ಕೋವಿಡ್ ಕೇರ್ ಕೇಂದ್ರಗಳಾಗಿ ಬದಲಾದ ರೈಲು ಬೋಗಿಗಳು

ದೇಶಾದ್ಯಂತ ಕೋವಿಡ್ 19 ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಖಾಲಿ ಇರುವ ಬೋಗಿಗಳನ್ನು ಕೋವಿಡ್ ಕೇರ್ ಬೋಗಿಗಳಾಗಿ ಪರಿವರ್ತಿಸಿದೆ.

ಕೋವಿಡ್ ಕೇರ್ ಕೇಂದ್ರಗಳಾಗಿ ಬದಲಾದ ರೈಲು ಬೋಗಿಗಳು

ರೈಲ್ವೆ ಇಲಾಖೆಯು ಸುಮಾರು 4000 ಕೋವಿಡ್ ಕೇರ್ ಬೋಗಿಗಳನ್ನು ಪರಿವರ್ತಿಸುತ್ತಿದೆ. ಈ ಮೂಲಕ ಸುಮಾರು 64,000 ಹಾಸಿಗೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇವುಗಳನ್ನು ರಾಜ್ಯ ಸರ್ಕಾರಗಳು ಬಳಸಿಕೊಳ್ಳಬಹುದು. ಸದ್ಯಕ್ಕೆ 169 ಬೋಗಿಗಳನ್ನು ರಾಜ್ಯಗಳಿಗೆ ಹಸ್ತಾಂತರಿಸಲಾಗಿದ್ದು, ಉಳಿದವುಗಳನ್ನು ಸಿದ್ಧಪಡಿಸಲಾಗುತ್ತಿದೆ.

ಕೋವಿಡ್ ಕೇರ್ ಕೇಂದ್ರಗಳಾಗಿ ಬದಲಾದ ರೈಲು ಬೋಗಿಗಳು

ಮಹಾರಾಷ್ಟ್ರದ ನಾಗ್ಪುರದಿಂದ ಹೆಚ್ಚು ಬೇಡಿಕೆ ಬಂದಿದ್ದು, ರೈಲ್ವೆ ಇಲಾಖೆಯು 11 ಬೋಗಿಗಳನ್ನು ತಲುಪಿಸಿದೆ. ಇವುಗಳಲ್ಲಿ ಪ್ರತಿ ಬೋಗಿ 16 ರೋಗಿಗಳ ಸಾಮರ್ಥ್ಯವನ್ನು ಹೊಂದಿದೆ. ಸ್ಲೀಪರ್ ಬೋಗಿಗಳನ್ನು ಬೆಡ್'ಗಳಾಗಿ ಮಾರ್ಪಡಿಸಲಾಗಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕೋವಿಡ್ ಕೇರ್ ಕೇಂದ್ರಗಳಾಗಿ ಬದಲಾದ ರೈಲು ಬೋಗಿಗಳು

ಈ ಬೋಗಿಗಳಲ್ಲಿ ರಾಜ್ಯ ಸರ್ಕಾರಗಳು ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಿದ್ದು, ಸ್ಯಾನಿಟೈಜೇಷನ್ ಹಾಗೂ ಅಡುಗೆ ವ್ಯವಸ್ಥೆ ಕೂಡ ಮಾಡಲಾಗುವುದು. ಇದರ ಜೊತೆಗೆ ಮಹಾರಾಷ್ಟ್ರದ ಅಜ್ನಿ ಐಸಿಡಿ ಪ್ರದೇಶದಲ್ಲಿ ಐಸೊಲೇಷನ್ ಬೋಗಿ ತಯಾರಿಸಲಾಗುತ್ತಿದೆ.

ಕೋವಿಡ್ ಕೇರ್ ಕೇಂದ್ರಗಳಾಗಿ ಬದಲಾದ ರೈಲು ಬೋಗಿಗಳು

ಮಹಾರಾಷ್ಟ್ರದ ಜೊತೆಗೆ ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರದ ಒಂಬತ್ತು ಮುಖ್ಯ ನಿಲ್ದಾಣಗಳಲ್ಲಿ ಈ ಕೋವಿಡ್ ಕೇರ್ ಬೋಗಿಗಳನ್ನು ಸಿದ್ದಪಡಿಸಲಾಗುತ್ತಿದೆ. ಮಹಾರಾಷ್ಟ್ರದ ನಂದರ್‌ನಲ್ಲಿ ಸದ್ಯಕ್ಕೆ 57 ರೋಗಿಗಳು ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕೋವಿಡ್ ಕೇರ್ ಕೇಂದ್ರಗಳಾಗಿ ಬದಲಾದ ರೈಲು ಬೋಗಿಗಳು

ದೆಹಲಿಯಲ್ಲಿ 75 ಕೋವಿಡ್ ಕೇರ್ ಬೋಗಿಗಳನ್ನು 1200 ಹಾಸಿಗೆಗಳ ಸಾಮರ್ಥ್ಯದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಮಧ್ಯಪ್ರದೇಶದ ರತ್ನಂನಲ್ಲಿ 2, ಇಂದೋರ್‌ನಲ್ಲಿ 20 ಬೋಗಿಗಳನ್ನು ಸಿದ್ಧಪಡಿಸಲಾಗಿದೆ.

ಕೋವಿಡ್ ಕೇರ್ ಕೇಂದ್ರಗಳಾಗಿ ಬದಲಾದ ರೈಲು ಬೋಗಿಗಳು

ಉತ್ತರ ಪ್ರದೇಶದಲ್ಲಿ 10 ಬೋಗಿಗಳು ಸಿದ್ಧವಾಗಿದ್ದರೂ ಅಲ್ಲಿನ ರಾಜ್ಯ ಸರ್ಕಾರ ಇದನ್ನು ಬಳಸುತ್ತಿಲ್ಲ. ಈ ರೈಲ್ವೆ ಬೋಗಿ‌ಗಳಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳನ್ನುವಿನ್ಯಾಸಗೊಳಿಸಲಾಗಿರುವುದರಿಂದ ಕೈಗಳನ್ನು ಬಳಸುವ ಅವಶ್ಯಕತೆಯಿಲ್ಲ.

MOST

READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕೋವಿಡ್ ಕೇರ್ ಕೇಂದ್ರಗಳಾಗಿ ಬದಲಾದ ರೈಲು ಬೋಗಿಗಳು

ಈ ಆಧುನಿಕ ಬೋಗಿಗಳನ್ನು ಸಿದ್ದಪಡಿಸುವ ಸಂದರ್ಭದಲ್ಲಿಯೂ ಸಿಬ್ಬಂದಿಗಳು ಸಾಮಾಜಿಕ ಅಂತರವನ್ನು ಅನುಸರಿಸಿದ್ದಾರೆ. ಜೊತೆಗೆ ಸ್ಯಾನಿಟೈಜೇಷನ್ ಸಹ ಮಾಡಲಾಗಿದೆ. ಕೋವಿಡ್ 19ರ ನಂತರವೂ ರೈಲ್ವೆ ಇಲಾಖೆಯು ಇದೇ ರೀತಿಯ ಪ್ರಯಾಣಕ್ಕೆ ಆದ್ಯತೆ ನೀಡುವ ನಿರೀಕ್ಷೆಗಳಿವೆ.

ಕೋವಿಡ್ ಕೇರ್ ಕೇಂದ್ರಗಳಾಗಿ ಬದಲಾದ ರೈಲು ಬೋಗಿಗಳು

ಕಳೆದ ವರ್ಷವೂ ಕರೋನಾ ಸೋಂಕಿತರಿಗಾಗಿ ಇದೇ ರೀತಿ ಸಾವಿರಾರು ರೈಲು ಬೋಗಿಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ ಅವುಗಳ ಪೈಕಿ ಕೆಲವನ್ನು ಮಾತ್ರ ಬಳಸಲಾಗಿತ್ತು. ಈಗ ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರೈಲು ಬೋಗಿಗಳನ್ನು ಮತ್ತೆ ಸಿದ್ದಪಡಿಸಲಾಗಿದೆ.

Most Read Articles

Kannada
English summary
Train coaches converted as covid care centers. Read in Kannada.
Story first published: Wednesday, April 28, 2021, 9:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X