ಬಸ್ಸಿನ ಬಾಡಿ ಎಲ್‌ಸಿಡಿ ಪರದೆಯಾಗಿ ಪರಿವರ್ತನೆ..!

Posted By:

ಹಲವು ವಿಧದ ವರ್ಣಮಯ ಐಷಾರಾಮಿ ಬಸ್ಸುಗಳನ್ನು ನಾವು ನೋಡಿರುತ್ತೇವೆ. ಆದರೆ ಬಸ್ಸಿನ ಬಾಡಿ ಎಂದೇ ವಿಶ್ಲೇಷಿಸಬಹುದಾದ ದೇಹ ಭಾಗವು ಎಲ್‌ಸಿಡಿ ಪರದೆಯಾಗಿ ಪರಿವರ್ತನೆಯಾದಾಗ ಏನಾಗಬಹುದು?

ಬೆಂಗ್ಳೂರಿಗೆ ಎಲೆಕ್ಟ್ರಿಕ್ ಬಸ್; ರಸ್ತೆಗಿಳಿಯಲು ಕ್ಷಣಗಣನೆ ಆರಂಭ

ಹೌದು, ಎಲ್ಲವೂ ಕಲರ್‌ಫುಲ್...! ಯಾವತ್ತಾದರೂ ಇಂತಹದೊಂದು ಪಾರದರ್ಶಕ ಬಸ್ಸಿನ ಯೋಚಿಸಿ ನೋಡಿದ್ದೀರಾ? ಅದರಲ್ಲಿ ಸಂಚರಿಸಿದರೆ ಹೇಗಿರಬಹುದು? ನಾವಿಂದು ಪರಿಚಯಿಸಲಿರುವ 'ವಿಲ್ಲಿ ಬಸ್' ಇಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರಲಿದೆ. ಕುತೂಹಲಕಾರಿ ಮಾಹಿತಿ ಹಾಗೂ ಆಕರ್ಷಕ ವೀಡಿಯೋಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

Willie - Transparent LCD BUS

ಪ್ರಸ್ತುತ ಪರಿಕಲ್ಪನೆಯ ಹಂತದಲ್ಲಿರುವ ಈ ವಿಲ್ಲಿ ಬಸ್ಸನ್ನು ಟ್ಯಾಡ್ ಒರ್ಲೊಸ್ಕಿ (Tad Orlowski) ಎಂಬವರನ್ನು ವಿನ್ಯಾಸಗೊಳಿಸಿದ್ದಾರೆ.

Willie - Transparent LCD BUS

ಇದರಲ್ಲಿ ಎಲ್ಲ ತರಹದ ಆಧುನಿಕ ತಂತ್ರಗಾರಿಕೆಗಳನ್ನು ಬಳಕೆ ಮಾಡಲಾಗಿದ್ದು, ನಗರದುದ್ಧಕ್ಕೂ ತನ್ನದೇ ಆದ ವಿಶೇಷ ಶೈಲಿಯಿಂದ ಗುರುತಿಸಿಕೊಳ್ಳಲಿದೆ.

Willie - Transparent LCD BUS

ಇತರ ಸಾಂಪ್ರದಾಯಿಕ ಬಸ್ಸುಗಳಿಗಿಂತ ವಿಭಿನ್ನವಾಗಿ ವಿಲ್ಲಿ ಬಸ್ಸಿನ ವಿನ್ಯಾಸದತ್ತ ಹೆಚ್ಚಿನ ಗಮನ ವಹಿಸವಹಿಸಲಾಗಿದೆ. ಇದರ ಪಾರದರ್ಶಕತೆಯ ಎಲ್‌ಸಿಡಿ ಪರದೆಗಳನ್ನು ಬಸ್ಸಿನ ನಾಲ್ಕು ಬದಿಗಳಲ್ಲೂ ಲಗತ್ತಿಸಲಾಗಿದೆ.

Willie - Transparent LCD BUS

ಇಂತಹ ಪಾರದರ್ಶಕ ಎಲ್‌ಸಿಡಿ ಪರದೆಗಳು ಟಚ್ ಸ್ಕ್ರೀನ್ ಮಾದರಿಯಲ್ಲಿ ಕಾರ್ಯವೆಸಗಲಿದೆ.

Willie - Transparent LCD BUS

ಪ್ರಮುಖವಾಗಿಯೂ ಜಾಹೀರಾತು ಪ್ರದರ್ಶಿಸಲು ಅಥವಾ ಸಿನೆಮಾ ಕ್ಲಿಪಿಂಗ್‌ಗಳನ್ನು ತೋರಿಸಲು ಇದನ್ನು ಬಳಕೆ ಮಾಡಬಹುದಾಗಿದೆ.

Willie - Transparent LCD BUS

ಇದು ಕೇವಲ ಜಾಹೀರಾತಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ಪ್ರಯಾಣಿಕರಿಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಅಂದರೆ ಪ್ರಯಾಣ ಯೋಜನೆ, ಹವಾಮಾನ ವರದಿ, ಪತ್ರಿಕಾ ಹಾಗೂ ಟಿವಿ ವ್ಯಾಪ್ತಿ ಜತೆಗೆ ಪ್ರವಾಸಿ ಮಾಹಿತಿಯನ್ನು ಪ್ರದಾನ ಮಾಡಲಿದೆ.

Willie - Transparent LCD BUS

ಒಟ್ಟಿನಲ್ಲಿ ಈ ಟಚ್ ಸ್ಕ್ರೀನ್ ಎಲ್‌ಸಿಡಿ ಪರದೆಯು ಮನರಂಜನೆ ಜತೆಗೆ ಅಗತ್ಯ ಮಾಹಿತಿಗಳನ್ನು ನೀಡುವುದರಲ್ಲಿ ಗಮನ ಕೇಂದ್ರಿತವಾಗಿರಲಿದೆ.

Willie - Transparent LCD BUS

ಏತನ್ಮಧ್ಯೆ ಇಷ್ಟೊಂದು ಬೃಹತ್ತಾಕಾರದ ಎಲ್‌ಸಿಡಿ ಪರದೆ ಪ್ರಾಯೋಗಿಕವಾಗಿಯೂ ಯಶ ಕಾಣಲಿದೆಯೇ ಎಂಬುದು ಆಟೋ ವಿಮರ್ಶಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

Willie - Transparent LCD BUS

ಪ್ರಸ್ತುತ ಎಲ್‌ಸಿಡಿ ಬಸ್ಸಲ್ಲಿ ಜಾಹೀರಾತು ಪ್ರದರ್ಶಿಸುವ ಮೂಲಕ ವಾಣಿಜ್ಯ ಲಾಭವನ್ನು ಪಡೆಯಬಹುದು. ಆದರೆ ಪ್ರಯಾಣಿಕರ ಪ್ರೀತಿಗೆ ಪಾತ್ರವಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

Willie - Transparent LCD BUS

ಭವಿಷ್ಯದ ಸಂಚಾರ ವಾಹಕದ ಅಂಗವಾಗಿ ಈ ಪಾರದರ್ಶಕ ಬಸ್ಸು ಸಾರಿಗೆ ವ್ಯವಸ್ಥೆಯ ಭಾಗವಾದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ.

Willie - Transparent LCD BUS

ಇದರ ವಿನ್ಯಾಸಕರ ಪ್ರಕಾರ ದೊಡ್ಡ, ನಯವಾದ ಮತ್ತು ಮೃದುವಾದ ಮೇಲ್ಮೈ ಪ್ರಶಾಂತತೆ ಮತ್ತು ಶಾಂತಿಪರತೆ ಸೃಷ್ಟಿಸುವಲ್ಲಿ ಕಾರಣವಾಗಿದೆಯಂತೆ.

ವೀಡಿಯೋ ವೀಕ್ಷಿಸಿ

English summary
Willie bus is a concept, a virtual concept to be exact, that designed by Tad Orlowski. The basic idea behind the Willie bus is a simple one. Turn the sides of the bus into a giant television.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark