ವಿಶ್ವದ ದುಬಾರಿ ಕ್ರೀಡಾಪಟು ಸೆಬಾಸ್ಟಿಯನ್ ವೆಟಲ್ ?

Written By:

ಕಳೆದ ಬಾರಿಯ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಸೆಬಾಸ್ಟಿಯನ್ ವೆಟಲ್ ಮಗದೊಂದು ದಾಖಲೆ ಸ್ಥಾಪಿಸುವತ್ತ ದಾಪುಗಾಲನ್ನಿಟ್ಟಿದ್ದು, ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಈ ರೆಡ್ ಬುಲ್ ರೇಸಿಂಗ್ ತಂಡದ ಚಾಲಕ 2015ನೇ ಸಾಲಿಗಾಗಿ ಫೆರಾರಿ ಜೊತೆಗೆ ಬರೋಬ್ಬರಿ 491.36 ಕೋಟಿ ರು.ಗಳ (80 ಮಿಲಿಯನ್ ಅಮೆರಿಕನ್ ಡಾಲರ್) ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

ಕಳೆದ ವರ್ಷ ಗರಿಷ್ಠ ಸಂಭಾವನೆ ಗಿಟ್ಟಿಸಿಕೊಂಡಿರುವ ಕ್ರೀಡಾಪಟುಗಳ ಪೈಕಿ ಮೊದಲಿಗರಾಗಿ ಪೋರ್ಚುಗಲ್‌ನ ಫುಟ್ಬಾಲಿಗ ಕ್ರಿಸ್ಟಿಯಾನೊ ರೋನಾಲ್ಡೊ (319.38 ಕೋಟಿ ರು.) ಗುರುತಿಸಿಕೊಂಡಿದ್ದರು. ಇವರನ್ನು ಮ್ಯಾಟ್ ರೈನ್ (257.98 ಕೋಟಿ ರು. ) ಮತ್ತು ಅರ್ಜೈಂಟೀನಾ ಫುಟ್ಬಾಲ್ ತಂಡದ ನಾಯಕ ಲಯನೆಲ್ ಮೆಸ್ಸಿ (256.14 ಕೋಟಿ ರು.) ಹಿಂಬಾಲಿಸಿದ್ದರು.

To Follow DriveSpark On Facebook, Click The Like Button

ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅತ್ಯಾದ್ಭುತ ಪ್ರದರ್ಶನ ನೀಡುತ್ತಿರುವ ಜರ್ಮನಿಯ ವೆಟಲ್ ಸತತ ನಾಲ್ಕು ಬಾರಿ ಎಫ್1 ಚಾಂಪಿಯನ್‌ ಸೇರಿದಂತೆ 39 ರೇಸ್‌ಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ಅವರೀಗ ಮೈಕಲ್ ಶುಮೇಕರ್ ಪಾದವನ್ನು ಹಿಂಬಾಲಿಸಲಿದ್ದು, ಫೆರಾರಿ ಪರ ಎಫ್1 ಕಾರು ಚಾಲನೆ ಮಾಡಲು ಸಿದ್ಧರಾಗಿದ್ದಾರೆ.

ಇಂದಿನ ಈ ಲೇಖನದಲ್ಲಿ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ಜಗತ್ತಿನ ಐದು ಎಫ್1 ಚಾಲಕರ ಬಗ್ಗೆ ಚರ್ಚಿಸಲಿದ್ದೇವೆ.

5. ಜೆನ್ಸನ್ ಬಟನ್

ಬ್ರಿಟಿಷ್ ಫಾರ್ಮುಲಾ ಒನ್ ರೇಸರ್ ಆಗಿರುವ ಜೆನ್ಸನ್ ಬಟನ್, 2000ನೇ ಇಸವಿಯಲ್ಲಿ ವಿಲಿಯಮ್ಸ್ ಎಫ್1 ತಂಡದ ಪರ ತಮ್ಮ ವೃತ್ತಿಯನ್ನು ಆರಂಭಿಸಿದ್ದರು. ಸದ್ಯ ಮರ್ಸಿಡಿಸ್ ತಂಡವನ್ನು ಪ್ರತಿನಿಧಿಸುತ್ತಿರುವ ಜೆನ್ಸನ್ ವಾರ್ಷಿಕವಾಗಿ 122.84 ಕೋಟಿ ರುಪಾಯಿಗಳನ್ನು ಪಡೆಯುತ್ತಿದ್ದಾರೆ.

4. ಲೆವಿಸ್ ಹ್ಯಾಮಿಲ್ಟನ್

ಈ ಸಾಲಿನಲ್ಲಿ ಮಗದೊಬ್ಬ ಎಫ್1 ದಿಗ್ಗಜ ಲೆವಿಸ್ ಹ್ಯಾಮಿಲ್ಟನ್ ಕಾಣಿಸಿಕೊಂಡಿದ್ದಾರೆ. ಇವರು ಪ್ರಸ್ತುತ ಮರ್ಸಿಡಿಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಾಗೆಯೇ ತನ್ನ ವೃತ್ತಿಯಲ್ಲಿ 31 ರೇಸ್‌ಗಳನ್ನು ಗೆದ್ದಿರುವ ಅವರು ವಾರ್ಷಿಕವಾಗಿ 147.41 ಕೋಟಿ ರುಪಾಯಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.

3. ಕಿಮಿ ರಾಯ್ಕೊನೆನ್

ಈ ಪಟ್ಟಿಯಲ್ಲಿ ಫಿನ್‌ಲ್ಯಾಂಡ್‌ನ ಎಫ್1 ಚಾಲಕ ಕಿಮಿ ರಾಯ್ಕೊನೆನ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 2007ರಲ್ಲಿ ಚಾಂಪಿಯನ್‌ಶಿಪ್ ಜೊತೆ 20 ರೇಸ್ ಗೆದ್ದಿರುವ ಇವರು ವಾರ್ಷಿಕವಾಗಿ 165.84 ಕೋಟಿ ರು.ಗಳ ಸಂಭಾವನೆ ಪಡೆಯುತ್ತಿದ್ದಾರೆ.

2. ಫೆರ್ನಾಂಡೊ ಅಲಾನ್ಸೊ

2001ರಲ್ಲಿ ಎಫ್1 ಜಗತ್ತಿಗೆ ಕಾಲಿರಿಸಿದ್ದ ಸ್ಪೇನ್‌ನ ಅಲಾನ್ಸೊ, 2005 ಹಾಗೂ 2006 ಚಾಂಪಿಯನ್‌ಶಿಪ್ ಸೇರಿದಂತೆ 32 ರೇಸ್‌ಗಳಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ. ಫೆರಾರಿ ತಂಡದವರಾಗಿರುವ ಇವರು ಕೂಡಾ 165.84 ರು.ಗಳ ಸಂಭಾವನೆ ಪಡೆಯುತ್ತಿದ್ದಾರೆ.

Sebastian Vettel

1. ಸೆಬಾಸ್ಟಿಯನ್ ವೆಟಲ್

ನಾವು ಈಗಾಗಲೇ ಮಾತನಾಡಿರುವಂತೆಯೇ ವಿಶ್ವದ ನಂ.1 ಎಫ್1 ಚಾಲಕ ಸೆಬಾಸ್ಟಿಯನ್ ವೆಟಲ್ ಪ್ರಸ್ತುತ 165.84 ಕೋಟಿ ರು.ಗಳ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ 2015 ಸಾಲಿನಲ್ಲಿ 491.36 ಕೋಟಿ ರು.ಗಳ ಮಹತ್ತರ ಒಪ್ಪಂದಕ್ಕೆ ಸಹಿ ಹಾಕಲು ತುದಿಗಾಲಲ್ಲಿ ನಿಂತಿದ್ದಾರೆ. ಪ್ರಸ್ತುತ ರೆಡ್ ಬುಲ್ ರೆನೊ ತಂಡದ ಚಾಲಕರಾಗಿರುವ ವೆಟಲ್ 2007ನೇ ಸಾಲಿನಲ್ಲಿ ತಮ್ಮ ಕೇರಿಯರ್ ಆರಂಭಿಸಿದ್ದು 2010, 2011, 2012 ಹಾಗೂ 2013ನೇ ಸಾಲಿನಲ್ಲಿ ಸತತ ನಾಲ್ಕು ಬಾರಿ ವಿಶ್ವ ಚಾಂಪಿಯನ್ ಜೊತೆಗೆ ಒಟ್ಟು 39 ರೇಸ್‌ಗಳನ್ನು ಗೆದ್ದಿದ್ದಾರೆ.

English summary
The defending Formula One World Champion Sebastian Vettel is all set to be the highest paid athlete in the world as he steps out of Red Bull Racing and signs a USD 80 million (INR 491.36 crores) deal with Ferrari for the year 2015.
Story first published: Thursday, October 16, 2014, 8:04 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X