ಸಿಎಂ ಯೋಗಿ ಆದಿತ್ಯನಾಥನ ರಕ್ಷಣೆಗೆ ನಿಂತ ಆ ಐಷಾರಾಮಿ ಕಾರಿನ ವಿಶೇಷತೆ ಏನ್ ಗೊತ್ತಾ?

Written By:

ವಿವಾದಗಳಿಂದಲೇ ಉತ್ತರ ಪ್ರದೇಶದಲ್ಲಿ ತನ್ನದೇ ಹವಾ ಸೃಷ್ಠಿಸಿ ಇದೀಗ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಯೋಗಿ ಆದಿತ್ಯನಾಥ, ಸದ್ಯ ಹೊಸ ವಿಚಾರಕ್ಕೆ ಮತ್ತೆ ಸುದ್ಧಿಯಲ್ಲಿದ್ದಾರೆ. ತಮ್ಮ ಭದ್ರತೆಗಾಗಿ ಹೆಚ್ಚಿನ ಹಣ ವಿನಿಯೋಗಿಸಿರುವ ಯೋಗಿ, ಐಷಾರಾಮಿ ಮರ್ಸಿಡಿಸ್ ಎಂ ಗಾರ್ಡ್ ಕಾರು ಖರೀದಿ ಮಾಡಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥನ ರಕ್ಷಣೆಗೆ ನಿಂತ ಆ ಐಷಾರಾಮಿ ಕಾರಿನ ವಿಶೇಷತೆ ಏನ್ ಗೊತ್ತಾ?

ಹೊಸ ಕಾರು ಖರೀದಿ ಏಕೆ?

ಹಿಂದುತ್ವದ ಪ್ರತಿಪಾದಕ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೇ ರಾಜ್ಯದ ಬದಲಾವಣೆಗೆ ಹೊಸ ಹೊಸ ಯೋಜನೆ ರೂಪಿಸುತ್ತಿದ್ದು, ವಿರೋಧದ ನಡುವೆಯೂ ಕೆಲವು ದಿಟ್ಟಹೆಜ್ಜೆಗಳನ್ನು ಇಡುತ್ತಿದ್ದಾರೆ. ಹೀಗಾಗಿ ತಮ್ಮ ಭದ್ರತೆ ಹೆಚ್ಚಿಸಿಕೊಂಡಿರುವ ಯೋಗಿ, ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥನ ರಕ್ಷಣೆಗೆ ನಿಂತ ಆ ಐಷಾರಾಮಿ ಕಾರಿನ ವಿಶೇಷತೆ ಏನ್ ಗೊತ್ತಾ?

ಹೊಸ ಕಾರಿನ ಬೆಲೆ ಎಷ್ಟು ಗೊತ್ತಾ?

ಐಷಾರಾಮಿ ಕಾರುಗಳಲ್ಲಿ ಒಂದಾಗಿರುವ ಮರ್ಸಿಡಿಸ್ ಎಸ್‌ಯುವಿ ಎಂ-ಗಾರ್ಡ್ ಕಾರಿನ ಬೆಲೆ 3 ಕೋಟಿಗೂ ಅಧಿಕವೆಂದರೆ ನಂಬಲೇಬೇಕು. ವಿಶ್ವ ದರ್ಜೆಯ ವಿನ್ಯಾಸಗಳನ್ನು ಹೊಂದಿರುವ ಈ ಕಾರಿನಲ್ಲಿ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಸಿಎಂ ಯೋಗಿ ಆದಿತ್ಯನಾಥನ ರಕ್ಷಣೆಗೆ ನಿಂತ ಆ ಐಷಾರಾಮಿ ಕಾರಿನ ವಿಶೇಷತೆ ಏನ್ ಗೊತ್ತಾ?

ಎಂ ಗಾರ್ಡ್ ವಿಶೇಷತೆ ಏನು?

ಬುಲೆಟ್ ಪ್ರೂಫ್ ವ್ಯವಸ್ಥೆ ಹೊಂದಿರುವ ಮರ್ಸಿಡಿಸ್ ಎಂ ಗಾರ್ಡ್ ಕಾರು, ವಿಶೇಷವಾಗಿ ವಿವಿಐಪಿಗಳ ಭದ್ರತೆಗಾಗಿಯೇ ಸಿದ್ಧಗೊಂಡಿದೆ. ಹೀಗಾಗಿ ಪ್ರಬಲ ಸ್ಥಾನದಲ್ಲಿರುವ ಯೋಗಿ ಆದಿತ್ಯನಾಥ ತಮ್ಮ ರಕ್ಷಣೆಗಾಗಿ ಎಂ- ಗಾರ್ಡ್ ಆಯ್ದುಕೊಂಡಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥನ ರಕ್ಷಣೆಗೆ ನಿಂತ ಆ ಐಷಾರಾಮಿ ಕಾರಿನ ವಿಶೇಷತೆ ಏನ್ ಗೊತ್ತಾ?

ಇತರೆ ಕಾರುಗಳಿಂತ 385 ಕೆಜಿ ಹೆಚ್ಚು ಭಾರವಿರುವ ಮರ್ಸಿಡಿಸ್ ಎಂ ಗಾರ್ಡ್ ಕಾರಿನಲ್ಲಿ ಹತ್ತಾರು ಭದ್ರತಾ ವ್ಯವಸ್ಥೆಗಳಿವೆ. ಒಂದು ವೇಳೆ ಈ ಕಾರಿನ ಮೇಲೆ ಗುಂಡಿನ ದಾಳಿ ನಡೆದರೂ ಒಂದೇ ಒಂದು ಕೂದಲು ಅಳಕದಂತೆ ರಕ್ಷಣೆ ಮಾಡುವಷ್ಟು ಅಗತ್ಯ ಭದ್ರತಾ ವ್ಯವಸ್ಥೆಗಳಿವೆ.

ಸಿಎಂ ಯೋಗಿ ಆದಿತ್ಯನಾಥನ ರಕ್ಷಣೆಗೆ ನಿಂತ ಆ ಐಷಾರಾಮಿ ಕಾರಿನ ವಿಶೇಷತೆ ಏನ್ ಗೊತ್ತಾ?

ಎಂ ಗಾರ್ಡ್ ಕಾರಿನಲ್ಲಿ VR4 ಪ್ರತಿರೋಧ ಮಟ್ಟ ಒದಗಿಸಲಾಗಿದ್ದು, ಕಾರಿನ ಒಳಭಾಗದಲ್ಲೇ ಏರ್‌ಮ್ಯಾಟಿಕ್ ವ್ಯವಸ್ಥೆಯಿದೆ. ಹೀಗಾಗಿ ಗುಂಡಿನ ದಾಳಿ ನಡೆದರೂ ಯಾವುದೇ ಧಕ್ಕೆಯಾಗದಂತೆ ವಿಶೇಷ ಒಳವಿನ್ಯಾಸಗಳನ್ನು ನಿರ್ಮಾಣ ಮಾಡಲಾಗಿದೆ.

ಸಿಎಂ ಯೋಗಿ ಆದಿತ್ಯನಾಥನ ರಕ್ಷಣೆಗೆ ನಿಂತ ಆ ಐಷಾರಾಮಿ ಕಾರಿನ ವಿಶೇಷತೆ ಏನ್ ಗೊತ್ತಾ?

ಕಾರಿನ ಕಿಟಕಿಗಳು ಮತ್ತು ಬಾಗಿಲುಗಳಲ್ಲಿ ಹೆಚ್ಚುವರಿ ರಕ್ಷಣಾ ಮಾರ್ಪಾಡುಗಳನ್ನು ಹೊಂದಿದ್ದು, ಶಾರ್ಟರ್‌ಪ್ರೂಫ್ ಪ್ರತಿರೋಧಕ ವ್ಯವಸ್ಥೆಗಳನ್ನು ಜೋಡಿಸಲಾಗಿದೆ. ಇದೇ ಕಾರಣಕ್ಕಾಗಿಯೇ ಯೋಗಿ ಆದಿತ್ಯನಾಥ ಅವರು ಎಂ ಗಾರ್ಡ್ ಖರೀದಿ ಮಾಡಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥನ ರಕ್ಷಣೆಗೆ ನಿಂತ ಆ ಐಷಾರಾಮಿ ಕಾರಿನ ವಿಶೇಷತೆ ಏನ್ ಗೊತ್ತಾ?

4-7 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಮರ್ಸಿಡಿಸ್ ಎಂ ಗಾರ್ಡ್ ಕಾರು, ಕೇವಲ 6.5 ಸೇಕೆಂಡುಗಳಲ್ಲಿ 0-100 ಕಿಲೋ ಮೀಟರ್ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದೆ.

ಸಿಎಂ ಯೋಗಿ ಆದಿತ್ಯನಾಥನ ರಕ್ಷಣೆಗೆ ನಿಂತ ಆ ಐಷಾರಾಮಿ ಕಾರಿನ ವಿಶೇಷತೆ ಏನ್ ಗೊತ್ತಾ?

ವಿರೋಧಿಗಳಿಗೆ ಆಹಾರವಾದ ಯೋಗಿ..!!

ಸದ್ಯ ಉತ್ತರ ಪ್ರದೇಶದಲ್ಲಿ ಜನಪರ ಯೋಜನೆಗಳ ಮೂಲಕ ಎಲ್ಲ ವರ್ಗದ ಜನರಿಗೂ ಹತ್ತಿರವಾಗುತ್ತಿರುವ ಯೋಗಿ, ವಿರೋಧಿಗಳಿಗೆ ತಮ್ಮ ಜನಪ್ರಿಯಕಾರ್ಯಕ್ರಮಗಳ ಮೂಲಕ ಹತ್ತಿರವಾಗುತ್ತಿದ್ದಾರೆ. ಹೀಗಾಗಿ ದುಬಾರಿ ಕಾರು ಖರೀದಿ ವಿಚಾರವನ್ನೇ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಟೀಕೆ ಶುರುಮಾಡಿವೆ.

ಸಿಎಂ ಯೋಗಿ ಆದಿತ್ಯನಾಥನ ರಕ್ಷಣೆಗೆ ನಿಂತ ಆ ಐಷಾರಾಮಿ ಕಾರಿನ ವಿಶೇಷತೆ ಏನ್ ಗೊತ್ತಾ?

ಆದ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರೋ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ತಮ್ಮ ಭದ್ರತೆ ಬಗ್ಗೆ ಯಾವುದೇ ಗುಟ್ಟುಬಿಟ್ಟುಕೊಟ್ಟಿಲ್ಲಾ. ಈ ಮಧ್ಯೆ ಹೊಸ ಕಾರಿನಲ್ಲೇ ರಾಜ್ಯ ಪ್ರವಾಸ ಮಾಡುತ್ತಿರುವ ಯೋಗಿ, ಜನಸಾಮಾನ್ಯರ ಸಂಕಷ್ಟಗಳತ್ತ ಗಮನಹರಿಸುತ್ತಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥನ ರಕ್ಷಣೆಗೆ ನಿಂತ ಆ ಐಷಾರಾಮಿ ಕಾರಿನ ವಿಶೇಷತೆ ಏನ್ ಗೊತ್ತಾ?

ಈ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅಲಿಲೇಶ್ ಯಾದವ್ ಕೂಡಾ ತಮ್ಮ ರಕ್ಷಣೆಗಾಗಿ ಹಲವು ದುಬಾರಿ ಕಾರುಗಳನ್ನು ಬಳಕೆ ಮಾಡಿದ್ದರಲ್ಲದೇ ಭಾರೀ ಚರ್ಚೆಗೆ ಕಾರಣವಾಗಿದ್ದರು. ಆದ್ರೆ ಇದೀಗ ಯೋಗಿ ಸರದಿ.

ಸಿಎಂ ಯೋಗಿ ಆದಿತ್ಯನಾಥನ ರಕ್ಷಣೆಗೆ ನಿಂತ ಆ ಐಷಾರಾಮಿ ಕಾರಿನ ವಿಶೇಷತೆ ಏನ್ ಗೊತ್ತಾ?

ಯೋಗಿಗೆ ಅಚ್ಚುಮೆಚ್ಟು ಟೊಯೊಟಾ ಇನ್ನೋವಾ

ಸೋಲಿಲ್ಲದ ಸರದಾರ ಎಂದೇ ಬಿಂಬಿತವಾಗಿರೋ ಯೋಗಿ ಆದಿತ್ಯನಾಥ ಈ ಮೊದಲು ಐದು ಬಾರಿ ಲೋಕಸಭೆ ಪ್ರತಿನಿಧಿಸಿದ್ದಾರೆ. ಸಾಮಾನ್ಯರಂತೇ ಜೀವನಶೈಲಿ ನಡೆಸೋ ಯೋಗಿಗೆ ತಮ್ಮ ಟೊಯೊಟಾ ಇನ್ನೋವಾ ಅಂದರೇ ಎಲ್ಲಿದ ಪ್ರೀತಿ.

ಸಿಎಂ ಯೋಗಿ ಆದಿತ್ಯನಾಥನ ರಕ್ಷಣೆಗೆ ನಿಂತ ಆ ಐಷಾರಾಮಿ ಕಾರಿನ ವಿಶೇಷತೆ ಏನ್ ಗೊತ್ತಾ?

ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೇರಿ ಕೇವಲ ಕೆಲವೇ ಗಂಟೆಗಳಲ್ಲಿ ಹತ್ತಾರು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿರುವ ಯೋಗಿ ಆದಿತ್ಯನಾಥ, ಸದ್ಯ ಬಿಜೆಪಿಯ ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿಯಾಗಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥನ ರಕ್ಷಣೆಗೆ ನಿಂತ ಆ ಐಷಾರಾಮಿ ಕಾರಿನ ವಿಶೇಷತೆ ಏನ್ ಗೊತ್ತಾ?

ಉತ್ತರ ಪ್ರದೇಶದಂತಹ ಅತಿದೊಡ್ಡ ರಾಜ್ಯಗಳಲ್ಲಿ ಭದ್ರತಾ ವಿಚಾರವು ಪ್ರಮುಖವಾಗುತ್ತೆ. ಹೀಗಾಗಿ ದುಬಾರಿ ಕಾರು ಖರೀದಿ ಬಗ್ಗೆ ಸಮರ್ಥನೆ ನಿಡೋ ಯೋಗಿ ಆಪ್ತರು, ಅರ್ಥವಿಲ್ಲದ ವಿರೋಧಿಗಳ ವಾದಕ್ಕೆ ಸಾಮಾಜಿಕ ತಾಣಗಳಲ್ಲಿ ತಿರುಗೇಟು ನೀಡುತ್ತಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥನ ರಕ್ಷಣೆಗೆ ನಿಂತ ಆ ಐಷಾರಾಮಿ ಕಾರಿನ ವಿಶೇಷತೆ ಏನ್ ಗೊತ್ತಾ?

ಆದ್ರೆ ಅದೇನೇ ಇರಲಿ ಅಭಿವೃದ್ಧಿ ವಿಚಾರದಲ್ಲಿ ಉತ್ತರ ಪ್ರದೇಶವು ತೀರಾ ಹಿಂದುಳಿದಿದ್ದು, ಕೋಟ್ಯಾಂತರ ಜನ ಬಡತನ ರೇಖೆಗಿಂತ ಕೆಳಗೆ ಬದುಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಿಎಂ ಯೋಗಿಗೆ ಐಷಾರಾಮಿ ಕಾರು ಬೇಕಿತ್ತೆ ಎಂಬ ಪ್ರಶ್ನೆಗಳು ಕೂಡಾ ಕೇಳಿ ಬರುತ್ತಿವೆ.

English summary
Read in Kannda About UP Chief Minister Yogi Adityanaths New mercedes m guard suv Car.
Please Wait while comments are loading...

Latest Photos