ವಿಡಿಯೋ: ಅಮೆರಿಕದ ರಸ್ತೆಗಳಲ್ಲಿ ಆಟೋರಿಕ್ಷಾ.. ದಂಪತಿಗಳಿಗೆ ಎಲ್ಲೆಡೆ ಮೆಚ್ಚುಗೆ

ಭಾರತದಲ್ಲಿ ಸಾಮಾನ್ಯ ವರ್ಗದವರ ಕೈಗೆಟುವ ಸಾರಿಗೆ ಎಂದರೆ ಆಟೋರಿಕ್ಷಾಗಳು. ಇವುಗಳಲ್ಲಿ ಪ್ರತಿನಿತ್ಯ ನೂರಾರು ಮಂದಿ ಸಂಚರಿಸುವುದನ್ನು ನೋಡಿದ್ದೀವೆ. ಇದರಿಂದ ಎಷ್ಟೋ ಆಟೋ ಚಾಲಕರ ಕುಟುಂಬಗಳು ಉತ್ತಮವಾಗಿ ಜೀವನ ಸಾಗಿಸುತ್ತಿವೆ. ಆದರೆ, ಅಮೆರಿಕದಂತಹ ಮುಂದುವರಿದ ದೊಡ್ಡ ದೇಶದಲ್ಲಿ ಆಟೋರಿಕ್ಷಾ ಕಂಡರೆ ಎಲ್ಲರಿಗೂ ಆಶ್ಚರ್ಯವಾಗದೇ ಇರದು.

ಸದ್ಯ ಕೆಲವು ಸಾವಿರ ಮೈಲುಗಳಷ್ಟು ದೂರದಲ್ಲಿ ಅಮೆರಿಕದಲ್ಲಿ ಭಾರತದ ಅಗ್ಗದ ಸಾರಿಗೆ ಆಟೋರಿಕ್ಷಾಎಲ್ಲರ ಗಮನವನ್ನು ಸೆಳೆಯುತ್ತದೆ. ಈ ಆಸಕ್ತದಾಯಕವಾಗಿರುವ ಸ್ಟೋರಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಿಂದ ದಂಪತಿಗಳ ಕ್ರೇಜ್ ಗೆ ಭೇಷ್ ಎನ್ನಲೇಬೇಕು. ಅವರು, ದೈನಂದಿನ ಉಪಯೋಗಕ್ಕಾಗಿ ತಮ್ಮ ದೇಶದಲ್ಲಿ ಸಣ್ಣ ಹ್ಯಾಚ್‌ಬ್ಯಾಕ್ ಖರೀದಿಸುವ ಬದಲು, ಆಟೋ ರಿಕ್ಷಾವನ್ನು ಖರೀದಿಸಲು ನಿರ್ಧರಿಸಿದ್ದಾರೆ. ಹೌದು, ಅವರು ಪ್ರತಿದಿನ ರಸ್ತೆಯನ್ನು ಸಂಚರಿಸುವ ವಾಹನವಾಗಿ ಬಳಸಲು ಕಾನೂನುಬದ್ಧವಾಗಿ ಆಟೋ ರಿಕ್ಷಾವನ್ನು ಖರೀದಿಸಿದ್ದಾರೆ.

ವಿಡಿಯೋ: ಅಮೆರಿಕದ ರಸ್ತೆಗಳಲ್ಲಿ ಆಟೋರಿಕ್ಷಾ.. ದಂಪತಿಗಳಿಗೆ ಎಲ್ಲೆಡೆ ಮೆಚ್ಚುಗೆ

ಕ್ರಿಸ್ ಮತ್ತು ಸಾರಾ ಎಂಬ ಹೆಸರಿನ ಅಮೆರಿಕದ ದಂಪತಿಗಳು ತಮ್ಮ ಯುಟ್ಯೂಬ್ ಚಾನಲ್‌ನಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ, ಅವರ ಚಾನೆಲ್ ಪ್ರಸ್ತುತ 125K ಚಂದಾದಾರರನ್ನು ಹೊಂದಿದೆ. ನಾವು USAಯಲ್ಲಿ ಆಟೋರಿಕ್ಷಾವನ್ನು ಖರೀದಿಸಿದ್ದೇವೆ. 2018 ರಲ್ಲಿ ಟಿವಿಎಸ್ ಕಿಂಗ್ ಆಟೋ ರಿಕ್ಷಾವನ್ನು ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಮಾರಾಟಕ್ಕೆ ಪಟ್ಟಿ ಮಾಡಿರುವುದನ್ನು ನೋಡಿದ ನಂತರ ನಾವು ಈ ಆಟೋರಿಕ್ಷಾವನ್ನು ಖರೀದಿ ಮಾಡಲು ತೀರ್ಮಾನ ಮಾಡಿದೆವು ಎಂದು ದಂಪತಿಗಳು ಹೇಳಿದ್ದಾರೆ.

ಕ್ರಿಸ್ ಮತ್ತು ಸಾರಾ ದಂಪತಿ ಈ ಆಟೋರಿಕ್ಷಾವನ್ನು ಹುಚ್ಚಾಟಿಕೆಯಲ್ಲಿ ಖರೀದಿಸಿದ್ದರೂ, ಅವರು, ಇನ್ನೂ ಕೂಲಂಕಷವಾಗಿ ಯೋಚಿಸಿಸಲಾಯಿತು ಎಂದು ಬಹಿರಂಗಪಡಿಸಿದ್ದಾರೆ. ತಮ್ಮ ದಿನನಿತ್ಯದ ಸಾರಿಗೆಯ ಏಕೈಕ ವಾಹನ ಗ್ಯಾಸ್ ಗಜ್ಲಿಂಗ್ ವ್ಯಾನ್ ಆಗಿರುವುದರಿಂದ ಅವರು ಮತ್ತೊಂದು ಸಣ್ಣ ಹ್ಯಾಚ್‌ಬ್ಯಾಕ್ ಅನ್ನು ಖರೀದಿಸಲು ಬಯಸಿದ್ದರು. ಆದರೆ, ಅವರ ಸಣ್ಣ ಗ್ಯಾರೇಜ್‌ನ ಸ್ಥಳಾವಕಾಶದ ಕೊರತೆಯಿಂದ ಸಾಮಾನ್ಯ ಗಾತ್ರದ ಕಾರನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಬದಲಿಗೆ ಅಗ್ಗದ ಆಟೋರಿಕ್ಷಾವನ್ನು ಖರೀದಿ ಮಾಡುವುದು ಸರಿ ಎಂಬ ತೀರ್ಮಾನಕ್ಕೆ ಬಂದರಂತೆ.

ದಂಪತಿಗಳು ಆಟೋರಿಕ್ಷಾದ ವೈಶಿಷ್ಠ್ಯಗಳ ಬಗ್ಗೆ ವಿವರಿಸುತ್ತಾ, ಇದು ಉತ್ತಮ ಮೈಲೇಜ್ ಹೊಂದಿರುವ ಸಣ್ಣ ವಾಹನವಾಗಿದೆ. ಇದು ಅಗ್ಗವಾಗಿದೆ. ಜೊತೆಗೆ ಆಕರ್ಷಕ ಫೀಚರ್ಸ್ ಹೊಂದಿದ್ದು, ಪ್ರತಿಯೊಬ್ಬರೂ ಲೈಕ್ ಮಾಡುವಂತೆ ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿದೆ. ಇಷ್ಟೇಅಲ್ಲದೆ, ದಂಪತಿ ಆಟೋರಿಕ್ಷಾವನ್ನು ಹೂಡಿಕೆಯ ಭಾಗವಾಗಿಯೂ ಖರೀದಿ ಮಾಡಿದ್ದಾರೆ. ಭವಿಷ್ಯದಲ್ಲಿ ಅದನ್ನು ಯಾವುದೇ ವ್ಯಾಪಾರ ಉದ್ಯಮಕ್ಕೆ ಬಳಸಬಹುದು ಎಂಬುದು ಅವರ ಉದ್ದೇಶವಾಗಿದೆ. ಸದ್ಯಕ್ಕೆ ದಂಪತಿಗಳು ಆಟೋರಿಕ್ಷಾದಲ್ಲಿ ಮೋಜು ಮಸ್ತಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಕ್ರಿಸ್ ಮತ್ತು ಸಾರಾ ತಮ್ಮ ಟ್ರೇಲರ್‌ನಲ್ಲಿ ಅಟ್ಲಾಂಟಾದಿಂದ ಆಟೋರಿಕ್ಷಾವನ್ನು ಸಾಗಿಸಿಕೊಂಡು ಮನೆಗೆ ತಂದಿದ್ದಾರೆ. ಅದನ್ನು ತಾವಿರುವಲ್ಲಿಗೆ ತಂದ ಬಳಿಕ, ದಂಪತಿಗಳು ತಮ್ಮ ನೆರೆಹೊರೆ ಮನೆಯವರ ಸಹಾಯದಿಂದ ಆಟೋರಿಕ್ಷಾವನ್ನು ಹೇಗೆ ಓಡಿಸಬೇಕೆಂದು ಕಲಿಯಲು ಪ್ರಾರಂಭಿಸಿದರು. ಆರಂಭದಲ್ಲಿ ಅದನ್ನು ಸರಾಗವಾಗಿ ಓಡಿಸಲು ಸಾಧ್ಯವಾಗಲಿಲ್ಲ. ಆದರೆ, ಕೆಲವು ಚಾಲನ ದೋಷಗಳನ್ನು ಸರಿಪಡಿಸಿಕೊಂಡ ನಂತರ, ಇಬ್ಬರು ಓಡಿಸುವುದನ್ನು ಕಲಿತರು. ಅವರು ಜನನಿಬಿಡ ರಸ್ತೆಗಳ ಸುತ್ತಲೂ ಆಟೋರಿಕ್ಷಾವನ್ನು ಚಲಾಯಿಸುವುದನ್ನು ನೋಡಿದ ಜನರು ಉತ್ತಮ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದಾರೆ. ಅವರ ಸ್ನೇಹಿರಿಗೂ ಆಟೋರಿಕ್ಷಾವನ್ನು ಓಡಿಸಲು ನೀಡಿದ್ದಾರೆ.

ಇನ್ನು, ದೇಶದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ TVS ಕಿಂಗ್ ಆಟೋರಿಕ್ಷಾದ ಬೆಲೆ ರೂ.1.80 - ರೂ.2.25 ಲಕ್ಷ ಬೆಳೆಯಿದೆ. ಈ TVS ಕಿಂಗ್ Duramax ಆಟೋರಿಕ್ಷಾದ ಎಂಜಿನ್ ಬಗ್ಗೆ ಮಾತನಾಡುವುದಾದರೇ, ಇದು 225.8 CC, 4-ಸ್ಟ್ರೋಕ್, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, Si-ಪೆಟ್ರೋಲ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಎಂಜಿನ್ 10.4hp ಪವರ್ ಮತ್ತು 18.5 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. LPG ಎಂಜಿನ್‌ 9.7 hp ಪವರ್ ಮತ್ತು 17.5 NM ಟಾರ್ಕ್ ಉತ್ಪಾದಿಸುತ್ತದೆ. CNG ಎಂಜಿನ್ 8.9 hp ಪವರ್ ಮತ್ತು 15.5 Nm.ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Video autorickshaw on the roads of America appreciation for the couple everywhere
Story first published: Saturday, December 17, 2022, 11:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X