ಯುಪಿಯಲ್ಲಿ ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ಟ್ಯಾಕ್ಸಿ: ಆಗ್ರಾ-ಮಥುರಾ ಮಾರ್ಗದಲ್ಲಿ ಶೀಘ್ರದಲ್ಲೇ ಸೇವೆ ಆರಂಭ

ಉತ್ತರ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ರಾಜ್ಯದ ಪ್ರವಾಸಿ ಸ್ಥಳಗಳಿಗೆ ಹೆಲಿಕಾಪ್ಟರ್ ಟ್ಯಾಕ್ಸಿ ಮೂಲಕ ಸೇವೆ ಒದಗಿಸಲು ಯುಪಿ ಸರ್ಕಾರ ಹೊಸ ಕ್ರಮವನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಯೋಜನೆಯನ್ನು ಯಶಸ್ವಿಗೊಳಿಸಲು ಹಲವು ಕಾರ್ಯಗಳು ಭರದಿಂದ ಸಾಗುತ್ತಿವೆ.

ಯುಪಿಯಲ್ಲಿ ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ಟ್ಯಾಕ್ಸಿ: ಆಗ್ರಾ-ಮಥುರಾ ಮಾರ್ಗದಲ್ಲಿ ಶೀಘ್ರದಲ್ಲೇ ಸೇವೆ ಆರಂಭ

ಶೀಘ್ರದಲ್ಲೇ ಪ್ರವಾಸಿಗರು ಆಗ್ರಾ ಮತ್ತು ಮಥುರಾ ಪ್ರವಾಸಿ ಸ್ಥಳಗಳ ನಡುವೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಬಹುದು. ಉತ್ತರ ಪ್ರದೇಶ ಸರ್ಕಾರವು ಮಥುರಾ ಮತ್ತು ಆಗ್ರಾದಲ್ಲಿ ಹೆಲಿಪೋರ್ಟ್‌ಗಳ ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಟೆಂಡರ್‌ಗಳನ್ನು ಆಹ್ವಾನಿಸಿದೆ.

ಯುಪಿಯಲ್ಲಿ ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ಟ್ಯಾಕ್ಸಿ: ಆಗ್ರಾ-ಮಥುರಾ ಮಾರ್ಗದಲ್ಲಿ ಶೀಘ್ರದಲ್ಲೇ ಸೇವೆ ಆರಂಭ

ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಮೇ 31ರಂದು ಮಧ್ಯಾಹ್ನ 12 ಗಂಟೆಗೆ ಪ್ರವಾಸೋದ್ಯಮ ಇಲಾಖೆ ಲಖನೌ ಕಚೇರಿಯಲ್ಲಿ ಪ್ರಿ-ಬಿಡ್ ನಡೆಯಲಿದೆ. RFQ (ಅರ್ಹತೆಗಾಗಿ ವಿನಂತಿ) ಸಲ್ಲಿಸುವ ದಿನಾಂಕವನ್ನು ಜೂನ್ 23, 2022 ರಂದು ನಿಗದಿಪಡಿಸಲಾಗಿದೆ.

ಯುಪಿಯಲ್ಲಿ ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ಟ್ಯಾಕ್ಸಿ: ಆಗ್ರಾ-ಮಥುರಾ ಮಾರ್ಗದಲ್ಲಿ ಶೀಘ್ರದಲ್ಲೇ ಸೇವೆ ಆರಂಭ

ಯುಪಿ ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಮಥುರಾ ಮತ್ತು ಆಗ್ರಾದ ಹೆಲಿಪ್ಯಾಡ್‌ಗಳನ್ನು ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮೋಡ್‌ನಲ್ಲಿ ನಿರ್ಮಿಸಲಾಗುವುದು. ಕಡಿಮೆ ಬಿಡ್ ಮಾಡಿದವರಿಗೆ ಎರಡೂ ಹೆಲಿಪೋರ್ಟ್‌ಗಳ ನಿರ್ಮಾಣ ಕಾಮಗಾರಿಯನ್ನು ನೀಡಲಾಗುವುದು.

ಯುಪಿಯಲ್ಲಿ ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ಟ್ಯಾಕ್ಸಿ: ಆಗ್ರಾ-ಮಥುರಾ ಮಾರ್ಗದಲ್ಲಿ ಶೀಘ್ರದಲ್ಲೇ ಸೇವೆ ಆರಂಭ

ಅರ್ಹತೆ ವಿನಂತಿಗಾಗಿ (RFQ) ಅರ್ಜಿಗಳನ್ನು ಆನ್‌ಲೈನ್‌ನಲ್ಲಿ http://etender.up.nic.in ನಲ್ಲಿ ಅಗತ್ಯ ಶುಲ್ಕದೊಂದಿಗೆ ಜೂನ್ 23 ರಂದು ಮಧ್ಯಾಹ್ನ 2 ಗಂಟೆಯೊಳಗೆ ಸಲ್ಲಿಸಬಹುದು. ಟೆಂಡರ್‌ನಲ್ಲಿನ ಯಾವುದೇ ಬದಲಾವಣೆಗಳನ್ನು (ಯಾವುದಾದರೂ ಇದ್ದರೆ) ವೆಬ್‌ಸೈಟ್ http://etender.up.nic.in ಮತ್ತು uptourism.gov.in ನಲ್ಲಿ ತಿಳಿಸಲಾಗುತ್ತದೆ.

ಯುಪಿಯಲ್ಲಿ ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ಟ್ಯಾಕ್ಸಿ: ಆಗ್ರಾ-ಮಥುರಾ ಮಾರ್ಗದಲ್ಲಿ ಶೀಘ್ರದಲ್ಲೇ ಸೇವೆ ಆರಂಭ

ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು 2021 ರಲ್ಲಿ ಈ ಉಪಕ್ರಮವನ್ನು ಪ್ರಸ್ತಾಪಿಸಿತ್ತು. ಆದರೆ ಕಾರಣಾಂತರಗಳಿಂದ ಈ ಸೇವೆ ಆರಂಭಿಸಲಾಗಲಿಲ್ಲ. ಈ ವರ್ಷ ಡಿಸೆಂಬರ್‌ನಲ್ಲಿ ಸೇವೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಯುಪಿಯಲ್ಲಿ ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ಟ್ಯಾಕ್ಸಿ: ಆಗ್ರಾ-ಮಥುರಾ ಮಾರ್ಗದಲ್ಲಿ ಶೀಘ್ರದಲ್ಲೇ ಸೇವೆ ಆರಂಭ

IANSನ ವರದಿಯ ಪ್ರಕಾರ, ಹೆಚ್ಚಿನ ಪ್ರವಾಸಿಗರು ವಿಶೇಷವಾಗಿ ವಿದೇಶಿಯರು ಉತ್ತಮ ಸಂಪರ್ಕದ ಕಾರಣದಿಂದ ತಾಜ್ ಮಹಲ್ ಅನ್ನು ನೋಡಲು ಆಗ್ರಾಕ್ಕೆ ಬರುತ್ತಾರೆ, ಆದರೆ ಅದೇ ಪ್ರವಾಸಿಗರು ಕಳಪೆ ಸಂಪರ್ಕದಿಂದಾಗಿ ಇತರ ಸಮಾನವಾದ ಪ್ರಮುಖ ಪ್ರವಾಸಿ ತಾಣಗಳನ್ನು ಬಿಟ್ಟುಬಿಡುತ್ತಾರೆ.

ಯುಪಿಯಲ್ಲಿ ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ಟ್ಯಾಕ್ಸಿ: ಆಗ್ರಾ-ಮಥುರಾ ಮಾರ್ಗದಲ್ಲಿ ಶೀಘ್ರದಲ್ಲೇ ಸೇವೆ ಆರಂಭ

ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಯು ಅಂತಹ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಈ ಸೇವೆಯು ಪ್ರವಾಸಿ ತಾಣಗಳನ್ನು ತಲುಪುವ ಮತ್ತು ಅದೇ ದಿನ ಹಿಂದಿರುಗುವ ಅನುಕೂಲವನ್ನು ಮಾಡಿಕೊಡುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಯುಪಿಯಲ್ಲಿ ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ಟ್ಯಾಕ್ಸಿ: ಆಗ್ರಾ-ಮಥುರಾ ಮಾರ್ಗದಲ್ಲಿ ಶೀಘ್ರದಲ್ಲೇ ಸೇವೆ ಆರಂಭ

ಈಗ ಗಾಜಿಯಾಬಾದ್‌ನಿಂದ ಕಾನ್ಪುರಕ್ಕೆ ಪ್ರಯಾಣ ಸುಲಭವಾಗಲಿದೆ. ಉತ್ತರ ಪ್ರದೇಶದ ಎರಡು ಕೈಗಾರಿಕಾ ನಗರಗಳ ನಡುವಿನ ಪ್ರಯಾಣವನ್ನು ಸುಲಭಗೊಳಿಸಲು ಎಕ್ಸ್‌ಪ್ರೆಸ್‌ವೇ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಈ 380 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇ ಗಾಜಿಯಾಬಾದ್‌ನಿಂದ ಕಾನ್ಪುರಕ್ಕೆ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿತಗೊಳಿಸುತ್ತದೆ ಎಂದು ಹೇಳಲಾಗುತ್ತಿದೆ.

ಯುಪಿಯಲ್ಲಿ ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ಟ್ಯಾಕ್ಸಿ: ಆಗ್ರಾ-ಮಥುರಾ ಮಾರ್ಗದಲ್ಲಿ ಶೀಘ್ರದಲ್ಲೇ ಸೇವೆ ಆರಂಭ

ಈ ಎಕ್ಸ್‌ಪ್ರೆಸ್‌ವೇ ಮೂಲಕ ಎರಡು ನಗರಗಳ ನಡುವಿನ ಪ್ರಯಾಣವನ್ನು ಕೇವಲ ಮೂರು ಗಂಟೆಗಳಲ್ಲಿ ಪೂರ್ಣಗೊಳಿಸಬಹುದು. ಗಾಜಿಯಾಬಾದ್-ಕಾನ್ಪುರ್ ಗ್ರೀನ್‌ಫೀಲ್ಡ್ ಕಾರಿಡಾರ್ ಒಂಬತ್ತು ಜಿಲ್ಲೆಗಳ ಮೂಲಕ ಹಾದು ಹೋಗಲಿದೆ.

ಯುಪಿಯಲ್ಲಿ ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ಟ್ಯಾಕ್ಸಿ: ಆಗ್ರಾ-ಮಥುರಾ ಮಾರ್ಗದಲ್ಲಿ ಶೀಘ್ರದಲ್ಲೇ ಸೇವೆ ಆರಂಭ

ಇದರಲ್ಲಿ ಗಾಜಿಯಾಬಾದ್, ಹಾಪುರ್, ಬುಲಂದ್‌ಶಹರ್, ಅಲಿಗಢ್, ಕಾಸ್ಗಂಜ್, ಫರೂಕಾಬಾದ್, ಕನೌಜ್, ಉನ್ನಾವ್ ಮತ್ತು ಕಾನ್ಪುರ್ ಸೇರಿವೆ. ಪ್ರಸ್ತುತ ಯಮುನಾ ಎಕ್ಸ್‌ಪ್ರೆಸ್‌ವೇ ಮೂಲಕ ಎರಡು ನಗರಗಳ ನಡುವೆ ಪ್ರಯಾಣಿಸಲು ಆರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಇದು NH-9 ನಿಂದ ಸುಮಾರು 8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

Most Read Articles

Kannada
English summary
Uttar pradesh to start helicopter taxi from agra to mathura soon
Story first published: Monday, May 23, 2022, 19:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X