ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಯ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿದ ರಸ್ತೆ

ಭಾರತೀಯ ಸೇನೆಯ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಲಡಾಖ್‌ನಲ್ಲಿ 19,300 ಅಡಿ ಎತ್ತರದಲ್ಲಿ ನಿರ್ಮಿಸಿರುವ ರಸ್ತೆಯು ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ ಎಂದು ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. ಉಮ್ಲಿಂಗ್ ಲಾ ಪಾಸ್'ನಲ್ಲಿ ನಿರ್ಮಿಸಲಾದ ಈ ರಸ್ತೆಯು ವಾಹನ ಸವಾರರಿಗೆ ಲಡಾಖ್‌ನ ಖರ್ದುಂಗ್ ಲಾ ಪಾಸ್‌ಗಿಂತಲೂ ಹೆಚ್ಚು ಸವಾಲಿನದ್ದಾಗಿದೆ.

ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಯ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿದ ರಸ್ತೆ

ಉಮ್ಲಿಂಗ್ ಲಾ ಪಾಸ್‌ನಲ್ಲಿ ನಿರ್ಮಿಸಲಾದ ಈ ರಸ್ತೆಯು ಬೊಲಿವಿಯಾದಲ್ಲಿರುವ 18,953 ಅಡಿ ಎತ್ತರದ ರಸ್ತೆ ದಾಖಲೆಯನ್ನು ಮೀರಿಸಿದೆ. ರಸ್ತೆ ನಿರ್ಮಾಣ ಏಜೆನ್ಸಿಯಾದ BRO, ಭಾರತದ ಉತ್ತರದ ಗಡಿಯ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಿಸುವಲ್ಲಿ ಪರಿಣತಿ ಪಡೆದಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿರವರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಿಂದ ಈ ಮಾನ್ಯತೆ ಪಡೆದಿರುವ ಬಾರ್ಡರ್ ರೋಡ್ಸ್ ಸಂಸ್ಥೆಯನ್ನು ಅಭಿನಂದಿಸಿದ್ದಾರೆ.

ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಯ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿದ ರಸ್ತೆ

ಲಡಾಖ್‌ನ ಉಮ್ಲಿಂಗ್ ಲಾ ಪಾಸ್‌ನಲ್ಲಿ 19,024 ಅಡಿ ಎತ್ತರದಲ್ಲಿ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆಯನ್ನು ನಿರ್ಮಿಸಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಿಂದ ಗುರುತಿಸಲ್ಪಟ್ಟಿದ್ದಕ್ಕಾಗಿ BROindia ಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಅವರು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಉಮ್ಲಿಂಗ್ ಲಾ ಪಾಸ್‌ನಲ್ಲಿ ನಿರ್ಮಿಸಿರುವ 52 ಕಿ.ಮೀ ಉದ್ದದ ಈ ಸುಸಜ್ಜಿತ ರಸ್ತೆಯ ನಿರ್ಮಾಣ ಕಾರ್ಯವು ಈ ವರ್ಷದ ಆಗಸ್ಟ್‌ನಲ್ಲಿ ಪೂರ್ಣಗೊಂಡಿತು.

ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಯ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿದ ರಸ್ತೆ

ಈ ಪಾಸ್ ಪೂರ್ವ ಲಡಾಖ್‌ನ ಚುಮರ್ ಸೆಕ್ಟರ್‌ನ ಪಟ್ಟಣಗಳನ್ನು ಸಂಪರ್ಕಿಸುತ್ತದೆ. ಇದು ಲೇಹ್‌ನಿಂದ ಚಿಸುಮ್ಲೆ ಹಾಗೂ ಧೆಮ್‌ಚುಕ್‌ಗೆ ಸಂಪರ್ಕಿಸುವ ಪರ್ಯಾಯ ನೇರ ಮಾರ್ಗವನ್ನು ಸಹ ಒದಗಿಸುತ್ತದೆ. ಇದರಿಂದ ಸ್ಥಳೀಯರಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ಪಾಸ್‌ನ ನಿರ್ಮಾಣವು ಈ ಪ್ರದೇಶದ ಸಾಮಾಜಿಕ - ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ ಹಾಗೂ ಲಡಾಖ್‌ನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.

ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಯ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿದ ರಸ್ತೆ

ಚಳಿಗಾಲದಲ್ಲಿ ಈ ಪಾಸ್‌ನ ಉಷ್ಣತೆ - 40 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು. ಈ ಎತ್ತರದಲ್ಲಿ ಆಮ್ಲಜನಕದ ಮಟ್ಟವು ಸಮುದ್ರ ಮಟ್ಟಕ್ಕಿಂತ ಸುಮಾರು 50% ನಷ್ಟು ಕಡಿಮೆಯಾಗಿರುತ್ತದೆ. ಇದರಿಂದಾಗಿ ಇಲ್ಲಿ ದೀರ್ಘಕಾಲ ಉಳಿಯಲು ಯಾರಿಗಾದರೂ ತುಂಬಾ ಕಷ್ಟವಾಗುತ್ತದೆ. ಅಂದ ಹಾಗೆ 2019ರ ಅಕ್ಟೋಬರ್'ನಲ್ಲಿ BRO ಲೇಹ್ ಅನ್ನು ಶಯೋಕ್ ಹಾಗೂ DBO ದೊಂದಿಗೆ ಸಂಪರ್ಕಿಸುವ DSDBO ರಸ್ತೆಯನ್ನು ನಿರ್ಮಿಸಿದೆ.

ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಯ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿದ ರಸ್ತೆ

ಇದರ ಹೊರತಾಗಿ ಪಾಂಗಾಂಗ್ - ತ್ಸೋ ಸರೋವರವನ್ನು ಗೋಗ್ರಾ ಹಾಗೂ ಹಾಟ್-ಸ್ಪ್ರಿಂಗ್‌ಗೆ ಸಂಪರ್ಕಿಸುವ ರಸ್ತೆ ಕೂಡ ಬಳಕೆಗೆ ಸಿದ್ಧವಾಗಿದೆ. ಈ ರಸ್ತೆಯು 18 ಸಾವಿರಕ್ಕೂ ಹೆಚ್ಚು ಅಡಿ ಎತ್ತರದಲ್ಲಿ ಮರ್ಸಿಮಿಕ್-ಲಾ (ಪಾಸ್) ಮೂಲಕ ಹಾದುಹೋಗುತ್ತದೆ. ಲಡಾಖ್‌ನಲ್ಲಿರುವ ಖರ್ದುಂಗ್ಲಾ ಪಾಸ್ ಕೂಡ ವಿಶ್ವದ ಅತಿ ಎತ್ತರದ ರಸ್ತೆಗಳಲ್ಲಿ ಒಂದಾಗಿದೆ ಎಂಬುದು ಗಮನಾರ್ಹ. ಇದು ಸುಮಾರು 17,600 ಅಡಿ ಎತ್ತರವನ್ನು ಹೊಂದಿದೆ.

ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಯ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿದ ರಸ್ತೆ

ಉಮ್ಲಿಂಗ್ ಲಾ ಪಾಸ್‌ನಲ್ಲಿ ನಿರ್ಮಿಸಲಾದ ಈ ರಸ್ತೆಯು ಮೌಂಟ್ ಎವರೆಸ್ಟ್‌ನ ಬೇಸ್ ಕ್ಯಾಂಪ್ ಪ್ರದೇಶಕ್ಕಿಂತ ಹೆಚ್ಚಿನ ಎತ್ತರದಲ್ಲಿದೆ. ನೇಪಾಳದ ಸೌತ್ ಬೇಸ್ ಕ್ಯಾಂಪ್ ಅನ್ನು 17,598 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ, ಆದರೆ ಟಿಬೆಟ್‌ನ ನಾರ್ತ್ ಬೇಸ್ ಕ್ಯಾಂಪ್ 16,900 ಅಡಿ ಎತ್ತರವನ್ನು ಹೊಂದಿದೆ ಎಂಬುದು ಗಮನಾರ್ಹ. ಮತ್ತೊಂದು ಪ್ರಮುಖ ಸಂಗತಿಯೆಂದರೆ ವಿಶ್ವದ ಅತಿದೊಡ್ಡ ವಾಣಿಜ್ಯ ವಿಮಾನವು 30,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತದೆ. ಈ ಹೊಸ ರಸ್ತೆಯನ್ನು 60% ಗಿಂತ ಹೆಚ್ಚು ಎತ್ತರದಲ್ಲಿ ನಿರ್ಮಿಸಲಾಗಿದೆ.

ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಯ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿದ ರಸ್ತೆ

ಇನ್ನು ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿರವರು ಲಕ್ನೋದಿಂದ ಗಾಜಿಪುರದವರೆಗಿನ 341 ಕಿ.ಮೀ ಉದ್ದದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯನ್ನು ಸಾರ್ವಜನಿಕರ ಬಳಕೆಗಾಗಿ ಉದ್ಘಾಟಿಸಿದರು. ರೂ. 22,500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಘಾಜಿಪುರ ನವದೆಹಲಿಯಿಂದ ಉತ್ತರ ಪ್ರದೇಶ ರಾಜಧಾನಿ ಲಕ್ನೋ ನಡುವಿನ ಪ್ರಯಾಣದ ಸಮಯವನ್ನು ಸುಮಾರು 3.50 ಗಂಟೆಗಳಷ್ಟು ಕಡಿಮೆ ಮಾಡುತ್ತದೆ.

ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಯ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿದ ರಸ್ತೆ

ಲಕ್ನೋದಿಂದ ಗಾಜಿಪುರದವರೆಗಿನ 341 ಕಿ.ಮೀ ಉದ್ದದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಸಾರ್ವಜನಿಕರಿಗೆ ಮುಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ರವರು ನಿನ್ನೆ ಮಧ್ಯಾಹ್ನ ಈ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದರು. ರೂ. 22,500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಘಾಜಿಪುರ ನವದೆಹಲಿಯಿಂದ ಉತ್ತರ ಪ್ರದೇಶ ರಾಜಧಾನಿ ಲಕ್ನೋ ನಡುವಿನ ಪ್ರಯಾಣದ ಸಮಯವನ್ನು ಸುಮಾರು 3.50 ಗಂಟೆಗಳಷ್ಟು ಕಡಿಮೆ ಮಾಡುತ್ತದೆ.

ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಯ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿದ ರಸ್ತೆ

ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಸಹ ಆಗ್ರಾ - ಲಖನೌ ಎಕ್ಸ್‌ಪ್ರೆಸ್‌ವೇಯಂತೆ ಭಾರತೀಯ ವಾಯುಪಡೆಯ ವಿಮಾನಗಳಿಗೆ ತುರ್ತು ರನ್‌ವೇ ಆಗಿ ಬಳಸಲ್ಪಡುತ್ತದೆ. ಸುಲ್ತಾನ್‌ಪುರದ ಸಮೀಪವಿರುವ ಈ ಎಕ್ಸ್‌ಪ್ರೆಸ್‌ವೇನಲ್ಲಿ 3.3 ಕಿಮೀ ಉದ್ದದ ಏರ್ ಸ್ಟ್ರಿಪ್ ಅನ್ನು ಸಹ ನಿರ್ಮಿಸಲಾಗಿದೆ. ಇದು ಭಾರತೀಯ ವಾಯುಪಡೆಯ ಫೈಟರ್ ಜೆಟ್‌ಗಳನ್ನು ತುರ್ತು ಸಂದರ್ಭಗಳಲ್ಲಿ ಏರ್‌ಸ್ಟ್ರಿಪ್ ಆಗಿ ಬಳಸಲು ಅನುವು ಮಾಡಿಕೊಡುತ್ತದೆ.

ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಯ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿದ ರಸ್ತೆ

ಈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿರವರು ಭಾರತೀಯ ವಾಯುಪಡೆಯ ಹರ್ಕ್ಯುಲಸ್ ಸಿ 130ಜೆ ಮಿಲಿಟರಿ ಸಾರಿಗೆ ವಿಮಾನವನ್ನು ಬಳಸಿ ಸುಲ್ತಾನ್‌ಪುರ ಬಳಿ ಬಂದಿಳಿದಿದ್ದರು. ಈ ಎಕ್ಸ್ ಪ್ರೆಸ್ ವೇ ಉದ್ಘಾಟನಾ ಸಮಾರಂಭವನ್ನು ಸುಲ್ತಾನ್ ಪುರದಲ್ಲಿ ಆಯೋಜಿಸಲಾಗಿತ್ತು.

ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಯ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿದ ರಸ್ತೆ

ಹರ್ಕ್ಯುಲಸ್ ಸಿ 130ಜೆ ವಿಮಾನದಲ್ಲಿ ಮೋದಿ ಆಗಮಿಸಿದ ನಂತರ ಐಎಎಫ್ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿತ್ತು. ಈ ವೇಳೆ ಈ ಎಕ್ಸ್‌ಪ್ರೆಸ್‌ವೇಯನ್ನು ವಿಮಾನ ಹಾರಾಟಕ್ಕೂ ಬಳಸಲಾಯಿತು. ಲಕ್ನೋ ಜಿಲ್ಲೆಯ ಚೌಡಸರಾಯ್‌ನಿಂದ ಶುರುವಾಗುವ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶ - ಬಿಹಾರ ಗಡಿ ಸಮೀಪವಿರುವ ಹೈದರಿಯಾ ಗ್ರಾಮದಲ್ಲಿ ಕೊನೆಯಾಗುತ್ತದೆ.

ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಯ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿದ ರಸ್ತೆ

ಆರು ಪಥಗಳನ್ನು ಹೊಂದಿರುವ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯನ್ನು ಭವಿಷ್ಯದಲ್ಲಿ ವಾಹನ ದಟ್ಟಣೆ ಹೆಚ್ಚಾದರೆ ಎಂಟು ಪಥಗಳಿಗೆ ವಿಸ್ತರಿಸಬಹುದು. ಅಧಿಕೃತ ಅಂಕಿ ಅಂಶಗಳ ಪ್ರಕಾರ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯನ್ನು ಅಂದಾಜು ರೂ. 22,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ತುರ್ತು ಸಂದರ್ಭದಲ್ಲಿ ವಿಮಾನಗಳನ್ನು ಲ್ಯಾಂಡಿಂಗ್ ಸ್ಟ್ರಿಪ್ ಆಗಿ ಬಳಸಲು ಈ ಎಕ್ಸ್‌ಪ್ರೆಸ್‌ವೇಯನ್ನು ವಿನ್ಯಾಸಗೊಳಿಸಲಾಗಿದೆ.

ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಯ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿದ ರಸ್ತೆ

ವರದಿಗಳ ಪ್ರಕಾರ, ಈ ತುರ್ತು ಲ್ಯಾಂಡಿಂಗ್ ಸ್ಟ್ರಿಪ್ ಸುಮಾರು 3 ಕಿ.ಮೀ ಉದ್ದವಿದ್ದು, ದೊಡ್ಡ ವಿಮಾನಗಳು ಸೇರಿದಂತೆ ವಿವಿಧ ರೀತಿಯ ವಿಮಾನಗಳ ಲ್ಯಾಂಡಿಂಗ್ ಅನ್ನು ಸರಿ ಹೊಂದಿಸಲು ಸಮರ್ಥವಾಗಿದೆ. ಕೆಲವು ವರದಿಗಳ ಪ್ರಕಾರ, ಉತ್ತರ ಪ್ರದೇಶ ರಾಜ್ಯದಲ್ಲಿ ಈಗ ಮೂರು ತುರ್ತು ಲ್ಯಾಂಡಿಂಗ್ ಸ್ಟ್ರಿಪ್‌ಗಳಿವೆ. ಬೇರೆ ಯಾವುದೇ ರಾಜ್ಯವು ಇಷ್ಟು ಸಂಖ್ಯೆಯ ತುರ್ತು ಲ್ಯಾಂಡಿಂಗ್ ಸ್ಟ್ರಿಪ್‌ಗಳನ್ನು ಹೊಂದಿಲ್ಲ.

ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Umling la pass enters guinness book of world record as worlds highest motorable road details
Story first published: Monday, November 22, 2021, 19:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X