Just In
Don't Miss!
- News
ಕೇಂದ್ರ ಸರ್ಕಾರ ಎನ್ಐಎ ನೋಟಿಸ್ ಮೂಲಕ ಕಿರುಕುಳ ನೀಡುತ್ತಿದೆ:ರೈತರ ಆರೋಪ
- Movies
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕರೋನಾ ವೈರಸ್ ಎಫೆಕ್ಟ್ : ಹಣ್ಣು ವ್ಯಾಪಾರಿಗಳಾದ ಕ್ಯಾಬ್ ಚಾಲಕರು
ಕರೋನಾ ವೈರಸ್ ನಿಂದಾಗಿ ಅನೇಕ ವ್ಯವಹಾರಗಳು ಸ್ಥಗಿತಗೊಂಡಿವೆ. ಈ ಕಾರಣಕ್ಕೆ ಜನರು ಜೀವನೋಪಾಯಕ್ಕಾಗಿ ಹೊಸ ವ್ಯವಹಾರ, ಉದ್ಯಮಗಳನ್ನು ಆರಂಭಿಸುತ್ತಿದ್ದಾರೆ. ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ಕಾರಣಕ್ಕೆ ಸಾವಿರಾರು ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರು ನಿರುದ್ಯೋಗಿಗಳಾಗಿದ್ದಾರೆ.

ಆದಾಯದ ಮೂಲವೇ ಇಲ್ಲವಾಗಿರುವುದರಿಂದ ಕ್ಯಾಬ್ ಚಾಲಕರು ಸಂಪಾದನೆಗಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಕ್ಯಾಬ್ ಚಾಲಕರು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹೈದರಾಬಾದ್ ನ ನೂರಾರು ಕ್ಯಾಬ್ ಚಾಲಕರು ಸಂಪಾದನೆಗಾಗಿ ಹಣ್ಣುಗಳು ಹಾಗೂ ಜ್ಯೂಸ್ ಮಾರಾಟವನ್ನು ಆರಂಭಿಸಿದ್ದಾರೆ. ತಮ್ಮ ಟ್ಯಾಕ್ಸಿಗಳಲ್ಲಿ ಜ್ಯೂಸ್ ತಯಾರಿಸುವ ಯಂತ್ರ ಹಾಗೂ ಸ್ಟಾಲ್‌ಗಳನ್ನು ಅಳವಡಿಸಿದ್ದಾರೆ. ಈ ಮೂಲಕ ಹೊಸ ಆದಾಯ ಮೂಲವನ್ನು ಕಂಡುಕೊಂಡಿದ್ದಾರೆ.

ಹೈದರಾಬಾದ್ ನ ಬಹುತೇಕ ಟ್ಯಾಕ್ಸಿ ಚಾಲಕರು ಬ್ಯಾಂಕ್ ಸಾಲದಲ್ಲಿ ಟ್ಯಾಕ್ಸಿ ಖರೀದಿಸಿದ್ದಾರೆ. ಯಾವುದೇ ಆದಾಯವಿಲ್ಲದೇ ಬಡ್ಡಿ ಮರುಪಾವತಿ ಸಾಧ್ಯವಾಗುವುದಿಲ್ಲ. ಆದಾಯವಿರಲಿ, ಇಲ್ಲದಿರಲಿ ಬಡ್ಡಿ ಮರುಪಾವತಿಸುವುದು ಅವರ ಜವಾಬ್ದಾರಿಯಾಗಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಇಟಿ ಆಟೋ ವರದಿಗಳ ಪ್ರಕಾರ, ಬಹುತೇಕಾ ಕ್ಯಾಬ್ ಚಾಲಕರ ಡ್ರೈವಿಂಗ್ ಲೈಸೆನ್ಸ್ ಅವಧಿ, ರಿಜಿಸ್ಟ್ರೇಷನ್ ಹಾಗೂ ಫಿಟ್‌ನೆಸ್ ಸರ್ಟಿಫಿಕೇಟ್ ಮಾನ್ಯತಾ ಅವಧಿ ಮುಗಿದಿದೆ.

ಫಿಟ್‌ನೆಸ್ ಸರ್ಟಿಫಿಕೇಟ್ ಮಾನ್ಯತಾ ಅವಧಿ ಮುಗಿದಿರುವ ಕಾರಣಕ್ಕೆ ಓಲಾ ಹಾಗೂ ಉಬರ್ ಕಂಪನಿಗಳು ತಮ್ಮ ಚಾಲಕರ ಐಡಿಗಳನ್ನು ಬ್ಲಾಕ್ ಮಾಡಿವೆ. ಇದರಿಂದ ಈ ಚಾಲಕರಿಗೆ ಬುಕ್ಕಿಂಗ್ ಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಓಲಾ ಹಾಗೂ ಉಬರ್‌ನಂತಹ ಕಂಪನಿಗಳು ಪರವಾನಗಿ ನವೀಕರಸದ ಕ್ಯಾಬ್ ಚಾಲಕರನ್ನು ನಿರ್ಬಂಧಿಸಿವೆ ಎಂದು ವರದಿಗಳಾಗಿವೆ. ಕೇಂದ್ರ ಸರ್ಕಾರವು ಮಾನ್ಯತಾ ಅವಧಿ ಮುಗಿದ ವಾಹನಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.

ಆಂಧ್ರಪ್ರದೇಶ ಹಾಗೂ ದೆಹಲಿ ಸರ್ಕಾರಗಳೂ ಆಟೋ ಹಾಗೂ ಕ್ಯಾಬ್ ಚಾಲಕರಿಗೆ ಪರಿಹಾರವನ್ನು ಘೋಷಿಸಿವೆ. ಆಂಧ್ರಪ್ರದೇಶ ಸರ್ಕಾರದ ವಾಹನ್ ಮಿತ್ರ ಯೋಜನೆಯಡಿಯಲ್ಲಿ ಒಟ್ಟು ರೂ.262 ಕೋಟಿಗಳನ್ನು ಆಟೋ, ಟ್ಯಾಕ್ಸಿ ಚಾಲಕರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು. ಈ ಯೋಜನೆಯಿಂದಾಗಿ 2,62,493 ಚಾಲಕರಿಗೆ ಅನುಕೂಲವಾಗಲಿದೆ.