ಸೆಂಚುರೊ ಬೇಟೆ; ಮಹೀಂದ್ರ ಮಾರಾಟ ವೃದ್ಧಿ

Written By:

ಮಹೀಂದ್ರ ಸೆಂಚುರೊ ಮಾರಾಟದ ಬಲದೊಂದಿಗೆ ನವೆಂಬರ್ ತಿಂಗಳ ಮಾರಾಟ ಅಂಕಿಅಂಶದಲ್ಲೂ ಮಹೀಂದ್ರ ಟು ವೀಲರ್ಸ್ ಭರ್ಜರಿ ಏರಿಕೆ ಕಂಡಿದೆ. ಈ ಅವಧಿಯಲ್ಲಿ ಮಹೀಂದ್ರವು ಒಟ್ಟು 24,245 ಯುನಿಟ್ ಮಾರಾಟ ಕಂಡುಕೊಂಡಿದ್ದು, ಶೇಕಡಾ 126ರಷ್ಟು ಏರಿಕೆ ಸಾಧಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಈ ಪೈಕಿ ದೇಶಿಯ ಮಾರಾಟವು 23,831 ಯುನಿಟ್‌ಗಳಾಗಿದ್ದು ಶೇಕಡಾ 136ರಷ್ಟು ವರ್ಧನೆ ದಾಖಲಿಸಿದೆ. ಮಾರುಕಟ್ಟೆಯಲ್ಲಿ ಮಹೀಂದ್ರ ಸೆಂಚುರೊ ಸಾಧಿಸಿದ ಭರ್ಜರಿ ಬೇಟೆಯೇ ಸಹಾಯಕರವಾಗಿದೆ ಎಂದು ಕಂಪನಿ ತಿಳಿಸಿದೆ.

Mahindra centuro

ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಎಂಸಿಐ-5 (ಮೈಕ್ರೋಚಿಪ್ ಇಗ್ನೈಟೆಡ್-5 ಕರ್ವ್) ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಮಹೀಂದ್ರ ಸೆಂಚುರೊ ಗರಿಷ್ಠ ಇಂಧನ ಕ್ಷಮತೆ ನೀಡಲು ಸಕ್ಷಮವಾಗಿದೆ. ಭಾರತೀಯ ವಾಹನ ಅಧ್ಯಯನ ಪ್ರಕಾರ ಪ್ರತಿ ಲೀಟರ್‌ಗೆ 85.4 ಕೀ.ಮೀ. ಮೈಲೇಜ್ ನೀಡಲಿದೆ. ಅಲ್ಲದೆ ಉಚಿತ ಬ್ಯಾಟರಿ ನಿರ್ವಹಣೆ ಹಾಗೂ ಐದು ವರ್ಷಗಳ ವಾರಂಟಿ ಪ್ರದಾನ ಮಾಡಲಾಗುತ್ತದೆ.

ನವದೆಹಲಿ ಎಕ್ಸ್‌ ಶೋ ರೂಂ ದರ 46,500 ರು.

8.5 ಬಿಎಚ್‌ಪಿ ಉತ್ಪಾದಿಸುವ ಮಹೀಂದ್ರ ಸೆಂಚುರೊ 8.5 ಎನ್‌ಎಂ ಪೀಕ್ ಟರ್ಕ್ಯೂ ಹೊಂದಿರುತ್ತದೆ. ಇದರಲ್ಲಿ ಆಂಟಿ ಥೆಫ್ಟ್ ಅಲರಾಂ, ಎಂಜಿನ್ ಇಂಮೊಬಿಲೈಜರ್, ರಿಮೋಟ್ ಪ್ಲಿಪ್ ಕೀ, ಫೈಂಡ್ ಮಿ ಲ್ಯಾಂಪ್ ಜತೆಗೆ ಗೈಡ್ ಲ್ಯಾಂಪ್ಸ್‌ಗಳಿವೆ. ಹಾಗೆಯೇ ಡಿಜಿಟಲ್ ಡ್ಯಾಶ್‌ಬೋರ್ಡ್, ಡಿಸ್ಟಾನ್ಸ್ ಟು ಎಮ್ಟಿ ಇಂಡಿಕೇಟರ್, ಸರ್ವೀಸ್ ರಿಮೈಂಡರ್ ಮತ್ತು ಎಕಾನಮಿ ಮೋಡ್ ಇಂಡಿಕೇಟರ್ ಸೌಲಭ್ಯವಿದೆ.

English summary
Mahindra Two Wheelers Ltd. (MTWL), a part of the USD 16.2 billion Mahindra Group, continued to grow its presence in the two wheeler segment during November 2013.
Story first published: Wednesday, December 4, 2013, 14:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark