ಹೀರೊ ಹ್ಯಾಸ್ಟರ್ 600ಸಿಸಿ ಕಾನ್ಸೆಪ್ಟ್ ಬೈಕ್ ಅನಾವರಣ

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಹ್ಯಾಸ್ಟರ್ 600ಸಿಸಿ ಬೈಕ್ ಅನಾವರಣಗೊಳಿಸಿದೆ.

2014 ಆಟೋ ಎಕ್ಸ್ ಪೋ

ಇದೇ ಸಂದರ್ಭದಲ್ಲಿ ಸ್ಪ್ಲೆಂಡರ್ ಕ್ಲಾಸಿಕ್ ಪ್ರೊ, ಪ್ಯಾಶನ್ ಟಿಆರ್ ಆಫ್ ರೋಡ್ ಬೈಕ್ ಜತೆಗೆ ಇಯಾನ್ ಕಾನ್ಸೆಪ್ಟ್ ಮತ್ತು ಸಿಂಪ್ಲಿಸಿಟಿ ಭವಿಷ್ಯದ ವಾಹನಗಳನ್ನು ಪ್ರದರ್ಶಿಸಲಾಗಿತ್ತು. (ವರದಿಗಾಗಿ ಸ್ಲೈಡರ್‌ನ್ತತ ಮುಂದುವರಿಯಿರಿ)

ಹೀರೊ ಹ್ಯಾಸ್ಟರ್ 600ಸಿಸಿ ಕಾನ್ಸೆಪ್ಟ್ ಬೈಕ್ ಅನಾವರಣ

ಹೀರೊ ನೂತನ ಹ್ಯಾಸ್ಟರ್ ಸ್ಟ್ರೀಟ್ ಫೈಟರ್ ಕಾನ್ಸೆಪ್ಟ್‌ನ್ಲಲಿ 620 ಸಿಸಿ ವಾಟರ್ ಕೂಲ್ಡ್ ಪ್ಯಾರಲಲ್ ಟ್ವಿನ್ ಮೋಟಾರ್ ಆಳವಡಿಸಲಾಗಿದೆ. ಇದು 80 ಪಿಎಸ್ (9600 ಆರ್‌ಪಿಎಂ) ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹೀರೊ ಹ್ಯಾಸ್ಟರ್ 600ಸಿಸಿ ಕಾನ್ಸೆಪ್ಟ್ ಬೈಕ್ ಅನಾವರಣ

ಸಂಸ್ಥೆಯ ಪ್ರಕಾರ ಗರಿಷ್ಠ ತಂತ್ರಗಾರಿಕೆಯನ್ನು ನೂತನ ಬೈಕ್‌ನಲ್ಲಿ ಆಳವಡಿಸಲಾಗಿದೆ. ಇದು ಟ್ವಿನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಅಪ್ ಸೈಡ್ ಡೌನ್ ಫೋರ್ಕ್, ಡಿಸ್ಕ್ ಮತ್ತು 17 ಇಂಚಿನ ಪೈರೆಲ್ಲಿ ಡೈಬ್ಲೊ ಚಕ್ರ ಆಳವಡಿಸಲಾಗಿದೆ.

ಹೀರೊ ಹ್ಯಾಸ್ಟರ್ 600ಸಿಸಿ ಕಾನ್ಸೆಪ್ಟ್ ಬೈಕ್ ಅನಾವರಣ

ಹೋಂಡಾ ಜತೆಗಿನ ಪಾಲುದಾರಿಕೆ ಕಡಿದುಕೊಂಡ ಬಳಿಕ ಹೀರೊದಿಂದ ಆಗಮನವಾಗುತ್ತಿರುವ ಅತ್ಯಂತ ಪವರ್‌ಫುಲ್ ಬೈಕ್ ಇದೆನಿಸಲಿದೆ.

ಹೀರೊ ಹ್ಯಾಸ್ಟರ್ 600ಸಿಸಿ ಕಾನ್ಸೆಪ್ಟ್ ಬೈಕ್ ಅನಾವರಣ

ಮೊದಲ ನೋಟಕ್ಕೆ ಕೆಟಿಎಂ ಡ್ಯೂಕ್ ವಿನ್ಯಾಸವನ್ನು ಹೋಂಡಾ ಹ್ಯಾಸ್ಟರ್ ಕಾನ್ಸೆಪ್ಟ್ ಬೈಕ್ ಹೊಂದಿದೆ. ಇದು ಭಾರತೀಯ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳಲಿದೆ.

ಹೀರೊ ಹ್ಯಾಸ್ಟರ್ 600ಸಿಸಿ ಕಾನ್ಸೆಪ್ಟ್ ಬೈಕ್ ಅನಾವರಣ

ಒಟ್ಟಿನಲ್ಲಿ ದೆಹಲಿ ಆಟೋ ಎಕ್ಸ್ ಪೋದ ಸಂಪೂರ್ಣ ಪ್ರಯೋಜನ ಪಡೆಯುವಲ್ಲಿ ಹೀರೊ ಸಂಸ್ಥೆ ಅಕ್ಷರಶ: ಯಶ ಸಾಧಿಸಿದೆ.

ಹೀರೊ ಇಯಾನ್

ಇದೇ ಸಂದರ್ಭದಲ್ಲಿ ಇಯಾನ್ ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಲಾಗಿತ್ತು. ಇದು ಹೈಡ್ರೋಜನ್ ಫ್ಯೂಯಲ್ ಸೆಲ್ ವೆಹಿಕಲ್ ಆಗಿದೆ.

ಹೀರೊ ಇಯಾನ್

ಇದರಲ್ಲಿ ಲೈ ಏರ್ ಬ್ಯಾಟರಿಗಳನ್ನು ಆಳವಡಿಸಲಾಗಿದೆ. ಇದು ಎಲೆಕ್ಟ್ರಿಕ್ ಟ್ರಾಕ್ಷನ್ ಮೋಟಾರ್ಸ್ ಹೊಂದಿರಲಿದೆ.

ಹೀರೊ ಸಿಂಪ್ಲಿಸಿಟಿ

ಹೀರೊದಿಂದ ಆಗಮನವಾಗಿರುವ ಮೂರನೇ ಕಾನ್ಸೆಪ್ಟ್ ಹಗುರ ಭಾರದ ಸಿಂಪ್ಲಿಸಿಟಿ ಮೋಟಾರ್ ಸೈಕಲ್ ಆಗಿದೆ. ಇದು ಪ್ರಮುಖವಾಗಿಯೂ ನಗರ ಪ್ರದೇಶದ ಸಾರಿಗೆಯನ್ನು ಗುರಿಯಾಗಿರಿಸಿ ರಚಿಸಲಾಗಿದೆ. ಇದರಲ್ಲಿ ಸ್ಮಾರ್ಟ್ ಫೋನ್ ಮುಂಖಾಂತರ ಸಿಂಪ್ಲಿಸಿಟಿ ಆಪ್ ಕನೆಕ್ಟ್ ಮಾಡಬಹುದಾಗಿದೆ.

Most Read Articles

Kannada
English summary
2014 Auto Expo: Hero unveils Hastur Concept Bike
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X