ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚುತ್ತಿದೆ Tata Harrier Dark Edition

ಟಾಟಾ ಹ್ಯಾರಿಯರ್ ಒಂದು ಅದ್ಭುತ ಮಿಡ್ ಸೈಜ್ ಎಸ್‍ಯುವಿಯಾಗಿದ್ದು, ಇದು ಸುಂದರವಾದ ವಿನ್ಯಾಸ, ಬಹಳಷ್ಟು ವೈಶಿಷ್ಟ್ಯಗಳು ಮತ್ತು ಅದ್ಭುತ ಸೌಕರ್ಯವನ್ನು ನೀಡುತ್ತದೆ. ಈ ಎಸ್‍ಯುವಿಯು ಭಾರತೀಯ ಮಾರುಕಟ್ಟಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚುತ್ತಿದೆ Tata Harrier Dark Edition

ಟಾಟಾ ಹ್ಯಾರಿಯರ್ ಎಸ್‍ಯುವಿಯ ವಿನ್ಯಾಸವು ಕೂಡ ಆಕರ್ಷಕವಾಗಿದೆ.ಈ ಹ್ಯಾರಿಯರ್ ಎಸ್‍ಯುವಿಯನ್ನು ಮಾಡಿಫೈಮಾಡುವುದಕ್ಕೆ ಹಲವರು ಆಯ್ಕೆ ಮಾಡಿಕೊಳ್ಳುತ್ತಾರೆ, ಈ ಎಸ್‍ಯುವಿಯು ಸಾಕಷ್ಟು ಅದ್ಭುತವಾದ ಮಾಡಿಫೈಗೊಂಡ ಉದಾಹರಣೆಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ನೋಡಬಹುದು, ಇಲ್ಲಿ ಅದೇ ರೀತಿ ಮಾಡಿಫೈಗೊಂಡ ಟಾಟಾ ಹ್ಯಾರಿಯರ್ ಎಸ್‍ಯುವಿಯ ಉದಾಹರಣೆ ಇಲ್ಲಿದೆ. ಇದು ಕಾರ್ ಮ್ಯಾನ್ ಇಂಡಿಯಾದವರು ಪ್ರೀಮಿಯಂ ಇಂಟೀರಿಯರ್ ನೊಂದಿಗೆ ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಅನ್ನು ಮಾಡಿಫೈಗೊಳಿದ್ದಾರೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚುತ್ತಿದೆ Tata Harrier Dark Edition

ಕೆಳಗಿನ ವಿಡಿಯೋದಲ್ಲಿ ವಾಹನದ ಸಂಪೂರ್ಣ ನೋಟವನ್ನು ನೀಡುತ್ತದೆ ಮತ್ತು ನವೀಕರಣಗಳು ಆಕರ್ಷಕವಾಗಿವೆ. ಸ್ಟಾಕ್ ಸೀಟ್ ಕವರ್‌ಗಳನ್ನು ಪಿಯು ಕವರ್‌ಗಳಿಂದ ಬದಲಾಯಿಸಲಾಗಿದೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ. ಬ್ಲ್ಯಾಕ್ ಮತ್ತು ರಸ್ಟ್-ಬ್ರೌನ್ ಬಣ್ಣದ ಥೀಮ್‌ ಹೊಂದಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚುತ್ತಿದೆ Tata Harrier Dark Edition

ಈ ಎಸ್‍ಯುವಿಯ ಡೋರ್ ಪ್ಯಾನೆಲ್‌ಗಳು ಲೆದರ್ ಫಿನಿಶ್ ಅನ್ನು ಪಡೆಯುತ್ತವೆ ಮತ್ತು ಇಂಟೀರಿಯರ್ ಡೋರ್ ಹ್ಯಾಂಡಲ್‌ಗಳು ಈಗ ಫಾಕ್ಸ್ ವುಡ್ ಇನ್ಸರ್ಟ್‌ಗಳೊಂದಿಗೆ ಬ್ಲ್ಯಾಕ್ ಬಣ್ಣದ್ದಾಗಿದೆ. ಸ್ಟೀರಿಂಗ್ ವ್ಹೀಲ್ ಲೆದರ್ ಸುತ್ತುವಿಕೆಯನ್ನು ಸಹ ಹೊಂದಿದೆ, ರಸ್ಟ್-ಬ್ರೌನ್ ಬಣ್ಣದ ಬ್ಲ್ಯಾಕ್ ಥೀಮ್ ದ್ಭುತವಾಗಿ ಕಾಣುತ್ತದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚುತ್ತಿದೆ Tata Harrier Dark Edition

ಈ ಎಸ್‍ಯುವಿಯ ಫಾಕ್ಸ್ ವುಡ್ ಇನ್ಸರ್ಟ್‌ಗಳನ್ನು ಡ್ಯಾಶ್‌ಬೋರ್ಡ್ ಮತ್ತು ಸ್ಟೀರಿಂಗ್ ವೀಲ್‌ಗೆ ಸೇರಿಸಲಾಗಿದೆ, ಹೀಗಾಗಿ ಎಸ್‍ಯುವಿಯ ಪ್ರೀಮಿಯಂ ಅಂಶವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಈ ಕಸ್ಟಮೈಸ್ ಮಾಡಿದ ಟಾಟಾ ಹ್ಯಾರಿಯರ್ ಉತ್ತಮ ಪ್ರಕಾಶಕ್ಕಾಗಿ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಸಹ ಪಡೆಯುತ್ತದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚುತ್ತಿದೆ Tata Harrier Dark Edition

ಕನಿಷ್ಠ ಮೇಲಿನ ವೀಡಿಯೊದಲ್ಲಿ ಕಸ್ಟಮ್ ಒಳಾಂಗಣದ ಫಿಟ್ ಮತ್ತು ಫಿನಿಶ್ ಅದ್ಭುತವಾಗಿ ಕಾಣುತ್ತದೆ. ಎಲ್ಲಾ ಬದಲಾವಣೆಗಳಿಗೆ ಆಕರ್ಷಕವಾಗಿದೆ. ಈ ಎಸ್‍ಯುವಿ ಈಗ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ, ಇನ್ನು ಹೊರಭಾಗಕ್ಕೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚುತ್ತಿದೆ Tata Harrier Dark Edition

ಈ ಟಾಟಾ ಹ್ಯಾರಿಯರ್ ಮಿಡ್ ಎಸ್‍ಯುವಿಯಲ್ಲಿ 2.0 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 170 ಬಿಹೆಚ್‍ಪಿ ಮತ್ತು 350 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಹ್ಯಾರಿಯರ್ ಎಸ್‍ಯುವಿಯಲ್ಲಿ ಹೊಸದಾಗಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಕೂಡ ನೀಡಲಾಗಿದೆ.

ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಮಾದರಿಯು ಈಗಾಗಲೇ ಮಾರಾಟದಲ್ಲಿರುವ ಮಾದರಿಯಾಗಿದೆ. ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಮಾದರಿಯು ಎಕ್ಸ್‌ಟಿ ಪ್ಲಸ್, ಎಕ್ಸ್‌ಝಡ್ ಪ್ಲಸ್ ಮತ್ತು ಎಕ್ಸ್‌ಝಡ್ಎ ಪ್ಲಸ್ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚುತ್ತಿದೆ Tata Harrier Dark Edition

ಈ ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಹೊರಭಾಗದಲ್ಲಿ ಒಬೆರಾನ್ ಬ್ಲ್ಯಾಕ್ ಮತ್ತು ಡೀಪ್ ಬ್ಲೂ ಅಸ್ಸೆಂಟ್ ಗಳ ಬಣ್ಣಗಳನ್ನು ಹೊಂದಿವೆ. ಹ್ಯಾರಿಯರ್ ಬ್ಯಾಡ್ಜ್ ಜೊತೆಗೆ ಪಿಯಾನೋ ಬ್ಲ್ಯಾಕ್ ಪಿನಿಶಿಂಗ್ ಅನ್ನು ಹೊಂದಿದೆ. ಇದರೊಂದಿಗೆ 18 ಇಂಚಿನ ಬ್ಲಾಕ್‌ಸ್ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿವೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚುತ್ತಿದೆ Tata Harrier Dark Edition

ಸ್ಟ್ಯಾಂಡರ್ಡ್ ಹ್ಯಾರಿಯರ್ ಡಾರ್ಕ್ ಎಡಿಷನ್ ಇಂಟಿರಿಯರ್ ನಲ್ಲಿ, ಡಾರ್ಕ್ ಕ್ರೋಮ್ ಇಂಟಿರಿಯರ್ ಪ್ಯಾಕೇಜ್ ಅನ್ನು ಹೊಂದಿದೆ. ಇದರ ಬೆನೆಕೆ ಕಾಲಿಕೊ ಲೆದರ್ ಅಪ್ಹೋಲ್ಸ್ಟರಿ, ಹೆಡ್‌ರೆಸ್ಟ್‌ನಲ್ಲಿ ಡಾರ್ಕ್ ಕಸೂತಿಯನ್ನು ಹೊಂದಿದೆ. ಉಳಿದಂತೆ ವೈಶಿಷ್ಟ್ಯಗಳು ಮತ್ತು ಮೆಕ್ಯಾನಿಕಲ್‌ ಅಂಶಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚುತ್ತಿದೆ Tata Harrier Dark Edition

ಈ ಎಸ್‍ಯುವಿಯ ಹೊಸ ರೂಪಾಂತರಗಳು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ಪ್ರೀಮಿಯಂ ಸೌಂಡ್ ಸಿಸ್ಟಂ, ಪನೋರಮಿಕ್ ಸನ್ ರೂಫ್, ಸೆಮಿ-ಡಿಜಿಟಲ್ ಇನ್ಸ್ ಟ್ರೂಮಂಟ್ ಕ್ಲಸ್ಟರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್-ಸ್ಟಾಪ್, ಡ್ರೈವ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಮೋಡ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುತ್ತದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚುತ್ತಿದೆ Tata Harrier Dark Edition

ಕಳೆದ ಬಾರಿ ಟಾಟಾ ತನ್ನ ಹ್ಯಾರಿಯರ್ ಎಸ್‍ಯುವಿಯ ಎಕ್ಸ್‌ಟಿ ಪ್ಲಸ್ ಎನ್ನುವ ವೆರಿಯೆಂಟ್‌ವೊಂದನ್ನು ಬಿಡುಗಡೆಗೊಳಿಸಿತು. ಈ ಎಸ್‍ಯುವಿಯಲ್ಲಿ ಡ್ಯುಯಲ್ ಫಂಕ್ಷನ್ ಎಲ್ಇಡಿ ಡಿಆರ್ಎಲ್, ಬಂಪರ್ ನಲ್ಲಿ ಅಳವಡಿಸಲಾದ ಹೆಡ್ ಲ್ಯಾಂಪ್ ಮತ್ತು ಮಸ್ಕ್ಯುಲರ್ ಫ್ರಂಟ್ ಗ್ರಿಲ್ ಎಲ್ಲವೂ ಆಕರ್ಷಕ ಮತ್ತು ಬೋಲ್ಡ್ ಲುಕ್ ಅನ್ನು ನೀಡುತ್ತದೆ. ಇನ್ನು ಇದರಲ್ಲಿ ಒನ್-ಟಚ್ ಸನ್‌ರೂಫ್, ಲೇಯರ್ಡ್ ಡ್ಯಾಶ್‌ಬೋರ್ಡ್, ಡ್ರೈವ್ ಮೋಡ್‌ಗಳು, ಹೊಂದಾಣಿಕೆ ಮಾಡಬಹುದಾದ ಹೆಡ್‌ರೆಸ್ಟ್‌ಗಳು ಮತ್ತು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚುತ್ತಿದೆ Tata Harrier Dark Edition

ಈ ಹ್ಯಾರಿಯರ್ ಎಸ್‌ಯುವಿಯಲ್ಲಿ ಸುರಕ್ಷತೆಗಾಗಿ ಏರ್‍‍ಬ್ಯಾಗ್‍ಗಳು, ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಎಂಬ ಫೀಚರ್ ಗಳನ್ನು ಹೊಂದಿವೆ. ಟಾಟಾ ಹ್ಯಾರಿಯರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ 500, ಎಂಜಿ ಹೆಕ್ಟರ್, ಹ್ಯುಂಡೈ ಕ್ರೆಟಾ ಮತ್ತು ಜೀಪ್ ಕಂಪಾಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Tata harrier dark edition with modified premium interior details
Story first published: Friday, December 31, 2021, 20:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X