂಟ್ರೋಲ್ ಇದೆ.

ಅಲ್ಲಿಂದೀಚೆಗೆ, ಕೊನೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಾರುಗಳು..!

ಲ್ಯಾಂಡ್ ಕ್ರೂಷರ್ 200 ಕಾರಿನ ಎರಡೂ ಬದಿಯಲ್ಲೂ ಸೈಡ್ ಸ್ಟೆಪ್ ಇವೆ. ಇದರಿಂದ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಭದ್ರತೆ ಒದಗಿಸಲು ನೆರವಾಗಲಿದೆ. ಇನ್ನು ಮನರಂಜನೆಗಾಗಿ 9 ಸ್ಪೀಕರ್, ಸಿಡಿ ಪ್ಲೇಯರ್, ಯುಎಸ್ ಬಿ ಪೋರ್ಟ್, ಐಪ್ಯಾಡ್ ಪ್ಲಸ್ ಮತ್ತು ಬ್ಲೂಟೂಥ್ ಕನೆಕ್ಟಿವಿಟಿಗಳಿವೆ.

ಅಲ್ಲಿಂದೀಚೆಗೆ, ಕೊನೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಾರುಗಳು..!

ಇನ್ನೊಂದೆಡೆ ಟೊಯೊಟಾದ ಜನಪ್ರಿಯ ಹಾಗೂ ದುಬಾರಿ ಮಾದರಿಗಳಲ್ಲಿ ಒಂದಾಗಿರುವ ಲ್ಯಾಂಡ್ ಕ್ರೂಸರ್ ಪ್ರಾಡೊ ಪ್ರಥಮ ನೋಟದಲ್ಲೇ ದೊಡ್ಡಸ್ತಿಕೆಯ ಸಂಕೇತವಾಗಿದೆ.

ಅಲ್ಲಿಂದೀಚೆಗೆ, ಕೊನೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಾರುಗಳು..!

ಆಫ್ ರೋಡ್ ಸವಾರಿಗೂ ಸೂಕ್ತವಾಗಿರುವ ಲ್ಯಾಂಡ್ ಕ್ರೂಸರ್ ಪ್ರಾಡೊ, ಸ್ಯಾಟಲೈಟ್ ನೇವಿಗೇಷನ್, ಕೀಲೆಸ್ ಎಂಟ್ರಿ, ಎಂಜಿನ್ ಇಂಮೊಬಿಲೈಝರ್, ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಹಾಗೂ ಕ್ರೂಸ್ ಕಂಟ್ರೋಲ್ ಮುಂತಾದ ವ್ಯವಸ್ಥೆಗಳನ್ನು ಹೊಂದಿದೆ.

ಅಲ್ಲಿಂದೀಚೆಗೆ, ಕೊನೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಾರುಗಳು..!

ಅಂತೆಯೇ ಮನರಂಜನೆಗಾಗಿ ಸ್ಪೀಕರ್, ಸಿಡಿ ಪ್ಲೇಯರ್, ಯುಎಸ್ ಬಿ ಪೋರ್ಡ್, ಐಪ್ಯಾಡ್ ಪ್ಲಸ್, ಬ್ಲೂಟೂತ್ ಕನೆಕ್ಟಿವಿಟಿ ಮುಂತಾದ ಸೇವೆಗಳಿವೆ.

ಅಲ್ಲಿಂದೀಚೆಗೆ, ಕೊನೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಾರುಗಳು..!

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ವಾಹನ ಸ್ಥಿರತೆ ನಿಯಂತ್ರಣ, ಆಕ್ಟಿವ್ ಟ್ರಾಕ್ಷನ್ ಕಂಟ್ರೋಲ್, ಬಹು ಭೂಪ್ರದೇಶದ ಆ್ಯಂಟಿ ಸ್ಕಿಡ್ ಬ್ರೇಕಿಂಗ್, ಎಲೆಕ್ಟ್ರಾನಿಕ್ ಬ್ರೋಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಬ್ರೇಕ್ ಅಸಿಸ್ಟ್ ಹಾಗೂ ಆರು ಏರ್ ಬ್ಯಾಗ್ ಗಳ ಸೇವೆಯಿರಲಿದೆ.

ಅಲ್ಲಿಂದೀಚೆಗೆ, ಕೊನೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಾರುಗಳು..!

ಅಂದ ಹಾಗೆ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ 2982 ಸಿಸಿ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 170 ಅಶ್ವಶಕ್ತಿ (410 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

English summary
Tamilnadu CM Jayalalitha's Car Collection
Story first published: Tuesday, December 6, 2016, 12:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark