ವಿಶ್ವದ ಅತಿ ದುಬಾರಿ ಕಾರು ಯಾವುದು ಗೊತ್ತೇ?

By Nagaraja

ನಿಮಗೆ ಜಗತ್ತಿನ ಅತಿ ಬೆಲೆ ಬಾಳುವ ಕಾರು ಯಾವುದೆಂಬುದು ಗೊತ್ತೇ? ಸಂಶಯ ಬೇಡ ಜಗತ್ತಿನ ಅತಿ ಪುರಾತನ ಹಾಗೂ ಪ್ರಖ್ಯಾತ ಕಾರು ತಯಾರಕ ಸಂಸ್ಥೆಯಾಗಿರುವ ಫೆರಾರಿ ಈ ಪಟ್ಟವನ್ನು ಆಲಂಕರಿಸಿಕೊಂಡಿದೆ.

ಇತ್ತೀಚೆಗಷ್ಟೇ ವಿಶ್ವದ ಅತಿ ದುಬಾರಿ ಕಾರೆಂಬ ಹೆಗ್ಗಳಿಕೆಗೆ 1963 ಫೆರಾರಿ 250 ಜಿಟಿಒ ( Ferrari 250 GTO) ಕಾರು ಪಾತ್ರವಾಗಿದೆ. ಹೌದು, ಹರಾಜು ಪ್ರಕ್ರಿಯೆಯೊಂದರಲ್ಲಿ ಕೋಟ್ಯಾಧಿಪತಿಯೊಬ್ಬರು ಬರೋಬ್ಬರಿ 321 ಕೋಟಿ ರುಪಾಯಿ (52 ಮಿಲಿಯನ್ ಅಮೆರಿಕನ್ ಡಾಲರ್) ಪಾವತಿಸಿ ಫೆರಾರಿ ಕಾರು ಖರೀದಿಸಿದ್ದಾರೆ ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ?

ವಿರಳದಲ್ಲಿ ಅತಿ ವಿರಳ ಎಂದೇ ವ್ಯಾಖ್ಯಾನಿಸಬಹುದಾದ ಈ ಕಾರಿನ ನೈಜ ಬೆಲೆ ಪ್ರಕಟಿಸಲು ಅಸಮ್ಮತಿ ಸೂಚಿಸಿದ್ದಾರೆ. ಆದರೆ ಮುಂದುವರಿದ ಬೆಳವಣಿಗೆಯಲ್ಲಿ ಬ್ಲೂಬರ್ಗ್ ನ್ಯೂಸ್ ಇದನ್ನು ಪ್ರಕಟಿಸಿದೆ. ಅಷ್ಟಕ್ಕೂ 300 ಕೋಟಿಗಳಷ್ಟು ಬೆಲೆ ಬಾಳುವ ಈ ಕಾರಿನಲ್ಲಿ ಅಂತಹ ವೈಶಿಷ್ಟ್ಯಗಳೇನಿದೆ? ಇದಕ್ಕೂ ಹಿಂದೆ ವಿಶ್ವದ ಅತಿ ದುಬಾರಿ ಕಾರು ಪಟ್ಟವನ್ನು ಯಾವ ಕಾರು ಹೊಂದಿತ್ತು? ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ...

ವಿಶ್ವದ ಅತಿ ದುಬಾರಿ ಕಾರು- 1963 ಫೆರಾರಿ 250 ಜಿಟಿಒ

ಇತಿಹಾಸದತ್ತ ತಿರುಗಿ ನೋಡಿದಾಗ ಅತಿ ಬೇಡಿಕೆಯ ಫೆರಾರಿ 250 ಜಿಟಿಒ ಕಾರಿನ ನಿಗದಿತ 39 ಯುನಿಟ್‌ಗಳಷ್ಟೇ ಉತ್ಪಾದಿಸಲಾಗಿತ್ತು. ಪ್ರಮುಖವಾಗಿಯೂ ಇದನ್ನು ಲಿ ಮ್ಯಾನ್ 24 ಹವರ್‌ಗಳಂತಹ ಜಿಟಿ ರೇಸ್‌ಗಳಿಗಾಗಿ ಮಾತ್ರ ಅಭಿವೃದ್ಧಿಪಡಿಸಲಾಗಿತ್ತು.

ವಿಶ್ವದ ಅತಿ ದುಬಾರಿ ಕಾರು- 1963 ಫೆರಾರಿ 250 ಜಿಟಿಒ

ಅಂದ ಹಾಗೆ ಈ ಹಿಂದಿನ ಅತಿ ದುಬಾರಿ ಕಾರೆಂಬ ದಾಖಲೆಯನ್ನು ಫೆರಾರಿ 250 ಜಿಟಿಒ ಕಾರು ಹೊಂದಿತ್ತು ಎಂಬುದು ಸಹ ಅತಿ ವಿಶೇಷ. ಆದರೆ ವ್ಯತ್ಯಾಸವಿಷ್ಟೇ ಅಂದೊಂದು ಹಸಿರು ಬಣ್ಣದ ಫೆರಾರಿ 250 ಜಿಟಿಒ ಕಾರಾಗಿತ್ತು. ಇದು ಬರೋಬ್ಬರಿ 35 ಮಿಲಿಯನ್ ಅಮೆರಿಕನ್ ಡಾಲರ್‌ಗೆ ಮಾರಾಟವಾಗಿತ್ತು.

ವಿಶ್ವದ ಅತಿ ದುಬಾರಿ ಕಾರು- 1963 ಫೆರಾರಿ 250 ಜಿಟಿಒ

Giotto Bizzarrini ಮುಂದಾಳತ್ವ ವಹಿಸಿದ್ದ ತಂಡವೊಂದು ಫೆರಾರಿ 250 ಜಿಟಿಒ ಕಾರನ್ನು ತಯಾರಿಸಿತ್ತು.

ವಿಶ್ವದ ಅತಿ ದುಬಾರಿ ಕಾರು- 1963 ಫೆರಾರಿ 250 ಜಿಟಿಒ

ಇದು 3.0 ಲೀಟರ್ ವಿ12 ಎಂಜಿನ್‌ನಿಂದ ನಿಯಂತ್ರಿಸ್ಪಡುತ್ತಿದ್ದು, 300 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದೆ.

ವಿಶ್ವದ ಅತಿ ದುಬಾರಿ ಕಾರು- 1963 ಫೆರಾರಿ 250 ಜಿಟಿಒ

ಪ್ರಸ್ತುತ ಕಾರು ಪ್ರತಿ ಗಂಟೆಗೆ 280 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಮೊನಲಿಸಾ

ಮೊನಲಿಸಾ

ಫೆರಾರಿ 250 ಜಿಟಿಒ ಕಾರಿಗೆ ಕಂಡುಬಂದಿರುವ ಇಷ್ಟೊಂದು ಬೇಡಿಕೆಯ ಪರಿಣಮವಾಗಿಯೇ ಇದನ್ನು ಮೊನಲಿಸಾ ಕಾರೆಂದು ಬಿಂಬಿಸಲಾಗಿದೆ.

ವಿಶ್ವದ ಅತಿ ದುಬಾರಿ ಕಾರು- 1963 ಫೆರಾರಿ 250 ಜಿಟಿಒ

ನಿಮ್ಮ ಮಾಹಿತಿಗಾಗಿ 1950 ಹಾಗೂ 1960ರ ದಶಕದ ಫೆರಾರಿ ಕಾರುಗಳ ಮೌಲ್ಯ ವರ್ಷಂಪ್ರತಿ ಸರಾಸರಿ ಶೇಕಡಾ 15ರಷ್ಟು ವರ್ಧನೆಯಾಗುತ್ತಿದೆ. ಇದು ವಿಂಟೇಜ್ ಫೆರಾರಿ ಕಾರುಗಳ ಬೇಡಿಕೆಗೆ ಕಾರಣವಾಗುತ್ತಿದೆ.

ವಿಶ್ವದ ಅತಿ ದುಬಾರಿ ಕಾರು- 1963 ಫೆರಾರಿ 250 ಜಿಟಿಒ

ಈ ಎಲ್ಲ ಹರಾಜು ಪ್ರಕ್ರಿಯೆಗಳು ಖಾಸಗಿಯಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ ಫೆರಾರಿಗಳಂತಹ ಅತಿ ಬೇಡಿಕೆಯ ಕಾರುಗಳಿಗೆ 300 ಕೋಟಿಗಿಂತಲೂ ಹೆಚ್ಚು ಮೊತ್ತ ಪಾವತಿಸಲು ವ್ಯಕ್ತಿಗಳು ತಯಾರಾಗಿರುತ್ತಾರೆ ಎಂದು ವಾಹನ ತಜ್ಞರು ಅಭಿಪ್ರಾಯಪಡುತ್ತಾರೆ.

Most Read Articles

Kannada
English summary
One 1963 Ferrari 250 GTO recently became the most expensive car in the world. The said car was bought by an unknown billionaire who paid a staggering $52 million for this rare car. That's 321 crores in Indian rupees!!
Story first published: Saturday, October 12, 2013, 10:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X