ಡ್ರೈವ್‌ಸ್ಪಾರ್ಕ್-ಥಂಡರ್‌ಬರ್ಡ್ ಎಕ್ಸ್‌ಕ್ಲೂಸಿವ್ ಸಂದರ್ಶನ

By Nagaraja

ಅಕ್ಟೋಬರ್ 25ರಂದು ಬೆಂಗಳೂರಿನಲ್ಲೂ ಬುಲೆಟ್ ರಾಜ ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಅಧಿಕೃತವಾಗಿ ಲಾಂಚ್ ಆಗಿತ್ತು. ಇದರಂತೆ ಕಂಪನಿ ಸಿಇಒ ಡಾ. ವೆಂಕಿ ಪದ್ಮನಾಭನ್ ಜತೆ ನಮ್ಮ ಡ್ರೈವ್‌ಸ್ಪಾರ್ಕ್ ತಂಡ ನಡೆಸಿದ ಏಕ್ಸ್‌ಕ್ಲೂಸಿವ್ ಸಂದರ್ಶನದ ಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಇತ್ತೀಚೆಗಷ್ಟೇ ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್ ಕಂಪನಿಯೂ ಅತಿ ದುಬಾರಿ ಥಂಡರ್‌ಬರ್ಡ್ 500 ಸಿಸಿ ಬುಲೆಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಿಕೊಟ್ಟಿತ್ತು. ಇದೀಗ ಬೆಂಗಳೂರಿನಲ್ಲೂ ಬೈಕ್ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ಬಿತ್ತರಿಸಿದೆ.

ಕಂಪನಿ ಸಿಇಒ ಡಾ. ವೆಂಕಿ ಪದ್ಮನಾಭನ್ ಪ್ರಕಾರ ಥಂಡರ್‌ಬರ್ಡ್ 500 ಪಡೆಯುವುದಕ್ಕಾಗಿ ಯಾವುದೇ ಕಾಯುವಿಕೆ ಕಾಲಘಟ್ಟವಿರುವುದಿಲ್ಲ. ಗ್ರಾಹಕ ಬುಕ್ಕಿಂಗ್ ಮಾಡಿದ ಕೂಡಲೇ ತಮ್ಮ ವಿನೂತನ ವಿನ್ಯಾಸದ ಥಂಡರ್‌ಬರ್ಡ್ ರಸ್ತೆಗಿಳಿಸಬಹುದು. ಹಾಗಿದ್ದರೂ ಥಂಡರ್‌ಬರ್ಡ್ 350 ಸಿಸಿ ಬೈಕ್‌ಗಾಗಿ ಸ್ವಲ್ಪ ಅವಧಿ ಕಾಯಬೇಕಾಗುತ್ತದೆ. ಅದೇ ಹೊತ್ತಿಗೆ ಹಿಂದಿನ ಮಾದರಿಯ ಥಂಡರ್‌ಬರ್ಡ್ 350 ಸಿಸಿ ಹೊಂದಿರುವವರಿಗೆ ಹೊಸ ಮಾಡೆಲ್‌ಗೆ ಪರಿವರ್ತನೆಗೊಳ್ಳುವ ಅವಕಾಶವೂ ಇದೆ.

ಡೀಸೆಲ್ ಬುಲೆಟ್, ಅಗ್ಗದ ಬೈಕ್ ಇಲ್ಲ
ಈ ನಡುವೆ ಡೀಸೆಲ್ ಬುಲೆಟ್‌ಗಳನ್ನು ಬಿಡುಗಡೆ ಮಾಡುವ ಯಾವುದೇ ಯೋಜನೆ ಎನ್‌ಫೀಲ್ಡ್‌ಗಿಲ್ಲ ಎಂಬುದನ್ನು ವೆಂಕಿ ನೇರ ಮಾತುಗಳಲ್ಲಿ ಸ್ಪಷ್ಟಪಡಿಸಿದರು. ಪದೇ ಪದೇ ಪೆಟ್ರೋಲ್ ದರದಲ್ಲಿ ಏರಿಕೆ ಕಂಡುಬಂದಿದ್ದರಿಂದ ಮಾರಾಟ ಗುರಿಯಿರಿಸಿಕೊಂಡು ಡೀಸೆಲ್ ಬುಲೆಟ್‌ಗಳನ್ನು ರಸ್ತೆಗಳಿಸುವ ಸಾಧ್ಯತೆಗಳಿವೆ ಎಂಬ ಊಹಾಪೋಹಗಳಿದ್ದವು. ಆದರೆ ವೆಂಕಿ ಇದನ್ನು ತಳ್ಳಿ ಹಾಕಿದ್ದು, ಹಾಗೆಯೇ ಅಗ್ಗದ ಬೈಕ್ ಕೂಡಾ ಬಿಡುಗಡೆಗೊಳಿಸುತ್ತಿಲ್ಲ ಎಂದಿದ್ದಾರೆ.

ಕಡಿಮೆ ಗುಣಮಟ್ಟದ ಬೈಕ್ ಬಿಡುಗಡೆಗೊಳಿಸಲು ಕಂಪನಿಗೆ ಇರಾದೆಯಿಲ್ಲ. ಹಾಗೆಯೇ ದೀರ್ಘ ಪಯಣವನ್ನು ಗುರಿಯಾಗಿರಿಸಿಕೊಂಡಿರುವ ರಾಯಲ್ ಎನ್‌ಫೀಲ್ಡ್ ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿಯೇ ನೂತನ ಬ್ರಾಂಡ್‌ಗಳನ್ನು ಉತ್ಪಾದಿಸುತ್ತಿವೆ.

ಸದ್ಯದಲ್ಲೇ ಕೆಫೆ ರೇಸರ್...
ಏತನ್ಮಧ್ಯೆ ಗ್ರಾಹಕರಿಗೆ ಮತ್ತಷ್ಟು ಸಿಹಿ ಸುದ್ದಿ ಬಿತ್ತರಿಸಿರುವ ವೆಂಕಿ, ಥಂಡರ್‌ಬರ್ಡ್ ಸಂಭ್ರಮದಲ್ಲಿರುವಾಗಲೇ ರಾಯಲ್ ಎನ್‌ಫೀಲ್ಡ್‌ನಿಂದ ಕೆಫೆ ರೇಸರ್ ಸದ್ಯದಲ್ಲೇ ಆಗಮಿಸಲಿದೆ ಎಂದು ತಿಳಿಸಿದರು. ಈಗಾಗಲೇ ಯುರೋಪ್‌ನಲ್ಲಿ ಟೆಸ್ಟ್ ರೈಡ್ ಪೂರ್ಣಗೊಳಿಸಿರುವ ಕೆಫೆ ರೇಸರ್ ದೆಹಲಿ ವಾಹನ ಮೇಳದಲ್ಲೂ ಪ್ರದರ್ಶಿಸಲಾಗಿತ್ತು. ಪ್ರಮುಖವಾಗಿ ಯುವ ಜನಾಂಗವನ್ನು ಗುರಿಯಾಗಿರಿಸಿಕೊಂಡು ನಿರ್ಮಿಸಲಿರುವ ಈ ಬೈಕ್ ಜಾಲಿ ರೈಡ್‌ಗೆ ಉಪಯುಕ್ತವೆನಿಸಲಿದೆ.

Most Read Articles

Kannada
English summary
It might be a good news for Royal Enfield Thunderbird 500 buyers. According to the Company CEO Dr. Venki Padmanabhan, there is no waiting period for Thunderbird 500. However Thunderbird 350 buyers have wait for few more months to get their dream machine.
Story first published: Friday, October 26, 2012, 11:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X