ಹೀರೊ ಓವರ್‌ಟೇಕ್ ಮಾಡಲಿದೆಯೇ ಟಿವಿಎಸ್
ಈಗಗಾಲೇ ಮಾರುಕಟ್ಟೆಗೆ ಪ್ರವೇಶಿಸಿರುವ ಟಿವಿಎಸ್ ಮೋಟಾರ್ಸ್‌ನ ಪೊನಿಕ್ಸ್ ದೇಶದ ಪ್ರಥಮ 125 ಸಿಸಿ ಪ್ರೀಮಿಯಂ ಬೈಕ್ ಆಗಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಚೆನ್ನೈನಲ್ಲಿ ಬಿಡುಗಡೆಗೊಂಡಿದ್ದ ಈ ಬಹುನಿರೀಕ್ಷಿತ ಬೈಕ್ ಇದೀಗ ದೆಹಲಿಯಲ್ಲೂ ಲಾಂಚ್ ಆಗಿದೆ.
ಹೊಸ ಟಿವಿಎಸ್ ಬೈಕ್ ಮಾರುಕಟ್ಟೆಯಲ್ಲಿ ಹೊಂಡಾ ಸಿಬಿ ಶೈನ್, ಹೀರೊ ಸೂಪರ್ ಸ್ಪೆಂಡರ್ ಹಾಗೂ ಬಜಾಜ್ ಡಿಸ್ಕವರ್ ಮುಂತಾದ ಪ್ರತಿಸ್ಪರ್ಧಿಗಳಿಗೆ ಕಠಿಣ ಪೈಪೋಟಿ ನಡೆಸುವ ನಿರೀಕ್ಷೆ ಹೊಂದಿದ್ದು, 40% ಏರಿಕೆಯನ್ನು ಗುರಿಯಿರಿಸಿಕೊಂಡಿದೆ.
ದೇಶದ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳ ಪೈಕಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದ ಟಿವಿಎಸ್ ಈ ಮೂಲಕ ಗ್ರಾಹಕರ ಮನಗೆಲ್ಲುವ ಭರವಸೆ ಹೊಂದಿದೆ. ಟಿವಿಎಸ್ ಮೋಟರ್ಸ್‌ನ ಹೊಸ ಪೊನಿಕ್ಸ್ ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರ ಕೈ ಸೇರಲಿದೆ. ಟಿವಿಎಸ್ ಪೊನಿಕ್ಸ್ ಡ್ರಮ್ ಬ್ರೇಕ್ ಆವೃತ್ತಿಗೆ 51,000 ಹಾಗೂ ಡಿಸ್ಕ್ ಬ್ರೇಕ್ ವರ್ಷನ್ 53,000 ರುಪಾಯಿಗಳಲ್ಲಿ ದೊರಕಲಿದೆ.
ಬಾಕ್ಲಿಟ್ ಡಿಜಿಟಲ್ ಸ್ಪಿಡೋಮೀಟರ್ ಜತೆ ರಿಯರ್ ಬಾಕ್ಲಿಟ್, ಡಿಜಿಟಲ್ ಫ್ಯೂಯಲ್ ಗೇಜ್, ಲೊ ಬ್ಯಾಟರಿ ರಿಮೈಂಡರ್, ಟ್ರಿಪ್ ಮೀಟರ್, ಸರ್ವಿಸ್ ರಿಮೈಂಡರ್ ಹಾಗೂ ಸಾಫ್ಟ್ ಟಚ್ ಸ್ವಿಚ್‌ಗೇರ್ ಸೌಲಭ್ಯಗಳು ಟಿವಿಎಸ್ ಪೊನಿಕ್ಸನ್ನು ಇತರ ಬೈಕ್‌ಗಳಿಂದ ವಿಭಿನ್ನವಾಗಿಸುತ್ತದೆ.
ಅದೇ ರೀತಿ ಮುಂದಿನ ಒಂದು ವರ್ಷದೊಳಗೆ 100 ಸಿಸಿ ಟಿವಿಎಸ್ ವಿಕ್ಟರ್ ಜಿಲ್ ಹಾಗೂ ಎರಡು ನೂತನ ಸ್ಕೂಟರ್‌ಗಳನ್ನು ರಿ ಲಾಂಚ್ ಮಾಡಲು ಕಂಪನಿ ಯೋಜನೆಯಿರಿಸಿಕೊಂಡಿದೆ.

ಟಿವಿಎಸ್ ಪೊನಿಕ್ಸ್ ಆಕರ್ಷಕ ನೋಟ

ಟಿವಿಎಸ್ ಪೊನಿಕ್ಸ್ ಆಕರ್ಷಕ ನೋಟ

ಟಿವಿಎಸ್ ಪೊನಿಕ್ಸ್ ಆಕರ್ಷಕ ನೋಟ

ಟಿವಿಎಸ್ ಪೊನಿಕ್ಸ್ ಆಕರ್ಷಕ ನೋಟ

ಟಿವಿಎಸ್ ಪೊನಿಕ್ಸ್ ಆಕರ್ಷಕ ನೋಟ


Click it and Unblock the Notifications








