ಪುರುಷರಿಗಾಗಿ ಯಮಹಾದಿಂದ 125ಸಿಸಿ ಸ್ಕೂಟರ್

Posted By:

ಕೆಲವು ಪುರುಷರಂತೂ ಬೈಕ್ ಓಡಿಸಲು ತುಂಬಾನೇ ಪ್ರಯಾಸ ಪಡುತ್ತಾರೆ. ತೆಳ್ಳಗಿನ ದೇಹಾಂಗ ಹೊಂದಿರುವವರಿಗೆ ಬೈಕ್ ಭಾರ ನಿಭಾಯಿಸುವುದು ಕಷ್ಟವಾದರೆ ಇನ್ನು ಕೆಲವರಿಗೆ ಪದೇ ಪದೇ ಗೇರ್ ಬದಲಾವಣೆ ಮಾಡುವುದು ಕಿರಿಕಿರಿಯನ್ನುಂಟು ಮಾಡುತ್ತದೆ. ಪ್ರಮುಖವಾಗಿಯೂ ಇಂತಹ ಪುರುಷರನ್ನೇ ಗುರಿಯಾರಿಗಿಸಿಕೊಂಡಿರುವ ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಸದ್ಯದಲ್ಲೇ ನೂತನ ಆಟೋಮ್ಯಾಟಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಈಗಾಗಲೇ ಮಹಿಳೆಯರಿಗೆಗಾಗಿ ಆಕರ್ಷಕ ಸ್ಕೂಟಿ ಸೆಗ್ಮೆಂಟ್ ಬಿಡುಗಡೆಗೊಳಿಸಿರುವ ಯಮಹಾ ಇದೀಗ 125ಸಿಸಿ ಸ್ಕೂಟರ್‌ಗಳತ್ತ ಕಣ್ಣಾಯಿಸಿದೆ. ಕಂಪನಿಯ ಪ್ರಕಾರ ಪ್ರಮುಖವಾಗಿ ಪುರುಷರನ್ನು ಗುರಿಯಾಗಿರಿಸಿಕೊಂಡಿರುವ 125 ಸಿಸಿ ಸ್ಕೂಟರ್ ಮುಂದಿನ ವರ್ಷ ಮಾರುಕಟ್ಟೆಗೆ ಆಗಮನವಾಗಲಿದೆ.

ಯಮಹಾ ಮಜೆಸ್ಟಿ ಆಟೋಮ್ಯಾಟಿಕ್ ಸ್ಕೂಟರ್ 125ಸಿಸಿ ಫೋರ್ ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ನೂತನ ಸ್ಕೂಟರ್ ಟೆಲಿಸ್ಕೊಪಿಕ್ ಫ್ರಂಟ್ ಫೋರ್ಕ್ಸ್ ಹಾಗೂ ಜಾನಿ ಹೊಸ ವಿನ್ಯಾಸದೊಂದಿಗೆ ಆಗಮನವಾಗಲಿದೆ.

ಯಮಹಾ 125ಸಿಸಿ ಆಟೋಮ್ಯಾಟಿಕ್

ನೂತನ ಆಟೋಮ್ಯಾಟಿಕ್ 125 ಸಿಸಿ ಸ್ಕೂಟರ್ ಮೂಲಕ ಹೊಂಡಾ ಎವಿಯೇಟರ್ ಹಾಗೂ ಸುಜುಕಿ ಆಕ್ಸೆಸ್ 125 ಆವೃತ್ತಿಗೆ ಕಠಿಣ ಪೈಪೋಟಿ ನೀಡುವ ಗುರಿಯನ್ನು ಯಮಹಾ ಹೊಂದಿದೆ.

ದರ ಮಾಹಿತಿ

ದರ ಮಾಹಿತಿ

ಯಮಹಾ 125ಸಿಸಿ ಆಟೋಮ್ಯಾಟಿಕ್ ಸ್ಕೂಟರ್ 40,000ದಿಂದ 50000 ರೂಪಾಯಿಗಳ ವರೆಗಿನ ಬಜೆಟ್‌ನಲ್ಲಿ ಆಗಮನವಾಗಲಿದೆ. ಇದರಿಂದ ಗ್ರಾಹಕರನ್ನು ಮತ್ತಷ್ಟು ಆಕರ್ಷಿಸುವ ಸಾಧ್ಯತೆಯಿದೆ.

ಯಮಹಾ 125ಸಿಸಿ ಆಟೋಮ್ಯಾಟಿಕ್

ಸ್ಕೂಟರ್‌ಗಳತ್ತ ಹೆಚ್ಚು ಗಮನ ಕೇಂದ್ರಿಕತವಾಗಿರುವ ಯಮಹಾ 2015ರ ವರೆಗೆ ದೊಡ್ಡ ಪ್ರಮಾಣದ ಮಾರುಕಟ್ಟೆಯನ್ನು ಗುರಿಯಾಗಿರಿಸುವ ಮೂಲಕ ಹೆಚ್ಚಿನ ಸ್ಕೂಟರ್ ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಗುರಿಯಿರಿಸಿಕೊಂಡಿದೆ. ಅಂದ ಹಾಗೆ ಆಟೋಮ್ಯಾಟಿಕ್ ಸ್ಕೂಟರ್ ಸೆಗ್ಮೆಂಟ್‌ಗೆ ದೇಶಿಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಕಂಡುಬರುತ್ತಿದೆ.

ಯಮಹಾ 125ಸಿಸಿ ಆಟೋಮ್ಯಾಟಿಕ್

ಮುಂದಿನ ವರ್ಷ ಹಲವು ದ್ವಿಚಕ್ರ ವಾಹನ ತಯಾರಕ ಕಂಪನಿಗಳಿಂದ ಹೆಚ್ಚಿನ 125 ಸಿಸಿ ಆಟೋಮ್ಯಾಟಿಕ್ ಸ್ಕೂಟರ್‌ಗಳು ಆಗಮನವಾಗುವ ನಿರೀಕ್ಷೆಯಿದೆ. ಇದೇ ಯೋಜನೆಯಲ್ಲಿರುವ ಟಿವಿಎಸ್ ಮೋಟಾರ್ ಮುಂದಿನ ವರ್ಷಾರಂಭದಲ್ಲಿ 125 ಸಿಸಿ ಸ್ಕೂಟರ್ ಬಿಡುಗಡೆ ಮಾಡಲಿದೆ.

ಯಮಹಾ 125ಸಿಸಿ ಆಟೋಮ್ಯಾಟಿಕ್

ಇದೇ ಯೋಜನೆಯಲ್ಲಿರುವ ಪಿಯಜಿಯೊ ಇಂಡಿಯಾ ಕೂಡಾ ಫ್ಲೈ 125 ಆಟೋಮ್ಯಾಟಿಕ್ ಸ್ಕೂಟರ್ ಲಾಂಚ್ ಮಾಡುವ ಮೂಲಕ ಸ್ಕೂಟರ್ ಸೆಗ್ಮೆಂಟ್‌ಗೆ ಪ್ರಬಲ ಪೈಪೋಟಿ ನೀಡುವ ಇರಾದೆಯಲ್ಲಿದೆ. ಅಂದರೆ ಮುಂದಿನ ವರ್ಷ ಆಟೋಮ್ಯಾಟಿಕ್ ಸ್ಕೂಟರ್‌ಗಳ ಪೈಕಿ ಮೂರು ನೂತನ ಸ್ಕೂಟರ್‌ಗಳ ಆಗಮನವಾಗಲಿದೆ. ಅಲ್ಲದೆ 100-110ಸಿಸಿಗಳಿಗಿಂತಲೂ ಹೆಚ್ಚು ಪವರ್‌ಫುಲ್ ಆಗಿರುವ ಇಂತಹ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುವ ನಿರೀಕ್ಷೆಯಿದೆ.

English summary
Yamaha is planning to launch a 125cc scooter for Men. Speaking to Financial Chronicle, India Yamaha Motor managing director and chief executive officer Hiroyuki Suzuki said the company will launch a mass market 125cc scooter, which will be priced between Rs 40,000 and Rs 50,000.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark