ಬಜಾಜ್ ಡಿಸ್ಕವರ್‌ಗೆ ಇನ್ನೊಂದು ವೆರಿಯಂಟ್ ಸೇರ್ಪಡೆ

Written By:

ದೇಶದ ಪ್ರಮುಕ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಬಜಾಜ್ ಆಟೋ, ನೂತನ ಡಿಸ್ಕವರ್ 125ಟಿ ವೆರಿಯಂಟ್ ಲಾಂಚ್ ಮಾಡಿದ್ದು, ಇದರ ಚೆನ್ನೈ ಎಕ್ಸ್ ಶೋ ರು. ದರ 54,000 ರು.ಗಳಾಗಿವೆ.

ಇದು ಡಿಸ್ಕವರ್ ರೇಂಜ್ ಬೈಕ್‌ಗಳಿಗೆ ಸೇರ್ಪಡೆಯಾಗಿರುವ ನೂತನ ವೆರಿಯಂಟ್ ಆಗಿದೆ. ನೂತನ ಬೈಕಿನ 4 ವಾಲ್ವೆ ಡಿಟಿಐ-ಐ ಎಂಜಿನ್ ಗರಿಷ್ಠ ನಿರ್ವಹಣೆ, ಮೈಲೇಜ್ ಹಾಗೂ ವಿನ್ಯಾಸವನ್ನು ಖಾತ್ರಿಪಡಿಸುತ್ತದೆ ಎಂದು ಕಂಪನಿ ತಿಳಿಸಿದೆ.

2012-13ನೇ ಸಾಲಿನಲ್ಲಿ ಡಿಸ್ಕವರ್ ಅನೇಕ ರೇಂಜ್‌ ಬೈಕ್‌ಗಳ ಆಗಮನವಾಗಿದೆ. ಈ ಪೈಕಿ ಡಿಸ್ಕವರ್ 125 ಎಸ್‌ಟಿ ಹಾಗೂ ಡಿಸ್ಕವರ್ 100ಟಿ ಪ್ರಮುಖವಾಗಿದೆ. ಇದೀಗ ಡಿಸ್ಕವರ್ 125ಟಿ ಆಗಮನದೊಂದಿಗೆ ಗ್ರಾಹಕರಿಗೆ ನಿರ್ವಹಣೆ ಹಾಗೂ ದರದ ವಿಚಾರಗಳಲ್ಲಿ ಹೆಚ್ಚಿನ ಆಯ್ಕೆಗಳನ್ನು ಮುಂದುವರಿಸಿವೆ ಎಂದಿದೆ.

ನೂತನ ಡಿಸ್ಕವರ್ ಸ್ಪೋರ್ಟಿ ಫೈವ್ ಸ್ಪೀಡ್ ಟ್ರಾನ್ಸ್‌ಮಿಷನ್ ಹೊಂದಿರಲಿದ್ದು, ಪೆಡಲ್ ಡಿಸ್ಕ್ ಬ್ರೇಕ್, ಡಿಸಿ ಹೆಡ್ ಲ್ಯಾಂಪ್ ಹಾಗೂ ಎಲೆಕ್ಟ್ರಿಕ್ ಸ್ಟಾರ್ಟ್ ಪಡೆದುಕೊಳ್ಳಲಿದೆ.

ಒಟ್ಟು ಎರಡು ವೆರಿಯಂಟ್‌ಗಳಲ್ಲಿ 125 ಟಿ ಆಗಮನವಾಗಿದೆ. ಹಾಗೆಯೇ ನಾಲ್ಕು ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ.

* ಬಜಾಜ್ ಡಿಸ್ಕವರ್ ಡಿಸ್ಕ್ ಬ್ರೇಕ್ ಎಕ್ಸ್ ಶೋ ರೂಂ ದರ 54,002 ರು.

* ಬಜಾಜ್ ಡಿಸ್ಕವರ್ ಡ್ರಮ್ ಬ್ರೇಕ್ ಎಕ್ಸ್ ಶೋ ರೂಂ ದರ 57,070 ರು.

English summary
Bajaj Auto has come out with ‘Discover 125 T’, its latest addition to the Discover range of motorcycles.
Story first published: Thursday, July 11, 2013, 11:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark