ವಿಶ್ವದ 10 ಅತಿ ಅಪಾಯಕಾರಿ ರಸ್ತೆಗಳು

By Nagaraja

ಶ್..ಎಚ್ಚರ..! ನಾವಿಂದು ಹೇಳಿಕೊಡಲಿರುವ ರಸ್ತೆಗಳಲ್ಲಿ ಸಂಚರಿಸುವ ಮುನ್ನ ಎರಡೆರಡು ಬಾರಿ ಯೋಚಿಸಿದರೆ ಒಳಿತು. ಯಾಕೆಂದರೆ ಅಪ್ಪಿ ತಪ್ಪಿಯೂ ಸ್ವಲ್ಪನೂ ಎಡವಟ್ಟು ಮಾಡಿದರೆ ನಿಮ್ಮ ಜೀವಕ್ಕೆ ಯಾವ ಗ್ಯಾರಂಟಿಯೂ ಇರಲ್ಲ.

Also Read: ದೇಶದ ಟಾಪ್ 10 ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಗಳು

ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಪರ್ಕ ಕಲ್ಪಿಸಿಕೊಡುವ ನಿಟ್ಟಿನಲ್ಲಿ ರಸ್ತೆ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ. ಇನ್ನು ಕೆಲವು ಬೇಗನೇ ತಲುಪಲು ಶಾರ್ಟ್ ಕಟ್ ನಿರ್ಮಿಸುವುದು ಸಹಜ. ಇದಕ್ಕಾಗಿ ಗುಡ್ಡ ಬೆಟ್ಟಗಳನ್ನು ಆಯ್ಕೆ ಮಾಡಲಾಗುತ್ತದೆ. ಹೀಗೆ ಒಂದಲ್ಲ ಒಂದು ಕಾರಣದಿಂದಾಗಿ ಅತಿ ಅಪಾಯಕಾರಿ ಎನಿಸಿಕೊಂಡಿರುವ ವಿಶ್ವದ 10 ಡೆತ್ ರೋಡ್ ಗಳ ಬಗ್ಗೆ ನಾವಿಂದು ಚರ್ಚಿಸಲಿದ್ದೇವೆ.

10. ಐರ್ ಹೈವೇ, ಆಸ್ಟ್ರೇಲಿಯಾ (Eyre Highway)

10. ಐರ್ ಹೈವೇ, ಆಸ್ಟ್ರೇಲಿಯಾ (Eyre Highway)

ನೋಡುವಾಗ ನೇರ ರೇಖೆಯಂತಿರುವ ಈ ಪ್ರೇಕ್ಷಕ ರಮಣೀಯ ಐರ್ ಹೈವೇಯು ಆಸ್ಟ್ರೇಲಿಯಾದಲ್ಲಿ ಸ್ಥಿತಗೊಂಡಿದೆ. ದಟ್ಟಾರಣ್ಯದ ನಡುವೆ ಹಾದು ಹೋಗುವ 684 ಮೈಲು ಉದ್ದದ ಈ ರಸ್ತೆಯು ನಿಮ್ಮಲ್ಲಿ ನಿರಾಸೆ ತರಿಸಬಹುದು. ಇದೇ ಕಾರಣಕ್ಕಾಗಿ ನಿಮ್ಮ ಏಕಾಗ್ರತೆಗೆ ಭಂಗವುಂಟಾದಲ್ಲಿ ರಸ್ತೆ ಮಧ್ಯೆ ಪದೇ ಪದೇ ಕಾಂಗರೂಗಳಂತಹ ವನ್ಯಜೀವಿಗಳ ಆಕ್ರಮಣವಾಗಲಿದೆ. ಪರಿಣಾಮ ಅಪಘಾತ ಕಟ್ಟಿಟ್ಟ ಬುತ್ತಿ. ಯಾವುದಕ್ಕೂ ಒಮ್ಮೆ ಹುಷಾರಾಗಿರಿ.

09. ಟ್ರಾನ್ಸ್‌ಫಾಗರಸನ್ ರಸ್ತೆ, ರೊಮನಿಯಾ (Transfagarasan Road)

09. ಟ್ರಾನ್ಸ್‌ಫಾಗರಸನ್ ರಸ್ತೆ, ರೊಮನಿಯಾ (Transfagarasan Road)

90 ಕೀ.ಮೀ. ಉದ್ದದಷ್ಟು ಹರಡಿರುವ ಇಲ್ಲಿನ ಕಡಿದಾದ ಹೇರ್ ಪಿನ್ ರಸ್ತೆಯು ವಾಹನ ಉತ್ಸಾಹಿಗಳನ್ನು ಸಾಹಸ ಚಾಲನೆಗಾಗಿ ಕೈಬಿಸಿ ಕರೆಯುತ್ತದೆ. ಎರಡು ಎತ್ತರವಾದ ಬೆಟ್ಟವನ್ನು (Walachia and Transylvania) ಬಂಧಿಸುವ ಇಲ್ಲಿನ ರಸ್ತೆಯು ಜಗತ್ತಿನ ಅತ್ಯುತ್ತಮ ರಸ್ತೆ ಎಂಬ ಖ್ಯಾತಿಗೂ ಪಾತ್ರವಾಗಿದೆ. ಇತಿಹಾಸದ ಭಾಗವಾಗಿರುವ ಇಲ್ಲಿನ ರಸ್ತೆಯೂ ಪ್ರವಾಸಿಗರನ್ನು ನಿಬ್ಬೆರಗಾಗಿಸುತ್ತದೆ.

08. ಸ್ಟೆಲ್ವಿಯೊ ಪಾಸ್, ಇಟಲಿ ( Stelvio Pass)

08. ಸ್ಟೆಲ್ವಿಯೊ ಪಾಸ್, ಇಟಲಿ ( Stelvio Pass)

9,045 ಅಡಿ ಎತ್ತರದಲ್ಲಿರುವ ಇಟಲಿ ಸ್ಟೆಲ್ವಿಯೊ ಪಾಸ್ ಪೂರ್ವ ಆಲ್ಪ್ ಪರ್ವತದ ಅತ್ಯಂತ ಸುಸಜ್ಜಿತ ರಸ್ತೆಗಳಲ್ಲಿ ಒಂದಾಗಿದೆ. 1820-1825ನೇ ಇಸವಿಯ ನಡುವಣ ಆಸ್ಟ್ಲೀಯಾ ಚಕ್ರಾಧಿಪತ್ಯದ ಕಾಲಘಟ್ಟದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂಬುದಕ್ಕೆ ಪುರಾವೆಗಳಿವೆ. ಇದು ವಾಲ್ಟೆಲ್ಲಿನಾ ಜೊತೆ ಮೇಲಿನ ಏಡಿಜ್ ವ್ಯಾಲಿಯನ್ನು (Valtellina with the upper Aidige Valley) ಸಂಪರ್ಕಿಸಲಿದೆ. ಇದು ಎಷ್ಟು ಅಪಾಯಕಾರಿಯೆಂದರೆ 60 ಕಡಿದಾದ ಹೇರ್ ಪಿನ್ ತಿರುವುಗಳು ಇಲ್ಲಿದೆ.

07. ಎ547, ಬ್ರಿಟನ್ (A537)

07. ಎ547, ಬ್ರಿಟನ್ (A537)

ಮೋಟಾರುಸೈಕಲ್ ಸವಾರರ ನೆಚ್ಚಿನ ರಸ್ತೆಯೆನಿಸಿರುವ ಎ547 ಬ್ರಿಟನ್‌ನ ಪೀಕ್ ಪ್ರದೇಶದಲ್ಲಿ ಸ್ಥಿತಗೊಂಡಿದೆ. ಬ್ರಿಟನ್ ರಸ್ತೆ ಸುರಕ್ಷಾ ನಿಧಿಯ ವರದಿಯ ಪ್ರಕಾರ ಇಲ್ಲಿನ ರಸ್ತೆಯಲ್ಲಿ 2006ರಿಂದ 2008ರ ಅವಧಿಯಲ್ಲಿ 34 ಗಂಭೀರ ಅವಘಡ ಪ್ರಸಂಗಗಳನ್ನು ಘಟಿಸಿದ್ದವು. ಅಷ್ಟೇ ಯಾಕೆ 2007ರಿಂದ 2011ರ ಅವಧಿಯಲ್ಲಿ ಈ ಸಂಖ್ಯೆಯು 44ಕ್ಕೆ ಏರಿಕೆಯಾಗಿದ್ದವು. ವಿಡೋ ಮೇಕರ್ ಎಂಬ ಅಡ್ಡ ಹೆಸರನ್ನು ಹೊಂದಿರುವ ಇಲ್ಲಿನ ರಸ್ತೆಯಲ್ಲಿ ಅಮಿತ ವೇಗದಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ.

06. ಕೊಲಿಮಾ ಹೈವೇ, ಸೈಬಿರಿಯಾ (Kolyma Highway)

06. ಕೊಲಿಮಾ ಹೈವೇ, ಸೈಬಿರಿಯಾ (Kolyma Highway)

ಈಸ್ಟನ್ ಸೈಬಿರಿಯಾದಲ್ಲಿರುವ ಏಕಮಾತ್ರ ಪ್ರಧಾನ ರಸ್ತೆಯಾಗಿರುವ ಕೊಲಿವಾ ಹೈವೇಯನ್ನು 'ಎಲುಬುಗಳ ರಸ್ತೆ' ಎಂದು ಕರೆಯಲಾಗುತ್ತದೆ. ಸ್ಟಾಲಿನ್ ರಾಜ್ಯಭಾರದ ಸಂದರ್ಭದಲ್ಲಿ ಇಲ್ಲಿಗೆ ಗಡಿಪಾರುಮಾಡಲಾದ ರಾಜಕೀಯ ಖೈದಿಗಳಿಂದ ಇದನ್ನು ನಿರ್ಮಿಸಲಾಗಿತ್ತು. ರಸ್ತೆ ನಿರ್ಮಾಣ ಸಂದರ್ಭದಲ್ಲಿ ಕೆಲಸ ಮಾಡದ ಖೈದಿಗಳನ್ನು ಕೊಂದು ಇಲ್ಲೇ ಹೂತಿಡಲಾಗತ್ತಿತ್ತು ಎಂಬುದು ತಿಳಿದು ಬಂದಿದೆ.

05. ರೋಹ್ಟಕ್ ಪಾಸ್, ಭಾರತ (Rohtang Pass)

05. ರೋಹ್ಟಕ್ ಪಾಸ್, ಭಾರತ (Rohtang Pass)

ಸಮುದ್ರ ಮಟ್ಟಕ್ಕಿಂತಲೂ 3,979 ಮೀಟರ್ (13,054 ಅಡಿ) ಎತ್ತರದಲ್ಲಿ ಹಾದು ಹೋಗುತ್ತಿರುವ ರೋಹ್ಟಕ್ ಪಾಸ್ ಮಗದೊಂದು ಪರ್ವತ ಹಾದಿಯಾಗಿದ್ದು, ಮಾನಲಿಯಿಂದ 51 ಕೀ.ಮೀ. ದೂರದ ಹಿಮಾಲಯದ ಪೂರ್ವ ಪಿರ್ ಪಂಜಲ್ ರೇಂಜ್‌ನಲ್ಲಿ ಸ್ಥಿತಗೊಂಡಿದೆ. ಹಿಮಾಚಲ ಪ್ರದೇಶದ ಕುಲ್ಲು ವ್ಯಾಲಿ ಹಾಗೂ ಲಹೌಲ್ ಮತ್ತು ಸ್ಪಿಟಿ ವ್ಯಾಲಿ ಬಂಧಿಸುತ್ತಿರುವ ರೋಹ್ಟಕ್ ಪಾಸ್ ರಾಷ್ಟ್ರೀಯ ಹೆದ್ದಾರಿ 21ರ ಭಾಗವಾಗಿರುವ ಮನಾಲಿ-ಲೇಹ್ ಹೈವೇಯನ್ನು ಸಂಪರ್ಕಿಸುತ್ತದೆ.

04. ಕಾರಕೋರಂ ಹೈವೇ, ಪಾಕಿಸ್ತಾನ (Karakoram Highway)

04. ಕಾರಕೋರಂ ಹೈವೇ, ಪಾಕಿಸ್ತಾನ (Karakoram Highway)

ಪಾಕಿಸ್ತಾನ ಸರಕಾರವು ಇದಕ್ಕೆ "ಸ್ನೇಹ ಹೆದ್ದಾರಿ" ಎಂಬ ಹೆಸರಿಟ್ಟರೂ ವಿಪರ್ಯಾಸವೆಂದರೆ ಇಲ್ಲಿ ವಾಹನ ಚಲಿಸುವ ಚಾಲಕ ಅಥವಾ ಪ್ರಯಾಣಿಕರಿಗೇ ಆಗಲಿ ಯಾವುದೇ ಸ್ನೇಹದ ವಾತಾವರಣ ಸೃಷ್ಟಿಯಾಗುವುದಿಲ್ಲ. ಸಮುದ್ರ ಮಟ್ಟಕ್ಕಿಂತಲೂ 4,800 ಮೀಟರ್ ಎತ್ತರದಲ್ಲಿರುವ ಕಾರಕೋರಂ ಹೈವೇ ಖುಂಜಾರಾಬ್ ಪಾಸ್ (Khunjerab) ಹಾದಿಯಾಗಿ ಚೀನಾವನ್ನು ಸಂಪರ್ಕಿಸುತ್ತದೆ.

03. ಟ್ರಾಲ್ಸ್‌ಟೈಗನ್, ನಾರ್ವೆ (Trollstigen)

03. ಟ್ರಾಲ್ಸ್‌ಟೈಗನ್, ನಾರ್ವೆ (Trollstigen)

ರಾಕ್ಷಸರ ಕಾಲುದಾರಿ ಅಥವಾ ಏಣಿ ಎಂಬ ಅರ್ಥವನ್ನು ನೀಡುವ ಟ್ರಾನ್ಸ್‌ಟೈಗನ್ ಹೈವೇ ಹೆಸರಿಗೆ ತಕ್ಕಂತೆ ಅಷ್ಟೇ ಅಪಾಯಕಾರಿಯಾಗಿದೆ. ಇದು ರೌಮಾದ ಆಂಡಲ್‌ನೆಸ್‌ನಿಂದ ನೊರಡಲ್‌ನ ವಾಲ್‌ದಾಲ್ ಪ್ರದೇಶವನ್ನು ಸಂಪರ್ಕಿಸುತ್ತದೆ. ಚಳಿಗಾಲದಲ್ಲಿ ಭಾರಿ ಹಿಮಪಾತವಾಗುವುದರಿಂದ ರಸ್ತೆಯನ್ನು ಮುಚ್ಚಿಡಲಾಗುತ್ತದೆ. 11 ಹೇರ್ ಪಿನ್ ತಿರುವುಗಳನ್ನು ಇದು ಹೊಂದಿದ್ದು, ಹೆಚ್ಚಿನ ಅಪಘಾತವಾಗದಂತೆ ಅಲ್ಲಿನ ಸರಕಾರ ಕಟ್ಟೆಚ್ಚರ ವಹಿಸುತ್ತಿದೆ.

02. ಯಂಗಸ್ ರೋಡ್, ಬೊಲಿವಿಯಾ (Yungas)

02. ಯಂಗಸ್ ರೋಡ್, ಬೊಲಿವಿಯಾ (Yungas)

ಅಸೋಸಿಯೇಷ್ ಫಾರ್ ಸೇಫ್ ಇಂಟರ್ ನ್ಯಾಷನಲ್ ರೋಡ್ ಟ್ರಾವೆಲ್ ವರದಿಯ ಪ್ರಕಾರ ಯಂಗಸ್ ರಸ್ತೆಯಲ್ಲಿ ವರ್ಷಂಪ್ರತಿ 100ರಿಂದ 200ರಷ್ಟು ಸಾವು-ನೋವುಗಳು ಸಂಭವಿಸುತ್ತದೆ. ಇಲ್ಲಿನ ಸ್ಥಳೀಯರು ಸಾವಿನ ರಸ್ತೆ ಎಂದು ಕರೆಯುವ ಯಂಗಸ್ ರಸ್ತೆಯು ನಿಜಕ್ಕೂ ವಾಹನ ಸವಾರರ ಪಾಲಿಗೆ ಅಪಾಯಕಾರಿ ಎನಿಸಿಕೊಂಡಿದೆ.

 01. ಹೈವೇ 1, ಅಪಘಾನಿಸ್ತಾನ (Highway 1)

01. ಹೈವೇ 1, ಅಪಘಾನಿಸ್ತಾನ (Highway 1)

"ರಿಂಗ್ ರೋಡ್" ಎಂಬ ಹೆಸರಿನಿಂದಲೂ ಕರೆಯಲ್ಪಡುವ 2,220 ಕೀ.ಮೀ. ಉದ್ದದ ಹೈವೇ 1 ಹೆದ್ದಾರಿಯು ಮಝರ್, ಕಾಬೂಲ್ ಮತ್ತು ಕಂದಹಾರ್ ನಗರಗಳನ್ನು ಬಂಧಿಸುತ್ತದೆ. ಆದರೆ ಕಾಬೂಲ್ ನಿಂದ ಜಲಾಲಬಾದ್ ವರೆಗಿನ ಪ್ರದೇಶವೂ ಅತ್ಯಂತ ಅಪಾಯಕಾರಿಯೆನಿಸುತ್ತದೆ. ಕಳಪೆ ಮೂಲಭೂತ ಸೌಕರ್ಯ ಹಾಗೂ ಕೆಟ್ಟ ರಸ್ತೆಗಳು ಇಲ್ಲಿನ ವಾಹನ ಸವಾರರಿಗೆ ಸಮಸ್ಯೆಯನ್ನು ಸೃಷ್ಟಿಸುತ್ತದೆ. ಇನ್ನೊಂದೆಡೆ ತಾಲಿಬಾನ್ ಉಗ್ರ ಅಧಿಪತ್ಯ ಇರುವುದಿಂದಲೇ ಇಲ್ಲಿನ ರಸ್ತೆಗಳು ಹೆಚ್ಚು ಅಪಾಯಕಾರಿ ಎಂದು ಬಣ್ಣಿಸಲಾಗಿದೆ.

ಇವನ್ನೂ ಓದಿ

ಭಾರತದ ಅತ್ಯಂತ ಅಪಾಯಕಾರಿ 15 ರಸ್ತೆಗಳು

Most Read Articles

Kannada
Read more on ಟಾಪ್ 10 top 10
English summary
Ten Most Dangerous Roads In The World
Story first published: Wednesday, November 11, 2015, 10:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X