ಪ್ರಧಾನಿ ಮೋದಿ ಕನಸಿನ 'ಟ್ರೈನ್ 18'ನಿಂದ ಹೊಸ ದಾಖಲೆ..!

ರೈಲ್ವೆ ಸೇವೆಗಳಲ್ಲಿ ಭಾರೀ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಸದ್ಯ ಬುಲೆಟ್ ಟ್ರೈನ್ ಸೇರಿದಂತೆ ಹಲವು ಅತ್ಯಾಧುನಿಕ ಸಾರಿಗೆ ಸೌಲಭ್ಯಗಳನ್ನು ಆರಂಭಿಸುವ ಗುರಿಹೊಂದಿದೆ. ಇದರಲ್ಲಿ ಸದ್ಯಕ್ಕೆ ಹಳಿಗಿಳಿಯಲು ಸಜ್ಜಾಗಿರುವ ಟ್ರೈನ್ 18 ಹೆಸರಿನ ರೈಲು ಮಾದರಿಯು ಪರೀಕ್ಷಾರ್ಥ ಸಂದರ್ಭದಲ್ಲಿ ಇದುವರೆಗೂ ದೇಶದ ಅತಿ ವೇಗದ ರೈಲು ಎನ್ನಿಸಿಕೊಂಡಿದ್ದ ಶತಾಬ್ದಿ ಎಕ್ಸ್‌ಪ್ರೆಸ್ ಅನ್ನು ಕೂಡಾ ಹಿಂದಿಕ್ಕಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18'ನಿಂದ ಹೊಸ ದಾಖಲೆ..!

ಹೌದು, ದೇಶದ ಆಧುನಿಕ ಎಂಜಿನ್ ರಹಿತ ರೈಲು ಎಂಬ ಖ್ಯಾತಿ ಹೊಂದಿರುವ ಟ್ರೈನ್-18 ತನ್ನ ಸ್ಪೀಡ್ ಗೆ ಸಂಬಂಧಿಸಿದಂತೆ ಭಾನುವಾರದಂದು ಹೊಸ ದಾಖಲೆ ನಿರ್ಮಿಸಿದ್ದು, ಪರೀಕ್ಷಾರ್ಥ ಸಂಚಾರದ ವೇಳೆ ಗಂಟೆಗೆ ಬರೋಬ್ಬರಿ 180 ಕಿ.ಮೀ ವೇಗದಲ್ಲಿ ಚಲಿಸುವ ಮೂಲಕ ಆಧುನಿಕ ತಂತ್ರಜ್ಞಾನದ ಹೊಸ ಆವಿಷ್ಕಾರಕ್ಕೆ ಮತ್ತೊಂದು ಮುನ್ನುಡಿ ಬರೆದಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18'ನಿಂದ ಹೊಸ ದಾಖಲೆ..!

ಕೋಟಾ ಮತ್ತು ರಾಜಸ್ತಾನದ ಸವಾಯಿ ಮಾಧೋಪುರ ನಡುವಿನ ರೈಲು ಮಾರ್ಗದಲ್ಲಿ ನಡೆದ 2ನೇ ಪರೀಕ್ಷಾರ್ಥ ಸಂಚಾರದಲ್ಲಿ ಟ್ರೈನ್ 18 ಟ್ರೈನ್ ಗಂಟೆಗೆ 180 ಕಿಮಿ ವೇಗದಲ್ಲಿ ಚಲಿಸಿದ್ದು, ಸಂಪೂರ್ಣವಾಗಿ ಸ್ವದೇಶದಲ್ಲಿ ತಯಾರಾದ ರೈಲು ಇಷ್ಟು ವೇಗದಲ್ಲಿ ಸಂಚರಿಸಿರುವುದು ಇದೇ ಮೊದಲು.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18'ನಿಂದ ಹೊಸ ದಾಖಲೆ..!

ಸದ್ಯ ಶತಾಬ್ದಿ ಎಕ್ಸ್​​ಪ್ರೆಸ್ ರೈಲು ಪ್ರತಿ ಗಂಟೆಗೆ 130 ಕಿ.ಮಿ ವೇಗದೊಂದಿಗೆ ಭಾರತದಲ್ಲಿರುವ ಚಲಿಸುತ್ತಿರುವ ಅತಿ ವೇಗದ ರೈಲು ಎನ್ನುವ ಖ್ಯಾತಿ ಹೊಂದಿದ್ದು, ಇದೀಗ ಟ್ರೈನ್ 18 ರೈಲು ಗಂಟೆಗೆ ಸರಾಸರಿ 180 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯದೊಂದಿಗೆ ಶತಾಬ್ದಿ ರೈಲನ್ನು ಹಿಂದಿಕ್ಕಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18'ನಿಂದ ಹೊಸ ದಾಖಲೆ..!

ಈ ಮೂಲಕ ದೇಶದಲ್ಲಿ ವೇಗದ ರೈಲು ಎನ್ನುವ ಖ್ಯಾತಿಗೆ ಪಾತ್ರವಾದ ಟ್ರೈನ್ 18 ಮಾದರಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಕೊನೆಯ ಹಂತದ ಮತ್ತಷ್ಟು ಪರೀಕ್ಷಾರ್ಥ ಕಾರ್ಯಗಳ ನಂತರ ಹೊಸ ರೈಲಿನ ಅಧಿಕೃತ ಸೇವೆಗೆ ಚಾಲನೆ ಸಿಗಲಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18'ನಿಂದ ಹೊಸ ದಾಖಲೆ..!

18 ತಿಂಗಳಿನಲ್ಲಿ ನಿರ್ಮಾಣ!

ಕೇವಲ 18 ತಿಂಗಳಿನಲ್ಲಿ ಸಿದ್ದವಾಗಿರುವ ಈ ಸ್ವದೇಶಿ ನಿರ್ಮಿತ ವೇಗ ರೈಲು ಮಾದರಿಯು ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್)ನಲ್ಲಿ ನಿರ್ಮಾಣ ಮಾಡಲಾಗಿದ್ದು, ಹೊಸ ರೈಲು ನಿರ್ಮಾಣದ ಹೊಣೆ ಹೊತ್ತಿದ್ದ ಜನರಲ್ ಮ್ಯಾನೇಜರ್ ಎಸ್.ಮಣಿ ಮತ್ತು ಅವರ ತಂಡ ನೀರಿಕ್ಷೆಗೂ ಮೀರಿ ಹೊಸ ರೈಲು ಮಾದರಿಯನ್ನು ಸಿದ್ದಗೊಳಿಸಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18'ನಿಂದ ಹೊಸ ದಾಖಲೆ..!

ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಹೊಸ ರೈಲು ಎಂಜಿನ್ ರಹಿತವಾಗಿದ್ದು, ಬುಲೆಟ್ ರೈಲು ಮಾದರಿಯಲ್ಲೇ ಇದನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ಟ್ರೈನ್ 18ನಲ್ಲಿ ಪ್ರತ್ಯೇಕ ಎಂಜಿನ್ ಬದಲಾಗಿ ಮೆಟ್ರೋ ರೈಲು ಮಾದರಿಯಲ್ಲಿ ಬೋಗಿಯ ಕೆಳಗಡೆಯೇ ಎಂಜಿನ್ ಜೋಡಣೆ ಮಾಡಲಾಗಿರುತ್ತೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18'ನಿಂದ ಹೊಸ ದಾಖಲೆ..!

ಈ ಹೊಸ ರೈಲಿನಲ್ಲಿ ಒಟ್ಟು 16 ಬೋಗಿಗಳಿದ್ದು, ಇವುಗಲ್ಲಿ 52 ಆಸನಗಳ ಹೊಂದಿರುವ ಎರಡು ಎಕ್ಸಿಕ್ಯುಟಿವ್‌ ಬೋಗಿಗಳನ್ನು ನೀಡಲಾಗಿದೆ. ಉಳಿದವು 78 ಆಸನಗಳ ಸಾಮಾನ್ಯ ಬೋಗಿಗಳಿದ್ದು, ಸಂಪೂರ್ಣ ಹವಾನಿಯಂತ್ರಣ, ಸಿಸಿಟಿವಿ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ಫಲಕ, ಸ್ವಯಂ ಚಾಲಿತ ಬಾಗಿಲು ಸೌಲಭ್ಯ ಪಡೆದಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18'ನಿಂದ ಹೊಸ ದಾಖಲೆ..!

ಹಾಗೆಯೇ ಪ್ರತಿ ಎರಡು ಬೋಗಿಗಳ ನಡುವೆ ಮೋಟಾರೈಸ್ಡ್ ಎಂಜಿನ್ ಅಳವಡಿಕೆ ಮಾಡಿರುವುದಿಂದ ರೈಲು ಅತಿ ವೇಗವಾಗಿ ಚಲಿಸಲು ಸಾಧ್ಯವಾಗಿದೆ. ಜೊತೆಗೆ ಕ್ಷಣಾರ್ಧದಲ್ಲಿ ನಿಲ್ಲುವ ಸಾಮರ್ಥ್ಯವನ್ನೂ ಕೂಡಾ ಹೊಂದಿದ್ದು, ಆಗಬಹುದಾದ ರೈಲು ದುರಂತಗಳಿಗೆ ಇದರಿಂದ ತಪ್ಪಿಸಬಹುದಾಗಿದೆ.

MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18'ನಿಂದ ಹೊಸ ದಾಖಲೆ..!

ಇದಲ್ಲದೇ ದೀರ್ಘಾವಧಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ರೈಲಿನಲ್ಲಿ ವಿಶೇಷ ಮನೋರಂಜನಾ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವೈ ಫೈ, ವ್ಯಾಕ್ಯೂಮ್ ಟಾಯ್ಲೆಟ್, ಲಗೇಜ್‌ಗೆ ಪ್ರತ್ಯೇಕ ಜಾಗ ಮೀಸಲು, ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18'ನಿಂದ ಹೊಸ ದಾಖಲೆ..!

ಹೊಸ ರೈಲು ನಿರ್ಮಾಣಕ್ಕೆ 100 ಕೋಟಿ ವೆಚ್ಚ!

ಟ್ರೈನ್ 18 ರೈಲು ಯೋಜನೆಯನ್ನು ಪೂರ್ಣಗೊಳಿಸಲು ಬರೋಬ್ಬರಿ ರೂ. 100 ಕೋಟಿ ಖರ್ಚು ಮಾಡಲಾಗಿದ್ದು, ಅತ್ಯಾಧುನಿಕ ಎಂಜಿನ್ ಮಾದರಿ, ಐಷಾರಾಮಿ ಸೌಲಭ್ಯದಿಂದಾಗಿ ರೈಲು ನಿರ್ಮಾಣದ ಖರ್ಚುಗಳು ತುಸು ದುಬಾರಿಯಾಗಿವೆ ಎನ್ನಬಹುದು.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18'ನಿಂದ ಹೊಸ ದಾಖಲೆ..!

ಆದ್ರೆ ಹೊಸ ರೈಲು ಪ್ರಸ್ತುತ ರೈಲುಗಳ ಓಡಾಟದ ಅವಧಿಗಿಂತಲೂ ಸಾಕಷ್ಟು ಇಳಿಕೆಯಾಗಲಿದ್ದು, ಇದರಲ್ಲಿ ಮುಖ್ಯವಾಗಿ ರೈಲಿನ ಪ್ರಯಾಣದ ವೆಚ್ಚಗಳು ತಗ್ಗುವ ಮೂಲಕ ಹೊಸ ರೈಲಿನಿಂದ ಸಾಕಷ್ಟು ಲಾಭ ಗಳಿಕೆಯಾಗಲಿದೆ.

MOST READ: ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18'ನಿಂದ ಹೊಸ ದಾಖಲೆ..!

ಒಟ್ಟಿನಲ್ಲಿ ಪ್ರಾಯೋಗಿಕ ಓಡಾಟದಲ್ಲೇ ಹೊಸ ನೀರಿಕ್ಷೆ ಹುಟ್ಟುಹಾಕಿರುವ ಟ್ರೈನ್ 18 ಮಾದರಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ವೇಗ ಹೆಚ್ಚಳಗೊಳ್ಳುವ ಸಾಧ್ಯತೆಗಳಿದ್ದು, ರೈಲ್ವೆ ಸಚಿವ ಪಿಯೂಷ್ ಗೋಯಲ್ ಕೂಡಾ ಹೊಸ ರೈಲಿನ ಎಂಜಿನ್ ಕಾರ್ಯಕ್ಷಮತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೋಟಾ ಮತ್ತು ಸವಾಯಿ ಮಾಧೋಪುರ ನಡುವಿನ ಮಾರ್ಗದಲ್ಲಿ ನಡೆಸಲಾದ ಟ್ರೈನ್ 18 ಎಂಜಿನ್ ಕಾರ್ಯಕ್ಷಮತೆ ಕುರಿತಾದ ವಿಡಿಯೋ ಇಲ್ಲಿದೆ ವೀಕ್ಷಿಸಿ.

Most Read Articles

Kannada
Read more on train ರೈಲು
English summary
Train 18 crosses 180 kmph speed limit during test run.
Story first published: Monday, December 3, 2018, 17:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X