ಕೆಸಿಆರ್‌ಗಾಗಿ ಸಿದ್ಧವಾಗಿದೆ ರೂ.7 ಕೋಟಿ ಮೌಲ್ಯದ ಬುಲೆಟ್ ಪ್ರೂಫ್ ಬಸ್

Written By:

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಸಿಕ್ಕಾಪಟ್ಟೆ ದುಬಾರಿ ಸಿಎಂ ಅಂದ್ರು ಯಾವುದೇ ಅತಿಶಯೋಕ್ತಿಯಲ್ಲ. ಯಾಕೆಂದ್ರೆ ಈ ಹಿಂದೆ ತಮ್ಮ ಹೊಸ ಮನೆಯ ಬಾತ್ ರೂಮ್ ಗೂ ಬುಲೆಟ್ ಪ್ರೂಫ್ ಗ್ಲಾಸ್ ಹಾಕಿಸಿದ್ದ ಕೆಸಿಆರ್, ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗುತ್ತಿದ್ದಾರೆ.

ಕೆಸಿಆರ್‌ಗಾಗಿ ಸಿದ್ದವಾಗಿದೆ ರೂ.7 ಕೋಟಿ ಮೌಲ್ಯದ ಬುಲೆಟ್ ಪ್ರೂಫ್ ಬಸ್

ಕೆ.ಚಂದ್ರಶೇಖರ್‌ ರಾವ್‌ ಅವರಿಗೆ ಜೀವ ಬೆದರಿಕೆಗಳು ಹೆಚ್ಚಾಗುತ್ತಿದ್ದು, ಸಿಎಂ ರಕ್ಷಣೆಗಾಗಿ ರಾಜ್ಯ ಸರ್ಕಾರವು ಬರೋಬ್ಬರಿ 7 ಕೋಟಿ ರೂಪಾಯಿ ಮೌಲ್ಯದ ಬುಲೆಟ್‌‌‌ ಪ್ರೂಫ್‌‌ ಬಸ್‌‌ ಖರೀದಿಸಲು ಮುಂದಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

Recommended Video - Watch Now!
[Kannada] Maruti Swift 2018 - Full Specifications, Features, Price, Mileage, Colours - DriveSpark
ಕೆಸಿಆರ್‌ಗಾಗಿ ಸಿದ್ದವಾಗಿದೆ ರೂ.7 ಕೋಟಿ ಮೌಲ್ಯದ ಬುಲೆಟ್ ಪ್ರೂಫ್ ಬಸ್

ಮುಖ್ಯಮಂತ್ರಿ ಕೆಸಿಆರ್‌‌ ಈಗಾಗಲೇ ಝೆಡ್‌‌ ಪ್ಲಸ್‌‌ ಭದ್ರತೆ ಹೊಂದಿದ್ದರು ನಕ್ಸಲ್‌ರಿಂದ ಜೀವ ಬೆದರಿಕೆ ಹಿನ್ನೆಲೆ ಮತ್ತಷ್ಟು ಬಿಗಿಭದ್ರತೆ ಹೆಚ್ಚಿಸುವ ಉದ್ದೇಶದಿಂದ ಬುಲೆಟ್ ಪ್ರೂಫ್ ಬಸ್ ಖರೀದಿಸುತ್ತಿದ್ದಾರೆ.

ಕೆಸಿಆರ್‌ಗಾಗಿ ಸಿದ್ದವಾಗಿದೆ ರೂ.7 ಕೋಟಿ ಮೌಲ್ಯದ ಬುಲೆಟ್ ಪ್ರೂಫ್ ಬಸ್

ಕೆಸಿಆರ್‌ ಭದ್ರತೆಗಾಗಿ ಬುಲೆಟ್‌‌‌ ಪ್ರೂಫ್‌‌ ಬಸ್‌‌ ಖರೀದಿಸಲು ರಾಜ್ಯ ಸಾರಿಗೆ ಇಲಾಖೆಯು ಉತ್ಸುಕವಾಗಿದ್ದು, ಇದಕ್ಕೆ ಶೀಘ್ರವೇ ಆಡಳಿತಾತ್ಮಕ ಅನುಮೋದನೆ ಸಿಗಲಿದೆ ಎನ್ನುವ ಬಗ್ಗೆ ಪ್ರಮುಖ ಸುದ್ಧಿ ಸಂಸ್ಥೆಗಳು ವರದಿ ಮಾಡಿವೆ.

ಕೆಸಿಆರ್‌ಗಾಗಿ ಸಿದ್ದವಾಗಿದೆ ರೂ.7 ಕೋಟಿ ಮೌಲ್ಯದ ಬುಲೆಟ್ ಪ್ರೂಫ್ ಬಸ್

ನಕ್ಸಲ್ ಬೆದರಿಕೆ ಹಿನ್ನೆಲೆಯಲ್ಲಿ ವಿಶೇಷ ಪೊಲೀಸ್‌ ಭದ್ರತೆ ಬದಲಿಗೆ ಗ್ರೇಹೌಂಡ್ಸ್‌ ಭದ್ರತೆಯನ್ನು ಕೂಡಾ ಒದಗಿಸಲಾಗಿದ್ದು, ಕೆಸಿಆರ್‌ರ ಅಧಿಕೃತ ನಿವಾಸ 'ಪ್ರಗತಿ ಭವನ'ಕ್ಕೂ ಬುಲೆಟ್‌‌‌ ಪ್ರೂಫ್‌‌ ಗಾಜಿನ ಕಿಟಕಿಗಳನ್ನು ಅಳವಡಿಸಲಾಗಿದೆ.

ಕೆಸಿಆರ್‌ಗಾಗಿ ಸಿದ್ದವಾಗಿದೆ ರೂ.7 ಕೋಟಿ ಮೌಲ್ಯದ ಬುಲೆಟ್ ಪ್ರೂಫ್ ಬಸ್

ಇದರ ಜೊತೆಗೆ ದಿನದ 24 ಗಂಟೆಯೂ 50 ಜನ ಭದ್ರತಾ ಸಿಬ್ಬಂದಿಯನ್ನು ನಿವಾಸದಲ್ಲಿ ನಿಯೋಜಿಸಲಾಗುತ್ತಿದ್ದು, ಯಾವುದೇ ಮಾದರಿಯ ಗುಂಡಿನ ದಾಳಿ ನಡೆದರು ಆತ್ಮರಕ್ಷಣೆಗಾಗಿ ಈ ವಿಶೇಷ ಬಸ್ ಬಳಕೆಯಾಗಲಿದೆ.

ಕೆಸಿಆರ್‌ಗಾಗಿ ಸಿದ್ದವಾಗಿದೆ ರೂ.7 ಕೋಟಿ ಮೌಲ್ಯದ ಬುಲೆಟ್ ಪ್ರೂಫ್ ಬಸ್

ಬುಲೆಟ್ ಪ್ರೂಫ್ ವ್ಯವಸ್ಥೆ ಹೊಂದಿರುವ ಈ ಬಸ್‌ನಲ್ಲಿ ಬೆಡ್ ರೂಮ್, ವಿಶ್ರಾಂತಿ ಕೋಣೆ, ಸಭೆ ನಡೆಸುವ ಹಾಲ್, ಇಂಟರ್ನೆಟ್ ಸೇರಿದಂತೆ ಅನೇಕ ಐಷಾರಾಮಿ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ವಿಲಾಸಿ ಸೌಕರ್ಯಗಳು ಬಸ್ ಪ್ರಯಾಣವನ್ನು ಸುಖಕರವಾಗಿಸಲಿವೆ.

ಕೆಸಿಆರ್‌ಗಾಗಿ ಸಿದ್ದವಾಗಿದೆ ರೂ.7 ಕೋಟಿ ಮೌಲ್ಯದ ಬುಲೆಟ್ ಪ್ರೂಫ್ ಬಸ್

ಮುಖ್ಯಮಂತ್ರಿ ರಾವ್ ಪ್ರಸ್ತುತ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲು ಹೆಲಿಕಾಪ್ಟರ್ ಬಳಸುತ್ತಿದ್ದಾರೆ. ಯಾವುದೇ ಕಾರ್ಯಕ್ರಮವಿರಲಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವುದು ಹವ್ಯಾಸವಾಗಿದೆ ಎಂದು ಕಾಂಗ್ರೆಸ್ ಕೂಡಾ ಈ ಹಿಂದೆ ಟೀಕೆ ಮಾಡಿತ್ತು.

ಕೆಸಿಆರ್‌ಗಾಗಿ ಸಿದ್ದವಾಗಿದೆ ರೂ.7 ಕೋಟಿ ಮೌಲ್ಯದ ಬುಲೆಟ್ ಪ್ರೂಫ್ ಬಸ್

ಇದೇ ಕಾರಣಕ್ಕೊ ಏನೋ ಗೊತ್ತಿಲ್ಲಾ. ಹೆಲಿಕಾಪ್ಟರ್ ಬದಲಾಗಿ ಐಷಾರಾಮಿ ಬಸ್ ಮೂಲಕವೇ ರಾಜ್ಯ ಪ್ರವಾಸ ಮಾಡಲು ಮುಂದಾಗಿರುವ ಕೆಸಿಆರ್, ಭಾರೀ ಪ್ರಮಾಣದ ಭದ್ರತೆಯೊಂದಿಗೆ ಬುಲೆಟ್ ಪ್ರೂಫ್ ಬಸ್ ಏರಿ ಪ್ರವಾಸಕ್ಕಾಗಿ ಸಿದ್ದರಾಗುತ್ತಿದ್ದಾರೆ.

ಕೆಸಿಆರ್‌ಗಾಗಿ ಸಿದ್ದವಾಗಿದೆ ರೂ.7 ಕೋಟಿ ಮೌಲ್ಯದ ಬುಲೆಟ್ ಪ್ರೂಫ್ ಬಸ್

ಇನ್ನು ಹೊಸ ರಾಜ್ಯ ಉದ್ಭವ ಆದಮೇಲೆ ತೆಲಂಗಾಣವನ್ನ ಅಭಿವೃದ್ಧಿ ಮಾಡೋ ಕನಸು ಕಾಣುತ್ತಿರುವ ಮುಖ್ಯಮಂತ್ರಿ ಕೆಸಿಆರ್ ಅವರ ಮೋಜಿನ ಬದುಕು ಮಾತ್ರ ಸಿಕ್ಕಾಪಟ್ಟೆ ದುಬಾರಿಯಾಗಿದೆ.

Read more on off beat bus
English summary
Telangana CM Chandrasekarrao May Get New Bullet Proof Bus Soon.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark