Just In
- 1 hr ago
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- 1 hr ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 2 hrs ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- 3 hrs ago
13 ಉದ್ಯೋಗಿಗಳಿಗೆ ಹೊಸ ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಂಪನಿ
Don't Miss!
- Lifestyle
ಮಾಘ ಪೂರ್ಣಿಮೆ: ಮಾಘ ಸ್ನಾನ ಯಾವಾಗ? ಈ ಸ್ನಾನದ ಮಹತ್ವವೇನು ಗೊತ್ತಾ?
- News
ಒಂದು ವಾರದಲ್ಲಿ ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಬಾಂಡ್ ಪಡೆಯದ ಬ್ಯಾಂಕರ್ಗಳು, ಕುಸಿದ ಷೇರುಗಳು-ಮಂದೇನು ಕಾದಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Movies
Sathya: ದಿವ್ಯಾ ಹೇಳಿದ ಸುಳ್ಳಿನಿಂದ ಸಂಕಷ್ಟಕ್ಕೆ ಸಿಲುಕಿದ ಬಾಲ
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೆಂಗಳೂರಿನಲ್ಲಿ ಎಲ್ಲರಿಗೂ ಒಂದೇ ನ್ಯಾಯ: ಹಾಫ್ ಹೆಲ್ಮೆಟ್ ಧರಿಸಿದ ಪೊಲೀಸ್‍ಗೆ ಬಿತ್ತು ದಂಡ
ಭಾರತದಲ್ಲಿ ವಾಹನ ಅಪಘಾತಗಳಲ್ಲಿ ಸಾವು ನೋವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.ಇದರಿಂದ ಸುರಕ್ಷಿತ ವಾಹನ ಚಾಲನೆಗಾಗಿ ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದೆ.

ದ್ವಿ-ಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಪೂರ್ತಿ ಮುಖ ಮುಚ್ಚದ ಹಾಫ್ ಹೆಲ್ಮೆಟ್, ಐಎಸ್‌ಐ ಮಾರ್ಕ್ ಇರದ ಕಳಪೆ ಹೆಲ್ಮೆಟ್ ಧರಿಸುವುದನ್ನು ನಿಷೇಧ ಮಾಡಿದೆ. ದ್ವಿ-ಚಕ್ರ ವಾಹನ ಸವಾರರು ಫುಲ್ ಸೈಜ್ ಹೆಲ್ಮೆಟ್ ಬಳಸಬೇಕು. ಆದರೂ ಕೆಲವು ದ್ವಿ-ಚಕ್ರ ವಾಹನ ಸವಾರರು ಇನ್ನೂ ಕೂಡ ಹಾಫ್ ಹೆಲ್ಮೆಟ್ ಧರಿಸುತ್ತಾರೆ. ಇದರಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಹಾಫ್ ಹೆಲ್ಮೆಟ್ ಬಳಕೆ ಮಾಡುತ್ತಿರುವ ದ್ವಿ-ಚಕ್ರ ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದಾರೆ.

ವಾಹನ ಸವಾರರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋದು ಹೊಸದಲ್ಲ. ಆದರೆ ಇಲ್ಲಿ ಪೊಲೀಸ್ ಅದಿಕಾರಿಯೇ ನಿಯಮ ಉಲ್ಲಂಘಿಸಿದ್ದಾರೆ. ಹಾಫ್ ಹೆಲ್ಮೆಟ್ ಧರಿಸಿದ್ದ ಪೊಲೀಸ್ ಕಾನ್‌ಸ್ಟೇಬಲ್‌ಗೆ ಆರ್.ಟಿ.ನಗರ ಸಂಚಾರ ಠಾಣೆ ಪೊಲೀಸರು ಮಂಗಳವಾರ ದಂಡ ವಿಧಿಸಿದ್ದಾರೆ. ಈ ಪ್ರಕರಣವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಯಾಗುತ್ತಿದೆ.

ನಗರ ಪೊಲೀಸ್ ಆಯುಕ್ತ ಕಚೇರಿಯ ಕಾನ್‌ಸ್ಟೇಬಲ್‌ಗೆ ದಂಡದ ವಿಧಿಸಲಾಗಿದೆ. ಹಾಫ್ ಹೆಲ್ಮಟ್ ಧರಿಸಿ ಸ್ಕೂಟರ್ ನಲ್ಲಿ ಯಮಹಲ್ ರಸ್ತೆಯಲ್ಲಿ ತೆರಳುವಾಗ ಆರ್.ಟಿ.ನಗರ ಸಂಚಾರ ಠಾಣೆ ಎಎಸ್‌ಐ ಸತ್ಯನಾರಾಯಣ ದಂಡ ವಿಧಿಸಿದ್ದಾರೆ. ಈ ಬಗ್ಗೆ ಫೋಟೋ ಸಹಿತ ಆರ್.ಟಿ.ನಗರ ಸಂಚಾರ ಪೊಲೀಸರು ಟ್ವಿಟ್ ಮಾಡಿದ್ದಾರೆ. ಅನೇಕರು ಇದಕ್ಕೆ ರೀ ಟ್ವೀಟ್ ಮಾಡಿದ್ದಾರೆ

ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಕೆಲಸವನ್ನು ಇನ್ನು ಹೆಚ್ಚಾಗಿ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಕೆಲವು ಅವರು ದಂಡದ ಚಲನ್ ಸ್ವೀಕರಿಸುವಾಗ ನಗುತ್ತಿದ್ದಾರೆ. ಸಂತೋಷದಿಂದ ಸ್ವೀಕರಿಸುತ್ತಿದ್ದರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಕೆಲವರು ಈ ಪೊಲೀಸ್ ಪೆದೆಯ ಇನ್ನು ಹಲವು ಟ್ರಾಫಿಕ್ ನಿಯಮ ಉಲಂಘಿಸಿ ದಂಡ ಕಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುವುದರಿಂದ ಅಪಘಾತದ ವೇಳೆ ಸವಾರರು ಮೃತ ಪಡುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಈ ಹಾಫ್ ಹೆಲ್ಮೆಟ್‌ಗಳು ತಲೆಗೆ ಸರಿಯಾಗಿ ರಕ್ಷಣೆ ಒದಗಿಸುವುದಿಲ್ಲ. ಹೀಗಾಗಿ ಅಪಘಾತದ ವೇಳೆ ತಲೆಗೆ ತೀವ್ರ ಪೆಟ್ಟಾಗಿ ಸವಾರರು ಸಾವಿಗೀಡಾಗುವ ಪ್ರಕರಣಗಳು ಹೆಚ್ಚುತ್ತಿದೆ. ಹಾಗಾಗಿ ಐಎಸ್‌ಐ ಮಾರ್ಕ್ ಇಲ್ಲದ, ಕಳಪೆ ಗುಣಮಟ್ಟದ ಹೆಲ್ಮೆಟ್ ಅನ್ನು ನಿಷೇಧಿಸಿದೆ. ಇದರಿಂದ ಫುಲ್ ಸೈಜ್ ಹೆಲ್ಮೆಟ್ ಬಳಿಸಿ.

ಇನ್ನು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೈಟೆಕ್ ಟೆಕ್ನಾಲಜಿ ಬಳಸಿ ದಂಡ ಪ್ರಕ್ರಿಯೆಯನ್ನು ಮತ್ತಷ್ಟು ತ್ವರಿತಗೊಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನದ ಮಾಲೀಕರ ಮೊಬೈಲ್'ಗೆ ಉಲ್ಲಂಘನೆಯ ಮಾಹಿತಿ ಫೋಟೋ ಸಹಿತ ಮೆಸೇಜ್ ಬರಲಿದೆ.

ಇತ್ತೀಚೆಗೆ ಯೂವಕನೊಬ್ಬ ಟ್ರಾಫಿಕ್ ದಂಡದ ಮೆಸೇಜ್ ಬಂದಾಗ ಬೆಂಗಳೂರು ಟ್ರಾಫಿಕ್ ಪೊಲೀಸರ ಬಳಿ ಪುರಾವೆ ಕೇಳಿದ ಘಟನೆ ನಡೆದಿದೆ. ಯೂವಕನೊಬ್ಬ ಟ್ವೀಟ್ ಮಾಡಿ ಬೆಂಗಳೂರು ಪೊಲೀಸ್ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸ್ ಎಂದು ಟ್ಯಾಗ್ ಮಾಡಿದ್ದಾನೆ. ಟ್ವೀಟ್ ನಲ್ಲಿ ಯುವ ಹೆಲ್ಮೆಟ್ ಧರಿಸಿಲ್ಲ ಎಂಬುದಕ್ಕೆ ಸರಿಯಾದ ಪುರಾವೆ ಇಲ್ಲ ಎಂದು ಹೇಳಲಾಗಿದೆ.

ಅವರು ಬೆಂಗಳೂರು ಪೊಲೀಸರಿಗೆ ಸಾಕ್ಷ್ಯವನ್ನು ಒದಗಿಸಿ ಅಥವಾ ಚಲನ್ ಅನ್ನು ತೆಗೆದುಹಾಕಬೇಕು. ಈ ಹಿಂದೆಯೂ ಇದೇ ರೀತಿಯ ಘಟನೆ ನಡೆದಿತ್ತು ಆದರೆ ಯಾವುದೇ ಪ್ರಶ್ನೆ ಕೇಳದೆ ಚಲನ್ ಪಾವತಿಸಿದ್ದೇನೆ. ಈ ಬಾರಿ ಪುರಾವೆ ಇಲ್ಲದೆ ಚಲನ್ ಪಾವತಿಸುವುದಿಲ್ಲವೆಂದು ಬರೆದುಕೊಂಡಿದ್ದಾನೆ, ಕರ್ನಾಟಕದಲ್ಲಿ ಕಾರಿನ ಹಿಂಬದಿ ಪ್ರಯಾಣಿಕರಿಗೂ ಸೀಟ್‌ಬೆಲ್ಟ್ ಕಡ್ಡಾಯ: ಉಲ್ಲಂಘಿಸಿದರೆ ಸಾವಿರ ರೂ. ದಂಡ

ಟ್ವೀಟ್‌ನಲ್ಲಿ, ಮಾಲೀಕನು ತಾನು ಸವಾರಿ ಮಾಡುತ್ತಿದ್ದ ಹೋಂಡಾ ಆಕ್ಟಿವಾ ನೋಂದಣಿ ಫಲಕದ ಚಿತ್ರವನ್ನು ಸೇರಿಸಿದ್ದಾರೆ. ಆದರೆ, ಸವಾರನ ಚಿತ್ರವಿರಲಿಲ್ಲ. ಈ ಟ್ವಿಟ್'ಗೆ ಬೆಂಗಳೂರು ಪೊಲೀಸರು ಸರಳವಾಗಿ ಸಂಪೂರ್ಣ ಚಿತ್ರವನ್ನು ಅಪ್ಲೋಡ್ ಮಾಡಿ ಉತ್ತರ ನೀಡಿದರು.

ಸಂಪೂರ್ಣ ಚಿತ್ರದಲ್ಲಿ ಟ್ರಾಫಿಕ್‌ನಲ್ಲಿ ಹೆಲ್ಮೆಟ್ ಇಲ್ಲದೆ ಸವಾರನನ್ನು ಸ್ಪಷ್ಟವಾಗಿ ಕಾಣಿಸುತ್ತಾನೆ. ಹೋಂಡಾ ಆಕ್ಟಿವಾ ನೋಂದಣಿ ಸಂಖ್ಯೆಯನ್ನು ಮಾತ್ರ ಹಂಚಿಕೊಳ್ಳಲು ಬೆಂಗಳೂರು ಪೊಲೀಸರು ಚಿತ್ರವನ್ನು ಕ್ರಾಪ್ ಮಾಡಿದ್ದರು. ಮಾಲೀಕರ ಕೋರಿಕೆಯ ಮೇರೆಗೆ ಅವರು ಸಂಪೂರ್ಣ ಚಿತ್ರವನ್ನು ಅಪ್‌ಲೋಡ್ ಮಾಡಿದರು.

ಬೆಂಗಳೂರು ಟ್ರಾಫಿಕ್ ಪೊಲೀಸರು ನೀಡಿದ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಬಳಿಕ ಸ್ಕೂಟರ್ ಮಾಲೀಕ ಯಾವುದಕ್ಕೂ ಉತ್ತರ ನೀಡಿಲ್ಲ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಸಾಕಷ್ಟು ಟ್ರೋಲ್ ಆಗುತ್ತಿದಂತೆ ಯುವಕ ಪೋಸ್ಟ್ ಡೀಲಿಟ್ ಮಾಡಿದ್ಡಾನೆ.

ಸೋಷಿಯಲ್ ಮೀಡಿಯಾ ನಮ್ಮ ಜೀವನದ ಭಾಗವಾಗಿರುವುದರಿಂದ, ಪೊಲೀಸ್ ಇಲಾಖೆಗಳು ಅವುಗಳಲ್ಲಿ ಸಕ್ರಿಯ ಪುಟಗಳನ್ನು ಹೊಂದಿವೆ. ಈ ಪ್ರಕರಣದಂತಹ ಯಾವುದೇ ಉಲ್ಲಂಘನೆಗಳು ಕಂಡುಬಂದಲ್ಲಿ ಜನರು ನೇರವಾಗಿ ಯಾವುದೇ ದೂರನ್ನು ಆನ್‌ಲೈನ್‌ನಲ್ಲಿ ವರದಿ ಮಾಡಬಹುದಾಗಿದೆ.

ಈ ವಿಧಾನದ ಉತ್ತಮ ವಿಷಯವೆಂದರೆ ಈ ಹೆಚ್ಚಿನ ಪುಟಗಳು ಸಕ್ರಿಯವಾಗಿವೆ ಮತ್ತು ಸಾರ್ವಜನಿಕವಾಗಿವೆ. ಜನರು ಈ ಪೋಸ್ಟ್‌ಗಳನ್ನು ನೋಡುತ್ತಾರೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳದೆ ಇಲಾಖೆಗೆ ಬೇರೆ ದಾರಿಯಿಲ್ಲ. ಇನ್ನು ದೇಶಾದ್ಯಂತ ಹೊಸ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕೂಡಾ ಹೆಚ್ಚುತ್ತಿದೆ.

ಹೀಗಾಗಿ ಮೋಟಾರ್ ವೆಹಿಕಲ್ ಕಾಯ್ದೆಗೆ ಕೆಲವು ತಿದ್ದುಪಡಿ ತರಲಾಗಿದ್ದು, ಪ್ರಸ್ತುತ ಇರುವ ದಂಡಗಳ ಮೊತ್ತದಲ್ಲಿ ಭಾರೀ ಪ್ರಮಾಣದ ಹೆಚ್ಚಳ ಮಾಡಲಾಗಿದೆ. ಸಂಚಾರಿ ನಿಯಮಗಳ ಉಲ್ಲಂಘನೆಯಿಂದಾಗಿ ಅಪಘಾತಗಳು ಹೆಚ್ಚುತ್ತಿದ್ದು, ಬೇರೊಬ್ಬರು ಮಾಡುವ ತಪ್ಪಿನಿಂದಾಗಿ ಅಪಘಾತಗಳಲ್ಲಿ ಅಮಾಯಕರೇ ಹೆಚ್ಚು ಜೀವಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ದಂಡದ ಮೊತ್ತಗಳನ್ನು ದುಪ್ಪಟ್ಟು ಮಾಡಲಾಗಿದೆ.