ಮರದಿಂದ ನಿರ್ಮಿತ ವೆಸ್ಪಾ ಐಕಾನಿಕ್ ಸ್ಕೂಟರ್

By Nagaraja

ಜಗತ್ತಿನ ಅತಿ ಜನಪ್ರಿಯ ಸ್ಕೂಟರ್ ಬ್ರಾಂಡ್ ವೆಸ್ಪಾ, ಸದಾ ನೂತನ ತಂತ್ರಜ್ಞಾನ ಆವಿಷ್ಕಾರ ಮಾಡುವುದರಲ್ಲಿ ಹೆಸರುವಾಸಿಯಾಗಿದೆ. ಆದರೆ ಈ ಬಾರಿ ಸ್ವಲ್ಪ ವಿಭಿನ್ನವಾಗಿ ಯೋಚಿಸಿರುವ ಇಟಲಿ ಮೂಲದ ಈ ದೈತ್ಯ ಕಂಪನಿಯು, ವೆಸ್ಪಾಗೆ ಸಾಂಪ್ರದಾಯಿಕ ವಿನ್ಯಾಸ ಕಲ್ಪಿಸಿಕೊಡುವ ಪ್ರಯತ್ನ ಮಾಡಿದೆ.

ಇದರ ಫಲಿತಾಂಶವೆಂಬಂತೆ ಮರದಿಂದ ನಿರ್ಮಿತವಾಗಿರುವ ಆಕರ್ಷಕ ವೆಸ್ಪಾ ಸ್ಕೂಟರ್ ತಯಾರುಗೊಂಡಿದೆ. ಪೋರ್ಚುಗೀಸ್ ನಿವಾಸಿ ಕಾರ್ಲೊಸ್ ಅಲ್ಬೆರ್ಟೊ (Carlos Alberto) ಎಂಬ 43ರ ಹರೆಯದ ಕಲಾವಿದ ಈ ಅದ್ಭುತ ಕಲಾಸೃಷ್ಟಿಗೆ ಚುಕ್ಕಾಣಿ ಹಿಡಿದಿದ್ದಾರೆ.

ಆಧುನಿಕ ಯುಗದಲ್ಲಿ ಸ್ಕೂಟರ್‌ಗಳು ಕೇವಲ ಸಂಚಾರಕ್ಕೆ ಮಾತ್ರ ಸೀಮಿತಗೊಂಡಿಲ್ಲ ಎಂಬುದು ಮರದ ಕೆತ್ತನೆಯಿಂದ ತಯಾರಿಸಲ್ಪಟ್ಟಿರುವ ವೆಸ್ಪಾ ಸ್ಕೂಟರ್‌ನಿಂದ ಸಾಬೀತಾಗಿದೆ. ಇಲ್ಲಿ ಕಲೆಗೂ ಕಲಾಗಾರನಿಗೂ ಹೆಚ್ಚು ಪ್ರಾಧಾನ್ಯತೆ ಕೊಡಲಾಗುತ್ತಿದೆ ಎಂಬುದನ್ನು ನಿರೂಪಿಸಲಾಗಿದೆ.

ಮರದಿಂದ ನಿರ್ಮಿತ ವೆಸ್ಪಾ ಐಕಾನಿಕ್ ಸ್ಕೂಟರ್

ಅಂದ ಹಾಗೆ 2001ನೇ ಇಸವಿಯಲ್ಲಿ ಅಲ್ಪರ್ಟೊ ಮನದಲ್ಲಿ ವೆಸ್ಪಾ ಸುಂದರಿಗೆ ವಿನೂತನ ವಿನ್ಯಾಸ ಕಲ್ಪಿಸುವ ಕೊಡುವ ಯೋಚನೆ ಹೊಳೆದಿತ್ತು. ತಮ್ಮ ಯೋಜನೆಗೆ ಆರಂಭದಲ್ಲಿ ಸಂಕಷ್ಟಗಳು ಎದುರಾಗಿದ್ದರೂ ಅಂತಿಮದಲ್ಲಿ ಸ್ಟೈಲಿಷ್ ವುಡನ್ ವೆಸ್ಪಾ ನಿರ್ಮಿಸುವಲ್ಲಿ ವಿನ್ಯಾಸಗಾರ ಯಶಸ್ವಿಯಾಗಿದ್ದಾರೆ.

ಮರದಿಂದ ನಿರ್ಮಿತ ವೆಸ್ಪಾ ಐಕಾನಿಕ್ ಸ್ಕೂಟರ್

ನೂತನ ಮರದ ಸ್ಕೂಟರಿಗೆ ತಮ್ಮ ಮಗಳ ಹೆಸರನ್ನು ಅಲ್ಬೆರ್ಟೊ ನಾಮಕರಣ ಮಾಡಿದ್ದಾರೆ. ಇದು ವಿಶೇಷವಾಗಿಯೂ ವೆಸ್ಪಾದಲ್ಲಿ ಸಂಚರಿಸಲು ಇಷ್ಟಪಡುವ ತಮ್ಮ ಪುತ್ರಿ ಡ್ಯಾನಿಯೆಲಾಗಾಗಿ (Daniela) ತಯಾರಿಸಲಾಗಿದೆ ಎಂದು ಅಲ್ಪರ್ಟೊ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.

ಮರದಿಂದ ನಿರ್ಮಿತ ವೆಸ್ಪಾ ಐಕಾನಿಕ್ ಸ್ಕೂಟರ್

ವೆಸ್ಪಾ ಕ್ಲಬ್ ಫ್ರೀಮುಂಡೆಯ ತಮ್ಮ ಸ್ನೇಹಿತ ನೀಡಿರುವ ಯೋಜನೆಯಂತೆ ಅಲ್ಬೆರ್ಟೊ ತಮ್ಮ ವುಡನ್ ವೆಸ್ಬಾ ತಯಾರಿ ಕಾರ್ಯವನ್ನು ಆರಂಭಿಸಿದ್ದರು.

ಮರದಿಂದ ನಿರ್ಮಿತ ವೆಸ್ಪಾ ಐಕಾನಿಕ್ ಸ್ಕೂಟರ್

ಅಲ್ಬೆರ್ಟೊ 2004ರಲ್ಲೇ ವೆಸ್ಪಾ ವುಡನ್ ಸ್ಕೂಟರ್ ನಿರ್ಮಾಣ ಕಾರ್ಯ ಆರಂಭಿಸಬೇಕಾಗಿತ್ತು. ಆದರೆ ಅನಿರೀಕ್ಷಿತವಾಗಿ ಅಪಘಾತವೊಂದಕ್ಕೆ ಸಿಲುಕಿದ್ದರಿಂದ ಮೂರು ವರ್ಷಗಳಷ್ಟು ತಡವಾಗಿ ಅಂದರೆ 2007ರಲ್ಲಿ ತಮ್ಮ ಕಾರ್ಯ ಪುನರಾರಂಭಿಸಿದ್ದರು.

ಮರದಿಂದ ನಿರ್ಮಿತ ವೆಸ್ಪಾ ಐಕಾನಿಕ್ ಸ್ಕೂಟರ್

ಅಂತೂ ತಮ್ಮ ಛಲ ಬಿಡದ ಕಾರ್ಲೊಸ್ 2012ರ ಜುಲೈ 12ರಂದು ತಮ್ಮ ಕನಸಿನ ಬೈಕಿಗೆ ಪೂರ್ಣ ರೂಪ ಕೊಡುವಲ್ಲಿ ಯಶಸ್ವಿಯಾಗಿದ್ದರು. ಕಾರ್ಲೊಸ್ ಅವರ ಈ ಪರಿಶ್ರಮಕ್ಕೆ ಪತ್ನಿ ಹಾಗೂ ಪುತ್ರಿಯ ಪೂರ್ಣ ಸಹಕಾರ ಲಭ್ಯವಾಗಿತ್ತು.

ಮರದಿಂದ ನಿರ್ಮಿತ ವೆಸ್ಪಾ ಐಕಾನಿಕ್ ಸ್ಕೂಟರ್

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಮರದಿಂದ ಕೆತ್ತನೆ ಮಾಡಲಾದ ಈ ಅಂದವಾದ ಸ್ಕೂಟರ್ ತಯಾರಿಗೆ ಹಲವು ವಿಧದ ಮರಗಳನ್ನು ಬಳಸಲಾಗಿದೆ.

ಮರದಿಂದ ನಿರ್ಮಿತ ವೆಸ್ಪಾ ಐಕಾನಿಕ್ ಸ್ಕೂಟರ್

ಇದರಲ್ಲಿ Rosewood, ebony, beech, satin-wood, jatoba, tacula, efi zelia, panga, sucupira ಮತ್ತು sycamore ಗಳಂತಹ ವಿಭಿನ್ನ ಮರಗಳನ್ನು ಬಳಸಲಾಗಿದೆ.

ಮರದಿಂದ ನಿರ್ಮಿತ ವೆಸ್ಪಾ ಐಕಾನಿಕ್ ಸ್ಕೂಟರ್

ತಮ್ಮ ನೂತನ ಕಲಾಸೃಷ್ಟಿ ಬಗ್ಗೆ ಅನುಭವ ಹಂಚಿಕೊಂಡಿರುವ ಅಲ್ಬೆರ್ಟೊ, ಇದರ ಮಾನೋಕಾಕ್ ಚಾಸೀಸ್ ವಿನ್ಯಾಸ ರೂಪಿಸಲು ತುಂಬಾನೇ ಕಷ್ಟಕರವಾಗಿತ್ತು ಎಂದಿದ್ದಾರೆ. ಹಾಗೆಯೇ ಮರದ ಹ್ಯಾಂಡಲ್ ಬಾರ್, ಆಕ್ಸೆಸರಿ ಹಾಗೂ ರಿಯರ್ ವೀಲ್ ತಯಾರಿಸುವುದು ಸಹ ಕಷ್ಟಕರವಾದ ಕೆಲಸವಾಗಿತ್ತು ಎಂದು ವಿವರಿಸಿದ್ದಾರೆ.

ಮರದಿಂದ ನಿರ್ಮಿತ ವೆಸ್ಪಾ ಸ್ಕೂಟರಿನ ವಿವರಗಳು

ಮರದಿಂದ ನಿರ್ಮಿತ ವೆಸ್ಪಾ ಸ್ಕೂಟರಿನ ವಿವರಗಳು

ಸಿಂಗಲ್ ಸಿಲಿಂಡರ್, 2 ಸ್ಟ್ರೋಕ್ ಗ್ಯಾಸೋಲೇನ್,

ಡಿಸ್‌ಪ್ಲೇಸ್‌ಮೆಂಟ್ 123.67 ಸಿಸಿ (54x54 ಎಂಎಂ) ಏರ್ ಕೂಲ್ಡ್,

ಮ್ಯಾಕ್ಸಿಮಂ ಪವರ್ 5 ಅಶ್ವಶಕ್ತಿ @ 4850 ಆರ್‌ಪಿಎಂ,

ಡೆಲ್ ಪವರ್ ಕಾರ್ಬ್ಯೂರೇಟರ್ - ಓರ್ಟೊ ಎಂಎ 19ಸಿ ,

ಇಗ್ನಿಷನ್ ಫ್ಲೈವೀಲ್ ಐ.ಇ.ಎಸ್ ಪಿಯಾಜಿಯೊ 36 ಡಬ್ಲ್ಯು 4850 ಆರ್‌ಪಿಎಂ ,

ಪೆಡಲ್ ಸ್ಟಾರ್ಟ್, ಡೈರಕ್ಟ್ ಟ್ರಾನ್ಸ್‌ಮಿಷನ್, 3 ಸ್ಪೀಡ್

ಬ್ರೇಕ್ ಹಾಗೂ ಟೈರ್

ಬ್ರೇಕ್ ಹಾಗೂ ಟೈರ್

ಮುಂಭಾಗದಲ್ಲಿ 126 ಎಂಎಂ ಡ್ರಮ್ ಡಯಾಮೀಟರ್,

ಹಿಂದುಗಡೆ 126 ಎಂಎಂ ಡ್ರಮ್ ಡಯಾಮೀಟರ್,

ಮರದಿಂದ ನಿರ್ಮಿತ ವೆಸ್ಪಾ ಐಕಾನಿಕ್ ಸ್ಕೂಟರ್

ಇಂಧನ ಟ್ಯಾಂಕ್ 5 ಲೀಟರ್,

ಭಾರ 107 ಕೆ.ಜಿ ,

ಸೀಟು ಎತ್ತರ 760 ಎಂಎಂ ,

ವೀಲ್ ಬೇಸ್ 1170 ಎಂಎಂ ,

ಉದ್ದ 1715 ಎಂಎಂ ,

ಗರಿಷ್ಠ ವೇಗ ಪ್ರತಿ ಗಂಟೆಗೆ 75 ಕೀ.ಮೀ.

Most Read Articles

Kannada
English summary
The images you see in the gallery below are of the beautiful wooden incarnation of a classic Vespa, crafted by Carlos Alberto.
Story first published: Friday, September 27, 2013, 15:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X