ದೀಪಾವಳಿಗೆ ಹೀರೊ ಕಹಿ ಸುದ್ದಿ; ಬೈಕ್, ಸ್ಕೂಟರ್ ಬೆಲೆ ಏರಿಕೆ

Written By:

ದೀಪಾವಳಿ ಹಬ್ಬದ ಆವೃತ್ತಿಯನ್ನು ಆಚರಿಸುತ್ತಿರುವ ದೇಶದ ಗ್ರಾಹಕರಿಗೆ ನಿರಾಸೆ ಕಾದಿದೆ. ಸಾಮಾನ್ಯವಾಗಿ ಹಬ್ಬ ಹರಿದಿನಗಳ ಸುಸಂದರ್ಭಗಳಲ್ಲಿ ವಾಹನ ತಯಾರಕ ಸಂಸ್ಥೆಗಳು ಬೆಲೆ ಇಳಿಕೆಗಳಂತಹ ಭಾರಿ ಕೊಡುಗೆಗಳೊಂದಿಗೆ ಮುಂದೆ ಬರುತ್ತಿದೆ.

ಆದರೆ ಇವೆಲ್ಲಕ್ಕೂ ವ್ಯತಿರಿಕ್ತವಾಗಿ ವರ್ತಿಸಿರುವ ದೇಶದ ನಂ.1 ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ತನ್ನೆಲ್ಲ ಬೈಕ್ ಹಾಗೂ ಸ್ಕೂಟರ್ ಬೆಲೆಯನ್ನು ಶೇಕಡಾ 0.5ರಷ್ಟು ಏರಿಕೆಗೊಳಿಸಿದೆ.

To Follow DriveSpark On Facebook, Click The Like Button
Hero MotoCorp

ಏರುತ್ತಿರುವ ವೆಚ್ಚವೇ ಬೆಲೆಏರಿಕೆಗೆ ಕಾರಣವಾಗಿದೆ ಎಂದು ಸಂಸ್ಥೆಯು ಸ್ಪಷ್ಟನೆ ನೀಡಿದೆ. ಅಲ್ಲದೆ ಸ್ವಲ್ಪ ಪ್ರಮಾಣದ ಬೆಲೆ ಮಾತ್ರ ಏರಿಕೆ ಮಾಡಿರುವುದರಿಂದ ಮಾರಾಟಕ್ಕೆ ಯಾವುದೇ ಧಕ್ಕೆಯುಂಟಾಗುವುದಿಲ್ಲವೆಂಬ ನಂಬಿಕೆ ವ್ಯಕ್ತಪಡಿಸಿದೆ. ನಿಮ್ಮ ಮಾಹಿತಿಗಾಗಿ ಸೆಪ್ಟೆಂಬರ್ ತಿಂಗಳಲ್ಲಿ ಶೇಕಡ 30ರಷ್ಟು ಮಾರಾಟ ಏರಿಕೆ ಕಂಡಿದ್ದ ಹೀರೊ ಆರು ಲಕ್ಷಗಿಂತಲೂ ಹೆಚ್ಚು ಮಾರಾಟ ಸಾಧಿಸಿತ್ತು.

ಸಹಜವಾಗಿಯೇ ಈ ತಿಂಗಳಲ್ಲೂ ಮಾರಾಟ ಏರಿಕೆ ನಿರೀಕ್ಷೆ ಇರುವಂತೆಯೇ ಇಂತಹದೊಂದು ಬೆಳವಣಿಗೆ ಕಂಡುಬಂದಿದೆ. ಅಷ್ಟೇ ಯಾಕೆ ಇದೀಗಷ್ಟೇ ಸ್ಪ್ಲೆಂಡರ್ ಪ್ರೊ ಕ್ಲಾಸಿಕ್ ಮತ್ತು ಪ್ಯಾಶನ್ ಪ್ರೊ ಟಿಆರ್ ಮಾದರಿಗಳನ್ನು ಹೀರೊ ಮಾರುಕಟ್ಟೆಗೆ ಪರಿಚಯಿಸಿತ್ತು.

English summary
Hero MotoCorp increases price of all motorcycles and scooters
Story first published: Saturday, October 11, 2014, 8:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark