ಭಾರತಕ್ಕೆ ಲಗ್ಗೆಯಿಟ್ಟ ಚಿನ್ನ ಲೇಪಿತ ಲಂಬೋರ್ಗಿನಿ ಹ್ಯುರಕನ್

Written By:

ಭಾರತೀಯರಿಗೆ ಚಿನ್ನವೆಂದರೆ ಮೊದಲೇ ಅಚ್ಚುಮೆಚ್ಚು. ಇದರಿಂದಲೇ ಚಿನ್ನದ ಬಣ್ಣವನ್ನು ಹೊಂದಿರುವ ಯಾವುದೇ ವಸ್ತುಗಳನ್ನು ತಮ್ಮದಾಗಿಸಿಕೊಳ್ಳಲು ಬಯಸುತ್ತಾರೆ. ಈಗ ಕೋಲ್ಕತ್ತಾ ಮೂಲದ ಮಹಿಹೆಯೊಬ್ಬಾಕೆ ಅತ್ಯಂತ ವಿಶಿಷ್ಟವಾದ ಲಂಬೋರ್ಗಿನಿ ಹ್ಯುರಕನ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಲಂಬೋರ್ಗಿನಿ ಸೂಪರ್ ಕಾರು ಸಾಲಿನಲ್ಲಿ ತಾಜಾ ಪ್ರವೇಶವಾಗಿರುವ ಹ್ಯುರಕನ್ ಕೋಟಿಗಟ್ಟಲೆ ರುಪಾಯಿಗಳಷ್ಟು ಬೆಲೆ ಬಾಳುತ್ತದೆ. ಈಗ ಕೋಲ್ಕತ್ತಾದ ಮಹಿಳೆ ವಿಶೇಷ ಚಿನ್ನದ ವರ್ಣದ ಹ್ಯುರಕನ್ ಸೂಪರ್ ಕಾರನ್ನು ಖರೀದಿಸಿದ್ದಾರೆ.

ಭಾರತಕ್ಕೆ ಲಗ್ಗೆಯಿಟ್ಟ ಚಿನ್ನ ಲೇಪಿತ ಲಂಬೋರ್ಗಿನಿ ಹ್ಯುರಕನ್

"ಓರೊ ಎಲಿಯೊಸ್" ಎಂಬ ವಿಶೇಷ ಚಿನ್ನದ ವರ್ಣದ ಚಿನ್ನದ ವರ್ಣದ ಕಾರನ್ನು ಗಿಟ್ಟಿಸಿಕೊಂಡಿದ್ದಾರೆ. ಇಂತಹ ವರ್ಣದ ಕಾರನ್ನು ಖರೀದಿಸಿದ ವಿಶ್ವದ ಮೊದಲ ಮಹಿಳೆ ಎಂಬ ಗೌರವಕ್ಕೂ ಪಾತ್ರವಾಗಿದ್ದಾರೆ.

ಭಾರತಕ್ಕೆ ಲಗ್ಗೆಯಿಟ್ಟ ಚಿನ್ನ ಲೇಪಿತ ಲಂಬೋರ್ಗಿನಿ ಹ್ಯುರಕನ್

ಎರಡು ಕಾರಣಗಳಿಂದಾಗಿ ಚಿನ್ನಲೇಪಿತ ಲಂಬೋರ್ಗಿನಿ ಹ್ಯುರಕನ್ ವಿಶಿಷ್ಟವೆನಿಸುತ್ತದೆ. ಮೊದಲನೆಯದಾಗಿ ಈ ವರ್ಣದ ಕಾರನ್ನು ಪಡೆದ ವಿಶ್ವದ ಮೊದಲ ಮಹಿಳೆ ಮತ್ತು ಹ್ಯುರಕನ್ ಖರೀದಿಸಿದ ದೇಶದ ಮೊದಲ ಮಹಿಳೆಯೂ ಇವರಾಗಿದ್ದಾರೆ.

ಭಾರತಕ್ಕೆ ಲಗ್ಗೆಯಿಟ್ಟ ಚಿನ್ನ ಲೇಪಿತ ಲಂಬೋರ್ಗಿನಿ ಹ್ಯುರಕನ್

ಈಕೆ ತಮ್ಮ ಬಳಿಯಿದ್ದ ಹಳೆಯ ಹಸಿರು ವರ್ಣದ ಲಂಬೋರ್ಗಿನಿ ಗಲರ್ಡೊ ಕಾರನ್ನು ಬದಲಾಯಿಸುವ ಮೂಲಕ ನೂತನ ಹ್ಯುರಕನ್ ಸೂಪರ್ ಕಾರನ್ನು ಪಡೆದಿದ್ದಾರೆ. ಲಂಬೋರ್ಗಿನಿ ಹ್ಯುರಕನ್ ಈ ವಿಶೇಷ ಆವೃತ್ತಿಯು ಜಗತ್ತಿನಲ್ಲೇ ಆರು ಯುನಿಟ್ ಗಳಷ್ಟು ಮಾತ್ರ ನಿರ್ಮಿಸಲಾಗಿತ್ತು.

ಭಾರತಕ್ಕೆ ಲಗ್ಗೆಯಿಟ್ಟ ಚಿನ್ನ ಲೇಪಿತ ಲಂಬೋರ್ಗಿನಿ ಹ್ಯುರಕನ್

ಲಂಬೋರ್ಗಿನಿ ಹ್ಯುರಕನ್ ಶಕ್ತಿಶಾಲಿ 5.2 ಲೀಟರ್ ವಿ10 ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಅಲ್ಲದೆ 560 ಎನ್ ಎಂ ತಿರುಗುಬಲದಲ್ಲಿ 610 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ಭಾರತಕ್ಕೆ ಲಗ್ಗೆಯಿಟ್ಟ ಚಿನ್ನ ಲೇಪಿತ ಲಂಬೋರ್ಗಿನಿ ಹ್ಯುರಕನ್

ನೂತನ ಲಂಬೋರ್ಗಿನಿ ಹ್ಯುರಕನ್ ಕೇವಲ 3.2 ಸೆಕೆಂಡುಗಳಲ್ಲೇ ಗಂಟೆಗೆ ಗರಿಷ್ಠ 100 ಕೀ.ಮೀ. ವೇಗವರ್ಧಿಸುವ ಮತ್ತು ಗಂಟೆಗೆ ಗರಿಷ್ಠ 325 ಕೀ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯವನ್ನು ಹೊಂದಿದೆ.

ಭಾರತಕ್ಕೆ ಲಗ್ಗೆಯಿಟ್ಟ ಚಿನ್ನ ಲೇಪಿತ ಲಂಬೋರ್ಗಿನಿ ಹ್ಯುರಕನ್

ಭಾರತೀಯ ಮಾರುಕಟ್ಟೆಯಲ್ಲಿ ಲಂಬೋರ್ಗಿನಿ ಹ್ಯುರಕನ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 3.43 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

English summary
World’s First! Oro Elios Lamborghini Huracan Comes To India
Story first published: Saturday, April 23, 2016, 15:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark