ಟರ್ಕಿ ಹೆಲಿಕಾಪ್ಟರ್ ಹೊಡೆದುರುಳಿಸಿದ ಕುರ್ದಿಶ್ ಉಗ್ರರು (ವಿಡಿಯೋ)

Written By:

ಟರ್ಕಿ ಮತ್ತು ಕುರ್ದಿಸ್ತಾನ್ ಗಡಿ ರೇಖಾ ಪ್ರದೇಶದಲ್ಲಿ ನಿರಂತರ ಸಂಘರ್ಷಗಳು ನಡೆಯುತ್ತಲೇ ಇದೆ. ಪ್ರಸ್ತುತ ಹೆಲಿಕಾಪ್ಟರ್ ಹೊಡೆದುರುಳಿಸಿರುವ ಘಟನೆಯು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಟರ್ಕಿಯ ಕೋಬ್ರಾ ಹೆಲಿಕಾಪ್ಟರನ್ನು ಮಿಸೈಲ್ ಲಾಂಚರ್ ಬಳಸಿ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿಯ (ಪಿಕೆಕೆ) ಉಗ್ರರು ಹೊಡೆದುರುಳಿಸಿರುವುದು ಉಗ್ಧಿಗ್ನ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದೆ.

To Follow DriveSpark On Facebook, Click The Like Button
ಟರ್ಕಿ ಹೆಲಿಕಾಪ್ಟರ್ ಹೊಡೆದುರುಳಿಸಿದ ಕುರ್ದಿಶ್ ಉಗ್ರರು

ಆಕಾಶದಲ್ಲಿ ಸುತ್ತುವರಿಯುತ್ತಿದ್ದ ಟರ್ಕಿಷ್ ಎಎಚ್-1ಡಬ್ಲ್ಯು ಸೂಪರ್ ಕೋಬ್ರಾ ಹೆಲಿಕಾಪ್ಟರನ್ನು ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿಯ (ಪಿಕೆಕೆ) ಉಗ್ರಗಾಮಿ ಗುರಿ ಮಾಡಿದ್ದನು.

ಟರ್ಕಿ ಹೆಲಿಕಾಪ್ಟರ್ ಹೊಡೆದುರುಳಿಸಿದ ಕುರ್ದಿಶ್ ಉಗ್ರರು

ಕೋಬ್ರಾ ಹೆಲಿಕಾಪ್ಟರನ್ನು ನಿಖರವಾಗಿ ಗುರುತಿಸಿಕೊಂಡಿರುವ ಉಗ್ರಗಾಮಿ ಎಸ್‌ಎ-18 ಮ್ಯಾನ್ ಪ್ಯಾಡ್ ಮಿಸೈಲ್ ಲಾಂಚರ್ ಬಳಕೆ ಮಾಡಿಕೊಂಡು ಹೊಡೆದುರುಳಿಸಿದ್ದಾನೆ.

ಟರ್ಕಿ ಹೆಲಿಕಾಪ್ಟರ್ ಹೊಡೆದುರುಳಿಸಿದ ಕುರ್ದಿಶ್ ಉಗ್ರರು

ಮೇ 13ರಂದು ನಡೆದ ಘಟನೆಯು ಒಂದು ವಾರದ ಬಳಿಕ ಗೆರಿಲ್ಲಾ ಟಿವಿಯಲ್ಲಿ ಪ್ರಸಾರಗೊಂಡಿದೆ. ಸರಿ ಸುಮಾರು ಐದು ನಿಮಿಷಗಳ ಈ ವಿಡಿಯೋ ತುಣುಕು ಆಂತಕದ ಕ್ಷಣಗಳನ್ನು ಬಯಲು ಮಾಡುತ್ತದೆ.

ಟರ್ಕಿ ಹೆಲಿಕಾಪ್ಟರ್ ಹೊಡೆದುರುಳಿಸಿದ ಕುರ್ದಿಶ್ ಉಗ್ರರು

ನೆಲದಿಂದ ಆಕಾಶಕ್ಕೆ ಗುರಿಯಿಡುವ ರಷ್ಯಾ ಮೂಲದ ಮಿಸೈಲ್ ಲಾಂಚರನ್ನು ಕುರ್ದಿಸ್ತಾನ್ ಸೈನಿಕ ಬಳಕೆ ಮಾಡಿದ್ದನು.

ಟರ್ಕಿ ಹೆಲಿಕಾಪ್ಟರ್ ಹೊಡೆದುರುಳಿಸಿದ ಕುರ್ದಿಶ್ ಉಗ್ರರು

ಕಾಡಿನಲ್ಲಿ ಅವಿತಿದ್ದ ಕುರ್ದಿಸ್ತಾನ್ ಉಗ್ರ ಹೆಲಿಕಾಪ್ಟರ್ ಗೆ ಗುರಿಯಿಡುತ್ತಾನೆ. ಇದಾದ ಕ್ಷಣಾರ್ಧದಲ್ಲೇ ಹೆಲಿಕಾಪ್ಟರ್ ಬೆಂಕಿ ಹೊತ್ತಿಕೊಂಡ ಬೆನ್ನಲ್ಲೇ ಚೂರು ಚೂರಾಗಿ ನೆಲಕ್ಕೆ ಪತನಗೊಳ್ಳುತ್ತದೆ.

ಟರ್ಕಿ ಹೆಲಿಕಾಪ್ಟರ್ ಹೊಡೆದುರುಳಿಸಿದ ಕುರ್ದಿಶ್ ಉಗ್ರರು

ಟರ್ಕಿಗೆ ಸೈನಿಕ ಪಡೆದ ಸೇರಿದ ಹೆಲಿಕಾಪ್ಟರ್ ಇದಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಸೇಡು ತೀರಿಸಿಕೊಳ್ಳುವುದು ಖಚಿತವೆನಿಸಿದ್ದು, ಕಾರ್ಯಾಚರಣೆ ತೀವ್ರಗೊಳಿಸಲಿದೆ.

ಟರ್ಕಿ ಹೆಲಿಕಾಪ್ಟರ್ ಹೊಡೆದುರುಳಿಸಿದ ಕುರ್ದಿಶ್ ಉಗ್ರರು

ಯುದ್ಧ ಕಾರ್ಯಾಚರಣೆ ವೇಳೆ ಬೆಂಗಾವಲು ಪಡೆಯಾಗಿ ಕೋಬ್ರಾ ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಲಾಗುತ್ತದೆ. ಟರ್ಕಿಯ ಆಗ್ನೇಯ ಪ್ರದೇಶದ ಪರ್ವತದಲ್ಲಿ ಅತಿ ಹೆಚ್ಚು ಪರಿಣಾಮಕಾರಿ ಎನಿಸಿಕೊಂಡಿದೆ.

ಟರ್ಕಿ ಹೆಲಿಕಾಪ್ಟರ್ ಹೊಡೆದುರುಳಿಸಿದ ಕುರ್ದಿಶ್ ಉಗ್ರರು

ಈಗ ಪ್ರಸ್ತುತ ಘಟನೆಯು ಯೂಟ್ಯೂಬ್ ಮುಖಾಂತರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಗಮನ ಸೆಳೆಯುತ್ತಿದೆ.

ಭಯಾನಕ ವಿಡಿಯೋ ವೀಕ್ಷಿಸಿ

Read more on ವಿಮಾನ plane
English summary
Turkish AH-1W Super Cobra helicopter shot down by a Kurdistan Worker’s Party militant
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark