18 ಕೋಟಿ ಬೆಳೆಬಾಳುವ ಜಗತ್ತಿನ ಅತಿ ದುಬಾರಿ ಮೊಬೈಲ್ ಹೋಮ್

Written By:

'ದುಡ್ಡಿದ್ದವನೇ ದೊಡ್ಡಪ್ಪ' ಎಂಬ ರೀತಿಯಲ್ಲಿ ನೀವು ಹಣ ಸುರಿಯಲು ತಯಾರಾಗಿದ್ದರೆ ಜಗತ್ತಿನ ಯಾವುದೇ ಸುಖ ಸೌಲಭ್ಯಗಳನ್ನು ಅನುಭವಿಸಬಹುದು. ನಾವಿಂದು ನೂತನ ಐಷಾರಾಮಿ ಮೊಬೈಲ್ ಹೋಮ್ ಪರಿಚಯಸಲಿದ್ದು, ಇದು 18 ಕೋಟಿ ರು.ಗಳಷ್ಟು ದುಬಾರಿಯಾಗಿದೆ.

ಈ ಮೂಲಕ ಜಗತ್ತಿನ ಅತಿ ದುಬಾರಿ ಮೊಬೈಲ್ ಹೋಮ್ ಎಂದೆನಿಸಿಕೊಂಡಿದೆ. ದುಬೈ ರಾಜಮನೆತನದವರಿಗೆ ಹೇಳಿ ಮಾಡಿಸಿರುವಂತಹ ಮೊಬೈಲ್ ಹೋಮ್‌ನಲ್ಲಿ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಲಭ್ಯವಾಗುವ ಎಲ್ಲ ಸೌಲಭ್ಯಗಳು ನಿಮ್ಮನ್ನು ಹಿಂಬಾಲಿಸಲಿದೆ. 20 ಟನ್ ಭಾರದ ಎಲೆಮೆಂಟ್ ಪಲಜೊ (element palazo) ಮೊಬೈಲ್ ಹೋಮನ್ನು ಆಸ್ಟ್ರೀಯಾ ಮೂಲದ ಮಾರ್ಚಿ ಮೊಬೈಲ್ ಎಂಬ ಕಂಪನಿಯು ನಿರ್ಮಿಸಿದೆ.

ಜಗತ್ತಿನ ಅತಿ ದುಬಾರಿ ಮೊಬೈಲ್ ಹೋಮ್

ಈ ಮೊಬೈಲ್ ಹೋಮ್ ಒಳಗಡೆ ತೆರಳಿದರೆ ನಿಮಗೆ ಪಂಚತಾರಾ ಹೋಟೆಲ್‌ನಲ್ಲಿರುವಂತೆ ಭಾಸವಾಗಲಿದೆ. ಇಲ್ಲಿನ ಐಷಾರಾಮಿ ಬೆಡ್‌ಗಳಿಗೆ ವುಡನ್ ಟಚ್ ನೀಡಲಾಗಿದೆ.

ಜಗತ್ತಿನ ಅತಿ ದುಬಾರಿ ಮೊಬೈಲ್ ಹೋಮ್

ಒಳಗಡೆ ಮಾರ್ಬಲ್‌ ಫಿನಿಶಿಂಗ್ ಮಾಡಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ಕೊಠಡಿಯಿರುವ ಈ ಮೋಟಾರ್ ಹೋಮ್‌ನಲ್ಲಿ 40 ಇಂಚು ಎಲ್‌ಸಿಡಿ ಸೌಲಭ್ಯವಿದೆ.

ಜಗತ್ತಿನ ಅತಿ ದುಬಾರಿ ಮೊಬೈಲ್ ಹೋಮ್

ಇನ್ನು ಮೇಲ್ಛಾವನಿ ಓಪನ್ ಟಾಪ್ ಆಗಿದ್ದರೂ ಮಳೆ ಮುಂತಾದ ಕೆಟ್ಟ ಹವಾಮಾನವನ್ನು ನಿಯಂತ್ರಿಸಲು ರೂಫ್ ಟಾಪ್ ಟೆರಸ್ ಲಗತ್ತಿಸಲಾಗಿದೆ. ಇದು ನಗರದ ಸೌಂದರ್ಯ ಸವಿಯಲು ನೆರವಾಗಲಿದೆ.

ಜಗತ್ತಿನ ಅತಿ ದುಬಾರಿ ಮೊಬೈಲ್ ಹೋಮ್

ಚಾಲಕನಿಗೂ ಐಷಾರಾಮಿ ಸಿಟ್ಟಿಂಗ್ ವ್ಯವಸ್ಥೆ ಒದಗಿಸಲಾಗಿದೆ. ಇದು ಜಂಬೋ ಜೆಟ್‌ನಲ್ಲಿ ಚಾಲನೆ ಮಾಡುವ ಅನುಭವ ನೀಡಲಿದೆ. ಎರಡನೇ ಮಹಡಿಯಲ್ಲಿ ಡ್ರೈವರ್ ಸೀಟಿದೆ.

ಜಗತ್ತಿನ ಅತಿ ದುಬಾರಿ ಮೊಬೈಲ್ ಹೋಮ್

ಅಷ್ಟೇ ಯಾಕೆ ಮೊಬೈಲ್ ಹೋಮ್ ಹೊರಗಡೆ ಚಿನ್ನದ ಲೇಪನ ಮಾಡಲಾಗಿದೆ. ಇದು ದುಬೈ ಶೇಖ್‌ಗೆ ಹೊಂದಿಕೆಯಾಗಲಿದೆ.

ಜಗತ್ತಿನ ಅತಿ ದುಬಾರಿ ಮೊಬೈಲ್ ಹೋಮ್

ಪ್ರಸ್ತುತ ಮೊಬೈಲ್ ಹೋಮ್‌ನ ಇಂಧನ ದಕ್ಷತೆ ಬಗ್ಗೆ ಮಾಹಿತಿ ಲಭಿಸಲಿದ್ದರೂ 510 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವುದಾಗಿ ತಿಳಿದು ಬಂದಿದೆ.

ಜಗತ್ತಿನ ಅತಿ ದುಬಾರಿ ಮೊಬೈಲ್ ಹೋಮ್

ನಿಮ್ಮ ಮಾಹಿತಿಗಾಗಿ, ಕಂಪನಿಯು ಈಗಾಗಲೇ 40 ಯುನಿಟ್‌ಗಳನ್ನು ಮಾರಾಟ ಮುಗಿಸಿದ್ದು, ಆರ್ಡರ್ ಅನುಸಾರವಾಗಿ ಉತ್ಪಾದನೆ ಪ್ರಕ್ರಿಯೆ ನಡೆಯುತ್ತಿದೆ.

element Palazo

element Palazo

element Palazo

element Palazo

English summary
The $1.9 million element Palazo mobile home, designed by Austria-based Marchi Mobile is a 20-ton rolling fortress fit for a king.
Story first published: Thursday, June 13, 2013, 10:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark