ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ ಆಟೋ ಪೈಲಟ್ ಮೋಡ್

ಅಮೆರಿಕಾ ಮೂಲದ ಟೆಸ್ಲಾ ವಿಶ್ವದ ಪ್ರಮುಖ ಕಾರು ತಯಾರಕ ಕಂಪನಿಗಳಲ್ಲಿ ಒಂದು. ಟೆಸ್ಲಾ ಅತ್ಯಾಧುನಿಕ ತಂತ್ರಜ್ಞಾನದ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುತ್ತದೆ. ಟೆಸ್ಲಾದ ಎಲೆಕ್ಟ್ರಿಕ್ ಕಾರುಗಳು ವಿಶ್ವದ ಹಲವು ದೇಶಗಳಲ್ಲಿ ಜನಪ್ರಿಯವಾಗಿವೆ.

ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ ಆಟೋ ಪೈಲಟ್ ಮೋಡ್

ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಪ್ರಮುಖ ತಾಂತ್ರಿಕ ಅಂಶಗಳಲ್ಲಿ ಆಟೋಪೈಲಟ್ ಮೋಡ್ ಸಹ ಸೇರಿದೆ. ಆಟೋಪೈಲಟ್ ಮೋಡ್ ಕಾರಿನ ಸ್ಟೀಯರಿಂಗ್ ವ್ಹೀಲ್ ಹಾಗೂ ಬ್ರೇಕ್‌ಗಳನ್ನು ನಿಯಂತ್ರಿಸುತ್ತದೆ. ಈ ಮೋಡ್ ನಲ್ಲಿ ವೇಗವು ಆಟೋಮ್ಯಾಟಿಕ್ ಆಗಿ ಹೆಚ್ಚು, ಕಡಿಮೆಯಾಗುತ್ತದೆ.

ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ ಆಟೋ ಪೈಲಟ್ ಮೋಡ್

ಸಾಮಾನ್ಯವಾಗಿ ಚಾಲಕರು ಮಾಡುವ ಮಾನವ ಸಹಜ ತಪ್ಪುಗಳಿಂದಾಗಿ ರಸ್ತೆ ಅಪಘಾತಗಳುಂಟಾಗುತ್ತವೆ. ಆಟೋಪೈಲಟ್ ಮೋಡ್ ಬಳಸಿದರೆ, ಚಾಲಕರ ಮೇಲಿನ ಒತ್ತಡ ಕಡಿಮೆಯಾಗಿ ಅಪಘಾತಗಳ ಸಂಖ್ಯೆ ಕಡಿಮೆ ಮಾಡಬಹುದು ಎಂಬ ಕಾರಣಕ್ಕೆ ಆಟೋಪೈಲಟ್ ಮೋಡ್ ಅಳವಡಿಸಲಾಗಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ ಆಟೋ ಪೈಲಟ್ ಮೋಡ್

ದೀರ್ಘ ಪ್ರಯಾಣದಲ್ಲಿ ಕಾರನ್ನು ಸ್ವಲ್ಪ ದೂರ ಚಾಲನೆ ಮಾಡಲು ಆಟೋಪೈಲಟ್ ಮೋಡ್ ಬಳಸಬಹುದು. ಆದ್ದರಿಂದ ಈ ಮೋಡ್ ಚಾಲಕರಿಗೆ ವರದಾನವಾಗಿ ಪರಿಣಮಿಸಿದೆ. ಆದರೆ ಕಾರನ್ನು ಆಟೋಪೈಲಟ್‌ನಲ್ಲಿಟ್ಟು ಹಿಂದಿನ ಸೀಟಿನಲ್ಲಿ ಮಲಗಿದರೆ ಇದೇ ಮೋಡ್ ಶಾಪವಾಗುವುದರಲ್ಲಿ ಅನುಮಾನವಿಲ್ಲ.

ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ ಆಟೋ ಪೈಲಟ್ ಮೋಡ್

ಹೀಗೆ ಮಾಡುವುದು ಮೂರ್ಖತನವಲ್ಲದೇ ಅಪಾಯಕಾರಿಯೂ ಹೌದು. ಆಟೋಪೈಲಟ್ ಮೋಡ್ ಕಾರನ್ನು ಆಟೋಮ್ಯಾಟಿಕ್ ಆಗಿ ಚಾಲನೆ ಮಾಡಿದರೂ ಸಹ ಚಾಲಕನು ಚಾಲಕನ ಸೀಟಿನಲ್ಲಿದ್ದರೆ ಒಳಿತು. ಕಾರು ಆಟೋಪೈಲಟ್‌ ಮೋಡ್ ನಲ್ಲಿದ್ದರೂ ಚಾಲಕರು ರಸ್ತೆಯತ್ತ ಗಮನ ಹರಿಸಿದರೆ ಕ್ಷೇಮ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ ಆಟೋ ಪೈಲಟ್ ಮೋಡ್

ಆದರೆ ಬಹುತೇಕ ಟೆಸ್ಲಾ ಕಾರುಗಳ ಮಾಲೀಕರು ಈ ಬಗ್ಗೆ ಗಮನ ಹರಿಸುವುದಿಲ್ಲ. ಟೆಸ್ಲಾ ಕಾರುಗಳನ್ನು ಆಟೋಪೈಲಟ್‌ ಮೋಡ್ ನಲ್ಲಿಟ್ಟು ಚಾಲಕರು ನಿದ್ರಿಸುತ್ತಿರುವ ಅನೇಕ ವೀಡಿಯೊಗಳು ವೈರಲ್ ಆಗಿವೆ.

ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ ಆಟೋ ಪೈಲಟ್ ಮೋಡ್

ಇದು ಮಾತ್ರವಲ್ಲದೇ ಕಾರುಗಳನ್ನು ಆಟೋ ಪೈಲಟ್‌ ಮೋಡ್ ನಲ್ಲಿಟ್ಟು ಮೊಬೈಲ್ ನಲ್ಲಿ ಸಿನಿಮಾ ವೀಕ್ಷಿಸಿದ ಘಟನೆಗಳೂ ಜರುಗಿವೆ. ಇದರಿಂದಾಗಿ ಹಲವಾರು ಅಪಘಾತಗಳು ಸಂಭವಿಸಿವೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ ಆಟೋ ಪೈಲಟ್ ಮೋಡ್

ಈಗ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಈ ವೀಡಿಯೊದಲ್ಲಿ ಟೆಸ್ಲಾ ಕಾರನ್ನು ಆಟೋ ಪೈಲಟ್ ಮೋಡ್ ನಲ್ಲಿಟ್ಟ ಚಾಲಕನು ಪಕ್ಕದ ಸೀಟಿನಲ್ಲಿ ಕುಳಿತು ಕಾರು ಆಟೋಮ್ಯಾಟಿಕ್ ಆಗಿ ಚಾಲನೆಯಾಗುತ್ತಿರುವುದನ್ನು ರೆಕಾರ್ಡ್ ಮಾಡುತ್ತಿದ್ದಾನೆ.

ಈ ಘಟನೆ ಅಮೆರಿಕದ ಉತ್ತರ ಕೆರೊಲಿನಾದಲ್ಲಿ ನಡೆದಿದೆ. ಇದು ಟೆಸ್ಲಾ ಕಂಪನಿಯ ಮಾಡೆಲ್ ಎಕ್ಸ್ ಕಾರು ಎಂದು ಹೇಳಲಾಗಿದೆ. ಈ ವೀಡಿಯೊವನ್ನು ಆಲ್ಬರ್ಟ್ ಸಿಪ್ಲೆನ್ ಅವರ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ ಆಟೋ ಪೈಲಟ್ ಮೋಡ್

ಸೆಪ್ಟೆಂಬರ್ 27ರಂದು ಅಪ್ ಲೋಡ್ ಮಾಡಲಾದ ಈ ವೀಡಿಯೊವನ್ನು ಸಾಕಷ್ಟು ಸಂಖ್ಯೆಯ ಜನರು ವೀಕ್ಷಿಸಿದ್ದಾರೆ. ಈ ಕಾರು 104 ಕಿ.ಮೀ ವೇಗದಲ್ಲಿ ಚಲಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಈ ವೇಗವು ಅಪಾಯಕಾರಿಯಾಗಿದ್ದು, ಚಾಲಕನಿಗೆ ಹಾಗೂ ಇತರರಿಗೆ ಸಂಕಷ್ಟವನ್ನುಂಟು ಮಾಡಬಲ್ಲದು.

Most Read Articles
 

Kannada
English summary
Tesla Model X driver puts car to auto pilot mode and makes video. Read in Kannada.
Story first published: Friday, October 2, 2020, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X