ಹೆಣ್ಣು ಮಕ್ಕಳಿಗೆ ಯಮಹಾ ಸ್ಕೂಟರ್ ಚಾಲನೆ ತರಬೇತಿ

Posted By:

ನಗರದ ಪ್ರದೇಶದ ಹೆಣ್ಣು ಮಕ್ಕಳನ್ನು ಹೊರತುಪಡಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಸ್ಕೂಟರ್ ಚಾಲನೆ ಕರಗತ ಮಾಡಿಕೊಂಡಿರುವ ಹೆಣ್ಣು ಮಕ್ಕಳ ಸಂಖ್ಯೆ ತುಂಬಾ ವಿರಳ. ಹಾಗಿರುವಾಗ ದೇಶದ ಹೆಸರಾಂತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ಮೋಟಾರ್, ಮಹಿಳೆಯರಿಗಾಗಿ ಸ್ಕೂಟರ್ ರೈಡಿಂಗ್ ತರಬೇತಿಯನ್ನು (ವೈಎಫ್‌ಆರ್‌ಟಿ) ಹಮ್ಮಿಕೊಂಡಿದೆ.

ರೇ ಆಗಮನದೊಂದಿಗೆ 2012 ಸೆಪ್ಟೆಂಬರ್ ತಿಂಗಳಲ್ಲಿ ದೇಶದ ಸ್ಕೂಟರ್ ಸೆಗ್ಮೆಂಟ್‌ಗೆ ಕಾಲಿಟ್ಟಿದ್ದ ಯಮಹಾ ವಿಶೇಷವಾಗಿಯೂ ಯುವ ಗ್ರಾಹಕರನ್ನು ಗುರಿಯಾರಿಸಿಕೊಂಡಿದೆ.

To Follow DriveSpark On Facebook, Click The Like Button

ಈ ಬಗ್ಗೆ ಪ್ರತಿಕ್ರಿಯಿಸಿರುವ ಯಮಹಾ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಉಪ ವ್ಯವಸ್ಥಾಪಕ ನಿರ್ದೇಶಕ ಮಸಕಿ ಅಸಾನೊ, ಮೊದಲ ಸ್ಕೂಟರ್ ಸೆಗ್ಮೆಂಟ್ ರೇ ಬಿಡುಗಡೆಯೊಂದಿಗೆ 2012ನೇ ವರ್ಷ ಅತಿ ವಿಶೇಷವೆನಿಸಿದೆ ಎಂದಿದ್ದಾರೆ. ಪಟ್ಟಣದ ಹೆಣ್ಣು ಮಕ್ಕಳು ಈ ಆವೃತ್ತಿಯನ್ನು ಧನಾತ್ಮಕವಾಗಿ ಸ್ವೀಕರಿಸಿದ್ದಾರೆ ಎಂದಿದ್ದಾರೆ.

ಪ್ರಸ್ತುತ ಚೆನ್ನೈನಲ್ಲಿ ತರಬೇತಿ ಶಿಬಿರ ಆರಂಭಿಸಲಾಗಿದೆ. ಹೊಸದಾಗಿ ಲೈಸನ್ಸ್ ಹಾಗೂ ಸ್ಕೂಟರ್ ಚಾಲನೆ ಕಲಿಯಲು ಇಚ್ಛಿಸುವ ಹೆಣ್ಮಕ್ಕಳು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಕಂಪನಿ ತಿಳಿಸಿದೆ. ಹಾಗೆಯೇ ಮುಂಬರುವ ದಿನಗಳಲ್ಲಿ ದೇಶದ ಇತರ ನಗರಗಳಿಗೂ ತರಬೇತಿ ಶಿಬಿರವನ್ನು ವ್ಯಾಪಿಸುವ ಗುರಿ ಹೊಂದಿದೆ.

English summary
Yamaha Motor has launched India’s first Yamaha Female Riding Training Program (YFRT) in Chennai.
Please Wait while comments are loading...

Latest Photos