ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಕಾರು ಯಾವುದೇ ಗೊತ್ತೇ?

Written By:

ಐಷಾರಾಮಿ ಕಾರುಗಳನ್ನು ತಮ್ಮದಾಗಿಸಿಕೊಳ್ಳುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಅಷ್ಟಕ್ಕೂ ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಕಾರು ಯಾವುದೆಂಬುದು ಗೊತ್ತೇ? ಅದುವೇ ಮೇಬ್ಯಾಕ್ ಎಕ್ಸೆಲೆರೊ.

ಇವನ್ನೂ ಓದಿ: ಸುಂದರವಾದ ಕಾರು ಗ್ಯಾರೇಜುಗಳು

ವರ್ಷಂಪ್ರತಿ ಅನೇಕ ಐಷಾರಾಮಿ ಕಾರುಗಳು ಮಾರುಕಟ್ಟೆಗೆ ಅಪ್ಪಳಿಸುತ್ತಿವೆ. ಇವುಗಳಲ್ಲಿ ಮೇಬ್ಯಾಕ್, ಬೆಂಟ್ಲಿ, ಬುಗಾಟಿ, ರೋಲ್ಸ್ ರಾಯ್ಸ್ ಮತ್ತು ಮಸೆರಟಿ ತನ್ನದೇ ಆದ ವಿಶೇಷ ಸ್ಥಾನಮಾನ ಗಿಟ್ಟಿಸಿಕೊಂಡಿದೆ. ಅಷ್ಟಕ್ಕೂ ಅತ್ಯಂತ ದುಬಾರಿ ಮೇಬ್ಯಾಕ್ ಎಕ್ಸಲೆರೊ ಕಾರಿನ ದರ ಎಷ್ಟು ಗೊತ್ತೇ? ಇದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ...

ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಕಾರು - ಮೇಬ್ಯಾಕ್ ಎಕ್ಸಲೆರೊ

ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಕಾರೆಂಬ ಕೀರ್ತಿ ಗಿಟ್ಟಿಸಿಕೊಂಡಿರುವ ಮೇಬ್ಯಾಕ್ ಎಕ್ಸಲೆರೊ ಕಾರಿನ ಬೆಲೆ ಬರೋಬ್ಬರಿ 8,000,000 ಅಮೆರಿಕನ್ ಡಾಲರ್ ಆಗಿದೆ. ಇದನ್ನು ಭಾರತೀಯ ರುಪಾಯಿಗೆ ಪರಿವರ್ತಿಸಿದಾಗ 48.54 ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ.

ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಕಾರು - ಮೇಬ್ಯಾಕ್ ಎಕ್ಸಲೆರೊ

ಇಷ್ಟು ದುಬಾರಿ ಕಾರು ತನ್ನ ನೋಟದಲ್ಲೂ ಗುಟಮಟ್ಟತೆಯನ್ನು ಕಾಯ್ದುಕೊಂಡಿದೆ. ಇದು ಗಂಟೆಗೆ ಗರಿಷ್ಠ 218 ಮೈಲ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಕಾರು - ಮೇಬ್ಯಾಕ್ ಎಕ್ಸಲೆರೊ

ಅಂತೆಯೇ ಭರ್ಜರಿ 700 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಕೇವಲ 4.4 ಸೆಕೆಂಡುಗಳಲ್ಲಿ 0-60 ಮೈಲ್ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಕಾರು - ಮೇಬ್ಯಾಕ್ ಎಕ್ಸಲೆರೊ

ಕೇವಲ ವೇಗ ಮಾತ್ರವಲ್ಲದೆ ಅಂದತೆಯ ವಿಚಾರದಲ್ಲೂ ಮೇಬ್ಯಾಕ್ ಮೀರಿಸುವುದು ಕಷ್ಟ ಎಂದೇ ಹೇಳಬಹುದು. ಅಲ್ಲದೆ ಪ್ರತಿಯೊಂದು ಘಟಕ ನಿರ್ಮಾಣವನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.

ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಕಾರು - ಮೇಬ್ಯಾಕ್ ಎಕ್ಸಲೆರೊ

ಕಾರಿನ ಒಳಮೈ ಸಹ ಅಷ್ಟೇ ಆಕರ್ಷಕವಾಗಿದ್ದು, ಕಪ್ಪು ಹಾಗೂ ಕೆಂಪು ವರ್ಣದ ಮಿಶ್ರಣವನ್ನು ಪಸರಿಸಲಾಗಿದೆ.

ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಕಾರು - ಮೇಬ್ಯಾಕ್ ಎಕ್ಸಲೆರೊ

ಕಾರಿನೊಳಗೆ ಕಾರ್ಬನ್ ಫೈಬರ್ ಪರಿಕರಗಳನ್ನು ಬಳಕೆ ಮಾಡಲಾಗಿದ್ದು, ಐಷಾರಾಮಿ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗಿದೆ.

ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಕಾರು - ಮೇಬ್ಯಾಕ್ ಎಕ್ಸಲೆರೊ

ಎಲ್ಲ ಡಿಜಿಟಲ್ ತಂತ್ರಗಾರಿಕೆಯಿಂದ ಕೂಡಿರುವ ಡ್ಯಾಶ್ ಬೋರ್ಡ್ ಪರದೆಯಲ್ಲಿನ ನೀಲಿ ವರ್ಣದ ಮಾಹಿತಿಯು ಕಾರನ್ನು ಇನ್ನಷ್ಟು ಆಧುನಿಕತೆಯ ಅನುಭವ ನೀಡುತ್ತದೆ.

ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಕಾರು - ಮೇಬ್ಯಾಕ್ ಎಕ್ಸಲೆರೊ

ಇನ್ನು ಇದರ ದೇಹವನ್ನು ಗಮನಿಸಿದರೆ ನಯವಾದ ಹಾಗೂ ಹೆಚ್ಚು ಹೊಳಪಿನಿಂದ ಕೂಡಿರುತ್ತದೆ. ನಿಜವಾಗಿಯೂ ಇಂತಹ ಕಾರನ್ನು ತಮ್ಮದಾಗಿಸಿಕೊಳ್ಳುವುದು ಪ್ರತಿಯೊಬ್ಬರ ಕನಸಾಗಿರುತ್ತದೆ.

ಮೈಬ್ಯಾಕ್ ಬಗ್ಗೆ ಒಂದಿಷ್ಟು

ಮೈಬ್ಯಾಕ್ ಬಗ್ಗೆ ಒಂದಿಷ್ಟು

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಮೇಬ್ಯಾಕ್ ಸಂಸ್ಥೆಯನ್ನು 1909ನೇ ಇಸವಿಯಲ್ಲಿ ವಿಲ್ಹೆಮ್ ಮೇಬ್ಯಾಕ್ ಅವರು ಸ್ಥಾಪಿಸಿದ್ದರು. ಇದರ ಕೇಂದ್ರ ಕಚೇರಿ ಸ್ಟುಟ್‌ಗಾರ್ಟ್‌ನಲ್ಲಿದೆ.

ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಕಾರು - ಮೇಬ್ಯಾಕ್ ಎಕ್ಸಲೆರೊ

ಗರಿಷ್ಠ ನಿರ್ವಹಣೆಯ ಯೂನಿಕ್ ಸ್ಪೋರ್ಟ್ಸ್ ಕಾರಾಗಿರುವ ಮೇಬ್ಯಾಕ್ ಎಕ್ಸ್‌ಲೆರೊ ಆವೃತ್ತಿಯಲ್ಲಿ ಟರ್ಬೊ ವಿ12 ಎಂಜಿನ್ ಆಳವಡಿಸಲಾಗಿದೆ.

ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಕಾರು - ಮೇಬ್ಯಾಕ್ ಎಕ್ಸಲೆರೊ

ಹಾಗೆಯೇ ಎರಡು ಬಾಗಿಲುಗಳ ಕೂಪೆ ಶೈಲಿಯ ಈ ಕಾರಲ್ಲಿ ನಾಲ್ಕು ಆತಿಥಿಗಳಿಗೆ ಪಯಣಿಸಬಹುದಾಗಿದೆ. ಒಟ್ಟಿನಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಕಾಪಾಡುವಲ್ಲಿ ಮೇಬ್ಯಾಕ್ ಯಶಸ್ಸನ್ನು ಕಂಡಿದೆ.

English summary
The Maybach Exelero is a high-performance sports car designed and built by German luxury car manufacturer Maybach. It was presented in May 2005 in Berlin, Germany.Famous rapped Bryan ‘Birdman’ Williams did purchase the car in 2011 for the $8 million price. 
Story first published: Thursday, August 21, 2014, 16:39 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark