ಭಾರತೀಯ ಕಳ್ಳರ 10 ಫೇವರಿಟ್ ಗಾಡಿಗಳು

Written By:

ನಿಮ್ಮ ಬಳಿ ಮಾರುತಿ 800 ಅಥವಾ ಮಹೀಂದ್ರ ಸ್ಕಾರ್ಪಿಯೊ ಕಾರುಗಳಿವೇ? ಹಾಗಿದ್ದಲ್ಲಿ ತಡ ರಾತ್ರಿಯಲ್ಲೂ ಪದೇ ಪದೇ ಎದ್ದು ನಿಮ್ಮ ಮನೆ ಗ್ಯಾರೇಜ್ ನಲ್ಲಿ ಕಾರು ಇದೆಯೇ ಎಂಬುದನ್ನು ಪರಿಶೀಲಿಸುವುದು ಒಳ್ಳೆಯದು. ಯಾಕೆಂದರೆ ಮುಂಬೈ ಪೊಲೀಸ್ ಬಿಡುಗಡೆ ಮಾಡಿರುವ ತಾಜಾ ವರದಿಯ ಪ್ರಕಾರ ಕಳ್ಳರಿಗೆ ಮಹೀಂದ್ರ ಹಾಗೂ ಮಾರುತಿ ಬ್ರಾಂಡ್ ಗಳೆಂದರೆ ಹೆಚ್ಚು ಪ್ರಿಯವಂತೆ!

Also Read: ಮುಂಬೈನಲ್ಲಿ ಲಿಮೊ ಹೋಲುವ 2 ಅಕ್ರಮ ಸ್ಕಾರ್ಪಿಯೊ ಕಾರುಗಳು ಜಫ್ತಿ

ಹಾಗಾಗಿ ಯಾವಾಗ ಬೇಕಾದರೂ ಕಾರು ಕಳ್ಳತನವಾಗುವ ಆತಂಕ ಕಾಡಲಿದೆ. ಪ್ರಸ್ತುತ ಲೇಖನದಲ್ಲಿ ದೇಶದಲ್ಲಿ ಅತಿ ಹೆಚ್ಚು ಕಳವಾಗುತ್ತಿರುವ ಟಾಪ್ 10 ಕಾರುಗಳ ಬಗ್ಗೆ ವಿವರಣೆಯನ್ನು ನೀಡುವ ಪ್ರಯತ್ನ ಮಾಡಲಿದ್ದೇವೆ. ನಿಮ್ಮ ಬಳಿಯೂ ಈ ಎಲ್ಲ ಕಾರುಗಳಿದ್ದರೆ ಸ್ವಲ್ಪ ಎಚ್ಚರ ವಹಿಸುವುದು ಒಳಿತು.

ಮಹೀಂದ್ರ ಸ್ಕಾರ್ಪಿಯೊ

ಮಹೀಂದ್ರ ಸ್ಕಾರ್ಪಿಯೊ

ಮಹೀಂದ್ರ ಸ್ಕಾರ್ಪಿಯೊ ದೇಶದ ನೆಚ್ಚಿನ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಎಂಬುದರಲ್ಲಿ ಸಂಶಯವೇ ಇಲ್ಲ. ಕಳ್ಳರ ಪಾಲಿಗೂ ಸ್ಕಾರ್ಪಿಯೊ ಅಂದರೆ ತುಂಬಾನೇ ಇಷ್ಟ. 2011ರಲ್ಲಿ 133 ಸ್ಕಾರ್ಪಿಯೊ ಕಾರುಗಳು ಕಳವಾಗಿದ್ದಲ್ಲಿ ಕಳೆದ ವರ್ಷ ಈ ಸಂಖ್ಯೆ 148ಕ್ಕೆ ಏರಿಕೆಯಾಗಿತ್ತು.

ಷೆವರ್ಲೆ ತವೆರಾ

ಷೆವರ್ಲೆ ತವೆರಾ

ಷೆವರ್ಲೆ ತವೆರಾ ಬಹು ಬಳಕೆಯ ವಾಹನವು (ಎಂಪಿವಿ) ಭಾರತದಲ್ಲಿ ಹೆಚ್ಚಿನ ಜನಪ್ರಿಯತೆ ಸಾಧಿಸಿದ್ದಷ್ಟೇ ಅಲ್ಲದೆ ಕಳ್ಳರಿಗೂ ಫೇವರಿಟ್ ಗಾಡಿ ಎನಿಸಿಕೊಂಡಿದೆ.

ಮಹೀಂದ್ರ ಬೊಲೆರೊ

ಮಹೀಂದ್ರ ಬೊಲೆರೊ

2000ನೇ ಇಸವಿಯಲ್ಲಿ ಮೊದಲ ಬಾರಿಗೆ ಎಂಟ್ರಿ ಕೊಟ್ಟಿರುವ ಮಹೀಂದ್ರ ಬೊಲೆರೊ ಅತ್ಯುತ್ತಮ ನಿರ್ವಹಣೆ ಹಾಗೂ ಪರಿಣಾಮಕಾರಿ ಇಂಧನ ಕ್ಷಮತೆಯನ್ನು ಕಾಯ್ದುಕೊಂಡಿದೆ. ಇದೇ ಕಾರಣಕ್ಕಾಗಿ ಚೋರರ ನೆಚ್ಚಿನ ಗಾಡಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ.

ಹ್ಯುಂಡೈ ಸ್ಯಾಂಟ್ರೊ

ಹ್ಯುಂಡೈ ಸ್ಯಾಂಟ್ರೊ

1997ನೇ ಇಸವಿಯಲ್ಲಿ ಭಾರತ ಮಾರುಕಟ್ಟೆಗೆ ಪ್ರವೇಶಿಸಿದ್ದ ಹ್ಯುಂಡೈ ಸ್ಯಾಂಟ್ರೊ ಕ್ಸಿಂಗ್ ಸಣ್ಣ ಕಾರಿನ ನಿರ್ಮಾಣವನ್ನು ಹ್ಯುಂಡೈ ಸ್ಥಗಿತಗೊಳಿಸಿರಬಹುದು. ಹಾಗಿದ್ದರೂ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಭರ್ಜರಿ ಸೇಲ್ಸ್‌ನಲ್ಲಿರುವ ಈ ಚೊಕ್ಕದಾದ ಕಾರು ಕಳ್ಳರ ಪಾಲಿಗೂ ಹೆಚ್ಚು ಪ್ರಿಯವೆನಿಸಿದೆ.

ಟೊಯೊಟಾ ಕ್ವಾಲಿಸ್

ಟೊಯೊಟಾ ಕ್ವಾಲಿಸ್

ಟೊಯೊಟಾದ ಮಗದೊಂದು ಕಾರು ಕ್ವಾಲಿಸ್ ಸಹ ದೇಶದಲ್ಲಿ ಕಳವಾಗುತ್ತಿರುವ ಕಾರುಗಳಲ್ಲಿ ಟಾಪ್ 10 ಪಟ್ಟಿಯಲ್ಲಿದೆ.

ಹೋಂಡಾ ಸಿಟಿ

ಹೋಂಡಾ ಸಿಟಿ

ಸೆಡಾನ್ ಕಾರುಗಳ ಪೈಕಿ ಹೆಚ್ಚಿನ ಮಾರಾಟವನ್ನು ಕಾಯ್ದುಕೊಂಡಿರುವ ಹೋಂಡಾ ಸಿಟಿ ಕೂಡಾ ಕಳ್ಳರ ಮನೆ ಮಾತಾಗಿದೆ.

ಟಾಟಾ ಇಂಡಿಕಾ

ಟಾಟಾ ಇಂಡಿಕಾ

ದೇಶದ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಪಾರುಪತ್ಯ ಮೆರೆದಿರುವ ಟಾಟಾ ಇಂಡಿಕಾ ಸಹ ಚೋರರ ಹಿಟ್ ಲಿಸ್ಟ್ ನಲ್ಲಿ ಕಾಣಿಸಿಕೊಂಡಿದೆ.

ಮಾರುತಿ ಎಸ್ಟೀಮ್

ಮಾರುತಿ ಎಸ್ಟೀಮ್

ಎಸ್ಟೀಮ್ ನಿರ್ಮಾಣ ಕೊನೆಗೊಂಡಿದ್ದರೂ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಈಗಲೂ ಹೆಚ್ಚಿನ ಬೇಡಿಕೆಯನ್ನು ಕಾಯ್ದುಕೊಂಡಿದೆ. ಇದೇ ಕಾರಣಕ್ಕಾಗಿ ಕಳ್ಳರ ಫೇವರಿಟ್ ಎನಿಸಿಕೊಂಡಿದೆ.

ಮಾರುತಿ ಸುಜುಕಿ 800

ಮಾರುತಿ ಸುಜುಕಿ 800

ಮಾರುತಿಯ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದಾಗಿರುವ ಮಾರುತಿ 800 ಕಳೆದೆರಡು ದಶಕದಿಂದಲೂ ವಾಹನ ಪ್ರೇಮಿಗಳ ನೆಚ್ಚಿನ ಕಾರೆನಿಸಿಕೊಂಡಿದೆ. ಮುಂಬೈ ಪೊಲೀಸರ ಪ್ರಕಾರ ಮಾರುತಿ 800 ಅತಿ ಹೆಚ್ಚು ಕಳ್ಳತನವಾಗುತ್ತಿದೆ.

ಟ್ಯಾಕ್ಸಿಗಳು

ಟ್ಯಾಕ್ಸಿಗಳು

ಅಂಬಾಸಿಡರ್ ಹಾಗೂ ಪ್ರೀಮಿಯರ್ ಪದ್ಮಿನಿಗಳಂತಹ ಟ್ಯಾಕ್ಸಿ ಕಾರುಗಳನ್ನು ಈಗಲೂ ಕಳ್ಳರು ಹೈಜಾಕ್ ಮಾಡುತ್ತಿದ್ದಾರೆ ಎಂಬ ಬೆಚ್ಚಿ ಬೀಳಿಸುವ ಸತ್ಯವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

ಭಾರತೀಯ ಕಳ್ಳರ 10 ಫೇವರಿಟ್ ಗಾಡಿಗಳು

ಕಾರು ಕದಿಯುವ ಕಳ್ಳರಿಗೂ ಫೇವರಿಟ್ ಕಾರುಗಳಿವೆಯೇ ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

ಇವನ್ನೂ ಓದಿ

ಕೇರ್ ಲೆಸ್ ಚಾಲಕರ 10 ಫೇಮಸ್ ಗಾಡಿಗಳು

English summary
Top ten most stolen cars in India
Story first published: Wednesday, January 27, 2016, 11:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark