ಸೆಂಚುರೊ ಕಮಾಲ್; ಮಹೀಂದ್ರ ಮಾರಾಟ ವೃದ್ಧಿ

Written By:

ಸೆಂಚುರೊ ದ್ವಿಚಕ್ರ ವಾಹನಕ್ಕೆ ದೊರಕಿರುವ ಭರ್ಜರಿ ಪ್ರತಿಕ್ರಿಯೆ ನೆರವಿನಿಂದ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಮಹೀಂದ್ರ ಟು ವೀಲರ್ಸ್ ಲಿಮಿಟೆಡ್ (ಎಂಟಿಡಬ್ಲ್ಯುಎಲ್), ಆಗಸ್ಟ್ ತಿಂಗಳ ಮಾರಾಟದಲ್ಲಿ ಭರ್ಜರಿ ಪ್ರಗತಿ ದಾಖಲಿಸಿದೆ.

ಆಗಸ್ಟ್ ತಿಂಗಳಲ್ಲಿ ಶೇಕಡಾ 66ರಷ್ಟು ವೃದ್ಧಿ ದಾಖಲಿಸಿರುವ ಮಹೀಂದ್ರ, ಈ ಅವಧಿಯಲ್ಲಿ ಒಟ್ಟು 17,719 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಈ ಪೈಕಿ ದೇಶಿಯ ಮಾರಾಟವು ಶೇಕಡಾ 53ರಷ್ಟು ಹೆಚ್ಚಳಗೊಂಡಿದ್ದು, 15,346 ಯುನಿಟ್ ಮಾರಾಟವಾಗಿವೆ.

ಜುಲೈ 1ರಂದು ದೇಶದ ರಸ್ತೆಗಿಳಿದ ಸೆಂಚುರೊ ಈಗಾಗಲೇ 35,000ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಿಸಿರುವುದು ಮಹೀಂದ್ರ ವೃದ್ಧಿ ದರಕ್ಕೆ ಕಾರಣವಾಗಿದೆ. ಗ್ರಾಹಕರ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಮಹೀಂದ್ರ ತನ್ನ ಉತ್ಪಾದನೆಯನ್ನು ಸಹ ಹೆಚ್ಚಿಸಿಕೊಂಡಿದೆ.

ಮಹೀಂದ್ರ ಸೆಂಚುರೊ ದೆಹಲಿ ಎಕ್ಸ್ ಶೋ ರೂಂ ದರ 45,000 ರು.ಗಳಾಗಿವೆ. ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಇದರ ಮೈಕ್ರೋ ಚಿಪ್ ಇಗ್ನೈಟೆಡ್ 5 ಕರ್ವ್ (MCi-5) ಎಂಜಿನ್ ಇದರ ಪ್ರಮುಖ ಆಕರ್ಷಣೆಯಾಗಿದೆ. ಹೋಂಡಾ ಡ್ರೀಮ್ ಯುಗಾ ಸೇರಿದಂತೆ, ಬಜಾಜ್ ಡಿಸ್ಕರ್, ಸುಜುಕಿ ಹಯಾಟೆ, ಹೀರೊ ಹಾಗೂ ಹೋಂಡಾ ಸ್ಪ್ಲೆಂಡರ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಸೆಂಚುರೊ ರಿಮೋಟ್ ಲಾಕ್ ಸಿಸ್ಟಂ, ಎಲ್‌ಇಡಿ ಟೈಲ್ ಲ್ಯಾಂಪ್, ಟ್ಯೂಬ್ ಲೆಸ್ ಟೈರ್, ಸೆಂಟ್ರಲ್ ಲಾಂಕಿಂಗ್ ಸಿಸ್ಟಂ, ಆಂಟಿ ಥೆಫ್ಟ್ ಸಿಸ್ಟಂ, ಎಂಜಿನ್ ಇಂಮೊಬಿಲೈಸರ್ ಹಾಗೂ ಗೈಡ್ ಲ್ಯಾಂಪ್‌ಗಳನ್ನು ಹೊಂದಿದೆ.

English summary
Mahindra Two Wheelers Ltd. (MTWL), August volumes stood at 17719, a growth of 66%, The company has registered strong growth backed by burgeoning demand for the new, innovative Mahindra Centuro with over 35000 bookings received till date, across the country.
Story first published: Thursday, September 5, 2013, 11:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark