ಎಚ್ಚರ! ಮದ್ಯಪಾನಗಿಂತಲೂ ಡೇಂಜರ್ ವಾಟ್ಸಪ್

Written By:

ನಿಮಗೆ ಪಾನಮತ್ತರಾಗಿ ವಾಹನ ಚಾಲನೆ ಮಾಡುವ ಹವ್ಯಾಸವಿದೆಯೇ ? ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಅತ್ಯಂತ ಅಪಾಯಕಾರಿ ಎಂದು ಅಂದುಕೊಂಡರೆ ತಪ್ಪಾದಿತು. ಯಾಕೆಂದರೆ ಇದಕ್ಕಿಂತಲೂ ಡೇಂಜರ್ ಆಗಿರುವ ಬೇರೊಂದಿದೆ.

Also Read: ನೈಟ್ ಸೇಫ್ ಚಾಲನೆಗಾಗಿ 6 ಬಹುಮೂಲ್ಯ ಟಿಪ್ಸ್

ಅದೇ ಜನ ಸಾಮಾನ್ಯರನ್ನು ತಲುಪಿರುವ ವಾಟ್ಸಪ್. ಈ ಆತಂಕಕಾರಿ ವಿಚಾರವನ್ನು ಇನ್ಸಿಟ್ಯೂಟ್ ಆಫ್ ಅಡ್ವಾನ್ಸಡ್ ಮೋಟೋರಿಸ್ಟ್ (ಐಎಎಂ) ನಡೆಸಿರುವ ಅಧ್ಯಯನದಲ್ಲಿ ತಿಳಿಸಿದೆ.

To Follow DriveSpark On Facebook, Click The Like Button
ಎಚ್ಚರ! ಮದ್ಯಪಾನಗಿಂತಲೂ ಡೇಂಜರ್ ವಾಟ್ಸಪ್

ವಾಹನ ಚಾಲನೆ ವೇಳೆ ಬಹುತೇಕರು ತಮ್ಮ ಪ್ರೀತಿ ಪಾತ್ರರಿಗೆ ಮೊಬೈಲ್ ಹ್ಯಾಂಡ್ ಸೆಟ್ ಗಳಲ್ಲಿ ಮೆಸೇಜ್ ಮಾಡುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಈ ಪೈಕಿ ವಾಟ್ಸಪ್ ಬಳಕೆ ಅತಿ ಹೆಚ್ಚಾಗಿ ಕಂಡುಬರುತ್ತಿದೆ ಎಂಬ ಆಘಾತಕಾರಿ ವಿಚಾರವನ್ನು ಅಧ್ಯಯನ ವರದಿ ತಿಳಿಸಿದೆ.

ಎಚ್ಚರ! ಮದ್ಯಪಾನಗಿಂತಲೂ ಡೇಂಜರ್ ವಾಟ್ಸಪ್

ಡ್ರಿಂಕ್ ಆಂಡ್ ಡ್ರೈವ್ ನಿಂದಾಗಿ ಅಪಘಾತಗಳ ಸಾಧ್ಯತೆ ಹೆಚ್ಚು ಎಂಬುದು ಸತ್ಯ. ಆದರೆ ವಾಟ್ಸಪ್ ದುಶ್ಚಟಕ್ಕೆ ಬಿದ್ದವನು ಇದಕ್ಕಿಂತಲೂ ಮಾರಕ ಎಂಬುದು ಬಯಲಾಗಿದೆ.

ಎಚ್ಚರ! ಮದ್ಯಪಾನಗಿಂತಲೂ ಡೇಂಜರ್ ವಾಟ್ಸಪ್

ಅಷ್ಟಕ್ಕೂ ಬ್ರಿಟನ್ ನಲ್ಲಿ ಹಮ್ಮಿಕೊಳ್ಳಲಾಗಿರುವ ಸೇಫ್ಟಿ ಕಲ್ಚರ್ ಇಂಡೆಕ್ಸ್ ರಿಪೋರ್ಟ್ ನಲ್ಲಿ ಈ ವಿವರಗಳು ದಾಖಲಾಗಿದೆ. ಇದಕ್ಕಾಗಿ 2000ದಷ್ಟು ಚಾಲಕರನ್ನು ಪರೀಕ್ಷೆಗೊಳಪಡಿಸಲಾಗಿತ್ತು.

ಎಚ್ಚರ! ಮದ್ಯಪಾನಗಿಂತಲೂ ಡೇಂಜರ್ ವಾಟ್ಸಪ್

ವರದಿಯ ಪ್ರಕಾರ ಚಾಲನೆ ವೇಳೆ ಚಾಲಕರ ಏಕಾಗ್ರತೆಗೆ ಭಂಗವನ್ನುಂಟು ಮಾಡುವುದರಲ್ಲಿ ಮದ್ಯಪಾನಗಿಂತಲೂ ಸಾಮಾಜಿಕ ಜಾಲತಾಣಗಳ ಪರಿಣಾಮವೇ ಜಾಸ್ತಿ ಎಂಬುದು ತಿಳಿದು ಬಂದಿದೆ.

ಎಚ್ಚರ! ಮದ್ಯಪಾನಗಿಂತಲೂ ಡೇಂಜರ್ ವಾಟ್ಸಪ್

ಇಲ್ಲಿ ಶೇಕಡಾ 77ರಷ್ಟು ಮಂದಿ ಸೋಷಿಯಲ್ ಮೀಡಿಯಾ ಅತ್ಯಂತ ಅಪಾಯಕಾರಿ ಎಂದು ತಿಳಿಸಿದ್ದರೆ ಶೇಕಡಾ 23ರಷ್ಟು ಮಂದಿ ಮಾತ್ರ ಪಾನಮತ್ತರಾಗಿ ಗಾಡಿ ಚಾಲನೆ ಮಾಡುವುದು ಅಪಾಯಕಾರಿ ಎಂದಿದ್ದಾರೆ.

ಎಚ್ಚರ! ಮದ್ಯಪಾನಗಿಂತಲೂ ಡೇಂಜರ್ ವಾಟ್ಸಪ್

ಇದೇ ವೇಳೆ ಚಾಲನೆ ವೇಳೆ ಮೊಬೈಲ್ ಸಂಭಾಷಣೆ ಸಹ ಅತ್ಯಂತ ಅಪಾಯಕಾರಿ ಎಂಬುದನ್ನು ನಾವಿಲ್ಲಿ ಎಚ್ಚರಿಸಲು ಬಯಸುತ್ತಿದ್ದೇವೆ.

English summary
Technology & Social Media Perceived As Bigger Threats Than Drink-Driving
Story first published: Saturday, November 7, 2015, 14:26 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark