ಎಲೆಕ್ಟ್ರಿಕ್ ಬೈಕ್ ಕಂಪನಿಗಳಿಗಿದು ಸವಾಲಿನ ಸಮಯ
"ದೇಶದಲ್ಲಿ ಬೇಡಿಕೆ ಕಡಿಮೆ ಇರುವ ಕಾರಣ ವಿದೇಶಿ ಮಾರುಕಟ್ಟೆಗೆ ಎಲೆಕ್ಟ್ರಿಕ್ ಮಾರುಕಟ್ಟೆ ರಫ್ತು ಮಾಡುವ ಸಾಧ್ಯತೆಯ ಕುರಿತು ಗಮನ ಹರಿಸಿದ್ದೇವೆ" ಎಂದು ವಿಜಯ್ ಮುಂಜಾಲ್ ನೇತೃತ್ವದ ಹೀರೊ ಎಲೆಕ್ಟ್ರಿಕ್ ಕಂಪನಿಯ ಮುಖ್ಯಸ್ಥರು ಹೇಳಿದ್ದಾರೆ. "ಗ್ರಾಹಕರಿಗೆ ದರ ವಿನಾಯಿತಿ ಮೂಲಕ ಸೆಳೆಯಲು ಯತ್ನಿಸುತ್ತಿದ್ದೇವೆ" ಎಂದು ಜನಪ್ರಿಯ ಇ-ಸ್ಕೂಟರ್ ಯೊಗ್ಯಕ್ಸ್ ತಯಾರಕಾ ಕಂಪನಿ ಎಲೆಕ್ಟ್ರೊಥೆಮ್ ಇಂಡಿಯಾ ಲಿಮಿಟೆಡ್ ಹೇಳಿದೆ.
ಪ್ರಸಕ್ತ ವರ್ಷದ ಆರಂಭದಲ್ಲಿ ಹೀರೊ ಎಲೆಕ್ಟ್ರಿಕ್ ಕಂಪನಿಯು ಇಂಗ್ಲೆಂಡ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರವಾಹನ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ತದನಂತರ ಕಂಪನಿಯು ಹೀರೊ ಎಕೊ ಪ್ರೈವೆಟ್ ಲಿಮಿಟೆಡ್ ಹೆಸರಿನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಈ ಹಿಂದೆ ಹೀರೊ ಎಲೆಕ್ಟ್ರಿಕ್ ಕಂಪನಿಯ ಬೈಕುಗಳು ತಿಂಗಳಿಗೆ ಕನಿಷ್ಠವೆಂದರೂ 7-8 ಸಾವಿರ ಯುನಿಟ್ ಮಾರಾಟವಾಗುತ್ತಿದ್ದವು. ಈಗ ಈ ಸಂಖ್ಯೆ ಮೂರು ಸಾವಿರ ಯುನಿಟ್ ಇದೆ. "ಕಳೆದ ಕೆಲವು ತಿಂಗಳಿನಿಂದ ಎಲೆಕ್ಟ್ರಿಕ್ ಬೈಕ್ ಮಾರಾಟವು ಶೇಕಡ 70-80ರಷ್ಟು ಕುಸಿದಿದೆ" ಎಂದು ಕಂಪನಿ ಹೇಳಿದೆ. ಅಜಂತಾ ಗ್ರೂಪಿನ ಎಲೆಕ್ಟ್ರಿಕ್ ಬೈಕ್ ಮಾರಾಟವೂ ಇಳಿಕೆ ಕಂಡಿದೆ.


Click it and Unblock the Notifications









