ನಿಮ್ಮಿಂದಲೇ ರಸ್ತೆ ಸುರಕ್ಷತೆ ಆರಂಭ; ಹಾರ್ಲೆ ವಿನೂತನ ಅಭಿಯಾನ

Written By:

ಸುರಕ್ಷಿತ ಚಾಲನೆ ಬಗ್ಗೆ ನಾವು ಹಲವಾರು ಪಾಠಗಳನ್ನು ಕೇಳಿರುತ್ತೇವೆ. ಚಾಲನೆ ವೇಳೆ ಚಾಲಕ, ಪ್ರಯಾಣಿಕ ಜೊತೆಗೆ ಪಾದಚಾರಿಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ. ಸುರಕ್ಷಿತ ಚಾಲನೆಯಿಂದಾಗಿ ನಮ್ಮ ರಸ್ತೆಯಲ್ಲಿ ವರ್ಷಂಪ್ರತಿ ಸಂಭವಿಸುವ ಅಪಘಾತ ಸಂಖ್ಯೆಯು ಕಡಿಮೆಯಾಗಲಿದೆ.

ಆದರೆ ನಮ್ಮ ಭಾರತದಲ್ಲಿ ನಡೆಯುವ ಪ್ರಸಂಗವಾದರೂ ಏನು? ಶಿಸ್ತುಬದ್ಧ ಹೆದ್ದಾರಿ ಅಥವಾ ರಸ್ತೆ ಚಾಲನೆಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಪರಿಣಾಮ ಹಲವಾರು ಅಗಘಾತ ಪ್ರಸಂಗಗಳು ಈಗಾಗಲೇ ಘಟಿಸಿವೆ ಹೋಗಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಟಸ್ಕರ್ ಹಾರ್ಲೆ ಡೇವಿಡ್ಸನ್ ಮಾಲಿಕರ ಚಾಪ್ಟರ್ ಸಂಘವು (Tusker Bengaluru H.O.G. Chapter) "ನಿಮ್ಮಿಂದಲೇ ರಸ್ತೆ ಸುರಕ್ಷತೆ ಆರಂಭ" (Road Safety Starts With You) ಎಂಬ ವಿನೂತನ ರಸ್ತೆ ಸುರಕ್ಷಾ ಚಾಲನೆಯನ್ನು ಹಮ್ಮಿಕೊಂಡಿದೆ. ಈ ಮೂಲಕ ಚಾಲನೆ ಬಗ್ಗೆ ಅರಿತುಕೊಳ್ಳಬೇಕಾದ ಮೂಲಭೂತ ಪಾಠಗಳನ್ನು ಹಂಚಿಕೊಳ್ಳಲಾಗಿದೆ.

ಇದರಂತೆ ಕಳೆದ ವಾರಂತ್ಯದಲ್ಲಿ ಬೆಂಗಳೂರಿನಿಂದ ಕೊಲ್ಹಾಪುರಕ್ಕೆ ಸರಿ ಸುಮಾರು 1300 ಕೀ.ಮೀ. ಚಾಲನೆಯನ್ನು ಹಮ್ಮಿಕೊಳ್ಳಲಾಗಿದೆ. ರಸ್ತೆ ಸುರಕ್ಷತೆಯು ನಿಮ್ಮಿಂದಲೇ ಆರಂಭವಾಗುತ್ತಿದ್ದು, ನಿಮ್ಮಿಂದಲೇ ಕೊನೆಯಾಗಲಿದೆ ಎಂಬ ಕಟು ಸತ್ಯವನ್ನು ನಾವಿಲ್ಲಿ ಮರೆಯಬಾರದು. ಬೆಂಗಳೂರಿನಿಂದ ಆರಂಭವಾಗಿರುವ ಈ ಚಾಲನೆಯಲ್ಲಿ 30ರಷ್ಟು ಹಾರ್ಲೆ ಚಾಲಕರು ಭಾಗವಹಿಸಿದ್ದು, ಟ್ರಾಫಿಕ್ ನಿಯಮವನ್ನು ಪಾಲಿಸುವ ಮೂಲಕ ಸುರಕ್ಷಿತ ಚಾಲನೆಯನ್ನು ಕಾಪಾಡಿಕೊಳ್ಳಲು ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಅಷ್ಟಕ್ಕೂ ಟಸ್ಕರ್ ಹಾರ್ಲೆ ಬೆಂಗಳೂರು ತನ್ನ ಅಭಿಯಾನದಲ್ಲಿ ಯಶಸ್ಸು ಸಾಧಿಸಿತೇ? ಮುಂದಕ್ಕೆ ಓದಿ...

ನಿಮ್ಮಿಂದಲೇ ರಸ್ತೆ ಸುರಕ್ಷತೆ ಆರಂಭ; ಹಾರ್ಲೆ ವಿನೂತನ ಅಭಿಯಾನ

ತಮ್ಮ ಈ ಯೋಜನೆಯಲ್ಲಿ ಬೆಂಗಳೂರಿನ ಹಾರ್ಲೆ ಗ್ರೂಪ್ ಯಶಸ್ವಿ ಸಾಧಿಸಿತೇ? ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ದಶಕಗಳಿಂದಲೂ ದೇಶದ ವಾಣಿಜ್ಯದಲ್ಲಿ ಟ್ರಕ್ಕಿಂಗ್ ಉದ್ಯಮ ಪ್ರಮುಖ ಪಾತ್ರ ವಹಿಸುತ್ತಿದೆ. ಅನೇಕ ಬಾರಿ ಹೈವೇಗಳಲ್ಲಿ ಟ್ರಕ್ ಗಳಿಂದ ತುಂಬಿಕೊಂಡಿರುವುದನ್ನು ನಾವು ನೋಡಿರುತ್ತೇವೆ. ತಾಜಾ ವರದಿಗಳ ಪ್ರಕಾರ ಪ್ರತಿ ದಶ ಲಕ್ಷ ಜನಸಂಖ್ಯೆಗೆ 1400ಕ್ಕೂ ಹೆಚ್ಚು ಟ್ರಕ್ ಗಳು ಕಾಣಸಿಗುತ್ತದೆ. ಅಂದರೆ ಇವುಗಳು ವಾರ್ಷಿಕವಾಗಿ 75,000 ಕೀ.ಮೀ. ದೂರವನ್ನು ಕ್ರಮಿಸುತ್ತದೆ. ದುರದೃಷ್ಟವಶಾತ್ ದೇಶದ ಬಹುತೇಕ ಅಪಘಾತಗಳು ಟ್ರಕ್ ನಿಂದಲೇ ಸಂಭವಿಸುತ್ತಿರುತ್ತದೆ.

ನಿಮ್ಮಿಂದಲೇ ರಸ್ತೆ ಸುರಕ್ಷತೆ ಆರಂಭ; ಹಾರ್ಲೆ ವಿನೂತನ ಅಭಿಯಾನ

ಈಗ ಟಸ್ಕರ್ ಹಾರ್ಲೆ ಡೇವಿಡ್ಸನ್ ಮಾಲಿಕರ ಚಾಪ್ಟರ್ ಸಂಘವು ಟ್ರಕ್ ಚಾಲಕರಲ್ಲೂ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದ್ದಾರೆ. ಇವುಗಳಲ್ಲಿ ಲೇನ್ ಶಿಸ್ತುಪಾಲನೆ ಮುಖ್ಯವಾಗಿದ್ದು, ಪ್ರತಿಫಲಕ ಸೂಚಕಗಳ ಬಳಕೆಯ ಬಗ್ಗೆಯೂ ಅರಿವು ಮೂಡಿಸಲಾಗಿದೆ. ಮಗದೊಂದು ಅಧ್ಯಯನ ವರದಿ ಪ್ರಕಾರ ಪ್ರತಿಫಲಕ ಸೂಚಕಗಳ ಬಳಕೆಯಿಂದಾಗಿ ಶೇಕಡಾ 95ರಷ್ಟು ಬದಿ ಢಿಕ್ಕಿ ಹಾಗೂ ಹಿಂಬದಿ ಢಿಕ್ಕಿ ಪ್ರಸಂಗಗಳನ್ನು ಕಡಿಮೆಗೊಳಿಸುತ್ತದೆ. ಇದು ದಿನ ರಾತ್ರಿಯಿಡಿ ದೂರದ ಮತ್ತು ವಿಶಾಲ ಕೋನ ಟ್ರಕ್ ಗೋಚರತೆಯನ್ನು ಪ್ರದಾನ ಮಾಡುತ್ತದೆ.

ನಿಮ್ಮಿಂದಲೇ ರಸ್ತೆ ಸುರಕ್ಷತೆ ಆರಂಭ; ಹಾರ್ಲೆ ವಿನೂತನ ಅಭಿಯಾನ

ಈ ಮಹತ್ತರ ಅಭಿಯಾನಕ್ಕೆ ಟಸ್ಕರ್ ಬೆಂಗಳೂರು ಜೊತೆಗೆ ಸೆವೆನ್ ಮುಂಬೈ ಹಾರ್ಲೆ ಡೇವಿಡ್ಸನ್ ಮಾಲಿಕ ಸಂಘ ಹಾಗೂ ಗೋವಾ ಟಸ್ಕರ್ ಹಾರ್ಲೆ ಡೇವಿಡ್ಸನ್ ಮಾಲಿಕರ ಚಾಪ್ಟರ್ ಸಂಘವು ಕೈ ಜೋಡಿಸಿಕೊಂಡಿತ್ತು. ಇದರಂತೆ ಕೊಲ್ಹಾಪುರ ತಲುಪಿದಾಗ ಅಭಿಯಾನದ ಒಟ್ಟಾರೆ ಬಲ 100ರಷ್ಟು ತಲುಪಿತ್ತು. ಇಲ್ಲಿ ತಲಾ 30 ಬೆಂಗಳೂರು ಹಾಗೂ ಮುಂಬೈನಿಂದ ಹಾಗೂ 20ರಷ್ಟು ಸವಾರರು ಗೋವಾದಿಂದ ತಲುಪಿದ್ದರು.

ನಿಮ್ಮಿಂದಲೇ ರಸ್ತೆ ಸುರಕ್ಷತೆ ಆರಂಭ; ಹಾರ್ಲೆ ವಿನೂತನ ಅಭಿಯಾನ

ಕೊಲ್ಹಾಪುರ ಬೀದಿಗಳಲ್ಲೂ ಬೆಂಗಳೂರು, ಮುಂಬೈ ಹಾಗೂ ಗೋವಾದ ಈ ತಜ್ಞ ಸವಾರರ ತಂಡವು ರಸ್ತೆ ಅಭಿಮಾನವನ್ನು ಮುಂದುವರಿಸಿತ್ತು. ದೈತ್ಯಕಾರಾದ ಹಾರ್ಲೆ ಬೈಕ್ ಗಳು ಸ್ಥಳೀಯರ ಜನ ಮನ ಗೆಲ್ಲುವಲ್ಲೂ ಯಶಸ್ವಿಯಾಗಿದೆ.

ನಿಮ್ಮಿಂದಲೇ ರಸ್ತೆ ಸುರಕ್ಷತೆ ಆರಂಭ; ಹಾರ್ಲೆ ವಿನೂತನ ಅಭಿಯಾನ

ಈ ಸಂದರ್ಭದಲ್ಲಿ ಸಯಾಜಿ ಗ್ರೂಪ್ ಸಹಯೋಗದಲ್ಲಿ ಟಸ್ಕರ್ ಹಾರ್ಲೆ ಚಾಪ್ಟರ್ ವ್ಯವಸ್ಥಾಪಕ ಫಾರೂಕ್ ಅಹ್ಮದ್ ಸೌಜನ್ಯತೆಯಲ್ಲಿ ಬಿಹಾರದ ಮಾಜಿ ರಾಜ್ಯಪಾಲ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಡಿ.ವೈ. ಪಾಟೀಲ್ ಅವರ ಮನೆಗೆ ಭೇಟಿ ನೀಡುವ ಅವಕಾಶ ದೊರಕಿತ್ತು. ಮಹಾರಾಷ್ಟ್ರ ಕಾಂಗ್ರೆಸ್‌ನ ಶಿಕ್ಷಕ ಹಾಗೂ ನಾಯಕರಾಗಿರುವ ಪಾಟೀಲ್ ಅವರು ಈ ಸಂದೇಶವನ್ನು ದೇಶದ್ಯಾಂತ ಜನರಿಗೆ ತಲುಪಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ನಿಮ್ಮಿಂದಲೇ ರಸ್ತೆ ಸುರಕ್ಷತೆ ಆರಂಭ; ಹಾರ್ಲೆ ವಿನೂತನ ಅಭಿಯಾನ

ಪ್ರತಿಯೊಬ್ಬರು ತಮ್ಮ ಚಾಲನೆಯನ್ನು ಆನಂದಿಸಲು ಬಯಸುತ್ತಾರೆ. ಅದರರ್ಥ ನಿಯಮವನ್ನು ಉಲ್ಲಂಘಿಸಬಹದು ಎಂಬುದಲ್ಲ. ಸರಿಯಾದ ಟ್ರಾಫಿಕ್ ನಿಯಮ ಪಾಲನೆಯೊಂದಿಗೆ ಸಾಧ್ಯವಾದಷ್ಟು ಅಪಘಾತವನ್ನು ತಪ್ಪಿಸಬಹುದಾಗಿದೆ ಎಂಬುದು ಈ ಅಭಿಯಾನದ ಮೂಲ ಉದ್ದೇಶವಾಗಿತ್ತು. ಇವೆಲ್ಲದಿಂದಕ್ಕಿಂತ ಮಿಗಿಲಾಗಿ ಅಪಘಾತ ರಹಿತ ಚಾಲನೆಯನ್ನು ಯಾರು ತಾನೇ ಇಷ್ಟಪಡಲಾರರು ಹೇಳಿ?

ನಿಮ್ಮಿಂದಲೇ ರಸ್ತೆ ಸುರಕ್ಷತೆ ಆರಂಭ; ಹಾರ್ಲೆ ವಿನೂತನ ಅಭಿಯಾನ

ನಾವೆಲ್ಲ ನಮ್ಮದೇ ಆದ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿರುತ್ತೇವೆ. ಹಾಗಿರುವಾಗ ಟಸ್ಕರ್ ಬೆಂಗಳೂರು ಹಾರ್ಲೆ ಡೇವಿಡ್ಸನ್ ಮಾಲಿಕರ ಚಾಪ್ಟರ್ ಸಂಘವು ತೆರೆದುಕೊಂಡಿರುವ ಈ ವಿನೂತನ ರೀತಿಯ ಚಾಲನೆಯು ನಿಜಕ್ಕೂ ಸ್ಪೂರ್ತಿದಾಯಕವೆನಿಸಿದೆ. ಅಂತಿಮವಾಗಿ ಎಲ್ಲ ಚಾಲಕರೂ ಪರಸ್ಪರ ಗೌರವದೊಂದಿಗೆ ಚಾಲನೆ ಮಾಡಬೇಕಾಗಿದೆ ಎಂಬುದರ ಮಹತ್ವವನ್ನು ಅರಿಯಬೇಕಾಗಿದೆ.

ನಿಮ್ಮಿಂದಲೇ ರಸ್ತೆ ಸುರಕ್ಷತೆ ಆರಂಭ; ಹಾರ್ಲೆ ವಿನೂತನ ಅಭಿಯಾನ

ನಾವೆಲ್ಲ ನಮ್ಮದೇ ಆದ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿರುತ್ತೇವೆ. ಹಾಗಿರುವಾಗ ಟಸ್ಕರ್ ಬೆಂಗಳೂರು ಹಾರ್ಲೆ ಡೇವಿಡ್ಸನ್ ಮಾಲಿಕರ ಚಾಪ್ಟರ್ ಸಂಘವು ತೆರೆದುಕೊಂಡಿರುವ ಈ ವಿನೂತನ ರೀತಿಯ ಚಾಲನೆಯು ನಿಜಕ್ಕೂ ಸ್ಪೂರ್ತಿದಾಯಕವೆನಿಸಿದೆ. ಅಂತಿಮವಾಗಿ ಎಲ್ಲ ಚಾಲಕರೂ ಪರಸ್ಪರ ಗೌರವದೊಂದಿಗೆ ಚಾಲನೆ ಮಾಡಬೇಕಾಗಿದೆ ಎಂಬುದರ ಮಹತ್ವವನ್ನು ಅರಿಯಬೇಕಾಗಿದೆ.

English summary
The Tusker H.O.G. Chapter's latest initiative 'Road Safety Starts With You' was one such initiative that seeks to spread that basic awareness that we require more of. The chapter organised a ride from Bangalore to Kolhapur (to and fro 1300 km) to promote that very belief — safety on the road, begins and ends with you.
Story first published: Wednesday, June 3, 2015, 14:41 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more