2011ರ ಡ್ರೈವ್ ಸ್ಪಾರ್ಕ್ ಬೆಸ್ಟ್ ಬೈಕ್ ಯಾವುದು?

Posted By:
Which is the best new bike of 2011
2011ರಲ್ಲಿ ಹತ್ತು ಹಲವು ಬೈಕು ಮತ್ತು ಕಾರುಗಳು ರಸ್ತೆಗಿಳಿದಿವೆ. ಅಗ್ಗದ ಬೈಕುಗಳು, ಸ್ಪೋರ್ಟ್ ಬೈಕುಗಳು, ಸೂಪರ್ ಬೈಕುಗಳು ದೇಶದ ರಸ್ತೆಯಲ್ಲಿ ಕಿಡಿಯೆಬ್ಬಿಸಿವೆ. ಇದರೊಂದಿಗೆ ಕೆಲವು ಬೈಕುಗಳ ಪರಿಷ್ಕೃತ ಆವೃತ್ತಿಯೂ ರಸ್ತೆಗಿಳಿದಿವೆ.

ಹೀಗೆ ರಸ್ತೆಗಿಳಿದ ಹತ್ತು ಹಲವು ಬೈಕುಗಳಲ್ಲಿ ಡ್ರೈವ್ ಸ್ಪಾರ್ಕ್ ತಂಡ ಐದು ಬೈಕುಗಳನ್ನು ಓದುಗರ ಮತಕ್ಕಾಗಿ ಇಟ್ಟಿತ್ತು. ಕಡಿಮೆ ದರದ ಗ್ರಾಮೀಣ ಸವಾರರ ನೆಚ್ಚಿನ ಬಜಾಜ್ ಬಾಕ್ಸರಿನಿಂದ ಟಿವಿಎಸ್ ಅಪಾಚಿ ಆರ್ಟಿಆರ್180 ಬೈಕ್ ಗಳು ಕಣದಲ್ಲಿದ್ದವು.

ಡ್ರೈವ್ ಸ್ಪಾರ್ಕ್ ಬೆಸ್ಟ್ ಬೈಕ್ ಆಯ್ಕೆಗಾಗಿ ಓದುಗರ ಆಯ್ಕೆಗಾಗಿ ನೀಡಿದ ಐದು ಬೈಕುಗಳ ಹೆಸರು ಇಂತಿವೆ.

* ಬಜಾಜ್ ಬಾಕ್ಸರ್ 150

* ಹೀರೋ ಇಂಪಲ್ಸ್

* ಯಮಹಾ ಆರ್15 ವರ್ಷನ್ 2.0

* ಹೋಂಡಾ ಸಿಬಿಆರ್250ಆರ್

* ಟಿವಿಎಸ್ ಅಪಾಚಿ ಆರ್ಟಿಆರ್ 180 ಎಬಿಎಸ್

ದಿನಕ್ಕೆ ನೂರಾರು ಜನರು ಒಟ್ಟಾರೆ 3,020 ಜನರು ಬೆಸ್ಟ್ ಬೈಕ್ ಆಯ್ಕೆ ಮಾಡಿದ್ದಾರೆ. ಅದರಲ್ಲಿ ಹೆಚ್ಚಿನವರು ಕ್ಲಿಕ್ ಮಾಡಿದ್ದು ಟಿವಿಎಸ್ ಅಪಾಚಿ ಬೈಕನ್ನು. ಹೀಗಾಗಿ ನಾವು 2011ರ ಬೆಸ್ಟ್ ಬೈಕ್ ಎಂದು "ಟಿವಿಎಸ್ ಅಪಾಚಿ ಆರ್ಟಿಆರ್ 180 ಎಬಿಎಸ್" ಘೋಷಿಸುತ್ತಿದ್ದೇವೆ. ಶೇಕಡ 30.75ರಷ್ಟು ಮತವನ್ನು ಈ ಬೈಕ್ ಪಡೆದಿದೆ.

ಶೇಕಡ 24.37 ಓಟ್ ಪಡೆದು 2011ರ ಬೆಸ್ಟ್ ಬೈಕ್ ಆಯ್ಕೆಯಲ್ಲಿ ಎರಡನೇ ಸ್ಥಾನ ಪಡೆದದ್ದು ಹೋಂಡಾ ಸಿಬಿಆರ್ 250ಆರ್. ಶೇಕಡ 23.4 ಮತ ಪಡೆದು ಮೂರನೇ ಸ್ಥಾನ ಪಡೆದದ್ದು ಯಮಹಾ ಆರ್15 ಬೈಕ್. ಉಳಿದೆರಡು ಸ್ಥಾನವನ್ನು ಕ್ರಮವಾಗಿ ಇಂಪಲ್ಸ್ ಮತ್ತು ಬಾಕ್ಸರ್ ಪಡೆದಿವೆ.

English summary
Drivespark.com Poll: Which is the best new bike of 2011? Most people voted TVS Apache RTR 180 ABS is best bike in 2011. Honda CBR 250R, Yamaha R15 Version 2.0, Hero Impulse and Bajaj Boxer 150 also get good vote in this poll.
Story first published: Tuesday, January 3, 2012, 9:38 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark