ಬರಲಿವೆ, ಬಜಾಜ್ 350ಸಿಸಿ ಪಲ್ಸರ್ ಮತ್ತು ಕೆಟಿಎಂ ಬೈಕುಗಳು

Posted By:
Bajaj Plan to Launch 350cc Pulsar and KTM Bike
ದೇಶದ ವಾಹನ ಮಾರುಕಟ್ಟೆಯಲ್ಲಿ ಶೀಘ್ರವಾಗಿ ಪ್ರಗತಿ ಕಾಣುತ್ತಿರುವ ಕಂಪನಿ ಬಜಾಜ್ ಆಟೋ ತನ್ನ ಉತ್ಪನ್ನಗಳ ವಹಿವಾಟನ್ನು ವಿಸ್ತರಿಸಲು ಉತ್ಸುಕವಾಗಿದೆ. ಇದೀಗ ಕಂಪನಿಯು ಬಾಕ್ಸರ್ ನಂತಹ ಬೈಕುಗಳಿಂದ ಹಿಡಿದು ಪಲ್ಸರ್ ಬ್ರಾಂಡಿನ ಬೈಕುಗಳವರೆಗೆ ಹೆಚ್ಚಿನ ಬೈಕುಗಳ ಕ್ಷಮತೆ ಹೆಚ್ಚಿಸಲು ನಿರ್ಧರಿಸಿದೆ.

ಕಂಪನಿಯು ಇತ್ತೀಚೆಗೆ ಹೊರತಂದ ಕೆಟಿಎಂ ಡ್ಯೂಕ್ 200 ಮತ್ತು ಪಲ್ಸರ್ 200ಎನ್ ಎಸ್ ಬೈಕುಗಳ 350 ಸಿಸಿ ಆವೃತ್ತಿಗಳನ್ನು ಕಂಪನಿ ಹೊರತರಲಿದೆ. ಕಂಪನಿಯ ನೂತನ 350ಸಿಸಿ ಕುರಿತು ಬಜಾಜ್ ಆಟೋ ಮುಖ್ಯಸ್ಥ ರಾಜೀವ್ ಬಜಾಜ್ ಮಾಹಿತಿ ನೀಡಿದ್ದಾರೆ. ಅಂದಹಾಗೆ ಈ ಆವೃತ್ತಿಗಳು ಮುಂದಿನ ವರ್ಷ ರಸ್ತೆಗಿಳಿಯಲಿದೆ.

ದೇಶದಲ್ಲಿ ಈಗ ಬಜಾಜ್ ಕೆಟಿಎಂ ಡ್ಯೂಕ್ ಬೈಕ್ ದರ ಸುಮಾರು 1.16 ಲಕ್ಷ ರು. ಆಸುಪಾಸಿನಲ್ಲಿದೆ. ಆದರೆ ಮುಂದಿನ ತಿಂಗಳು ಶೋರೂಂ ತಲುಪುವ ನಿರೀಕ್ಷೆಯಿರುವ ಬಜಾಜ್ ಪಲ್ಸರ್ 200ಎನ್ಎಸ್ ದರ 1 ಲಕ್ಷ ರುಪಾಯಿಗಿಂತ ಕಡಿಮೆ ಇರುವ ನಿರೀಕ್ಷೆಯಿದೆ.

ಒಂದು ಮೂಲದ ಪ್ರಕಾರ ಬಜಾಜ್ ಕಂಪನಿಯಯ 750 ಸಿಸಿಯ ಸೂಪರ್ ಬೈಕನ್ನ ಕೂಡ ದೇಶದ ರಸ್ತೆಗೆ ಪರಿಚಯಯಿಸಲಿದೆಯಂತೆ. ಪ್ರೀಮಿಯಂ ಸ್ಪೋರ್ಟ್ ಬೈಕ್ ಸೆಗ್ಮೆಂಟಿನಲ್ಲಿ ಪಾರಮ್ಯ ಮೆರೆದಿರುವ ಜಾಗತಿಕ ಕಂಪನಿಗಳಿಗೆ ಪೈಪೋಟಿ ನೀಡಲು ಬಜಾಜ್ ಪ್ರಯತ್ನಿಸುತ್ತಿದೆ.

English summary
Bajaj Auto Planning to Launch 350cc Pulsar and KTM Bike. The company which recently unveiled the KTM Duke 200 and the Pulsar 200NS is planning to launch 350cc versions of the Pulsar and the KTM.
Story first published: Monday, February 6, 2012, 12:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark