ಕನಸು ನನಸು; ಬೈಕ್ ಪಡೆದ ಖುಷಿಯಲ್ಲೇ ಸಾವಿಗೆ ಶರಣು

Written By:

ಅಮೆರಿಕದಿಂದ ವರದಿಯಾಗಿರುವ ನೈಜ ಘಟನೆಯಿದು. 59ರ ಹರೆಯದ ಬೆರಿ ಸ್ಟ್ರಾಂಗ್ ಎಂಬಾತರಿಗೆ ಬಾಲ್ಯ ಕಾಲದಿಂದಲೇ ಬೈಕ್‌ವೊಂದನ್ನು ಪಡೆಯುವುದು ದೀರ್ಘಕಾಲದ ಕನಸಾಗಿತ್ತು. 15 ಹರೆಯದಲ್ಲಿ ಬೆರಿ ಮನದಲ್ಲಿ ಹುಟ್ಟಿಕೊಂಡಿರುವ ಕನಸಿಗೆ ಆರಂಭದಿಂದಲೇ ಧರ್ಮಪತ್ನಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಬೈಕ್ ಸಂಚಾರ ಅಪಾಯಕಾರಿ ಎಂದು ಹೇಳುತ್ತಲೇ ಆತನ ಕನಸಿಗೆ ಅಡ್ಡವಾಗುತ್ತಿದ್ದರು.

ಅಂತೂ ಕೊನೆಗೂ ಬೆರಿ 59ನೇ ಹರೆಯದಲ್ಲಿ ಆತನ ಧರ್ಮಪತ್ನಿ ಬೈಕ್ ಖರೀದಿಸುವ ಕನಸಿಗೆ ಹಸಿರು ನಿಶಾನೆ ತೋರಿದರು. ತಕ್ಷಣ ಲೋಕವೇ ಗೆದ್ದ ಖುಷಿಯಲ್ಲಿದ್ದ ಬೆರಿ ಸ್ಟ್ರಾಂಗ್ 2013 ಹರ್ಲಿ ಡೇವಿಡ್ಸನ್ ಡೈನಾ ಬೈಕನ್ನು ತಮ್ಮದಾಗಿಸಿಕೊಂಡರು. ಅಷ್ಟೇ ಯಾಕೆ ತಮ್ಮ ಫೇಸ್‌ಬುಕ್ ಪೇಜ್‌ನಲ್ಲೂ ಈ ಬಗ್ಗೆ ಸ್ಟಾಟಸ್ ಕೂಡಾ ಅಪ್‌ಡೇಟ್ ಮಾಡಿದರು. ಯಾಕೆಂದರೆ ಇದು ಅವರ 44 ವರ್ಷಗಳ ಕಾಯುವಿಕೆಗೂ ಕೊನೆಗೂ ಅಂತ್ಯ ಹಾಡಿತ್ತು.

ಆದರೆ ದುರದೃಷ್ಟವಶಾತ್ ಬೈಕ್ ಅಪಘಾತದಲ್ಲೇ ಬೆರಿ ಸ್ಟ್ರಾಂಗ್ ಕೊನೆಯುಸಿರೆಳೆಯುವಂತಾಗಿದೆ. ಟ್ರಾಕ್ಟರ್‌ವೊಂದಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೆರಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇದರೊಂದಿಗೆ 44 ವರ್ಷಗಳ ಕನಸಿಗೆ ತೆರೆ ಎಳೆದರು.

ಪ್ರಸ್ತುತ ತನಿಖೆ ನಡೆಸುತ್ತಿರುವ ಪೊಲೀಸರ ಪ್ರಕಾರ, ನಿಖರ ಡ್ರೈವಿಂಗ್ ಅಭ್ಯಾಸದ ಕೊರತೆಯಿಂದಾಗಿ ಮೂರು ಮೈಲ್ ಸಂಚರಿಸುವಷ್ಟರಲ್ಲಿ ಅಪಘಾತ ಸಂಭವಿಸಿದೆ. ಬೆರಿ ಪತ್ನಿಯ ಪ್ರಕಾರ, ಅವರು ಜೀವನದಲ್ಲಿ ಬೈಕ್ ಪಡೆಯುವ ಕನಸನ್ನು ಕಟ್ಟಿದ್ದರು. ಇದೀಗ ಅದೇ ಕನಸು ನನಸಾದ ಸಂತಸದಲ್ಲಿ ನಮ್ಮನ್ನಗಲಿದ್ದಾರೆ ಎಂಬ ಪುತ್ರನ ಮಾತುಗಳನ್ನು ಪುನರುಚ್ಛಿಸಿದರು.

English summary
Wyoming resident Barry Strang waited 44 years to buy a bike. Barry Strang bough a Harley Davidson Dyna but died only after riding it for 3 miles.
Story first published: Saturday, July 20, 2013, 16:16 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark