ನಮ್ಮ ಬೆಂಗಳೂರು ಸೇರಿ ನಾಲ್ಕು ಮಾಹಾನಗರಗಳಲ್ಲಿ ಡ್ರೋನ್ ಮೂಲಕ ಸರಕುಗಳನ್ನು ವಿತರಿಸಲಿದೆ ಜೈಪ್

ಇ-ಕಾರ್ಮಸ್ ಗ್ರಾಹಕರಿಗೆ ಸರಕುಗಳನ್ನು ನಿಗದಿತ ಅವಧಿಯಲ್ಲಿ ತಲುಪಿಸಲು ಹಲವಾರು ಹೊಸ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿರುವ ಸರಕು ವಿತರಣಾ ಕಂಪನಿಗಳು ಗ್ರಾಹಕರಿಗೆ ಹೊಸ ಅನುಭವ ನೀಡುತ್ತಿದ್ದು, ದೇಶಾದ್ಯಂತ ಉತ್ತಮ ವಿತರಣಾ ಜಾಲ ಹೊಂದಿರುವ ಜೈಪ್ ಎಲೆಕ್ಟ್ರಿಕ್ ಕಂಪನಿಯು ಸರಕು ವಿತರಣೆಗಾಗಿ ದೇಶದ ಪ್ರಮುಖ ನಗರಗಳಲ್ಲಿ ಡ್ರೋನ್ ಬಳಕೆಗೆ ಸಿದ್ದವಾಗಿದೆ.

ನಮ್ಮ ಬೆಂಗಳೂರು ಸೇರಿ ನಾಲ್ಕು ಮಾಹಾನಗರಗಳಲ್ಲಿ ಡ್ರೋನ್ ಮೂಲಕ ಸರಕುಗಳನ್ನು ವಿತರಿಸಲಿದೆ ಜೈಪ್

ಜೈಪ್ ಎಲೆಕ್ಟ್ರಿಕ್ ಕಂಪನಿಯು ಭಾರತದಲ್ಲಿ ಕೊನೆಯ ಮೈಲಿ ತನಕದ ಗೂಡ್ಸ್ ವಿತರಣೆಗಾಗಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಂಡ ಮೊದಲ ಡೆಲಿವರಿ ಕಂಪನಿಯಾಗಿದ್ದು, ಇದೀಗ ಉದ್ಯಮ ವಿಸ್ತರಣೆಗಾಗಿ ಡ್ರೋನ್ ಲಾಜಿಸ್ಟಿಕ್ಸ್ ವಿಭಾಗಕ್ಕೆ ಪ್ರವೇಶಿಸುತ್ತಿದೆ.

ನಮ್ಮ ಬೆಂಗಳೂರು ಸೇರಿ ನಾಲ್ಕು ಮಾಹಾನಗರಗಳಲ್ಲಿ ಡ್ರೋನ್ ಮೂಲಕ ಸರಕುಗಳನ್ನು ವಿತರಿಸಲಿದೆ ಜೈಪ್

ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಈಗಾಗಲೇ ಡ್ರೋನ್ ಲಾಜಿಸ್ಟಿಕ್ಸ್ ಉತ್ತಮ ಪ್ರಕ್ರಿಯೆ ಪಡೆದುಕೊಂಡಿದ್ದು, ಭಾರತದಲ್ಲೂ ಸಹ ಹಲವಾರು ಕಂಪನಿಗಳು ಡ್ರೋನ್ ಲಾಜಿಸ್ಟಿಕ್ಸ್ ವಿಭಾಗದಲ್ಲಿ ಪೂರ್ಣ ಪ್ರಮಾಣದ ಉದ್ಯಮ ಕಾರ್ಯಾಚರಣೆಗೆ ಸಿದ್ದವಾಗುತ್ತಿವೆ.

ನಮ್ಮ ಬೆಂಗಳೂರು ಸೇರಿ ನಾಲ್ಕು ಮಾಹಾನಗರಗಳಲ್ಲಿ ಡ್ರೋನ್ ಮೂಲಕ ಸರಕುಗಳನ್ನು ವಿತರಿಸಲಿದೆ ಜೈಪ್

ಇ-ಕಾಮರ್ಸ್ ಸೇವೆಗಳನ್ನು ಸರಳಗೊಳಿಸಲು ಟಿಎಸ್‍ಎಡಬ್ಲ್ಯು(TSAW) ಕಂಪನಿಯೊಂದಿಗೆ ಡ್ರೋನ್ ಸೇವೆಗಳಿಗೆ ಪಾಲುದಾರಿಕೆ ಪ್ರಕಟಿಸಿರುವ ಜೈಪ್ ಎಲೆಕ್ಟ್ರಿಕ್ ಕಂಪನಿಯು ದೆಹಲಿ-ಎನ್‌ಸಿಆರ್, ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ಪುಣೆಯಲ್ಲಿ 200 ಯನಿಟ್‌ಗಳೊಂದಿಗೆ ಹೊಸ ಡ್ರೋನ್ ಲಾಜಿಸ್ಟಿಕ್ಸ್ ಆರಂಭಿಸುತ್ತಿದೆ.

ನಮ್ಮ ಬೆಂಗಳೂರು ಸೇರಿ ನಾಲ್ಕು ಮಾಹಾನಗರಗಳಲ್ಲಿ ಡ್ರೋನ್ ಮೂಲಕ ಸರಕುಗಳನ್ನು ವಿತರಿಸಲಿದೆ ಜೈಪ್

ಡ್ರೋನ್ ಲಾಜಿಸ್ಟಿಕ್ಸ್ ಮೂಲಕ ಸಾಮಾನ್ಯ ರಸ್ತೆಗಳಲ್ಲಿ ತಲುಪಲು ಕಷ್ಟಕರವಾಗುವ ಪರ್ವತ ಪ್ರದೇಶಗಳಲ್ಲಿ ಔಷಧಿಗಳು, ಆಹಾರ, ದಿನಸಿಗಳ ದೂರದ ವಿತರಣೆಯನ್ನು ಸುಲಭಗೊಳಿಸಲಿದ್ದು, ಸರಕು ವಿತರಣೆಯನ್ನು ಸೂಚಿಸಿದ ವ್ಯಕ್ತಿಗೆ ತಲುಪಿಸಿರುವುದನ್ನು ಖಚಿತಪಡಿಸಲು ಸ್ಮಾರ್ಟ್ ಲಾಕರ್ ಅಳವಡಿಸಲಾಗಿದೆ.

ನಮ್ಮ ಬೆಂಗಳೂರು ಸೇರಿ ನಾಲ್ಕು ಮಾಹಾನಗರಗಳಲ್ಲಿ ಡ್ರೋನ್ ಮೂಲಕ ಸರಕುಗಳನ್ನು ವಿತರಿಸಲಿದೆ ಜೈಪ್

ಸ್ಮಾರ್ಟ್ ಲಾಕರ್‌ನಲ್ಲಿ ಗ್ರಾಹಕರಿಗೆ ಕಂಪನಿಯು ಕಳುಹಿಸುವ ಒಟಿಪಿ(ಒನ್ ಟೈಮ್ ಪಾಸ್‌ವರ್ಡ್) ನಮೂದಿಸಿದ ನಂತರವೇ ಸರಕು ಪಡೆದುಕೊಳ್ಳಬಹುದಾಗಿದ್ದು, ವಿತರಣೆಯ ಸಮಯದಲ್ಲಿ ಇದು ವಸ್ತುಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

ನಮ್ಮ ಬೆಂಗಳೂರು ಸೇರಿ ನಾಲ್ಕು ಮಾಹಾನಗರಗಳಲ್ಲಿ ಡ್ರೋನ್ ಮೂಲಕ ಸರಕುಗಳನ್ನು ವಿತರಿಸಲಿದೆ ಜೈಪ್

ಡ್ರೋನ್ಸ್ ಲಾಜಿಸ್ಟಿಕ್ಸ್‌ನಲ್ಲಿ ಹಲವಾರು ಹೊಸ ಪ್ರಯೋಗಗಳ ಮೂಲಕ ಸುರಕ್ಷತೆಯನ್ನು ಖಚಿತಪಡಿಸಿರುವ ಟಿಎಸ್‍ಎಡಬ್ಲ್ಯು ಕಂಪನಿಯು ಇದೀಗ ಜೈಪ್ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ್ದು, ಟಿಎಸ್‍ಎಡಬ್ಲ್ಯು ಕಂಪನಿಯು ಡ್ರೋನ್ ಬಾಟ್‌ಗಳನ್ನು ಅಭಿವೃದ್ಧಿಪಡಿಸಿದ ಮೊದಲ ಕಂಪನಿಯಾಗಿ ಗುರುತಿಸಿಕೊಂಡಿದೆ.

ನಮ್ಮ ಬೆಂಗಳೂರು ಸೇರಿ ನಾಲ್ಕು ಮಾಹಾನಗರಗಳಲ್ಲಿ ಡ್ರೋನ್ ಮೂಲಕ ಸರಕುಗಳನ್ನು ವಿತರಿಸಲಿದೆ ಜೈಪ್

ಡ್ರೋನ್ಸ್ ಲಾಜಿಸ್ಟಿಕ್ಸ್‌ ಸೌಲಭ್ಯವನ್ನು ಗರಿಷ್ಠ ಸುರಕ್ಷತೆಯೊಂದಿಗೆ ಯಶಸ್ವಿಗೊಳಿಸುವತ್ತ ಹಲವಾರು ಪ್ರಯೋಗ ಮಾಡಿರುವ ಟಿಎಸ್‍ಎಡಬ್ಲ್ಯು ಕಂಪನಿಯು ಸ್ಮಾರ್ಟ್ ಗ್ರೌಂಡ್ ಕಂಟ್ರೋಲ್ ಸ್ಟೇಷನ್ (ಜಿಸಿಎಸ್), ಮಾನವರಹಿತ ಏರ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ (ಯುಟಿಎಂ) ಮತ್ತು ಎಐ-ಅಸಿಸ್ಟೆಡ್ ಸ್ಮಾರ್ಟ್ ಫ್ಲೀಟ್ ಅನ್ನು ಒಳಗೊಂಡಿರುವ ಎಂಡ್-ಟು-ಎಂಡ್ ಇಂಟೆಲಿಜೆಂಟ್ ಟೆಕ್ನಾಲಜಿ ಸ್ಟಾಕ್ ಅನ್ನು ಸಹ ನಿರ್ಮಿಸಿದೆ.

ನಮ್ಮ ಬೆಂಗಳೂರು ಸೇರಿ ನಾಲ್ಕು ಮಾಹಾನಗರಗಳಲ್ಲಿ ಡ್ರೋನ್ ಮೂಲಕ ಸರಕುಗಳನ್ನು ವಿತರಿಸಲಿದೆ ಜೈಪ್

ಹೀಗಾಗಿ ಭವಿಷ್ಯದಲ್ಲಿ ಸಾರಿಗೆ ಸೌಲಭ್ಯಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿರುವ ಜೈಪ್ ಎಲೆಕ್ಟ್ರಿಕ್ ಕಂಪನಿಯು ಟಿಎಸ್‍ಎಡಬ್ಲ್ಯು ಕಂಪನಿಯೊಂದಿಗೆ ಪಾಲುದಾರಿಕೆ ಪ್ರಕಟಿಸಿದ್ದು, ಬಿಟುಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ವಿಭಾಗದಲ್ಲಿ ಜೈಪ್ ಮುಂಚೂಣಿ ಸಾಧಿಸುತ್ತಿದೆ.

ನಮ್ಮ ಬೆಂಗಳೂರು ಸೇರಿ ನಾಲ್ಕು ಮಾಹಾನಗರಗಳಲ್ಲಿ ಡ್ರೋನ್ ಮೂಲಕ ಸರಕುಗಳನ್ನು ವಿತರಿಸಲಿದೆ ಜೈಪ್

ದೇಶದ ಪ್ರಮುಖ ಇ-ಕಾಮರ್ಸ್ ಕಂಪನಿಗಳು, ಕಿರಾನಾ ಸ್ಟೋರ್‌ಗಳು, ಡ್ರಗ್‌ಸ್ಟೋರ್‌ಗಳು ಮತ್ತು ರೆಸ್ಟೋರೆಂಟ್ ಸೇರಿದಂತೆ ವ್ಯಾಪಕ ಶ್ರೇಣಿಯ ಕಂಪನಿಗಳಿಂದ ತನ್ನ ಗ್ರಾಹಕರಿಗೆ ವಿತರಣಾ ಸೇವೆಗಳನ್ನು ಒದಗಿಸುತ್ತಿದ್ದು, ವಿತರಣಾ ಸೇವೆಗಳಿಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಂಡ ಮೊದಲ ಕಂಪನಿಯಾಗಿದೆ.

ನಮ್ಮ ಬೆಂಗಳೂರು ಸೇರಿ ನಾಲ್ಕು ಮಾಹಾನಗರಗಳಲ್ಲಿ ಡ್ರೋನ್ ಮೂಲಕ ಸರಕುಗಳನ್ನು ವಿತರಿಸಲಿದೆ ಜೈಪ್

ಜೈಪ್ ಕಂಪನಿಯು ಈಗಾಗಲೇ ಪ್ರಮುಖ ಕಂಪನಿಗಳೊಂದಿಗೆ ವಿವಿಧ ರೇಂಜ್ ಹೊಂದಿರುವ ಇವಿ ವಾಹನಗಳನ್ನು ಬಳಕೆ ಮಾಡುತ್ತಿದ್ದು, ಮುಂದಿನ ಒಂದು ವರ್ಷದಲ್ಲಿ ಬರೋಬ್ಬರಿ 1 ಲಕ್ಷ ಇವಿ ವಾಹನಗಳನ್ನು ಅಳವಡಿಸಿಕೊಳ್ಳುವ ಯೋಜನೆಯಲ್ಲಿದೆ.

ನಮ್ಮ ಬೆಂಗಳೂರು ಸೇರಿ ನಾಲ್ಕು ಮಾಹಾನಗರಗಳಲ್ಲಿ ಡ್ರೋನ್ ಮೂಲಕ ಸರಕುಗಳನ್ನು ವಿತರಿಸಲಿದೆ ಜೈಪ್

ದೆಹಲಿ ಮೂಲದ ಜೈಪ್ ಎಲೆಕ್ಟ್ರಿಕ್ ಸ್ಮಾರ್ಟ್ ಇವಿ ಕಂಪನಿಯು ವಿತರಣಾ ವಲಯದಲ್ಲಿನ ಸೇವೆಗಳಿಗಾಗಿ ವಿಶೇಷವಾದ ಹೊಸ ಇವಿ ವಾಹನಗಳ ಉತ್ಪಾದನೆಗೂ ಕೂಡಾ ಚಾಲನೆ ನೀಡಿದ್ದು, ಜೈಪ್ ಕಂಪನಿಯು ಇವಿ ವಾಹನ ಉದ್ಯಮ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಕಂಪನಿಯ ಮೇಲೆ ಭಾರೀ ಪ್ರಮಾಣದ ಹೂಡಿಕೆಯಾಗಿದೆ.

ನಮ್ಮ ಬೆಂಗಳೂರು ಸೇರಿ ನಾಲ್ಕು ಮಾಹಾನಗರಗಳಲ್ಲಿ ಡ್ರೋನ್ ಮೂಲಕ ಸರಕುಗಳನ್ನು ವಿತರಿಸಲಿದೆ ಜೈಪ್

ಪ್ರಸ್ತುತ ಜೈಪ್ ಎಲೆಕ್ಟ್ರಿಕ್ ಕಂಪನಿಯು ದೆಹಲಿ-ಎನ್‌ಸಿಆರ್, ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ಪುಣೆಯಂತಹ ನಗರಗಳಲ್ಲಿ ತನ್ನ ಸೇವೆಗಳನ್ನು ನೀಡುತ್ತಿದ್ದು, 2022ರಲ್ಲಿ ಜೈಪ್ ಕಂಪನಿಯ ಆದಾಯವು 5 ಪಟ್ಟು ಹೆಚ್ಚಳವಾಗುವ ನೀರಿಕ್ಷೆಗಳಿವೆ.

ನಮ್ಮ ಬೆಂಗಳೂರು ಸೇರಿ ನಾಲ್ಕು ಮಾಹಾನಗರಗಳಲ್ಲಿ ಡ್ರೋನ್ ಮೂಲಕ ಸರಕುಗಳನ್ನು ವಿತರಿಸಲಿದೆ ಜೈಪ್

ಇ-ಕಾಮರ್ಸ್ ಕಂಪನಿಗಳ ಸರಕಗಳನ್ನು ಗ್ರಾಹಕರಿಗೆ ತಲುಪಿಸಲು ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸುವಲ್ಲಿ ಮುಂಚೂಣಿ ಸಾಧಿಸುತ್ತಿರುವ ಜೈಪ್ ಕಂಪನಿಯು ಕೊನೆಯ ಹಂತದ ಮೈಲಿ ತನಕ ಸೇವೆಗಳನ್ನು ನೀಡಲಿದ್ದು, 2017 ರಲ್ಲಿ ಆರಂಭವಾದ ಜೈಪ್ ಕಂಪನಿಯನ್ನು ಆಕಾಶ್ ಗುಪ್ತಾ ಮತ್ತು ರಾಶಿ ಅಗರ್‌ವಾಲ್ ಎಂಬುವವರು ಸ್ಥಾಪನೆ ಮಾಡಿದರು.

Most Read Articles

Kannada
English summary
Zypp electric to start drone delivery in five indian cities details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X